ಟಿ20 ವಿಶ್ವಕಪ್ ಟೂರ್ನಿಯಲ್ಲಿನ ವೈಫಲ್ಯ; ಪಾಕ್ ಆಟಗಾರರಿಗೆ 16 ಲಕ್ಷ ರು ದಂಡ ವಿಧಿಸಿದ ಪಿಸಿಬಿ!
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿನ ವೈಫಲ್ಯದ ಕಾರಣ ಪಾಕಿಸ್ತಾನ ಕ್ರಿಕೆಟ್ ಆಟಗಾರರಿಗೆ ತಲಾ 16 ಲಕ್ಷ ರು ದಂಡವನ್ನು ವಿಧಿಸಿದೆ ಎಂದು ವೆರದಿಯಾಗಿದೆ. ಸಲ್ಮಾನ್ ಆಘಾ ನಾಯಕತ್ವದ ಪಾಕ್ ತಂಡ, ಸೂಪರ್-8ರಲ್ಲಿ ವೈಫಲ್ಯ ಅನುಭವಿಸಿದ ಕಾರಣ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು.
ಪಾಕಿಸ್ತಾನ ಕ್ರಿಕೆಟಿಗರಿಗೆ ದಂಡ ವಿಧಿಸಿದ ಪಿಸಿಬಿ. -
ನವದೆಹಲಿ: ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯಲ್ಲಿ ನೀರಸ ಪ್ರದರ್ಶನವನ್ನು ತೋರಿ ಸೂಪರ್-8ರ ಹಂತದಲ್ಲಿಯೇ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ತಮ್ಮ ರಾಷ್ಟ್ರೀಯ ತಂಡದ (Pakistan Cricket Team) ಮೇಲೆ ಭಾರಿ ಮೊತ್ತದ ದಂಡವನ್ನು ವಿಧಿಸಲು ನಿರ್ಧರಿಸಿದೆ. ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಪ್ರಕಾರ, ತಂಡದ ಪ್ರತಿಯೊಬ್ಬ ಸದಸ್ಯನಿಗೂ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಕಾರಣ 16 ಲಕ್ಷ ರು ದಂಡವನ್ನು ವಿಧಿಸಲಾಗುತ್ತಿದೆ.
ಈ ನಿರ್ಧಾರವನ್ನು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ತೆಗೆದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಸತತವಾಗಿ ನೀರಸ ಪ್ರದರ್ಶನ ತೋರುತ್ತಿರುವ ಹಿನ್ನೆಲೆಯಲ್ಲಿ ಪಿಸಿಬಿಯ ಉನ್ನತ ಅಧಿಕಾರಿಗಳು ಬೇಸತ್ತು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ. ಜಯ ಸಾಧಿಸಿದಾಗ ಆಟಗಾರರು ಹೆಚ್ಚಿನ ಬಹುಮಾನ ಮತ್ತು ಬೋನಸ್‌ಗಳಿಗೆ ಅರ್ಹರಾಗಿದ್ದರೆ, ಟೂರ್ನಿಯ ಮೂಲ ಗುರಿಗಳನ್ನು ಸಾಧಿಸಲು ವಿಫಲವಾದಾಗ ಆರ್ಥಿಕ ಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ. ಈ ಕ್ರಮವು ಭವಿಷ್ಯದಲ್ಲಿ ತಂಡದ ಪ್ರದರ್ಶನದ ಮೇಲಿನ ಹೊಣೆಗಾರಿಕೆಯನ್ನು ಹೆಚ್ಚಿಸುವತ್ತ ಪಿಸಿಬಿ ಕೈಗೊಂಡ ಮಹತ್ವದ ಹೆಜ್ಜೆಯಾಗಿದೆ.
ವಿಂಡೀಸ್ ಎದುರು ಭಾರತ ತಡವನ್ನು ಗೆಲ್ಲಿಸಿದ ಸಂಜು ಸ್ಯಾಮ್ಸನ್‌ಗೆ ರೋಹಿತ್ ಶರ್ಮಾ ವಿಶೇಷ ಸಂದೇಶ!
ತಂಡವನ್ನು ದಂಡಿಸುವ ನಿರ್ಧಾರವನ್ನು ಬಹುಶಃ ಗುಂಪು ಹಂತದಲ್ಲಿಯೇ ತಾತ್ಕಾಲಿಕವಾಗಿ ಅಂತಿಮಗೊಳಿಸಲಾಗಿತ್ತು. ಪಾಕಿಸ್ತಾನ ತಂಡ, ಭಾರತದ ವಿರುದ್ಧದ ಗುಂಪು ಹಂತದಲ್ಲಿ ಸೋಲು ಅನುಭವಿಸಿದ ಬಳಿಕ ನಿರ್ಧಾರವನ್ನು ತೆಗೆದುಕೊಳ್ಳಲು ಪಿಸಿಬಿ ಬಯಸಿತ್ತು. ಸಾಂಪ್ರದಾಯಿಕ ಎದುರಾಳಿಗಳ ನಡುವಣ ಪಂದ್ಯವನ್ನು ವೀಕ್ಷಿಸಲು ಹಾಜರಿದ್ದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ತಂಡ ಒತ್ತಡವನ್ನು ನಿರ್ವಹಿಸಲು ವಿಫಲವಾದದ್ದು ಮತ್ತು ಕೊಲಂಬೊದಲ್ಲಿ ಸೋಲಿಗೆ ಕಾರಣವಾದ ತಂತ್ರಜ್ಞಾನದ ತಪ್ಪುಗಳಿಂದ ಅತ್ಯಂತ ಅಸಮಾಧಾನಗೊಂಡಿದ್ದರು ಎಂದು ವರದಿಗಳು ತಿಳಿಸುತ್ತವೆ.
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಆವೃತ್ತಿಗಿಂತ ಈ ಬಾರಿ ಸುಧಾರಣೆಯಾಗಿದ್ದರೂ ಸಹ, ಸೂಪರ್-8 ಹಂತಕ್ಕೆ ಮುಂದುವರಿದ ಪಾಕಿಸ್ತಾನ ತಂಡ ಬ್ಯಾಟಿಂಗ್‌ನಲ್ಲಿ ಬಹುತೇಕ ವೈಫಲ್ಯ ಅನುಭವಿಸಿಯು. ಮೂರು ಪಂದ್ಯಗಳ ಪೈಕಿ ಕೇವಲ ಒಂದು ಗೆಲುವಿನೊಂದಿಗೆ ಪಾಕ್ 3 ಅಂಕಗಳ ಮೂಲಕ ಸೂಪರ್-8ರ ಹಂತದಿಂದ ಹೊರ ನಡೆದಿತ್ತು.
IND vs WI: ʻಸಲಾಂ ಸಂಜು ಭಾಯ್..!-ಭಾರತವನ್ನು ಗೆಲ್ಲಿಸಿದ ಸ್ಯಾಮ್ಸನ್‌ಗೆ ಸೂರ್ಯಕುಮಾರ್ ಗೌರವ!
ಗುಂಪು ಹಂತದಲ್ಲಿ ಪಾಕಿಸ್ತಾನ ತಂಡ, ಕ್ರಿಕೆಟ್ ಶಿಶು ನೆದರ್ಲೆಂಡ್ಸ್ ವಿರುದ್ಧ ಹೋರಾಟ ನಡೆಸಿ ಗೆಲುವು ಪಡೆದಿತ್ತಾದರೂ ಸಾಂಪ್ರದಾಯಿಕ ಎದುರಾಳಿ ಭಾರತದ ಎದುರು ಬ್ಯಾಟಿಂಗ್ ವೈಫಲ್ಯದಿಂದ ಹೀನಾಯವಾಗಿ ಸೋಲು ಅನುಭವಿಸಿತ್ತು. ಇನ್ನು ನ್ಯೂಜಿಲೆಂಡ್ ಎದುರು ಸೂಪರ್-8ರ ತನ್ನ ಆರಂಭಿಕ ಪಂದ್ಯ ಮಳೆಗೆ ಫಲಿತಾಂಶ ಕಾಣದೆ ರದ್ದಾಗಿತ್ತು. ಆದರೆ, ಇಂಗ್ಲೆಂಡ್ ವಿರುದ್ಧ ಸೋಲುವ ಮೂಲಕ ಪಾಕ್‌ನ ಸೆಮಿಫೈನಲ್ ಕನಸು ಬಹುತೇಕ ಭಗ್ನವಾಗಿತ್ತು. ಕೊನೆಯ ಪಂದ್ಯವನ್ನು ಶ್ರೀಲಂಕಾ ವಿರುದ್ಧ ಅಗತ್ಯ ರನ್‌ರೇಟ್‌ನಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ.