ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

French President Macron: ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ಗೆ ಪತ್ನಿಯಿಂದಲೇ ಕಪಾಳಮೋಕ್ಷ- ವಿಡಿಯೊ ಇದೆ

ಮ್ಯಾಕ್ರನ್ ವಿಯೆಟ್ನಾಂನಿಂದ ಭಾನುವಾರ ಸಂಜೆ ತಮ್ಮ ಆಗ್ನೇಯ ಏಷ್ಯಾ ಪ್ರವಾಸವನ್ನು ಪ್ರಾರಂಭಿಸಲು ಹನೋಯ್‌ಗೆ ಬಂದಿಳಿದಿದ್ದರು.ಹನೋಯ್ ವಿಮಾನ ನಿಲ್ದಾಣದಲ್ಲಿ ವಿಮಾನದ ಬಾಗಿಲು ತೆರೆಯುತ್ತಿದ್ದಂತೆ ಮ್ಯಾಕ್ರನ್‌ ಅವರ ಪತ್ನಿ ಬ್ರಿಗಿಟ್, ಅಧ್ಯಕ್ಷ ಮ್ಯಾಕ್ರನ್‌ ಮುಖಕ್ಕೆ ಬಾರಿಸುತ್ತಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.

ವಿಯೆಟ್ನಾಂ: ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್(Emmanuel Macron) ಅವರ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ವಿಡಿಯೊದಲ್ಲಿ ಮ್ಯಾಕ್ರನ್‌ ಅವರಿಗೆ ಅವರ ಪತ್ನಿ ಕಪಾಳಮೋಕ್ಷ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಹನೋಯ್‌ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ದಂಪತಿ ನಡುವೆ ಏನೋ ವೈಮಸ್ಸು ಇರುವುದು ಈ ವಿಡಿಯೊದಲ್ಲಿ ಸ್ಪಷ್ಟವಾಗಿದ್ದು, ವಿಡಿಯೊ ವೈರಲ್‌(Viral Video) ಆಗಿರುವುದು ಮ್ಯಾಕ್ರನ್‌ ಅವರನ್ನು ಮುಜುಗರಕ್ಕೀಡು ಮಾಡಿದೆ.

ಏನಿದು ಘಟನೆ?

ಮ್ಯಾಕ್ರನ್ ವಿಯೆಟ್ನಾಂನಿಂದ ಭಾನುವಾರ ಸಂಜೆ ತಮ್ಮ ಆಗ್ನೇಯ ಏಷ್ಯಾ ಪ್ರವಾಸವನ್ನು ಪ್ರಾರಂಭಿಸಲು ಹನೋಯ್‌ಗೆ ಬಂದಿಳಿದಿದ್ದರು.ಹನೋಯ್ ವಿಮಾನ ನಿಲ್ದಾಣದಲ್ಲಿ ವಿಮಾನದ ಬಾಗಿಲು ತೆರೆಯುತ್ತಿದ್ದಂತೆ ಮ್ಯಾಕ್ರನ್‌ ಅವರ ಪತ್ನಿ ಬ್ರಿಗಿಟ್, ಅಧ್ಯಕ್ಷ ಮ್ಯಾಕ್ರನ್‌ ಮುಖಕ್ಕೆ ಬಾರಿಸುತ್ತಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಫ್ರೆಂಚ್ ಅಧ್ಯಕ್ಷರು ಸ್ವಲ್ಪ ಹೊತ್ತು ಗಾಬರಿಗೊಂಡಂತೆ ಕಂಡರೂ, ಬೇಗನೆ ಶಾಂತರಾಗಿ ಸಹಜವಾಗಿಯೇ ಇದ್ದರು. ನಂತರ ನಿರ್ಗಮನ ದ್ವಾರದ ಮೂಲಕ ನಿಯೋಗಕ್ಕೆ ಕೈ ಬೀಸಿದರು. ಇದಾದ ಬಳಿಕ ಮ್ಯಾಕ್ರನ್‌ ಏನೂ ನಡೆದಿಲ್ಲ ಎಂಬಂತೆ ತಮ್ಮ ಕೈ ಹಿಡಿದುಕೊಳ್ಳುವಂತೆ ಬ್ರಿಗಿಟ್‌ಗೆ ಸನ್ಹೆ ಮಾಡುತ್ತಾರೆ. ಆದರೆ ಅದನ್ನು ಲೆಕ್ಕಿಸದ ಬ್ರಿಗಿಟ್‌ ಪ್ರತ್ಯೇಕವಾಗಿಯೇ ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕುತ್ತಾರೆ.

ಮ್ಯಾಕ್ರನ್‌ ಅವರ ವಿಡಿಯೊ ಇಲ್ಲಿದೆ



ಈ ಸುದ್ದಿಯನ್ನೂ ಓದಿ:Viral Video: ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್‌ ಕೊಕೇನ್ ಸೇವಿಸುತ್ತಾರೆಯೇ? ವೈರಲ್ ಆಗಿರುವ ವಿಡಿಯೊದ ಅಸಲಿಯತ್ತೇನು?

ಇನ್ನು ವಿಡಿಯೊ ವೈರಲ್‌ ಆಗುತ್ತಿದ್ದಂತೆ ನೆಟ್ಟಿಗರು ಅನೇಕ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ. ದಂಪತಿಯ ನಡುವಿ ವೈಮನಸ್ಸು ಬಟಾಬಯಲಾಗಿದೆ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ. ಮ್ಯಾಕ್ರನ್ ಇಂಡೋನೇಷ್ಯಾ ಮತ್ತು ಸಿಂಗಾಪುರಕ್ಕೆ ನಿಗದಿತ ಭೇಟಿಗಳನ್ನು ಒಳಗೊಂಡಂತೆ ಆಗ್ನೇಯ ಏಷ್ಯಾದ ತನ್ನ ವಾರದ ಪ್ರವಾಸವನ್ನು ಪ್ರಾರಂಭಿಸಲು ಹನೋಯ್‌ಗೆ ಬಂದಿಳಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಫ್ರಾನ್ಸ್ ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಉಕ್ರೇನ್ ಪ್ರವಾಸದ ಸಮಯದಲ್ಲಿ ಕೊಕೇನ್ ಪ್ಯಾಕೆಟ್ ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇತ್ತೀಚೆಗೆ ವೈರಲ್ ಆಗಿರುವ ವಿಡಿಯೊವೊಂದರಲ್ಲಿ ಅವರು ಪೋಲೆಂಡ್‌ನಿಂದ ಉಕ್ರೇನ್‌ಗೆ ರೈಲು ಪ್ರಯಾಣ ಮಾಡುವಾಗ ಮಾಧ್ಯಮದವರು ಅವರ ಕೋಣೆಗೆ ಪ್ರವೇಶಿಸಿದ್ದಾರೆ. ಈ ವೇಳೆ ಮ್ಯಾಕ್ರನ್ ಜರ್ಮನಿಯ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಮತ್ತು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಇದ್ದರು. ಈ ವೇಳೆ ಎಮ್ಯಾನುಯೆಲ್ ಅವರು ಬಿಳಿಯ ವಸ್ತುವಿನ ಪ್ಯಾಕೆಟ್ ವೊಂದನ್ನು ಕೆಮರಾ ಕಣ್ಣಿನಿಂದ ತಪ್ಪಿಸಲು ಪ್ರಯತ್ನಿಸಿರುವ ಘಟನೆ ನಡೆದಿರುವುದು ಕೆಮರಾದಲ್ಲಿ ಸೆರೆಯಾಗಿತ್ತು.