ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್‌ ಕೊಕೇನ್ ಸೇವಿಸುತ್ತಾರೆಯೇ? ವೈರಲ್ ಆಗಿರುವ ವಿಡಿಯೊದ ಅಸಲಿಯತ್ತೇನು?

ಫ್ರಾನ್ಸ್ ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಉಕ್ರೇನ್ ಪ್ರವಾಸದ ಸಮಯದಲ್ಲಿ ಕೊಕೇನ್ ಪ್ಯಾಕೆಟ್ ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆದರೆ ಇದನ್ನು ಫ್ರೆಂಚ್ ಮಾಧ್ಯಮ ಸಂಸ್ಥೆ ಲಿಬರೇಶನ್ ಸುಳ್ಳು ಸುದ್ದಿ ಎಂದು ಹೇಳಿ ತಳ್ಳಿ ಹಾಕಿದ್ದು, ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ.

ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್‌ ಕೊಕೇನ್ ಸೇವಿಸುತ್ತಾರೆಯೇ? ವಿಡಿಯೊ ವೈರಲ್‌

ಬೆಂಗಳೂರು: ಫ್ರಾನ್ಸ್ ಅಧ್ಯಕ್ಷರು (French President) ಮಾದಕ ದ್ರವ್ಯ (cocaine) ಸೇವಿಸುತ್ತಾರೆಯೇ? ಈ ಒಂದು ಪ್ರಶ್ನೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊವೊಂದು ವೈರಲ್ (Viral Video) ಆಗಿದ್ದು, ಇದರಲ್ಲಿ ಫ್ರಾನ್ಸ್ ಅಧ್ಯಕ್ಷರು (Emmanuel Macron) ಬಿಳಿಯ ವಸ್ತುವೊಂದನ್ನು ಮಾಧ್ಯಮಗಳ ಕೆಮರಾಗಳ ಕಣ್ತಪ್ಪಿಸಿ ಇಡಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. ಈ ವಿಡಿಯೊ ಭಾರಿ ವೈರಲ್ ಆಗಿದ್ದು, ಸಾಕಷ್ಟು ಕಾಮೆಂಟ್ ಗಳನ್ನು ಕೂಡ ಪಡೆಯುತ್ತಿದೆ. ಈ ಘಟನೆ ಅವರು ಉಕ್ರೇನ್ ಪ್ರವಾಸದಲ್ಲಿ (Ukraine trip) ಇರುವಾಗ ನಡೆದಿರುವುದು ಎನ್ನಲಾಗುತ್ತಿದೆ.

ಫ್ರಾನ್ಸ್ ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಉಕ್ರೇನ್ ಪ್ರವಾಸದ ಸಮಯದಲ್ಲಿ ಕೊಕೇನ್ ಪ್ಯಾಕೆಟ್ ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ವೈರಲ್ ಆಗಿರುವ ವಿಡಿಯೊವೊಂದರಲ್ಲಿ ಅವರು ಪೋಲೆಂಡ್‌ನಿಂದ ಉಕ್ರೇನ್‌ಗೆ ರೈಲು ಪ್ರಯಾಣ ಮಾಡುವಾಗ ಮಾಧ್ಯಮದವರು ಅವರ ಕೋಣೆಗೆ ಪ್ರವೇಶಿಸಿದ್ದಾರೆ. ಈ ವೇಳೆ ಮ್ಯಾಕ್ರನ್ ಜರ್ಮನಿಯ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಮತ್ತು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಇದ್ದರು. ಈ ವೇಳೆ ಎಮ್ಯಾನುಯೆಲ್ ಅವರು ಬಿಳಿಯ ವಸ್ತುವಿನ ಪ್ಯಾಕೆಟ್ ವೊಂದನ್ನು ಕೆಮರಾ ಕಣ್ಣಿನಿಂದ ತಪ್ಪಿಸಲು ಪ್ರಯತ್ನಿಸಿರುವ ಘಟನೆ ನಡೆದಿರುವುದು ಕೆಮರಾದಲ್ಲಿ ಸೆರೆಯಾಗಿದೆ.

ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಮ್ಯಾಕ್ರನ್ ಅವರು ಕೊಕೇನ್ ಚೀಲದೊಂದಿಗೆ ಸಿಕ್ಕಿಬಿದ್ದಿದ್ದಾರೆ ಎಂಬ ಊಹಾಪೋಹಗಳನ್ನು ಹಬ್ಬಿದೆ. ಇದನ್ನು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ತ್ವರಿತವಾಗಿ ಹಂಚಿಕೊಂಡಿದ್ದು, ಮೆರ್ಜ್ ಅವರು ಕೋಕ್ ಸ್ಟ್ರಾ ಅಥವಾ ಚಮಚವನ್ನು ಕೆಮರಾಗಳ ಕಣ್ತಪ್ಪಿಸಿ ಇಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ವೈರಲ್‌ ಆದ ವಿಡಿಯೊದಲ್ಲೇನಿದೆ?



ಏನಿದೆ ವಿಡಿಯೋದಲ್ಲಿ ?

ಫ್ರಾನ್ಸ್ ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರನ್ ಅವರ ವೈರಲ್ ವಿಡಿಯೊದಲ್ಲಿ ಜರ್ಮನಿಯ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ ಮತ್ತು ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ಟೇಬಲ್ ಮೇಲೆ ಕುಳಿತಿರುವುದನ್ನು ಕಾಣಬಹುದು. ಅಲ್ಲಿ ಬಿಳಿ ಬಣ್ಣದ ಪುಡಿಯ ಸಣ್ಣ ಪ್ಯಾಕೆಟ್ ಮತ್ತು ಲೋಹದ ಚಮಚವು ಇದೆ. ಮಾಧ್ಯಮದವರು ಇವರ ಕೋಣೆ ಪ್ರವೇಶಿಸಿದಾಗ ಮ್ಯಾಕ್ರನ್ ಪ್ಯಾಕೆಟ್ ಗಳನ್ನು ತಮ್ಮ ಜೇಬಿನಲ್ಲಿಟ್ಟಿದ್ದಾರೆ ಮತ್ತು ಮೆರ್ಜ್ ಅವರು ಚಮಚವನ್ನು ಕೈಯಲ್ಲಿ ಮರೆಯಾಗಿ ಹಿಡಿದಿದ್ದಾರೆ.

ಇದನ್ನೂ ಓದಿ: operation sindoor: ಸೇನೆಗೆ ಉಗ್ರರ ನೆಲೆ ತೋರಿಸಿದ್ದೇ ಇಸ್ರೋ

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಜರ್ಮನ್ ವಿರೋಧ ಪಕ್ಷದ ನಾಯಕ ಫ್ರೆಡ್ರಿಕ್ ಮೆರ್ಜ್ ಮತ್ತು ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಇತ್ತೀಚೆಗೆ ಉಕ್ರೇನ್‌ ಪ್ರವಾಸದಲ್ಲಿದ್ದಾಗ ಮಾದಕ ದ್ರವ್ಯಗಳನ್ನು ಬಳಸಿದ್ದಾರೆ ಎಂದು ಟರ್ಕಿಯ ಮಾಧ್ಯಮವೊಂದು ಹೇಳಿದೆ ಎಂದು ರಷ್ಯಾದ ವಿದೇಶಾಂಗ ಸಚಿವೆ ಮಾರಿಯಾ ಜಖರೋವಾ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿ ವೈರಲ್ ಆಗಿರುವ ವಿಡಿಯೋ ಸಾಕ್ಷಿಯನ್ನು ಒದಗಿಸಿದ್ದಾರೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಫ್ರೆಂಚ್ ಮಾಧ್ಯಮ ಸಂಸ್ಥೆ ಲಿಬರೇಶನ್ ತನ್ನ ನಾಯಕನ ರಕ್ಷಣೆಗೆ ಮುಂದಾಗಿದೆ. ಇದೊಂದು ಸುಳ್ಳು ಸುದ್ದಿ. ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಮ್ಯಾಕ್ರನ್ ಜೇಬಿನಲ್ಲಿ ಇಟ್ಟಿರುವುದು ಟಿಶ್ಯು ಮತ್ತು ಮೆರ್ಜ್ ಅವರು ಚಮಚ ಎಂದು ಹೇಳಿದೆ. ಅಲ್ಲದೇ ಅವರ ವಿರುದ್ಧ ಇದೊಂದು ಪಿತೂರಿ ಎಂದು ಫ್ರೆಂಚ್ ಮಾಧ್ಯಮಗಳು ಹೇಳಿವೆ.