ಢಾಕಾ: ಬಾಂಗ್ಲಾದೇಶದ ಯುವಕನೊಬ್ಬ ಜುಲೈ 2024 ರ ದಂಗೆಯ ಸಮಯದಲ್ಲಿ ಹಿಂದೂ ಪೊಲೀಸ್ ಅಧಿಕಾರಿಯ ಹತ್ಯೆಯ ಬಗ್ಗೆ ಹೆಮ್ಮೆಪಡುತ್ತಾ ಕಾನೂನು ಜಾರಿ ಅಧಿಕಾರಿಗಳಿಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವ (Bangladesh Unrest) ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ. ಈ ವೀಡಿಯೊವನ್ನು X ನಲ್ಲಿ ತನಿಖಾ ಪತ್ರಕರ್ತ ಮತ್ತು ಲೇಖಕ ಸಾಹಿದುಲ್ ಹಸನ್ ಖೋಕೋನ್ ಹಂಚಿಕೊಂಡಿದ್ದು, ಅವರು ಭಾಷಣಕಾರರನ್ನು ಹಬಿಗಂಜ್ ಜಿಲ್ಲೆಯ ವಿದ್ಯಾರ್ಥಿ ಸಂಯೋಜಕ ಎಂದು ತಿಳಿದು ಬಂದಿದೆ.
ಈ ಕ್ಲಿಪ್‌ನಲ್ಲಿ, ಯುವಕನೊಬ್ಬ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಬೆದರಿಕೆ ಹಾಕುತ್ತಿರುವುದು, ಠಾಣೆಯನ್ನು ಸುಟ್ಟುಹಾಕಲಾಗುವುದು ಎಂದು ಎಚ್ಚರಿಸುತ್ತಿರುವುದು ಕೇಳಿಬರುತ್ತಿದೆ. "ಜುಲೈ ಚಳುವಳಿ" ಎಂದು ತಾನು ಈಗಾಗಲೇ ಬನಿಯಾಚಾಂಗ್ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದೆ ಎಂದು ಆತ ಹೇಳಿದ್ದಾನೆ. ನಂತರ ಯುವಕನು ಸಬ್-ಇನ್ಸ್‌ಪೆಕ್ಟರ್ ಸಂತೋಷ್ ಭಾಬು ಅವರ ಹತ್ಯೆಯನ್ನು ಉಲ್ಲೇಖಿಸಿ, "ನಾವು ಹಿಂದೂ ಅಧಿಕಾರಿ ಎಸ್‌ಐ ಸಂತೋಷ್ ಅವರನ್ನು ಸುಟ್ಟು ಹಾಕಿದ್ದೇವೆ" ಎಂದು ಹೇಳುವ ಮೂಲಕ ಭಯ ಹುಟ್ಟಿಸುವ ಹೇಳಿಕೆಯನ್ನು ನೀಡುತ್ತಾನೆ.
ಆಗಸ್ಟ್ 5, 2024 ರಂದು ಹಬಿಗಂಜ್ ಜಿಲ್ಲೆಯ ಬನಿಯಾಚಾಂಗ್ ಪೊಲೀಸ್ ಠಾಣೆಗೆ ನಿಯೋಜಿಸಲಾದ ಅಧಿಕಾರಿ ಎಸ್‌ಐ ಸಂತೋಷ್ ಭಾಭು ಅವರನ್ನು ಗುಂಪೊಂದು ಹತ್ಯೆ ಮಾಡಲಾಗಿತ್ತು. , ಅಂದಿನ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡುವ ಗಂಟೆಗಳ ಮೊದಲು, ತೀವ್ರಗೊಂಡ ರಾಜಕೀಯ ಅಶಾಂತಿಯ ನಡುವೆ, ಗುಂಪೊಂದು ಬನಿಯಾಚಾಂಗ್ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದಾಗ ಹಿಂಸಾಚಾರ ಭುಗಿಲೆದ್ದಿತ್ತು. ಆತ್ಮರಕ್ಷಣೆಗಾಗಿ ಸಂತೋಷ್ ಭಾಭು ಮತ್ತು ಇತರ ಪೊಲೀಸ್ ಸಿಬ್ಬಂದಿ ಗುಂಪನ್ನು ಚದುರಿಸಲು ಗುಂಡು ಹಾರಿಸಿದರು. ಈ ವೇಳೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಹಲವರು ಗಾಯಗೊಂಡರು. ಗಾಯಾಳುಗಳಲ್ಲಿ ಒಬ್ಬರು ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದರು. ವರದಿಯ ಪ್ರಕಾರ, ಸಂತೋಷ್ ಭಾಭು ಅವರನ್ನು ಬೆಳಗಿನ ಜಾವ 2:15 ರ ಸುಮಾರಿಗೆ ಹೊಡೆದು ಸಾಯಿಸಲಾಯಿತು. ಅವರ ದೇಹವನ್ನು ಮರುದಿನದವರೆಗೆ ರಸ್ತೆಯಲ್ಲಿಯೇ ಬಿಡಲಾಗಿತ್ತು.
ಏನಾಗ್ತಿದೆ ಬಾಂಗ್ಲಾದೇಶದಲ್ಲಿ? ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯ; 10 ದಿನಗಳ ಅಂತರದಲ್ಲಿ 3 ಹಿಂದೂಗಳ ಹತ್ಯೆ
ಬಾಂಗ್ಲಾದೇಶದ ಜನಗಣತಿ ಮಾಹಿತಿಯ ಪ್ರಕಾರ, ಈಶಾನ್ಯ ಬಾಂಗ್ಲಾದೇಶದ ಹಬಿಗಂಜ್ ಜಿಲ್ಲೆಯಲ್ಲಿ ಪ್ರಧಾನವಾಗಿ ಬಂಗಾಳಿ ಮುಸ್ಲಿಂ ಜನಸಂಖ್ಯೆ ಇದ್ದು, ಮುಸ್ಲಿಮರು ಸುಮಾರು ಶೇ. 84 ರಷ್ಟಿದ್ದಾರೆ, ಆದರೆ ಬಂಗಾಳಿ ಹಿಂದೂಗಳು ಸುಮಾರು ಶೇ. 16 ರಷ್ಟಿದ್ದಾರೆ.