ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬದ್ಧ ವೈರಿ ಅಮೆರಿಕ- ಇರಾನ್ ಸಂಘರ್ಷಕ್ಕೆ ಇದೆ 4 ದಶಕಗಳ ಹಿನ್ನೆಲೆ; ಇಲ್ಲಿದೆ ಸಂಪೂರ್ಣ ಇತಿಹಾಸ

ಪ್ರತಿ ಬಾರಿಯೂ ಇಸ್ರೇಲ್- ಇರಾನ್ ಉದ್ವಿಗ್ನತೆ ಹೆಚ್ಚಾದಾಗ ಅಮೆರಿಕ ಇವುಗಳ ನಡುವೆ ನುಸುಳಲು ಪ್ರಯತ್ನಿಸುವುದು ಹೊಸದೇನಲ್ಲ. ಇರಾನ್ ಮೇಲೆ ಅಮೆರಿಕ ದ್ವೇಷ ಸಾಧಿಸುತ್ತಿರುವುದು ಇತ್ತೀಚಿನಿಂದ ಏನಲ್ಲ. ಇದರ ಹಿಂದೆ ನಾಲ್ಕು ದಶಕಗಳಿಗೂ ಹೆಚ್ಚಿನ ಕಾಲದ ವೈರತ್ವ ಇದೆ. ಅದು ಏನು, ಯಾಕೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ಸಂಗ್ರಹ ಚಿತ್ರ

ವಾಷಿಂಗ್ಟನ್: ಅಮೆರಿಕ ಮತ್ತು ಇಸ್ರೇಲ್ (US and Israel) ಶನಿವಾರ ಬೆಳಗ್ಗೆ ಇರಾನ್ (Iran) ಮೇಲೆ ದಾಳಿ (US-Iran Conflict) ನಡೆಸಿದೆ. ಇರಾನ್ ಮತ್ತು ಇಸ್ರೇಲ್ ಸಂಘರ್ಷ ಅರ್ಥವಾಗುತ್ತದೆ. ಆದರೆ ಇದರ ನಡುವೆ ಅಮೆರಿಕದ (america) ಪಾತ್ರವೇನು ಎಂಬುದನ್ನು ಅವಲೋಕಿಸಿದರೆ ಇದರಲ್ಲಿ ನಾಲ್ಕು ದಶಕಗಳಿಗಿಂತಲೂ ಹಿಂದಿನ ಕಥೆ ತೆರೆದುಕೊಳ್ಳುತ್ತದೆ. ಅಮೆರಿಕ ಮತ್ತು ಇರಾನ್ ಸಂಘರ್ಷದ ಹಿಂದೆ ನಾಲ್ಕು ದಶಕಗಳಿಗೂ ಹೆಚ್ಚಿನ ಕಾಲದ ವೈರತ್ವವಿದೆ. ಆದರೆ ಅದು ಇತ್ತೀಚಿನ ದಿನಗಳಲ್ಲಿ ಹೆಚ್ಚು ಗುರುತಿಸಿಕೊಂಡಿದೆ. 1979ರ ಬಳಿಕ ಅಮೆರಿಕ- ಇರಾನ್ ಬದ್ದ ವೈರಿಗಳಾಗಿವೆ. ಇದರ ಮುಂದುವರಿದಿರುವ ಭಾಗವೇ ಶನಿವಾರದ ಅಮೆರಿಕ ಮತ್ತು ಇಸ್ರೇಲಿ ದಾಳಿಗಳು.

1979ರಲ್ಲಿ ಏನಾಗಿತ್ತು?

ಇಸ್ಲಾಮಿಕ್ ಗಣರಾಜ್ಯ ಆಫ್ ಇರಾನ್ ಸ್ಥಾಪನೆಯಾದ ಕೇವಲ ಏಳು ತಿಂಗಳ ಬಳಿಕ ಅಮೆರಿಕದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಇರಾನ್‌ನ ಪದಚ್ಯುತ ದೊರೆ ಮೊಹಮ್ಮದ್ ರೆಜಾ ಪಹ್ಲವಿ ಅವರನ್ನು ಹಸ್ತಾಂತರಿಸುವಂತೆ 1979ರ ನವೆಂಬರ್ 4ರಂದು ವಿದ್ಯಾರ್ಥಿ ಕಾರ್ಯಕರ್ತರು ಟೆಹ್ರಾನ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಂಡರು. ಸುಮಾರು 52 ಒತ್ತೆಯಾಳುಗಳನ್ನು 444 ದಿನಗಳವರೆಗೆ ಬಂಧಿಸಲಾಗಿತ್ತು. ಬಳಿಕ ವಾಷಿಂಗ್ಟನ್ ಇರಾನ್‌ನೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದು ಹಾಕಿ ಹಲವು ರೀತಿಯ ನಿರ್ಬಂಧಗಳನ್ನು ವಿಧಿಸಿತ್ತು. ಸುಮಾರು ಒಂಬತ್ತು ತಿಂಗಳ ಅನಂತರ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಯಿತು.

ಇಸ್ರೇಲ್‌-ಅಮೆರಿಕ ದಾಳಿಯಲ್ಲಿ 40 ಶಾಲಾ ವಿದ್ಯಾರ್ಥಿನಿಯರು ಸಾವು

2002ರಲ್ಲಿ ನಿಷೇಧ

ಹೆಜ್ಬೊಲ್ಲಾ, ಹಮಾಸ್ ಮತ್ತು ಪ್ಯಾಲೆಸ್ಟೀನಿಯನ್ ಇಸ್ಲಾಮಿಕ್ ಜಿಹಾದ್ ಸೇರಿದಂತೆ ಭಯೋತ್ಪಾದನೆಯನ್ನು ಇರಾನ್ ಬೆಂಬಲಿಸುತ್ತದೆ ಎಂದು ಆರೋಪಿಸಿ ಯುಎಸ್ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು 1995ರ ಏಪ್ರಿಲ್ 30ರಂದು ಇರಾನ್ ಜೊತೆ ವ್ಯಾಪಾರ ಮತ್ತು ಹೂಡಿಕೆಯ ಮೇಲೆ ಸಂಪೂರ್ಣ ನಿಷೇಧವನ್ನು ಘೋಷಿಸಿದರು.

ಇರಾನ್, ಇರಾಕ್ ಮತ್ತು ಉತ್ತರ ಕೊರಿಯಾ ಭಯೋತ್ಪಾದನೆಯನ್ನು ಬೆಂಬಲಿಸುತ್ತದೆ ಎಂದು 2002ರ ಜನವರಿ 29ರಂದು ಯುಎಸ್ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ಹೇಳಿದ್ದು, 2019ರ ಏಪ್ರಿಲ್ ನಲ್ಲಿ ಇರಾನ್‌ನ ಗಣ್ಯ ಮಿಲಿಟರಿ ಪಡೆ, ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಅನ್ನು ಯುಎಸ್ "ಭಯೋತ್ಪಾದಕ ಸಂಘಟನೆ" ಎಂದು ಹೆಸರಿಸಿತು.

ಪರಮಾಣು ಒಪ್ಪಂದದಿಂದ ಹೊರಬಂದ ಯುಎಸ್

2000 ರ ದಶಕದ ಆರಂಭದಲ್ಲಿ ಇರಾನ್‌ನಲ್ಲಿ ಅಘೋಷಿತ ಪರಮಾಣು ತಾಣಗಳು ಇದೆ. ಇದಕ್ಕಾಗಿ ಟೆಹ್ರಾನ್ ಅನ್ನು ಬಳಕೆ ಮಾಡುತ್ತಿದೆ. ಇರಾನ್ ಕನಿಷ್ಠ 2003 ರವರೆಗೆ ಬೇಕಾಗುವಷ್ಟು ಪರಮಾಣು ಸ್ಫೋಟಕ ಸಾಧನಗಳನ್ನು ಅಭಿವೃದ್ಧಿ ಪಡಿಸಿದೆ ಎಂದು ಯುಎಸ್ ಹೇಳಿದೆ.

ಇರಾನ್ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ಅವರು 2005ರಲ್ಲಿ ಯುರೇನಿಯಂ ಪುಷ್ಟೀಕರಣವನ್ನು ಸ್ಥಗಿತಗೊಳಿಸಿ ಇದನ್ನು ಕೇವಲ ತನ್ನ ದೇಶದೊಳಗೆ ಬಳಸಲು ಮಾತ್ರ ಉಪಯೋಗಿಸುವುದಾಗಿ ಹೇಳುವಂತೆ ಒತ್ತಾಯಿಸಲಾಯಿತು. ಇದಾಗಿ ಸುಮಾರು ಒಂದು ದಶಕಗಳ ಬಳಿಕ ವಿಯೆನ್ನಾದಲ್ಲಿ ಆರು ವಿಶ್ವ ಶಕ್ತಿಗಳಾದ ಚೀನಾ, ಫ್ರಾನ್ಸ್, ಜರ್ಮನಿ, ರಷ್ಯಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ಗಳು ಸೇರಿ ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಒಪ್ಪಂದವನ್ನು ನಡೆಸಿದವು. ಇದರ ಪ್ರಕಾರ ಇರಾನ್ ಪರಮಾಣು ಬಾಂಬ್ ತಯಾರಿಸುವುದಿಲ್ಲ ಎಂಬ ಭರವಸೆ ನೀಡಿದ್ದು, ಇದಕ್ಕೆ ಪ್ರತಿಯಾಗಿ ಅದಕ್ಕೆ ಇದ್ದ ಆರ್ಥಿಕ ನಿರ್ಬಂಧಗಳನ್ನು ತೆಗೆದು ಹಾಕಲಾಯಿತು.

ಈ ಒಪ್ಪಂದದ ಬಳಿಕ 2018ರಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಂದವನ್ನು ಮುರಿದು ಇರಾನ್ ಮತ್ತು ಅದರೊಂದಿಗೆ ಸಂಬಂಧ ಹೊಂದಿರುವ ಕಂಪೆನಿಗಳ ಮೇಲೆ ನಿರ್ಬಂಧಗಳನ್ನು ಮತ್ತೆ ವಿಧಿಸಿದರು. ಬಳಿಕ ಇರಾನ್ ಕೂಡ ತನ್ನ ಬದ್ಧತೆಯನ್ನು ಮುರಿಯಲು ಪ್ರಾರಂಭಿಸಿತು. ಇದರಿಂದ 2025ರ ಸೆಪ್ಟೆಂಬರ್ 28ರಂದು ಯುಎನ್ ನಿರ್ಬಂಧಗಳನ್ನು ಮತ್ತೆ ಇರಾನ್ ಮೇಲೆ ಹೇರಲಾಗಿದೆ.

ಇರಾನಿನ ಉನ್ನತ ಜನರಲ್ ಹತ್ಯೆ

2020ರ ಜನವರಿ 3ರಂದು, ಬಾಗ್ದಾದ್‌ನಲ್ಲಿ ಇರಾನಿನ ಉನ್ನತ ಜನರಲ್ ಖಾಸೆಮ್ ಸೊಲೈಮಾನಿ ಅವರನ್ನು ಯುಎಸ್ ಹತ್ಯೆ ಮಾಡಿತ್ತು. ಸೊಲೈಮಾನಿ ಇರಾಕ್‌ನಲ್ಲಿರುವ ಯುಎಸ್ ರಾಜತಾಂತ್ರಿಕರು ಮತ್ತು ಪಡೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಟ್ರಂಪ್ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಇರಾಕ್‌ನಲ್ಲಿರುವ ಅಮೆರಿಕನ್ ಪಡೆಗಳ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿತ್ತು.

ಪಾಕಿಸ್ತಾನದ ಮೇಲಿನ ದಾಳಿಯ ವಿಡಿಯೊ ರಿಲೀಸ್‌ ಮಾಡಿದ ಅಫ್ಘಾನಿಸ್ತಾನ

ಪರಮಾಣು ನೆಲೆಗಳ ಮೇಲೆ ದಾಳಿ

2025ರ ಜೂನ್ ತಿಂಗಳಲ್ಲಿ ಇಸ್ರೇಲ್ ಮತ್ತು ಇರಾನ್ ಯುದ್ಧ ಪ್ರಾರಂಭವಾದಾಗ ಯುಎಸ್ ಮೂರು ಪ್ರಮುಖ ಇರಾನಿನ ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿತ್ತು.

ಮತ್ತೆ ಯುದ್ಧ ಘೋಷಣೆ

2025ರ ಡಿಸೆಂಬರ್ ತಿಂಗಳಲ್ಲಿ ನಡೆದ ಬೃಹತ್ ಪ್ರತಿಭಟನೆಯನ್ನು ಹತ್ತಿಕ್ಕಲು ಇರಾನ್ ಪ್ರತಿಭಟಕಾರರ ಹತ್ಯೆಗೆ ಮುಂದಾಗಿತ್ತು. ಇದಕ್ಕೆ ಪ್ರತಿಯಾಗಿ ಟ್ರಂಪ್ ಇರಾನ್ ಮೇಲೆ ದಾಳಿ ಮಾಡುವ ಬೆದರಿಕೆ ಹಾಕಿದ್ದರು. ಇದರ ಬಳಿಕ ಟೆಹ್ರಾನ್‌ನಲ್ಲಿ ಪರಮಾಣು ತಯಾರಿ ಕಾರ್ಯ ಆರಂಭವಾಯಿತು. ಈ ನಡುವೆ ಎರಡು ರಾಷ್ಟ್ರಗಳು ಮಾತುಕತೆಗೆ ಮುಂದಾದರೂ ಟೆಹ್ರಾನ್ ತನ್ನ ಪರಮಾಣು ಕಾರ್ಯಕ್ರಮಗಳನ್ನು ಮುಂದುವರಿಸಲು ಬಯಸಿತ್ತು. ಇದರ ಬಳಿಕ ಫೆಬ್ರವರಿ 19 ರಂದು ಟ್ರಂಪ್ ಇರಾನ್ ಗೆ ಅಂತಿಮವಾಗಿ 15 ದಿನಗಳ ಗಡುವು ನೀಡಿದ್ದರು. ಇದೀಗ ಅದು ಕೊನೆಯಾಗಿದ್ದರಿಂದ ಶನಿವಾರ ಇಸ್ರೇಲ್ ಜೊತೆ ಸೇರಿ ಯುಎಸ್ ಪಡೆಗಳು ದಾಳಿ ನಡೆಸಿದೆ.

ವಿದ್ಯಾ ಇರ್ವತ್ತೂರು

View all posts by this author