ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇಸ್ರೇಲ್‌-ಅಮೆರಿಕ ದಾಳಿ: ಇರಾನ್‌ನ 40 ಶಾಲಾ ವಿದ್ಯಾರ್ಥಿನಿಯರು ಸಾವು

Israel-US Strikes: ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೊಂದು ಹಂತಕ್ಕೆ ತಲುಪಿದ್ದು, ಶನಿವಾರ ಮುಂಜಾನೆ ಇಸ್ರೇಲ್ ಮಹತ್ವದ ಸೇನಾ ಕಾರ್ಯಾಚರಣೆ ನಡೆಸಿದೆ. ಈ ವೇಳೆ 40 ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ ಎಂದು ಇರಾನ್‌ ತಿಳಿಸಿದೆ.

ಇಸ್ರೇಲ್‌-ಅಮೆರಿಕ ದಾಳಿಯಲ್ಲಿ ಇರಾನ್‌ನ 40 ಶಾಲಾ ವಿದ್ಯಾರ್ಥಿನಿಯರು ಸಾವು

ಇರಾನ್‌ ಮೇಲೆ ದಾಳಿ ನಡೆಸಿದ ಇಸ್ರೇಲ್‌ -

Ramesh Ballamoole
Ramesh Ballamoole Feb 28, 2026 5:25 PM

ಟೆಹರಾನ್‌, ಫೆ. 28: ಇಸ್ರೇಲ್ ಮತ್ತು ಇರಾನ್ (Iran-Israel War) ನಡುವಿನ ಉದ್ವಿಗ್ನತೆ ಮತ್ತೊಂದು ಹಂತಕ್ಕೆ ತಲುಪಿದ್ದು, ಶನಿವಾರ ಮುಂಜಾನೆ ಇಸ್ರೇಲ್ ಮಹತ್ವದ ಸೇನಾ ಕಾರ್ಯಾಚರಣೆ ನಡೆಸಿದೆ. ಅಮೆರಿಕದೊಂದಿಗೆ ಸೇರಿ ಇರಾನ್‌ ಮೇಲೆ ದಾಳಿ ನಡೆಸಿದೆ (Israeli-US Airstrikes). ಈ ವೇಳೆ ಮಿನಾಬ್‌ನಲ್ಲಿ 40 ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ ಎಂದು ಇರಾನ್‌ ತಿಳಿಸಿದೆ. ಆರಂಭದಲ್ಲಿ ಇರಾನ್‌ ರಾಜಧಾನಿ ಟೆಹರಾನ್‌ನಲ್ಲಿ ದಾಳಿ ನಡೆಯಿತು. ಬಳಿಕ ದೇಶದ ವಿವಿಧ ಕಡೆಗಳಲ್ಲಿ ಸ್ಫೋಟ ಕಂಡು ಬಂದವು.

40 ಮಂದಿ ಸಾವನ್ನಪ್ಪಿರುವ ವಿಚಾರವನ್ನು ಇರಾನ್‌ ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದೆ. ಇರಾನ್‌ನ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್ ಮಿನಾಬ್‌ನಲ್ಲಿ ನೆಲೆಯನ್ನು ಹೊಂದಿದೆ.