ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇರಾನ್ ಜೊತೆಗಿನ ಯುದ್ಧ ಯಾವಾಗ ಕೊನೆಯಾಗುತ್ತೆ? ಡೊನಾಲ್ಡ್ ಟ್ರಂಪ್ ಹೇಳಿದ್ದೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಯುದ್ಧವನ್ನು ಶೀಘ್ರದಲ್ಲಿ ಕೊನೆಗೊಳಿಸುವುದಾಗಿ ಹೇಳಿದ್ದಾರೆ. ಈ ಕುರಿತು ಬುಧವಾರ ದೊಡ್ಡ ಘೋಷಣೆ ಮಾಡಿದ ಅವರು, ಮುಂದಿನ ಎರಡು ಮೂರು ವಾರಗಳ ಕಾಲ ಇರಾನ್ ಮೇಲೆ ಅಮೆರಿಕ ದಾಳಿ ಮಾಡುತ್ತಲೇ ಇರುತ್ತದೆ. ಅವರ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶ ಮಾಡಿ ಅವರನ್ನು ಶಿಲಾಯುಗಕ್ಕೆತೆರಳುವಂತೆ ಮಾಡುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ.

ಸಂಗ್ರಹ ಚಿತ್ರ

ವಾಷಿಂಗ್ಟನ್: ಶೀಘ್ರದಲ್ಲೇ ಇರಾನ್ (Iran war) ವಿರುದ್ಧ ನಡೆಯುತ್ತಿರುವ ಯುದ್ಧ ಕೊನೆಯಾಗಲಿದೆ. ಈ ಕುರಿತು ಬುಧವಾರ ದೊಡ್ಡ ಘೋಷಣೆಯನ್ನು ಮಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು, ಮುಂದಿನ ಎರಡು ಮೂರು ವಾರಗಳ ಕಾಲ ಇರಾನ್ ಮೇಲೆ ಅಮೆರಿಕ (American military) ದಾಳಿ ನಡೆಸುವುದನ್ನು ಮುಂದುವರಿಸುತ್ತದೆ. ಅವರ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶ ಮಾಡಿ ಅವರನ್ನು ಶಿಲಾಯುಗಕ್ಕೆ ತೆರಳುವಂತೆ ಮಾಡುವುದಾಗಿ ಈ ಸಂದರ್ಭದಲ್ಲಿ ಪ್ರತಿಜ್ಞೆ ಮಾಡಿದ ಅವರು, ಆಪರೇಷನ್ ಎಪಿಕ್ ಫ್ಯೂರಿಯ (Operation Epic Fury) ಕುರಿತು ಸಂಪೂರ್ಣ ಮಾಹಿತಿ ನೀಡಿದರು.

ಕಳೆದ ಫೆಬ್ರವರಿ ತಿಂಗಳಾಂತ್ಯದಲ್ಲಿ ಪ್ರಾರಂಭವಾಗಿರುವ ಯುದ್ಧದಲ್ಲಿ ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಇತರ ಹಲವು ಪ್ರಮುಖ ವ್ಯಕ್ತಿಗಳ ಸಾವಿನ ಬಳಿಕ ಮೊದಲ ಬಾರಿಗೆ ಪ್ರೈಮ್-ಟೈಮ್ ನಲ್ಲಿ ಮಾತನಾಡಿದ ಟ್ರಂಪ್, ಇರಾನ್‌ನ ಪರಮಾಣು ಸಾಮರ್ಥ್ಯಗಳ ಕುರಿತು ಹಲವಾರು ಮಾಹಿತಿಗಳನ್ನು ನೀಡಿದರು.

ಚಂದ್ರನತ್ತ ಮತ್ತೆ ಮಾನವನ ಹೆಜ್ಜೆ; ನಾಸಾದಿಂದ ಆರ್ಟೆಮಿಸ್-2 ಗಗನನೌಕೆ ಯಶಸ್ವಿ ಉಡಾವಣೆ

ಇರಾನ್ ಬಳಿ ಈಗ ನೌಕಾಪಡೆ, ವಾಯುಪಡೆ ಇಲ್ಲ. ಪ್ರಮುಖ ಇರಾನಿನ ನಾಯಕರು ಕೂಡ ಸತ್ತಿದ್ದಾರೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕೂಡ ನಾಶವಾಗುತ್ತಿದೆ. ಹೀಗಾಗಿ ಶೀಘ್ರದಲ್ಲೇ ಯುದ್ಧ ಕೊನೆಯಾಗುತ್ತದೆ ಎಂದು ಟ್ರಂಪ್ ಹೇಳಿದರು.

ಮಧ್ಯಪ್ರಾಚ್ಯದಲ್ಲಿರುವ ಯುಎಸ್ ಪಡೆಗಳು ಪ್ರಮುಖ ಕಾರ್ಯತಂತ್ರದ ಉದ್ದೇಶಗಳನ್ನು ಪೂರ್ಣಗೊಳಿಸುತ್ತದೆ ಎಂದ ಡೊನಾಲ್ಡ್ ಟ್ರಂಪ್, ಯುದ್ಧ ಆರಂಭವಾದ ಬಳಿಕ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ವಿಧಿಸಿರುವ ನಿರ್ಬಂಧದಿಂದಾಗಿ ವಿಶ್ವದಾದ್ಯಂತ ತೈಲ ಬೆಲೆಗಳು ಗಗನಕ್ಕೇರಿದೆ. ಈ ಜಲಸಂಧಿಯ ಅಗತ್ಯ ಅಮೆರಿಕಕ್ಕೆ ಇಲ್ಲ. ಯಾಕೆಂದರೆ ಅಮೆರಿಕದ ಬಳಿ ಸಾಕಷ್ಟು ತೈಲವಿದೆ ಎಂದು ತಿಳಿಸಿದರು.

ಮಿಲಿಟರಿ ಮೈತ್ರಿಕೂಟದಿಂದ ಹಿಂದೆ ಸರಿಯುವ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದ ಅವರು, ನ್ಯಾಟೋ ಮಿತ್ರರಾಷ್ಟ್ರಗಳು ಹೊರ್ಮುಜ್ ಜಲಸಂಧಿಯನ್ನು ತೆರೆಯಲು ಸಹಾಯ ಮಾಡದಿರುವ ಬಗ್ಗೆ ದೂರಿದರು.

ಹೊರ್ಮುಜ್ ಜಲಸಂಧಿ ತೆರೆಯಲು 35 ರಾಷ್ಟ್ರಗಳನ್ನು ಒಗ್ಗೂಡಿಸುತ್ತೇವೆ: ಇಂಗ್ಲೆಂಡ್

ಹೊರ್ಮುಜ್ ಜಲಸಂಧಿಯಲ್ಲಿ ಏಪ್ರಿಲ್ 1ರ ವೇಳೆಗೆ ಸುಮಾರು 400 ಕ್ಕೂ ಹೆಚ್ಚು ಹಡಗುಗಳು ಸಿಲುಕಿಕೊಂಡಿದ್ದು ಇರಾನ್‌ನಿಂದ ಅನುಮತಿಗಾಗಿ ಕಾಯುತ್ತಿವೆ. ಇರಾನ್ ಮೇಲೆ ಅಮೆರಿಕ ಯುದ್ಧ ಘೋಷಣೆ ಮಾಡಿದ ಬಳಿಕ ಇಂಧನ ಬೆಲೆ ಹೆಚ್ಚಾಗುತ್ತಿರುವುದು ಮಾತ್ರವಲ್ಲ ಡೊನಾಲ್ಡ್ ಟ್ರಂಪ್ ಅವರ ಅನುಮೋದನೆ ರೇಟಿಂಗ್‌ಗಳು ಸಾರ್ವಕಾಲಿಕವಾಗಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಈ ನಡುವೆ ಟ್ರಂಪ್ ಹೇಳಿಕೆಗಳು ಮತದಾರರ ಕಳವಳಗಳನ್ನು ನಿವಾರಿಸುವ ಪ್ರಯತ್ನ ಎನ್ನಲಾಗಿದೆ. ಸಮೀಕ್ಷೆಗಳ ಪ್ರಕಾರ ಟ್ರಂಪ್ ಅವರ ಅನುಮೋದನೆ ರೇಟಿಂಗ್ -16.7 ಅಂಕಗಳಾಗಿದ್ದು, ಇದು ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ಶೇ. 38ರಷ್ಟಾಗಿತ್ತು.

ವಿದ್ಯಾ ಇರ್ವತ್ತೂರು

View all posts by this author