ನ್ಯೂಯಾರ್ಕ್: ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ (Zohran Mamdani) ಅವರು ನ್ಯೂಯಾರ್ಕ್ ನಗರದ ಮೊದಲ ಮುಸ್ಲಿಂ, ಕಿರಿಯ ಮೇಯರ್ (New York Mayor) ಆಗಿ ಆಯ್ಕೆಗೊಂಡ ಬಳಿಕ ಅವರ ತಾಯಿ, ವಿಶ್ವ ಪ್ರಸಿದ್ಧ ಭಾರತೀಯ- ಅಮೆರಿಕನ್ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ (Filmmaker Mira Nair) ಅವರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಜೋಹ್ರಾನ್ ಮಮ್ದಾನಿ ಅವರ ಗೆಲುವಿನ ಕುರಿತು ಇನ್ ಸ್ಟಾಗ್ರಾಮ್ ನಲ್ಲಿ ಬರೆದಿರುವ ಮೀರಾ ನಾಯರ್ 'ಈ ಗೆಲುವು ನಿಮಗಾಗಿ' ಎಂದು ಹೇಳಿದ್ದಾರೆ. ಮಗನ ಗೆಲುವಿಗೆ ಅವರು ಸಂತೋಷ ಮತ್ತು ಹೆಮ್ಮೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ.
ನ್ಯೂಯಾರ್ಕ್ ಮೇಯರ್ ಸ್ಥಾನಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ಮೇಯರ್ ಎಂದೆನಿಸಿಕೊಂಡಿರುವ ಡೆಮಾಕ್ರಟಿಕ್ ಪಕ್ಷದ ಜೋಹ್ರಾನ್ ಮಮ್ದಾನಿ ಅವರು ಮೂಲತಃ ಭಾರತೀಯರಾಗಿದ್ದಾರೆ. ಇವರ ತಾಯಿ ವಿಶ್ವ ಪ್ರಸಿದ್ಧ ಭಾರತೀಯ- ಅಮೆರಿಕನ್ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಹಾಗೂ ತಂದೆ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಮಹಮೂದ್ ಮಮ್ದಾನಿ.
ಇದನ್ನೂ ಓದಿ: WhatsApp RTO challan scam: ವಾಟ್ಸ್ಯಾಪ್‌ನಲ್ಲಿ ಹೊಸ ವಂಚನೆ, ಆರ್‌ಟಿಒ ಚಲನ್ ಹೆಸರಿನಲ್ಲಿ ಧೋಖಾ
ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾದ ಮೊದಲ ಮುಸ್ಲಿಂ ಮತ್ತು ದಕ್ಷಿಣ ಏಷ್ಯಾದವರೆಂದು ಗುರುತಿಸಿಕೊಂಡಿರುವ ಜೋಹ್ರಾನ್ ಮಮ್ದಾನಿ ಅವರು ಶೇ. 50.3ರಷ್ಟು ಮತ ಗಳಿಸಿ ಗೆಲುವು ದಾಖಲಿಸಿದರು. ಇವರ ಎದುರಾಳಿ ಅಭ್ಯರ್ಥಿ ಮಾಜಿ ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕ್ಯುಮೊ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಬೆಂಬಲದ ಬಳಿಕವೂ ಸೋಲು ಅನುಭವಿಸಿದರು.
ಜೋಹ್ರಾನ್ ಮಮ್ದಾನಿ ಗೆಲುವಿನ ದಾಖಲೆಯೊಂದಿಗೆ ಇತಿಹಾಸ ನಿರ್ಮಿಸಿದ ಬಳಿಕ ಈ ಕುರಿತು ಸಂತೋಷ ವ್ಯಕ್ತಪಡಿಸಿರುವ ಮೀರಾ ನಾಯರ್, ಈ ಗೆಲುವು ನಿಮಗಾಗಿ ಎಂದು ಹೇಳಿದ್ದಾರೆ.
ಆಂಡ್ರ್ಯೂ ಕ್ಯುಮೊ ಮತ್ತು ಕರ್ಟಿಸ್ ಸ್ಲಿವಾ ಅವರನ್ನು ಸೋಲಿಸಿ ನ್ಯೂಯಾರ್ಕ್ ನಗರದ ಕಿರಿಯ ಮತ್ತು ಮೊದಲ ಮುಸ್ಲಿಂ ಮೇಯರ್ ಆಗಿ ಆಯ್ಕೆಯಾದ ಜೋಹ್ರಾನ್ ಮಮ್ದಾನಿ ಐತಿಹಾಸಿಕ ಗೆಲುವಿನ ಅನಂತರ ಸಂತೋಷ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿ ಇನ್‌ಸ್ಟಾಗ್ರಾಮ್ ನಲ್ಲಿ ಬರೆದಿರುವ ಅವರು ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಯಲ್ಲಿ ತಮ್ಮ ಮಗನ ಅದ್ಭುತ ಗೆಲುವಿನ ಬಗ್ಗೆ ಸಂತೋಷ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಕುರಿತು ಅವರು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಹೀಗೆ ಬರೆದಿದ್ದಾರೆ. ಜೋಹ್ರಾನ್ ನೀವು ಸುಂದರ. ಜೋಯಾ ಅಖ್ತರ್ ಅವರ ಅಭಿನಂದನಾ ಪೋಸ್ಟ್ ಅನ್ನು ಹಲವಾರು ಎಮೋಜಿಗಳೊಂದಿಗೆ ಮರು ಪೋಸ್ಟ್ ಮಾಡಿರುವ ಮೀರಾ, ಈ ಗೆಲುವು ನಿಮಗಾಗಿ ಎಂದು ಹೇಳಿದ್ದಾರೆ. ಇನ್‌ಸ್ಟಾಗ್ರಾಮ್ ನಲ್ಲಿ ಮೀರಾ ನಾಯರ್ ಅವರಿಗೆ 100 ಸಾವಿರ ಫಾಲೋವರ್ಸ್ ಗಳಿದ್ದಾರೆ.
ಇದನ್ನೂ ಓದಿ: IND vs AUS 4th T20: ಭಾರತ vs ಆಸೀಸ್ 4ನೇ ಟಿ20 ಪಂದ್ಯ ಯಾವಾಗ?
ಮೀರಾ ನಾಯರ್ ಅವರು ಪ್ರಸಿದ್ಧ ಚಲನಚಿತ್ರ ನಿರ್ಮಾಪಕಿ. ಇವರು ಎ ಸೂಟಬಲ್ ಬಾಯ್, ಮಾನ್ಸೂನ್ ವೆಡ್ಡಿಂಗ್, ಸಲಾಮ್ ಬಾಂಬೆ!, ಕ್ವೀನ್ ಆಫ್ ಕ್ಯಾಟ್ವೆ, ಅಮೆಲಿಯಾ, ನ್ಯೂಯಾರ್ಕ್, ಐ ಲವ್ ಯೂ ಸೇರಿದಂತೆ ಹಲವಾರು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. 1988ರಲ್ಲಿ ಮೀರಾ ನಾಯರ್ ಅವರು ಸಲಾಮ್ ಬಾಂಬೆ ಚಿತ್ರಕ್ಕಾಗಿ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಕ್ಯಾಮೆರಾ ಪ್ರಶಸ್ತಿಯನ್ನು ಗೆದ್ದಿದ್ದಾರೆ.