ವಾಚ್ ತಯಾರಿಕೆಯ ಪಯಣದಲ್ಲಿ ಒಂದು ಮೈಲಿಗಲ್ಲು: ಭಾರತದ ಮೊದಲ ವಾಂಡರಿಂಗ್ ಅವರ್ಸ್ ವಾಚ್ ಬಿಡುಗಡೆ ಮಾಡಿದ ಟೈಟಾನ್
ಅತ್ಯಂತ ಪ್ರತಿಷ್ಠಿಕ ವಾಚ್ ತಯಾರಿಕಾ ಕಂಪನಿ ಆಗಿರುವ ಟೈಟಾನ್ ಭಾರತೀಯ ವಾಚ್ ತಯಾರಿಕಾ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ರಚಿಸಿದ್ದು, ಟೈಟಾನ್ ಇದೀಗ ಇನ್ ಫೈನೈಟ್ ಅಂಶದಿಂದ ಸ್ಫೂರ್ತಿ ಹೊಂದಿರುವ, ತನ್ನ ಮಹತ್ವದ ಹಬ್ಬದ ಉತ್ಪನ್ನ ಸಂಗ್ರಹವಾದ ಸ್ಟೆಲ್ಲರ್ 3.0 ಅನ್ನು ಬಿಡುಗಡೆ ಮಾಡಿದೆ.

-

ಟೈಟಾನ್ ಸಂಸ್ಥೆಯು ಸ್ಟೆಲ್ಲರ್ 3.0 ಸರಣಿಯು ಮೂರು ಸೀಮಿತ ಆವೃತ್ತಿಯ ವಾಚ್ ಗಳನ್ನು ಪರಿಚಯಿಸುತ್ತಿದ್ದು, ಇದನ್ನು ಬಾಹ್ಯಾಕಾಶದ ಸ್ಫೂರ್ತಿ, ಸುಧಾರಿತ ಹಾರೋಲಜಿ ತಂತ್ರಜ್ಞಾನ ಮತ್ತು ಅಪರೂಪದ ವಸ್ತುಗಳ ಸಂಯೋಜನೆಯೊಂದಿಗೆ ತಯಾರಿಸಲಾಗಿದೆ
ಬೆಂಗಳೂರು: ಅತ್ಯಂತ ಪ್ರತಿಷ್ಠಿಕ ವಾಚ್ ತಯಾರಿಕಾ ಕಂಪನಿ ಆಗಿರುವ ಟೈಟಾನ್ ಭಾರತೀಯ ವಾಚ್ ತಯಾರಿಕಾ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನು ರಚಿಸಿದ್ದು, ಟೈಟಾನ್ ಇದೀಗ ಇನ್ ಫೈನೈಟ್ ಅಂಶದಿಂದ ಸ್ಫೂರ್ತಿ ಹೊಂದಿರುವ, ತನ್ನ ಮಹತ್ವದ ಹಬ್ಬದ ಉತ್ಪನ್ನ ಸಂಗ್ರಹವಾದ ಸ್ಟೆಲ್ಲರ್ 3.0 ಅನ್ನು ಬಿಡುಗಡೆ ಮಾಡಿದೆ. 9 ಅಸಾಧಾರಣ ವಿನ್ಯಾಸದ ವಾಚ್ ಸರಣಿಯ ಕೇಂದ್ರದಲ್ಲಿ 3 ಸೀಮಿತ ಆವೃತ್ತಿಗಳಿವೆ, ಇದರಲ್ಲಿ ದೇಶದ ಮೊದಲ ವಾಂಡರಿಂಗ್ ಅವರ್ಸ್ ವಾಚ್ ಒಂದಾಗಿದ್ದು, ಇದನ್ನು ಮುಂಬೈನ ಬಾಸ್ಟಿಯನ್ ಅಟ್ ದಿ ಟಾಪ್ ನಲ್ಲಿ ವಿಶೇಷ ಬಿಡುಗಡೆ ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು.
ಸ್ಟೆಲ್ಲರ್ 3.0 ಅನ್ನು ಒಂದು ಕ್ಯಾನ್ವಾಸ್ ಆಗಿ ಊಹಿಸಿಕೊಂಡರೆ, ಅಲ್ಲಿ ಅನಂತ ಆಕಾಶದ ಅದ್ಭುತ ಗಳು ಕೈಗಡಿಯಾರ ತಂತ್ರಜ್ಞಾನದ ಚಾತುರ್ಯದೊಂದಿಗೆ ಭೇಟಿಯಾಗುವ ಅಚ್ಚರಿಯನ್ನು ನೋಡ ಬಹುದು. ವಾಂಡರಿಂಗ್ ಅವರ್ಸ್ ಈ ದೃಷ್ಟಿಕೋನಕ್ಕೆ ಪೂರಕವಾಗಿ ಮೂಡಿ ಬಂದಿದೆ. ತನ್ನ ಕಕ್ಷೆಯಲ್ಲಿ ತಿರುಗುವ ಚಂದ್ರ ಮತ್ತು ತಾರೆಗಳಿಂದ ಸ್ಫೂರ್ತಿಗೊಂಡು, ಇದರ ಚಲಿಸುವ ಮುಳ್ಳುಗಳು ಒಂದು ಕೆತ್ತಿದ ಕಮಾನಿನಾದ್ಯಂತ ಗ್ರಹಗಳಂತೆ ಆಕಾಶದ ಮಾರ್ಗದಲ್ಲಿ ಸುತ್ತುವಂತೆ ಚಿತ್ರಿಸಲಾಗಿದೆ. ಕ್ರಿಸ್ಟಲೈಸ್ಡ್ ಟೈಟಾನಿಯಂನಿಂದ ರೂಪಿತವಾದ ಎರಡು ಸ್ಯಾಲಲೈಟ್ ಡಿಸ್ಕ್ ಗಳು, ಬ್ರಷ್ಡ್ ಕಾಪರ್ ಬೆಝೆಲ್ ನೊಂದಿಗೆ ಸಂಯೋಜನೆಗೊಂಡಿದ್ದು, ನಿಮಿಷದ ಟ್ರ್ಯಾಕ್ ನಲ್ಲಿ ಆಕರ್ಷಕವಾಗಿ ಚಲಿಸುತ್ತವೆ. ಟೈಟಾನ್ ನ ಇನ್ ಹೌಸ್ ನಲ್ಲಿ ರೂಪುಗೊಂಡ ಈ ಸೀಮಿತ ಆವೃತ್ತಿಯ ಮಾಸ್ಟರ್ ಪೀಸ್ ನ ಕೇವಲ 500 ವಾಚ್ ಗಳು ಮಾತ್ರ ಲಭ್ಯವಿದ್ದು, ಇದರ ಬೆಲೆ ₹1,79,995.
ಇದನ್ನೂ ಓದಿ: Shishir Hegde Column: ಅಸಾಮಾನ್ಯ ಜಗತ್ತಿನ ಸಾಮಾನ್ಯ ಬದುಕು ಇತಿಹಾಸವಾಗುವುದಿಲ್ಲ
ಸ್ಟೆಲ್ಲರ್ 1 ಮತ್ತು 2ರ ಯಶಸ್ಸಿನ ಆಧಾರದಲ್ಲಿ ರೂಪುಗೊಂಡಿರುವ ಐಸ್ ಮೀಟಿಯೋರೈಟ್ ಅದ್ದೂರಿಯಾಗಿ ಮೂಡಿ ಬಂದಿದೆ. ಈ ಬಾರಿ 1,20,000 ವರ್ಷಗಳ ಹಳೆಯ ಮ್ಯೂನಿಯೊನಲುಸ್ಟಾ ಉಲ್ಕಾಶಿಲೆಯ ಮೇಲೆ ಲೇಪಿತವಾದ ಆಕಾಶದ ಐಸ್- ನೀಲಿ ಡಯಲ್ ಅನ್ನು ಒಳಗೊಂಡಿದ್ದು, ಈ ಮೂಲಕ ಬಾಹ್ಯಾಕಾಶದ ಇತಿಹಾಸದ ತುಣುಕನ್ನು ಆಧುನಿಕ ವಿನ್ಯಾಸದೊಂದಿಗೆ ಸಂಯೋಜಿಸ ಲಾಗಿದೆ. ಇದರ ಬೆಲೆ ₹1,39,995. ಔರೋರಾ ಕೇಲಮ್ ಇನ್ನೊಂದು ವಾಚ್ ಆಗಿದ್ದು, ಅದರ ಬೆಲೆ ₹95,995 ಆಗಿದೆ. ಇದು ಪ್ರಕಾಶಮಾನವಾದ ಹಸಿರು ಡಯಲ್ ನೊಂದಿಗೆ ಹೊಳೆಯುತ್ತದೆ, ಆಕಾಶದ ಡಿಸ್ಕ್ ಗಳನ್ನು ಸೊಗಸಾದ ಚೌಕಟ್ಟಿನಲ್ಲಿ ವಿನ್ಯಾಸ ಮಾಡಲಾಗಿದೆ.
ಈ ಕುರಿತು ಮಾತನಾಡಿರುವ ಟೈಟಾನ್ ನ ವಾಚಸ್ & ವೇರೆಬಲ್ಸ್ ವಿಭಾಗ ಸಿಇಓ ಕುರುವಿಲ್ಲಾ ಮಾರ್ಕೋಸ್ ಅವರು,“41 ವರ್ಷಗಳಿಂದ ಟೈಟಾನ್ ಅಪೂರ್ವ ಸೃಜನಶೀಲತೆ ಮತ್ತು ಕರಕುಶಲತೆಯ ಮೂಲಕ ಭಾರತೀಯ ವಾಚ್ ತಯಾರಿಕಾ ಕ್ಷೇತ್ರಕ್ಕೆ ಹೊಸ ರೂಪ ಕೊಡುತ್ತಾ ಬಂದಿದೆ. ಸ್ಟೆಲ್ಲರ್ 1.0 ವಿನ್ಯಾಸದಲ್ಲಿ ಹೊಸ ದಾರಿಯನ್ನು ಹಾಕಿಹೊಟ್ಟಿತು. ಸ್ಟೆಲ್ಲರ್ 2.0 ನಿಖರತೆ ಮತ್ತು ಡೀಟೇಲಿಂಗ್ ಅನ್ನು ಮತ್ತಷ್ಟು ತೀವ್ರಗೊಳಿಸಿತು. ಇದೀಗ ಸ್ಟೆಲ್ಲರ್ 3.0 ಬಿಡುಗಡೆ ಯಾಗಿದ್ದು, ಈ ಸರಣಿಯನ್ನು ಮತ್ತೊಂದು ಹೊಸ ಹೆಜ್ಜೆಯನ್ನು ಇಟ್ಟಿದೆ. ಟೈಟಾನ್ ನ ಇನ್ ಹೌಸ್ ನಲ್ಲಿ ರೂಪಿತಗೊಂಡ ವಾಂಡರಿಂಗ್ ಅವರ್ಸ್ ವಾಚ್, ಭಾರತೀಯ ವಾಚ್ ತಯಾರಿಕಾ ಕ್ಷೇತ್ರವನ್ನು ಜಾಗತಿಕ ನಕ್ಷೆಯಲ್ಲಿ ಮಹತ್ವದ ಗುರುತಾಗಿಸುವ ನಮ್ಮ ಪ್ರಯತ್ನದ ಈ ಪಯಣದಲ್ಲಿ ಒಂದು ಮಹತ್ವದ ಕ್ಷಣವಾಗಿದೆ. ಇಲ್ಲಿ ನಾವೀನ್ಯತೆ, ಕಲಾತ್ಮಕತೆ ಮತ್ತು ತಾಂತ್ರಿಕ ನೈಪುಣ್ಯವು ಒಂದು ಅಸಾಧಾರಣ ಅನುಭವವನ್ನು ಸೃಷ್ಟಿಸಲು ಒಗ್ಗೂಡಿವೆ. ಇದು ಸುದೀರ್ಘ ಪಯಣದ ಆರಂಭವಷ್ಟೇ ಮತ್ತು ಭಾರತೀಯ ಕೈಗಡಿಯಾರ ತಯಾರಿಕೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.
ಸ್ಟೆಲ್ಲರ್ 3.0 ಒಟ್ಟಾರೆಯಾಗಿ ಮೂರು ಸೃಜನಾತ್ಮಕ ಆಧಾರಗಳ ಮೇಲೆ ಕಟ್ಟಲ್ಪಟ್ಟಿದೆ: ಅದರಲ್ಲಿ ಒಂದು ಅಂಶ ಆಕಾಶದ ವಿದ್ಯಮಾನಗಳು, ಅಂದರೆ ಕಾಸ್ಮಿಕ್ ಚಕ್ರಗಳ ಲಯವನ್ನು ಸೆರೆ ಹಿಡಿಯು ವುದು; ಇನ್ನೊಂದು ಉತ್ಕೃಷ್ಟ ಹಾರೋಲಾಜಿಕಲ್ ಕಾರ್ಯಗಳು, ಅಂದರೆ ಸುಧಾರಿತ ಯಾಂತ್ರಿಕತೆ ಯನ್ನು ಕಥೆ ಹೇಳುವಿಕೆ ಜೊತೆ ಸಂಯೋಜಿಸುವುದು; ಮತ್ತೊಂದು ಅಪರೂಪದ ವಸ್ತುಗಳು, ಅಂದರೆ ವಿಶ್ವದ ಅಚ್ಚರಿದಾಯಕ ಅಂಶಗಳನ್ನು ಧರಿಸಬಹುದಾದ ವಸ್ತುವಾಗಿ ಪರಿವರ್ತಿಸುವುದು. ಈ ಸರಣಿಯಲ್ಲಿ ಒಂಬತ್ತು ವಾಚ್ ಗಳು ಲಭ್ಯವಿದ್ದು, ಈ ಪ್ರತಿಯೊಂದರ ಕಲ್ಪನೆಯೂ ವಾಚ್ ಸಂಗ್ರಾಹಕರು ಮತ್ತು ಕನಸುಗಾರರಿಗೆ ಅನಂತತೆಯ ಒಂದು ಝಲಕ್ ಅನ್ನು ಒದಗಿಸುತ್ತದೆ.
ಆಯ್ದ ಟೈಟಾನ್ ಮಳಿಗೆಗಳಲ್ಲಿ ಮತ್ತು ಆನ್ ಲೈನ್ ನಲ್ಲಿ ವಿಶೇಷವಾಗಿ ಲಭ್ಯವಿರುವ ಸ್ಟೆಲ್ಲರ್ 3.0 ಸರಣಿಯು ವಾಚ್ ಸಂಗ್ರಾಹಕರು, ಕನಸುಗಾರರು ಮತ್ತು ವಾಚ್ ಉತ್ಸಾಹಿಗಳನ್ನು ಒಂದು ವಿಶಿಷ್ಟ ಜಗತ್ತಿಗೆ ಆಹ್ವಾನಿಸುತ್ತಿದೆ, ಆ ಜಗತ್ತಲ್ಲಿ ಅನಂತತೆ ದೂರದಲ್ಲೆ ಲ್ಲೋ ಇರುವುದಿಲ್ಲ, ಬದಲಿಗೆ ಅದು ನಿಮ್ಮ ಮಣಿಕಟ್ಟಿನ ಮೇಲೆ ಕಾಣಿಸುತ್ತದೆ.