ಏಥರ್ ಎನರ್ಜಿ ಲಿಮಿಟೆಡ್ ಬಾರತದಾದ್ಯಂತ 3675+ ತ್ವರಿತ ಚಾರ್ಜರ್ ಗಳನ್ನು ಹೊಂದಿದ್ದು, ಇದು ಭಾರತದ ಅತಿ ದೊಡ್ಡದಾದ ದ್ವಿಚಕ್ರ ವಾಹನ ಫಾಸ್ಟ್ ಚಾರ್ಜಿಂಗ್ ಜಾಲವನ್ನು ಹೊಂದಿದೆ ಮತ್ತು ಎಲ್ಇಸಿಸಿಎಸ್ ಪಾಲುದಾರರ 1400+ ತ್ವರಿತ ಚಾರ್ಜರ್ ಗಳ ಜಾಲವನ್ನು ನಡೆಸುತ್ತಿದೆ.
ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾದ ಏಥರ್ ಎನರ್ಜಿ ಸಂಸ್ಥೆ ಏಥರ್ ಸವಾರರು ಇನ್ನು ಮುಂದೆ ಎಲ್ಇಸಿಸಿಎಸ್ (ಲೈಟ್ ಎಲೆಕ್ಟ್ರಿಕ್ ಕಂಬೈನ್ಡ್ ಚಾರ್ಜಿಂಗ್ ಸಿಸ್ಟಮ್) ಕನೆಕ್ಟರ್ ಹೊಂದಿರುವ 5000+ ಸಾರ್ವಜನಿಕ ಫಾಸ್ಟ್ ಚಾರ್ಜರ್ ಗಳನ್ನು ಬಳಸಬಹುದು ಎಂದು ಇಂದು ಘೋಷಿಸಿದೆ. ಈ ಜಾಲವು 395+ ನಗರಗಳಿಗೆ ವಿಸ್ತರಣೆ ಹೊಂದಿದ್ದು, ಏಥರ್ ಎನರ್ಜಿ ನೇರವಾಗಿ ನಡೆಸುವ 3,675+ ಫಾಸ್ಟ್ ಚಾರ್ಜರ್ ಗಳು ಮತ್ತು ಪಾಲುದಾರ ಜಾಲಗಳ 1400+ ಚಾರ್ಜರ್ ಗಳನ್ನು ಒಳಗೊಂಡಿದೆ.
ಈ ಚಾರ್ಜರ್ ಗಳನ್ನು ಪ್ರಮುಖ ಮಹಾನಗರಗಳು, ಎರಡನೇ ಮತ್ತು ಮೂರನೇ ಶ್ರೇಣಿಯ ನಗರ ಗಳು ಹಾಗೂ ವಿವಿಧ ನಗರಗಳ ಮಧ್ಯದ ಮಾರ್ಗಗಳಲ್ಲಿ ಸ್ಥಾಪಿಸಲಾಗಿದೆ. ಇದರಿಂದ ದೀರ್ಘ ದೂರ ಮತ್ತು ದೈನಂದಿನ ಸವಾರಿ ಮಾಡುವ ಸವಾರರಿಗೆ ಅನುಕೂಲ ಒದಗುತ್ತದೆ. ಬೆಂಗಳೂರು, ಪುಣೆ, ಚೆನ್ನೈ, ದೆಹಲಿ, ಹೈದರಾಬಾದ್ ಮತ್ತು ಮುಂಬೈನಂತಹ ನಗರಗಳಲ್ಲಿ ಪ್ರತಿ ನಗರದಲ್ಲೂ 100+ ಎಲ್ಇಸಿಸಿಎಸ್ ಚಾರ್ಜರ್ ಗಳಿವೆ. ಬೆಂಗಳೂರಿನಲ್ಲಿ ಮಾತ್ರ 240ಕ್ಕೂ ಹೆಚ್ಚು ಚಾರ್ಜರ್ ಗಳು ಲಭ್ಯವಿವೆ.
ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಮತ್ತು ಗುಜರಾತ್ ಸಾರ್ವಜನಿಕ ಚಾರ್ಜರ್ ಗಳು ಹೆಚ್ಚು ಲಭ್ಯವಿರುವ ರಾಜ್ಯಗಳಾಗಿವೆ. ಮಹಾನಗರಗಳ ಹೊರತಾಗಿ ನಾಶಿಕ್, ಮಲಪ್ಪುರಂ ಮತ್ತು ಇಂದೋರ್ ನಂತಹ ನಗರಗಳಲ್ಲಿ 45+ ಸಾರ್ವಜನಿಕ ಫಾಸ್ಟ್ ಚಾರ್ಜರ್ ಗಳಿವೆ. ಕೋಝಿಕೋಡ್ ಮತ್ತು ಕೋಯಂಬತ್ತೂರಿನಲ್ಲಿ ತಲಾ 65+ ಫಾಸ್ಟ್ ಚಾರ್ಜರ್ ಇವೆ. ಏಥರ್ ತನ್ನ ಚಾರ್ಜಿಂಗ್ ಜಾಲವನ್ನು ಅಂತಾರಾಷ್ಟ್ರೀಯವಾಗಿಯೂ ವಿಸ್ತರಿಸಿದ್ದು, ನೇಪಾಳ ಮತ್ತು ಶ್ರೀಲಂಕಾದಲ್ಲಿ 30+ ಫಾಸ್ಟ್ ಚಾರ್ಜರ್ ಗಳು ಕಾರ್ಯಾರಂಭ ಮಾಡಿವೆ.
ಇದನ್ನೂ ಓದಿ: Tata Motors: ಕೋಲ್ಕತ್ತಾದಲ್ಲಿ ಅತ್ಯಾಧುನಿಕ ವಾಹನ ಸ್ಕ್ರ್ಯಾಪಿಂಗ್ ಘಟಕ ಉದ್ಘಾಟಿಸಿದ ಟಾಟಾ ಮೋಟಾರ್ಸ್
ಈ ಘೋಷಣೆ ಸಂದರ್ಭದಲ್ಲಿ ಮಾತನಾಡಿದ ಏಥರ್ ಎನರ್ಜಿಯ ಮುಖ್ಯ ವ್ಯಾಪಾರ ಅಧಿಕಾರಿ ರವ್‌ನೀತ್ ಸಿಂಗ್ ಫೋಕೇಲಾ ಅವರು, "ಚಾರ್ಜಿಂಗ್ ಮೂಲಸೌಕರ್ಯವು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಗೆ ನೆರವಾಗುವ ಮುಖ್ಯವಾದ ಅಂಶವಾಗಿದೆ. ನಾವು ಬೆಳೆಯುತ್ತಿರುವಂತೆ ಈ ಜಾಲವನ್ನು ವಿಸ್ತರಿಸುವುದು ನಮ್ಮ ಮುಖ್ಯಆದ್ಯತೆಯಾಗಿದೆ. ಕಳೆದ ಏಳು ವರ್ಷಗಳಲ್ಲಿ ನಾವು ನಗರಗಳು ಮತ್ತು ಸಣ್ಣ ಪಟ್ಟಣಗಳಲ್ಲಿ ಮಾತ್ರವಲ್ಲದೆ ಹೆದ್ದಾರಿಗಳು ಮತ್ತು ಅಂತರ ನಗರ ಮಾರ್ಗ ಗಳಲ್ಲಿ ಚಾರ್ಜಿಂಗ್ ಸೌಲಭ್ಯ ನಿರ್ಮಿಸಲು ಸ್ಥಿರವಾಗಿ ಹೂಡಿಕೆ ಮಾಡಿದ್ದೇವೆ. ಇದರಿಂದ ಸವಾರರು ದೀರ್ಘ ದೂರದ ಪ್ರಯಾಣಗಳನ್ನು ವಿಶ್ವಾಸದಿಂದ ಮಾದಬಹುದು.
ಇಂದು 5,000ಕ್ಕೂ ಹೆಚ್ಚು ಫಾಸ್ಟ್ ಚಾರ್ಜರ್ ಗಳ ಲಭ್ಯತೆ ಯೊಂದಿಗೆ, ಏಥರ್ ಮಾಲೀಕರು ದೈನಂದಿನ ಸಂಚಾರವೋ ಅಥವಾ ಅಂತರನಗರ ಪ್ರಯಾಣವೋ ಹೀಗೆ ಎಲ್ಲಿಗೆ ಬೇಕಾದರೂ ಹೋಗಲಿ, ಎಲ್ಲಿ ಬೇಕಾದರೂ ಸುಲಭವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಜಾಲ ವಿಸ್ತರಣೆಯ ಜೊತೆಗೆ, ನಾವು ಚಾರ್ಜಿಂಗ್ ಅನುಭವವನ್ನೇ ಸುಧಾರಿಸುತ್ತಿದ್ದೇವೆ. ಇತ್ತೀಚೆಗೆ ಹೊಸ ಫಾಸ್ಟ್ ಚಾರ್ಜರ್ ಬಿಡುಗಡೆ ಮಾಡಿದ್ದೇವೆ. ಇದು ಎಲೆಕ್ಟ್ರಿಕ್ ಮಾಲೀಕತ್ವ ಅನುಭವವನ್ನು ಹೆಚ್ಚು ಸುಲಭ, ನಿರೀಕ್ಷಿತ ಮತ್ತು ಅನುಕೂಲಕರಗೊಳಿಸುವ ಮತ್ತೊಂದು ಮಹತ್ವದ ಹೆಜ್ಜೆ" ಎಂದರು.
ಏಥರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಮತ್ತು ಮೂರುಚಕ್ರ ವಾಹನಗಳಿಗೆ ವಿಶೇಷವಾಗಿ ಕನೆಕ್ಟರ್ ವಿನ್ಯಾಸ ಮಾಡಿದೆ ಮತ್ತು ಅಭಿವೃದ್ಧಿ ಮಾಡಿದೆ. 2021ರಲ್ಲಿ ಈ ಕನೆಕ್ಟರ್ ನ ಐಪಿ ಅನ್ನು ತೆರೆದು ಕೊಟ್ಟು, ದ್ವಿಚಕ್ರ ವಾಹನ ಫಾಸ್ಟ್ ಚಾರ್ಜಿಂಗ್ ಪ್ಲಾಟ್‌ಫಾರ್ಮ್ ಗೆ ಪರಸ್ಪರ ಕಾರ್ಯ ಸಾಧ್ಯತೆಯ ಮಾರ್ಗ ಕಲ್ಪಿಸಿತು. ಅಕ್ಟೋಬರ್ 2023ರಲ್ಲಿ ಎಲ್ಇಸಿಸಿಎಸ್ ಕನೆಕ್ಟರ್‌ಗೆ ಬಿಐಎಸ್ (ಭಾರತೀಯ ಮಾನಕಗಳ ಕಚೇರಿ) ಅನುಮೋದನೆ ದೊರಕಿತು. ಆಗಸ್ಟ್ 2023 ಮತ್ತು ಫೆಬ್ರವರಿ 2024ರಲ್ಲಿ ಕ್ರಮವಾಗಿ ಇಂಡಿಯನ್ ಸ್ಟ್ಯಾಂಡರ್ಡ್ IS17017 (Part2/Sec7):2023 ಮತ್ತು IS17017 - Part31:2024 ಆಗಿ ಪ್ರಕಟವಾಯಿತು.
ಎಲ್ಇಸಿಸಿಎಸ್ ಸ್ಟ್ಯಾಂಡರ್ಡ್ ಅನ್ನು ಈಗ ಹೀರೋ ವಿಡಾ, ಮ್ಯಾಟರ್ ನಂತಹ ತಯಾರಕರು ಮತ್ತು ಬೋಲ್ಟ್.ಅರ್ಥ್, ಕಜಾಮ್, ಇ ವ್ಯಾಂಪ್ ನಂತಹ ಚಾರ್ಜ್ ಪಾಯಿಂಟ್ ನಿರ್ವಾಹಕರು ಅಳವಡಿಸಿಕೊಂಡಿದ್ದಾರೆ. ಇದರಿಂದ ಉದ್ಯಮದಾದ್ಯಂತ ಪರಸ್ಪರ ಜೊತೆಗೂಡಿ ಸಾಗುವ ಕಾರ್ಯ ಸಾಧ್ಯತೆ ಇನ್ನೂ ಬಲಗೊಂಡಿದೆ.
ಇದಲ್ಲದೆ, ಏಥರ್ ಗ್ರಿಡ್ ಚಾರ್ಜರ್ ಗಳು ಗೂಗಲ್ ಮ್ಯಾಪ್ಸ್ ನಲ್ಲಿ ಗೋಚರಿಸುತ್ತವೆ. ಇದರಿಂದ ಎಲ್ಇಸಿಸಿಎಸ್ ಕನೆಕ್ಟರ್ ಹೊಂದಿರುವ ಯಾವುದೇ ಸ್ಕೂಟರ್ ಮಾಲೀಕನಿಗೆ ಸ್ಥಳ ಹುಡುಕಿ, ಮಾರ್ಗ ಕಂಡುಹಿಡಿದು ಚಾರ್ಜ್ ಮಾಡುವುದು ಸುಲಭವಾಗುತ್ತದೆ. ಇದು ದೈನಂದಿನ ಮಾಲೀಕತ್ವ ಅನುಭವವನ್ನು ಇನ್ನಷ್ಟು ಸುಧಾರಿಸುತ್ತದೆ.