CPL 2025: ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಇತಿಹಾಸ ಬರೆದ ಸುನೀಲ್ ನರೇನ್!
ವೆಸ್ಟ್ ಇಂಡೀಸ್ ದಿಗ್ಗಜ ಸುನೀಲ್ ನರೇನ್ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿಶೇಷ ದಾಖಲೆಯನನು ಬರೆದಿದ್ದಾರೆ. ಅವರು ಆಂಟಿಗುವಾ ಮತ್ತು ಬಾರ್ಬುಡಾ ಫಾಲ್ಕನ್ಸ್ ವಿರುದ್ದದ ಪಂದ್ಯದಲ್ಲಿ ಒಂದು ವಿಕೆಟ್ ಕಿತ್ತರೂ ಸಿಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಿತ್ತ ಬೌಲರ್ ಎಂಬ ದಾಖಲೆಯನ್ನು ಬರೆದಿದ್ದಾರೆ.

ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿಶೇಷ ದಾಖಲೆಯನ್ನು ಸುನೀಲ್ ನರೇನ್. -

ನವದೆಹಲಿ: ವೆಸ್ಟ್ ಇಂಡೀಸ್ ಸ್ಪಿನ್ನರ್ ಸುನೀಲ್ ನರೇನ್ (Sunil Narine) ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ (CPL 2025) ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಸೆಪ್ಟಂಬರ್ 16 ರಂದು 2025ರ ಸಿಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಸುನೀಲ್ ನರೇನ್ ಈ ಸಾಧನೆಗೆ ಭಾಜನರಾಗಿದ್ದಾರೆ. ಇವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ಸಹಾಯದಿಂದ ಟ್ರಿಂಬ್ಯಾಗೊ ನೈಟ್ ರೈಡರ್ಸ್ (Trinbago Knight Riders) ತಂಡ, ಎದುರಾಳಿ ಆಂಟಿಗುವಾ ಮತ್ತು ಬಾರ್ಬುಡಾ ಫಾಲ್ಕನ್ಸ್ ಎದುರು ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ 9 ವಿಕೆಟ್‌ಗಳ ಗೆಲುವು ಪಡೆಯಿತು.
ಈ ಪಂದ್ಯದಲ್ಲಿ ಸುನೀಲ್ ನರೇನ್ ತಮ್ಮ ಪಾಲಿನ 4 ಓವರ್‌ಗಳನ್ನು ಪೂರ್ಣಗೊಳಿಸಿದರು. ಅವರು ಬೌಲ್ ಮಾಡಿದ ನಾಲ್ಕು ಓವರ್‌ಗಳಿಗೆ ಒಂದು ವಿಕೆಟ್ ಕಿತ್ತರೂ 36 ರನ್‌ಗಳನ್ನು ನೀಡಿದ್ದಾರೆ. ಇವರು ಪಡೆದ ಒಂದು ವಿಕೆಟ್ ಇಮಾದ್ ವಸೀಮ್ ಅವರದು. ಇವರು ಮೂರು ಎಸೆತಗಳಲ್ಲಿ ಒಂದು ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆ ಮೂಲಕ ಫಾಲ್ಕನ್ಸ್ ತಂಡ 20 ಓವರ್‌ಗಳಿಗೆ 166 ರನ್‌ಗಳನ್ನು ಕಲೆ ಹಾಕಿತ್ತು.
AUS vs NZ: ಆಸ್ಟ್ರೇಲಿಯಾ ವಿರುದ್ದದ ಟಿ20ಐ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ!
ಇತಿಹಾಸ ಬರೆದ ಸುನೀಲ್ ನರೇನ್
ಒಂದು ವಿಕೆಟ್ ಮೂಲಕ ಸುನೀಲ್ ನರೇನ್ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಆ ಮೂಲಕ ವಿಂಡೀಸ್ ದಿಗ್ಗಜ ಡ್ವೇನ್ ಬ್ರಾವೊ ಅವರನ್ನು ಹಿಂದಿಕ್ಕಿದ್ದಾರೆ. ಸುನೀಲ್ ನರೇನ್ ಸಿಪಿಎಲ್ ಟೂರ್ನಿಯಲ್ಲಿ ಆಡಿದ 124 ಪಂದ್ಯಗಳಿಂದ 130 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರಲ್ಲಿ 99 ವಿಕೆಟ್‌ಗಳನ್ನು ಟ್ರಿಂಬ್ಯಾಗೊ ನೈಟ್ ರೈಡರ್ಸ್ ಪರ ಕಬಳಿಸಿದ್ದಾರೆ. ಇನ್ನುಳಿದ 31 ವಿಕೆಟ್‌ಗಳನ್ನು ಅವರು ಗಯಾನ ಆಮೇಜಾನ್ ವಾರಿಯರ್ಸ್ ಪರ ಪಡೆದಿದ್ದಾರೆ.
🫡Milestone achieved 🫡
— Cricbuzz (@cricbuzz) September 17, 2025
Sunil Narine becomes the highest wicket-taker in CPL history 👏pic.twitter.com/4iNFDl9rty
ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು
ಆಟಗಾರರು - ಪಂದ್ಯಗಳು- ವಿಕೆಟ್‌ಗಳು
ಸುನೀಲ್ ನರೇನ್ -124 -130
ಡ್ವೇನ್ ಬ್ರಾವೊ -107 -129
ಇಮ್ರಾನ್ ತಾಹಿರ್- 88 -125
ಜೇಸನ್ ಹೋಲ್ಡರ್- 114 -110
ಆಂಡ್ರೆ ರಸೆಲ್ -114 -98
ಎರಡು ಫ್ರಾಂಚೈಸಿ ಲೀಗ್ ತಂಡಗಳ ಪರ 130 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಮೊದಲ ಬೌಲರ್ ಎಂಬ ದಾಖಲೆಯನ್ನು ಸುನೀಲ್ ನರೇನ್ ಬರೆದಿದ್ದಾರೆ. ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 192 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಅಲ್ಲದೆ ಅತಿ ಹೆಚ್ಚು ವಿಕೆಟ್ ಕಬಳಿಸಿದ ಭಾರತೀಯನಲ್ಲದ ಬೌಲರ್ ಆಗಿದ್ದಾರೆ. ಇಲ್ಲಿ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡದೆ ವಿದೇಶಿ ಬೌಲರ್‌ಗಳ ಪಟ್ಟಿಯಲ್ಲಿ ಡ್ವೇನ್ ಬ್ರಾವೊ ಅಗ್ರ ಸ್ಥಾನದಲ್ಲಿದ್ದಾರೆ.