ಸೋಲೋ ಕ್ರಿಯೇಟರ್ ಗಳು ಮತ್ತು ವಿದ್ಯಾರ್ಥಿಗಳಿಗಾಗಿ ಹೊಸ ಫುಲ್- ಫ್ರೇಮ್ ಎಫ್ಎಕ್ಸ್2 ಸಿನಿಮಾ ಲೈನ್ ಕ್ಯಾಮೆರಾ ಬಿಡುಗಡೆ ಮಾಡಿದ ಸೋನಿ ಇಂಡಿಯಾ
ಎಫ್ಎಕ್ಸ್2 ಕ್ಯಾಮೆರಾವು ಮುಂದಿನ ತಲೆಮಾರಿನ ಕಂಟೆಂಟ್ ಕ್ರಿಯೇಟರ್ ಗಳಿಗೆ, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಸೋಲೋ ಕ್ರಿಯೇಟರ್ ಗಳಿಗೆ ತಮ್ಮ ಅತ್ಯಂತ ಮಹತ್ವಾಕಾಂಕ್ಷೆಯ ವಿಷನ್ ಗಳಿಗೆ ಜೀವ ನೀಡಬಲ್ಲ ಒಂದು ಗೇಮ್ ಚೇಂಜರ್ ಕ್ಯಾಮೆರಾ ಆಗಿದೆ. ಇದು ಕೇವಲ ಕ್ಯಾಮೆರಾ ಮಾತ್ರವೇ ಅಲ್ಲ, ಇದು ಅವರ ಚಲನಚಿತ್ರ ನಿರ್ಮಾಣದ ಪ್ರಯಾಣದ ಪ್ರತಿ ಹೆಜ್ಜೆಯಲ್ಲಿ ಅವರೊಂದಿಗೆ ಬೆಳೆಯುವ ಕ್ರಿಯೇಟಿವ್ ಸಂಗಾತಿ ಆಗಿರಲಿದೆ

-

ಕ್ಯಾಮೆರಾವು ಅತ್ಯುತ್ತಮ, ಆಕರ್ಷಕ ಸಿನಿಮಾ ಫೀಚರ್ ಗಳು, ಸರಳವಾಗಿ ಬಳಸುವ ಸೌಲಭ್ಯ ಮತ್ತು ಅತ್ಯುತ್ತಮ ಮೌಲ್ಯವನ್ನು ಹೊಂದಿದ್ದು, ಎಲ್ಲರಿಗೂ ಲಭ್ಯವಾಗುವಂತಹ ಕೈಗೆಟಕುವ ದರದಲ್ಲಿ ದೊರೆಯಲಿದೆ.
ಸೋನಿ ಇಂಡಿಯಾ ಸಂಸ್ಥೆಯು ಇಂದು ಮುಂದಿನ ಪೀಳಿಗೆಯ ಕ್ರಿಯೇಟರ್ ಗಳಿಗಾಗಿಯೇ ವಿನ್ಯಾಸಗೊಳಿಸಲಾಗಿರುವ ಕಾಂಪ್ಯಾಕ್ಟ್ ಫುಲ್- ಫ್ರೇಮ್ ಸಿನಿಮಾ ಲೈನ್ ಹೈಬ್ರಿಡ್ ಕ್ಯಾಮೆರಾ ಆಗಿರುವ ಹೊಚ್ಚ ಹೊಸ ಎಫ್ಎಕ್ಸ್2 ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ.
ಅತ್ಯಾಧುಮಿಕ ಸಿನಿಮಾ ತಂತ್ರಜ್ಞಾನವನ್ನು ಹೊಂದಿರುವ ಎಫ್ಎಕ್ಸ್2 ಕ್ಯಾಮೆರಾವು ಸಿನಿಮಾ ತಯಾರಿ ಆಸಕ್ತಿಯುಳ್ಳ ಸಿನಿಮಾ ಮೇಕರ್ ಗಳು, ವಿದ್ಯಾರ್ಥಿಗಳು, ಸ್ವತಂತ್ರ ವೀಡಿಯೊಗ್ರಾಫರ್ ಗಳು ಮತ್ತು ಕಂಟೆಂಟ್ ಕ್ರಿಯೇಟರ್ ಗಳಿಗೆ ತಮ್ಮ ಸಜೃನಶೀಲತೆಯನ್ನು ಹೆಚ್ಚಿಸಿಕೊಳ್ಳಲ, ಅತ್ಯುತ್ತಮ ವೀಡಿಯೋ ರಚಿಸಲು ಸಹಾಯ ಮಾಡುತ್ತದೆ. ಅವರ ಅನುಭವ ಕಡಿಮೆ ಇದ್ದರೂ ಅಥವಾ ತಂಡದ ಗಾತ್ರ ಯಾವುದೇ ಇದ್ದರೂ ಉತ್ತಮ ವಿಡಿಯೋಗ್ರಫಿಗೆ ಅನುವು ಮಾಡಿಕೊಡುತ್ತದೆ. ಎಫ್ಎಕ್ಸ್2 ಅತ್ಯಾಧುನಿಕ ಫೀಚರ್ ಗಳನ್ನು ಸೋನಿಯ ಪಾರಂಪರಿಕ ಕಲರ್ ಸೈನ್ಸ್ ಜೊತೆಗೆ ಹೊಂದಿದ್ದು, ಬಳಕೆದಾರರಿಗೆ ತಮ್ಮ ಯೋಜನೆಯ ಗಾತ್ರ ಅಥವಾ ಸಂಕೀರ್ಣತೆ ಏನೇ ಇದ್ದರೂ ತಮ್ಮ ಸೃಜನ ಶೀಲತೆ ಮೆರೆಯಲು, ಅತ್ಯುತ್ತಮ ವಿಡಿಯೋಗ್ರಫಿ ಮಾಡಲು ನೆರವಾಗುತ್ತದೆ.
ಇದನ್ನೂ ಓದಿ: Shishir Hegde Column: ಏನಿದು ಡೊನಾಲ್ಡ್ ಟ್ರಂಪಣ್ಣನ ನೌಟ್ರಂಪ್ ಆಟ ?
ಈ ಕುರಿತು ಮಾತನಾಡಿರುವ ಸೋನಿ ಇಂಡಿಯಾದ ಇಮೇಜಿಂಗ್ ಬಿಸಿನೆಸ್ ಮುಖ್ಯಸ್ಥರಾದ ಶ್ರೀ ಮುಕೇಶ್ ಶ್ರೀವಾಸ್ತವ ಅವರು, "ಎಫ್ಎಕ್ಸ್2 ಕ್ಯಾಮೆರಾವು ಮುಂದಿನ ತಲೆಮಾರಿನ ಕಂಟೆಂಟ್ ಕ್ರಿಯೇಟರ್ ಗಳಿಗೆ, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಸೋಲೋ ಕ್ರಿಯೇಟರ್ ಗಳಿಗೆ ತಮ್ಮ ಅತ್ಯಂತ ಮಹತ್ವಾಕಾಂಕ್ಷೆಯ ವಿಷನ್ ಗಳಿಗೆ ಜೀವ ನೀಡಬಲ್ಲ ಒಂದು ಗೇಮ್ ಚೇಂಜರ್ ಕ್ಯಾಮೆರಾ ಆಗಿದೆ. ಇದು ಕೇವಲ ಕ್ಯಾಮೆರಾ ಮಾತ್ರವೇ ಅಲ್ಲ, ಇದು ಅವರ ಚಲನಚಿತ್ರ ನಿರ್ಮಾಣದ ಪ್ರಯಾಣದ ಪ್ರತಿ ಹೆಜ್ಜೆಯಲ್ಲಿ ಅವರೊಂದಿಗೆ ಬೆಳೆಯುವ ಕ್ರಿಯೇಟಿವ್ ಸಂಗಾತಿ ಆಗಿರಲಿದೆ ಮತ್ತು ಈ ಕ್ಯಾಮೆರಾ ಜೀವ ಬರಿಸಲು ಸಹಾಯ ಮಾಡಿರುವ ಅದ್ಭುತ ಕಂಟೆಂಟ್ ಗಳನ್ನು ನೋಡಲು ನಾವು ಉತ್ಸುಕರಾಗಿದ್ದೇವೆ" ಎಂದು ಹೇಳಿದರು.
- 33 ಎಂಪಿ ಫುಲ್-ಫ್ರೇಮ್ ಬ್ಯಾಕ್- ಇಲ್ಯೂಮಿನೇಟೆಡ್ ಸಿಮೋಸ್ ಸೆನ್ಸರ್, ಕ್ಯೂ ಎಫ್ ಎಚ್ ಡಿ 4ಕೆ 60ಪಿ (ಎಸ್35 ಎಂಎಂ) ವರೆಗಿನ ಸಾಮರ್ಥ್ಯ ಹೊಂದಿರುವ ಎಫ್ಎಕ್ಸ್2 ಉನ್ನತ ಗುಣಮಟ್ಟದ ಸಿನಿಮಾ ದೃಶ್ಯಗಳನ್ನು ನೀಡುತ್ತದೆ. ಸೋನಿ ಎಫ್ಎಕ್ಸ್2 ಕ್ಯಾಮೆರಾವು ಉನ್ನತ ಕಾರ್ಯಕ್ಷಮತೆಯ ಸಿನಿಮಾ ಲೈನ್ ಕ್ಯಾಮೆರಾವಾಗಿದ್ದು, ಫುಲ್-ಫ್ರೇಮ್ 33.0 ಎಂಪಿ ಬ್ಯಾಕ್- ಇಲ್ಯೂಮಿನೇಟೆಡ್ ಸಿಮೋಸ್ ಸೆನ್ಸರ್ ಮೂಲಕ ಅಸಾಧಾರಣ ಸಿನಿಮಾ ಚಿತ್ರಣಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ಕ್ಯಾಮೆರಾವು ಕ್ಯೂ ಎಫ್ ಎಚ್ ಡಿ 4ಕೆ 60ಪಿ ವರೆಗಿನ ಸಾಮರ್ಥ್ಯ ಹೊಂದಿದ್ದು, ಇದು ಉನ್ನತ ರೆಸಲ್ಯೂಶನ್ ಮತ್ತು ಬೊಕೆಯೊಂದಿಗೆ ಸುಂದರವಾದ ಸಿನಿಮಾ ಚಿತ್ರಗಳನ್ನು ನೀಡುತ್ತದೆ. ಇದನ್ನು ಇತ್ತೀಚಿನ ಸಿಸ್ಟಮ್ ಆರ್ಕಿಟೆಕ್ಚರ್, ಬಯೋನ್ಜ್ ಎಕ್ಸ್ಆರ್ ಇಮೇಜ್ ಪ್ರೊಸೆಸಿಂಗ್ ಮತ್ತು Aಎಐ ಪ್ರೊಸೆಸಿಂಗ್ ಯುನಿಟ್ ಜೊತೆಗೆ ವಿನ್ಯಾಸಗೊಳಿಸಲಾಗಿದ್ದು, ಎಫ್ಎಕ್ಸ್2 ಕ್ಯಾಮೆರಾ ಯಾವುದೇ ಚಿತ್ರವನ್ನು ಸಮೃದ್ಧ ವಿವರಗಳೊಂದಿಗೆ ಸೆರೆಹಿಡಿಯಲು ಸಹಾಯ ಮಾಡುತ್ತದೆ.
- 15+ ಸ್ಟಾಪ್ ವೈಡ್ ಲ್ಯಾಟಿ ಟ್ಯೂಡ್ ಮತ್ತು ಡ್ಯುಯಲ್ ಬೇಸ್ ಐಎಸ್ಓ (800/4000) ಇದರಲ್ಲಿ ಲಭ್ಯವಿದ್ದು, ಕಡಿಮೆ ಬೆಳಕಿನಲ್ಲಿ ಸಹ ಅದ್ಭುತ ಗುಣಮಟ್ಟದ ಚಿತ್ರವನ್ನು ಒದಗಿಸುತ್ತದೆ. ಕ್ಯಾಮೆರಾವು 15+ ಸ್ಟಾಪ್ ಗಳ ವಿಶಾಲ ಡೈನಾಮಿಕ್ ರೇಂಜ್ ಮತ್ತು ಡ್ಯುಯಲ್ ಬೇಸ್ ಐಎಸ್ಎಂ (800/4000) ಜೊತೆಗೆ, ಐಎಸ್ಓ 102400 ವರೆಗಿನ ವಿಸ್ತರಿತ ಸೆನ್ಸಿಟಿವಿಟಿಯನ್ನು ಒದಗಿಸುತ್ತಿದ್ದು, ಈ ಮೂಲಕ ಉನ್ನತ ಗುಣಮಟ್ಟದ ಸಿನಿಮಾ.

33 ಎಂಪಿ ಫುಲ್-ಫ್ರೇಮ್ ಬ್ಯಾಕ್- ಇಲ್ಯೂಮಿನೇಟೆಡ್ ಸಿಮೋಸ್ ಸೆನ್ಸರ್, ಕ್ಯೂ ಎಫ್ ಎಚ್ ಡಿ 4ಕೆ 60ಪಿ (ಎಸ್35 ಎಎಂ) ವರೆಗಿನ ಸಾಮರ್ಥ್ಯ ಹೊಂದಿರುವ ಎಫ್ಎಕ್ಸ್2 ಉನ್ನತ ಗುಣಮಟ್ಟದ ಸಿನಿಮಾ ದೃಶ್ಯಗಳನ್ನು ನೀಡುತ್ತದೆ.
- 15+ ಸ್ಟಾಪ್ ವೈಡ್ ಲ್ಯಾಟಿಟ್ಯೂಡ್ ಮತ್ತು ಡ್ಯುಯಲ್ ಬೇಸ್ ಐಎಸ್ಓ (800/4000) ಒದಗಿಸಲಿದ್ದು, ಇದು ಕಡಿಮೆ ಬೆಳಕಿನಲ್ಲಿ ಕೂಡ ಅದ್ಭುತ ಗುಣಮಟ್ಟದ ಚಿತ್ರ ವನ್ನು ಒದಗಿಸುತ್ತದೆ.
- 16 ಯೂಸರ್ ಎಲ್.ಯು.ಟಿಗಳು ವೀಡಿಯೋ ತೆಗೆಯುವ ಸಮಯದಲ್ಲಿಯೇ ಕ್ರಿಯೇಟಿವ್ ಲುಕ್ ನ ಪ್ರಿವ್ಯೂ ನೋಡಲು ಅವಕಾಶ ನೀಡುತ್ತವೆ.
- ಎಸ್-ಸಿನಿಟೋನ್™ ಫೀಚರ್ ಇದರಲ್ಲಿ ಲಭ್ಯವಿದ್ದು, ಇದು ಸೋನಿಯ ಫ್ಲ್ಯಾಗ್‌ಶಿಪ್ ವೆನಿಸ್ ಕ್ಯಾಮೆರಾಗಳ ಟೋನ್ ಗೆ ಹೊಂದಿಕೆಯಾಗುತ್ತಿದ್ದು, ಎಲ್ಲಾ ವಿಡಿಯೋಗಳಿಗೂ ಉನ್ನತ ಮಟ್ಟದ ದೃಶ್ಯಗಳನ್ನು ಒದಗಿಸುತ್ತದೆ.
- ಸ್ಲೋ & ಕ್ವಿಕ್ ಮೋಷನ್ ಫೀಚರ್ 4ಕೆಯಲ್ಲಿ 60 ಎಫ್ ಪಿ ಎಸ್ ಮತ್ತು ಫುಲ್ ಎಚ್ ಡಿಯಲ್ಲಿ 120 ಎಫ್ ಪಿ ಎಸ್ ವರೆಗೆ ರೆಕಾರ್ಡ್ ಮಾಡಲು ಅನುವು ಮಾಡಿಕೊಡುತ್ತದೆ, ಇದು ಆಕರ್ಷಕವಾದ ಸ್ಲೋ ಮೋಷನ್ ವೀಡಿಯೋ ತೆಗೆಯಲು ಅನುಕೂಲಕರವಾಗಿದೆ.
- 4:2:2 10-ಬಿಟ್ ರೆಕಾರ್ಡಿಂಗ್ ಸಿನಿಮಾ ಫೀಚರ್ ವೆನಿಸ್ ಕಲರಿಮೆಟ್ರಿಗೆ ಹೊಂದಿಕೆಯಾಗುವಂತೆ ನೋಡಿಕೊಳ್ಳುತ್ತದೆ.
- ಹೊಸ ಲಾಗ್ ಶೂಟಿಂಗ್ ಮೋಡ್ ಸ್ಥಿರ ಚಿತ್ರಗಳನ್ನು ಸೆರೆಹಿಡಿಯಲು ಮತ್ತು ಹೊಸ ಟಿಲ್ಟೆಬಲ್ 3.68ಎಂ-ಡಾಟ್ ಇವಿಎಫ್ ಫೀಚರ್ ಹೈಬ್ರಿಡ್ ವೈಶಿಷ್ಟ್ಯಗಳನ್ನು ಒದಗಿಸುತ್ತದೆ.
- ವಿಶಿಷ್ಟ ಬಿಗ್6 (ಹೋಮ್) ಸ್ಕ್ರೀನ್ ಆಗಾಗ್ಗೆ ಬಳಸುವ ಸೆಟ್ಟಿಂಗ್ ಗಳನ್ನು ನಿಮ್ಮ ಬೆರಳ ತುದಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ.
- ಒಂದೇ ರೀತಿಯ ಫಾರ್ಮ್ ಫ್ಯಾಕ್ಟರ್ ಮತ್ತು ಸುಲಭ ನಿಯಂತ್ರಣ ಸೌಲಭ್ಯವು ಈ ಕ್ಯಾಮರಾಮನ್ನು ಸೋಲೋ ಶೂಟರ್ ಗಳಿಗೆ ಸೂಕ್ತ ಆಯ್ಕೆಯನ್ನಾಗಿ ಮಾಡುತ್ತದೆ.
- ಐಚ್ಛಿಕ ಎಚ್ಎಲ್ಆರ್ ಹ್ಯಾಂಡಲ್ ಮತ್ತು ಬಹು ಅಪ್ಲಿಕೇಶನ್ ಬೆಂಬಲವು ಎಫ್ಎಕ್ಸ್2 ಅನ್ನು ಯಾವುದೇ ರೀತಿಯ ವೀಡಿಯೋ ತೆಗೆಯಲು ಸಿದ್ಧಗೊಳಿಸುತ್ತದೆ.