ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತದಲ್ಲಿ ವೇಗ ಪಡೆದುಕೊಂಡ ’ಹಾರ್ಲೆ-ಡೇವಿಡ್ಸನ್ ಮತ್ತು ಹೀರೋ ಮೋಟೋಕಾರ್ಪ್ ಪ್ರೀಮಿಯಂ ನೆಟ್‌ವರ್ಕ್’

ಭಾರತದ ಈ ಹೊಸ ಡೀಲರ್‌ಶಿಪ್‌ಗಳಲ್ಲಿ ಹಾರ್ಲೆ-ಡೇವಿಡ್ಸನ್ ಮೋಟಾರ್‌ಸೈಕಲ್‌ಗಳ ಸಮಗ್ರ ಶ್ರೇಣಿ ದೊರೆಯುತ್ತದೆ. ಇದರಲ್ಲಿ ಜಾಗತಿಕ ಮೂಲದ ಸಿಬಿಯು (ಸಂಪೂರ್ಣವಾಗಿ ನಿರ್ಮಿಸ ಲಾದ ಘಟಕ) ಮಾದರಿಗಳು, ಹಾಗೆಯೇ ಹೀರೋ ಮೋಟೋಕಾರ್ಪ್-ತಯಾರಿಸಿದ ಹಾರ್ಲೆ-ಡೇವಿಡ್ಸನ್ X440, X440T ಮತ್ತು ಅವುಗಳ ರೂಪಾಂತರಗಳೂ ಸೇರುತ್ತವೆ

ಬೆಂಗಳೂರು: ಇಂದು ಹಾರ್ಲೆ-ಡೇವಿಡ್ಸನ್ ಮತ್ತು ಹೀರೋ ಮೋಟೋಕಾರ್ಪ್ ಪರಸ್ಪರ ಸಹಯೋಗದಲ್ಲಿ ಕೇರಳದ ಕೊಚ್ಚಿ ಮತ್ತು ಕರ್ನಾಟಕದ ಬೆಂಗಳೂರಿನಲ್ಲಿ ತಮ್ಮ ಹೊಸ ಪೂರ್ಣ-ಶ್ರೇಣಿಯ ಹಾರ್ಲೆ-ಡೇವಿಡ್ಸನ್ ಡೀಲರ್‌ಶಿಪ್‌ಗಳನ್ನು ಪ್ರಾರಂಭಿಸಿರುವುದಾಗಿ ಪ್ರಕಟಿಸಿವೆ. ಈ ಹೊಸ ಮೈಲುಗಲ್ಲು, ಭಾರತದಲ್ಲಿ ಹಾರ್ಲೆ-ಡೇವಿಡ್ಸನ್‌ ವಿಸ್ತರಣೆಯಲ್ಲಿನ ಮಹತ್ವದ ಹೆಜ್ಜೆಯೊಂದನ್ನು ಗುರುತಿಸುತ್ತದೆ.

ಇದೀಗ ದೇಶಾದ್ಯಂತ 22 ಪೂರ್ಣ-ಶ್ರೇಣಿಯ ಡೀಲರ್‌ಶಿಪ್‌ಗಳ ನೆಟ್ವರ್ಕ್ ಇದೆ. ಈ ಉಪಕ್ರಮ, ದೇಶದಲ್ಲಿ ದೀರ್ಘಕಾಲದಿಂದಲೂ ಹಾರ್ಲೆ-ಡೇವಿಡ್ಸನ್‌ ಪ್ರೀಮಿಯಂ ಬ್ರ್ಯಾಂಡಿಗೆ ಮೋಟಾರ್‌ಸೈಕಲ್ ಗಳ ಜೊತೆ ಇರುವ ಬಾಂಧವ್ಯವನ್ನು ಎತ್ತಿ ಹಿಡಿಯುತ್ತದೆ.

ಭಾರತದ ಈ ಹೊಸ ಡೀಲರ್‌ಶಿಪ್‌ಗಳಲ್ಲಿ ಹಾರ್ಲೆ-ಡೇವಿಡ್ಸನ್ ಮೋಟಾರ್‌ಸೈಕಲ್‌ಗಳ ಸಮಗ್ರ ಶ್ರೇಣಿ ದೊರೆಯುತ್ತದೆ. ಇದರಲ್ಲಿ ಜಾಗತಿಕ ಮೂಲದ ಸಿಬಿಯು (ಸಂಪೂರ್ಣವಾಗಿ ನಿರ್ಮಿಸಲಾದ ಘಟಕ) ಮಾದರಿಗಳು, ಹಾಗೆಯೇ ಹೀರೋ ಮೋಟೋಕಾರ್ಪ್-ತಯಾರಿಸಿದ ಹಾರ್ಲೆ-ಡೇವಿಡ್ಸನ್ X440, X440T ಮತ್ತು ಅವುಗಳ ರೂಪಾಂತರಗಳೂ ಸೇರುತ್ತವೆ. ಈ ಡೀಲರ್‌ಶಿಪ್‌ಗಳಿಂದಾಗಿ ಗ್ರಾಹಕರಿಗೆ ಹಾರ್ಲೆ-ಡೇವಿಡ್ಸನ್ ಸಮಗ್ರ ಶ್ರೇಣಿ, ಆರಾಮವಾಗಿ ಒಂದೇ ಸ್ಥಳದಲ್ಲಿ ಸಿಗುತ್ತದೆ. ಮತ್ತು ಬ್ರ್ಯಾಂಡ್‌ ಗೆ ಒಂದು ಹೊಸ ನೋಟವನ್ನು ಕೊಡುತ್ತದೆ.

ಇದನ್ನೂ ಓದಿ: Tata Motors: ವಿದ್ಯುತ್ ವಾಣಿಜ್ಯ ವಾಹನಗಳ ಗುತ್ತಿಗೆ ನೀಡುವ ವ್ಯವಸ್ಥೆ ಕಲ್ಪಿಸಲು ವರ್ಟೆಲೋ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ಟಾಟಾ ಮೋಟಾರ್ಸ್

ಜೊತೆಗೆ, ಈ ಡೀಲರ್‌ಶಿಪ್‌ಗಳು ಹಾರ್ಲೆ-ಡೇವಿಡ್ಸನ್ ನ ಅಸಲಿ ಸಾಮಗ್ರಿಗಳು ಮತ್ತು ಆಕ್ಸೆಸ ರೀಸ್ ಜೊತೆಗೆ ಮಾರಾಟ, ಸೇವೆ ಮತ್ತು ಬಿಡಿಭಾಗಗಳನ್ನು ಮಾರುವ ಕೇಂದ್ರ ಗಳಾಗಿಯೂ ಕೆಲಸ ಮಾಡುತ್ತವೆ. ಸ್ಥಳೀಯ ಅಂಗಸಂಸ್ಥೆಗಳ ಮೂಲಕ ಹಾರ್ಲೆ ಮಾಲೀಕರ ಸಮೂಹದ (ಎಚ್.ಓ.ಜಿ) ಸಮುದಾಯ ಪ್ರೋಗ್ರಾಂಗಳನ್ನೂ ನಿರ್ವಹಿಸುತ್ತವೆ.

ಡೀಲರ್‌ಶಿಪ್ ಉದ್ಘಾಟನೆಯ ಭಾಗವಾಗಿ ಹಾರ್ಲೆ-ಡೇವಿಡ್ಸನ್ ಮತ್ತು ಹೀರೋ ಮೋಟೋ ಕಾರ್ಪ್ ಒಟ್ಟಾಗಿ, ಉದ್ಘಾಟನಾ ಸವಾರಿಗಳನ್ನು ಸಹ ಆಯೋಜಿಸುತ್ತವೆ; ಬ್ರ್ಯಾಂಡ್‌ನ ಪರಂಪರೆ, ಮೌಲ್ಯಗಳು ಮತ್ತು ಸ್ವತಂತ್ರ ಮನೋಭಾವವನ್ನು ಪ್ರದರ್ಶಿಸಲು ಹಾರ್ಲೆ-ಡೇವಿಡ್ಸನ್ ಮಾಲೀಕರನ್ನು ಒಟ್ಟುಗೂಡಿಸುವ ಸಾಂಕೇತಿಕ ಸಾಮುದಾಯಿಕ ಸವಾರಿಗಳು ಇರಲಿವೆ. ಮಾರ್ಚ್ 1, 2026 ರಂದು ಬೆಂಗಳೂರಿನಲ್ಲಿ ಮತ್ತು ಮಾ.31ರಂದು ಕೊಚ್ಚಿಯಲ್ಲಿ ಈ ಸವಾರಿಗಳು ನಡೆಯಲಿವೆ.

ಹೀರೋ ಮೋಟೋಕಾರ್ಪ್‌ನ ಹಾರ್ಲೆ-ಡೇವಿಡ್ಸನ್ ವ್ಯಾಪಾರ ಘಟಕದ ನಿರ್ದೇಶಕ ರವಿ ಅವಲೂರ್: "ಹಾರ್ಲೆ-ಡೇವಿಡ್ಸನ್ ಮತ್ತು ಹೀರೋ ಮೋಟೋಕಾರ್ಪ್ ಒಟ್ಟಾಗಿ ಹಾರ್ಲೆ-ಡೇವಿಡ್ಸನ್ ಮೋಟಾರ್‌ಸೈಕಲ್‌ಗಳ ಸಮಗ್ರ ಶ್ರೇಣಿಯನ್ನು ಒದಗಿಸುವ ಹೊಸ ಡೀಲರ್‌ ಶಿಪ್‌ಗಳನ್ನು ತೆರೆಯುತ್ತಿವೆ.

ಇದರಿಂದ, ಭಾರತದಲ್ಲಿ ನಮ್ಮ ಉಪಸ್ಥಿತಿ ಬಲಗೊಳ್ಳುತ್ತದೆ. ಉದ್ಘಾಟನಾ ರೇಸ್ ಜೊತೆಗೆ ಈ ಡೀಲರ್‌ಶಿಪ್‌ಗಳು ಬಲಿಷ್ಠವಾದ ಮತ್ತು ಆಸಕ್ತರನ್ನು ಒಳಗೊಂಡ ಮೋಟಾರ್‌ಸೈಕ್ಲಿಂಗ್ ಸಮುದಾಯವನ್ನು ನಿರ್ಮಿಸಲು ನೆರವಾಗುತ್ತವೆ. ಇದು ನಮ್ಮ ನಿರಂತರ ಬದ್ಧತೆಯನ್ನು ತೋರಿಸುತ್ತದೆ. ಕೊಚ್ಚಿ ಮತ್ತು ಬೆಂಗಳೂರು ನಮಗೆ ಬಹಲ ಮುಖ್ಯವಾದ ನಗರಗಳು. ಏಕೆಂದರೆ ಈ ಎರಡೂ ನಗರಗಳು ಬಹಳ ಹಿಂದಿನಿಂದಲೂ ಮೋಟಾರ್‌ ಸೈಕಲ್ ಸಂಸ್ಕೃತಿ ಯನ್ನು ಪ್ರೋತ್ಸಾಹಿಸುತ್ತ ಬಂದಿವೆ.

ವಿಶ್ವ ದರ್ಜೆಯ ಉತ್ಪನ್ನಗಳು, ರೀಟೇಲ್ ಪರಿಣತಿ ಮತ್ತು ಮಾರಾಟ-ನಂತರದ ಸೇವೆಗಳಿಗೆ ಬೇಕಾಗುವ ಮೂಲಸೌಕರ್ಯಗಳು ಇಲ್ಲಿವೆ. ಹಾಗಾಗಿ ಭವಿಷ್ಯತ್ತಿನ ಪ್ರೀಮಿಯಂ ಮೋಟಾರ್‌ ಸೈಕ್ಲಿಂಗ್ ಪರಿಸರವನ್ನು ನಿರ್ಮಿಸಬೇಕೆನ್ನುವ ನಮಗೆ ಈ ನಗರಗಳು ಬಹಳ ಮುಖ್ಯವಾ ಗಿವೆ.”

ಭಾರತದಾದ್ಯಂತ ಗ್ರಾಹಕರ ವಿಶ್ವಾಸವನ್ನು ಪೋಷಿಸುವಲ್ಲಿ ಮತ್ತು ಹಾರ್ಲೆ-ಡೇವಿಡ್ಸನ್ ಸಮುದಾಯವನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ H-D X440 ಗೆ ಮಾರು ಕಟ್ಟೆಯಲ್ಲಿ ಅಸಾಧಾರಣ ಪ್ರತಿಕ್ರಿಯೆಗಳು ದೊರೆತಿವೆ. ಇದರಿಂದಾಗಿ ನಮ್ಮ ಪ್ರೀಮಿಯಂ ನೆಟ್‌ವರ್ಕ್‌, ಗಮನಾರ್ಹ ವೇಗದಲ್ಲಿ ಬೆಳೆಯುತ್ತಿದೆ. H-D X440 T ವಿಶೇಷವಾದ ಸಾಮರ್ಥ್ಯ ಗಳನ್ನು ಹೊಂದಿದೆ.

ಇದು ನಮ್ಮ ವೇದಿಕೆಗೆ ಮತ್ತಷ್ಟು ಯಶಸ್ಸನ್ನು ತರುತ್ತದೆ; ಹೊಸ ಪೀಳಿಗೆಯ ಯುವ ಜನರನ್ನು ನಮ್ಮ ಬ್ರ್ಯಾಂಡ್‌ ನತ್ತ ಆಕರ್ಷಿಸುತ್ತದೆ ಮತ್ತು ಹಾರ್ಲೆ-ಡೇವಿಡ್ಸನ್ ಪರಂಪರೆ ಎಲ್ಲರಿಗೂ ಸುಲಭವಾಗಿ ದಕ್ಕುವಂತೆ ಮಾಡುತ್ತದೆ. ಇದಲ್ಲದೆ, ಹೊಸ ಸಾಫ್ಟೇಲ್ 117 ಕ್ರೂಸರ್ ಲೈನ್‌ ಮತ್ತು ಕಳೆದ ವರ್ಷದ ಕೊನೆಯಲ್ಲಿ ಮತ್ತೆ ಬಂದ ಕಸ್ಟಮ್ ವೆಹಿಕಲ್ ಆಪರೇಷನ್ಸ್ (CVO) ಮಾದರಿಗಳು ಭಾರತದಾದ್ಯಂತ ಹಾರ್ಲೆ-ಡೇವಿಡ್ಸನ್ ಗ್ರಾಹಕರಿಗೆ ಇನ್ನಷ್ಟು ರೋಮಾಂಚಕ ಅನುಭವವನ್ನು ನೀಡುತ್ತಿವೆ.

ಹಾರ್ಲೆ-ಡೇವಿಡ್ಸನ್ X440 ಶ್ರೇಣಿ ದೇಶಾದ್ಯಂತ 115 ಹೀರೋ ಪ್ರೀಮಿಯಂ ಡೀಲರ್‌ಶಿಪ್‌ ಗಳು ಮತ್ತು 22 ಹಾರ್ಲೆ-ಡೇವಿಡ್ಸನ್ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದೆ. ಜೊತೆಗೆ ಈ ಹೊಸ ಸ್ಥಳಗಳ ಸೇರ್ಪಡೆಯೊಂದಿಗೆ, ವಿಶ್ವದ ಅತಿದೊಡ್ಡ ಕಾರ್ಖಾನೆ ಪ್ರಾಯೋಜಿತ ಮೋಟಾರ್‌ ಸೈಕಲ್ ಕ್ಲಬ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಹಾರ್ಲೆ ಓನರ್ಸ್ ಗ್ರೂಪ್ (H.O.G.), ಭಾರತದಲ್ಲಿ 33 ಶಾಖೆಗಳನ್ನು ಹೊಂದಿದಂತಾಗುತ್ತದೆ.