ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ವಿಶ್ವದ ಅತ್ಯಂತ ಕಿರಿಯ ಚೆಸ್ ಚಾಂಪಿಯನ್ ಗುಕೇಶ್ ರನ್ನು ಗೌರವಿಸುವ ಸೀಮಿತ ಆವೃತ್ತಿಯ ಕೈಗಡಿಯಾರ ಮಾರುಕಟ್ಟೆಗೆ ಬಿಡುಗಡೆ

ಕಳೆದ 40 ವರ್ಷಗಳಿಂದ, ಚಿಂತನಶೀಲ ವಿನ್ಯಾಸ, ತಾಂತ್ರಿಕ ಜಾಣ್ಮೆ ಮತ್ತು ಶಾಶ್ವತ ನಂಬಿಕೆಯ ಆಧರಿಸಿ ಕಾಲದ ಜೊತೆಗಿನ ಭಾರತದ ಸಂಬಂಧವನ್ನು ಟೈಟನ್ ರೂಪಿಸುತ್ತ ಬಂದಿದೆ. ಇದು ಆಂತರಿಕವಾಗಿ ಭಾರತೀಯ ಮನೋಭಾವ ಮತ್ತು ಕಾರ್ಯಗತ ಗೊಳಿಸುವಿಕೆಯಲ್ಲಿ ಜಾಗತಿಕ ಎಂಬ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.

ಕಳೆದ 40 ವರ್ಷಗಳಿಂದ, ಚಿಂತನಶೀಲ ವಿನ್ಯಾಸ, ತಾಂತ್ರಿಕ ಜಾಣ್ಮೆ ಮತ್ತು ಶಾಶ್ವತ ನಂಬಿಕೆಯ ಆಧರಿಸಿ ಕಾಲದ ಜೊತೆಗಿನ ಭಾರತದ ಸಂಬಂಧವನ್ನು ಟೈಟನ್ ರೂಪಿಸುತ್ತ ಬಂದಿದೆ. ಇದು ಆಂತರಿಕವಾಗಿ ಭಾರತೀಯ ಮನೋಭಾವ ಮತ್ತು ಕಾರ್ಯಗತ ಗೊಳಿಸು ವಿಕೆಯಲ್ಲಿ ಜಾಗತಿಕ ಎಂಬ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಈ ತತ್ವದ ವಿಸ್ತರಣೆ ಯಲ್ಲಿ, ಟೈಟನ್ ವಾಚಸ್ ಈಗ 'ಟೈಟನ್ ಆಫ್ ದಿ ಇಯರ್'ನ ಎರಡನೇ ಆವೃತ್ತಿ ಪರಿಚಯಿಸುತ್ತಿರುವುದಾಗಿ ಪ್ರಕಟಿಸಿದೆ.

ಭಾರತದ ಹೆಚ್ಚುತ್ತಿರುವ ಜಾಗತಿಕ ಸ್ಥಾನಮಾನಕ್ಕೆ ಕೊಡುಗೆ ನೀಡುವ ವಿಶಿಷ್ಟ ವ್ಯಕ್ತಿಗಳನ್ನು ಗುರುತಿಸುವ ವೇದಿಕೆ ಇದಾಗಿದೆ. ಸಂಪ್ರದಾಯಕ್ಕೆ ಸವಾಲು ಒಡ್ಡಿದ, ನೈಪುಣ್ಯತೆಯು ಹೊಸ ಮಾನದಂಡಗಳನ್ನು ರೂಪಿಸಿದ ಮತ್ತು ವ್ಯಕ್ತಿಗಳು ಬೀರುವ ಪ್ರಭಾವವನ್ನು ಇಲ್ಲಿ ಮುಖ್ಯವಾಗಿ ಪರಿಗಣಿಸಲಾಗುತ್ತಿದೆ.

ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರಿಗೆ ಮೊದಲ ಗೌರವ ಸಲ್ಲಿಸಿದ ನಂತರ, 2026ರ ಆವೃತ್ತಿಯು ಗ್ರ್ಯಾಂಡ್ ಮಾಸ್ಟರ್ ಗುಕೇಶ್ ದೊಮ್ಮರಾಜು ಅವರನ್ನು ಗೌರವಿಸುತ್ತಿದೆ. ನಿರ್ಭೀತ ತಂತ್ರಗಾರಿಕೆ, ನಿಖರ ಶಾಂತ ಮನಸ್ಥಿತಿ ಮತ್ತು ಉನ್ನತ ಮಟ್ಟದಲ್ಲಿ ನಿರಂತರ ಶ್ರೇಷ್ಠತೆಯಿಂದ ವ್ಯಾಖ್ಯಾನಿಸಲಾದ ಪಯಣವನ್ನು ಇದು ಗುರುತಿಸುತ್ತದೆ. ಈ ಗುಣ ವಿಶೇಷತೆಗಳಿಂದ ಪ್ರೇರಿತವಾದ ಸೀಮಿತ ಆವೃತ್ತಿಯ ಕೈಗಡಿಯಾರ ಅನಾವರಣಗೊಳಿಸ ಲಾಗಿದೆ, ಇದು ಚೆಸ್ ಬೋರ್ಡ್ ಮೇಲಿನ ಕಾರ್ಯಕ್ಷಮತೆಯನ್ನು ಚಿಂತನಶೀಲ ವಿನ್ಯಾಸ ಮತ್ತು ನಿಖರವಾದ ಕರಕುಶಲತೆ ರೂಪದಲ್ಲಿ ಕಾರ್ಯಗತಗೊಳಿಸಲಾಗಿದೆ.

ಇದನ್ನೂ ಓದಿ: T20 World Cup: ಆಸ್ಟ್ರೇಲಿಯಾ ಕನಸು ಭಗ್ನ, ಸೂಪರ್‌-8ಕ್ಕೆ ಪ್ರವೇಶಿಸಿದ ಜಿಬಾಬ್ವೆ!

ಚದುರಂಗದ (ಚೆಸ್) ಸಮತೋಲನ ಮತ್ತು ಸಂಯಮದ ಮೂಲಕ ʼಜಾಣ್ಮೆಯ ನಡೆʼ ಪರಿಕಲ್ಪನೆಯನ್ನು ಈ ವಿನ್ಯಾಸವು ಅರ್ಥೈಸುತ್ತದೆ. ಹುಲಿಯ ಕಣ್ಣು (ಟೈಗರ್ ಐ) ಮತ್ತು ಕಪ್ಪು ಬಣ್ಣದ ಸ್ಫಟಿಕೆ ಶಿಲೆ (ಬ್ಲ್ಯಾಕ್ ಅಗೇಟ್)ನಿಂದ ರೂಪುಗೊಂಡಿರುವ ಸುಂದರ ಡಯಲ್  ಮತ್ತು ಜಾಮೆಟ್ರಿಯು ಚದುರಂಗದ ಫಲಕದಂತೆ ಹಾಗೂ  ಗುಕೇಶ್ ಅವರ ಆಟದ  ಬುದ್ಧಿವಂತಿಕೆಯನ್ನು ಪ್ರತಿಬಿಂಬಿಸುತ್ತದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಸೂಚಕಗಳು ಚದುರಂಗದ ಪ್ರತಿ ನಡೆಯನ್ನೂ, ಅದರ ಶ್ರೇಣಿಯನ್ನೂ ನೆನಪಿಸುತ್ತವೆ. ರೋಟರ್ ಮೇಲೆ ಅಂಕಿತಗೊಂಡ ಗ್ರ್ಯಾಂಡ್ಮಾಸ್ಟರ್ ನೈಟ್ ಚಿಹ್ನೆ ಮತ್ತು ʼಯಂಗೆಸ್ಟ್ ವರ್ಲ್ಡ್ ಚೆಸ್ ಚಾಂಪಿಯನ್ ಆ್ಯಟ್ 18ʼ (18ನೇ ವಯಸ್ಸಿನಲ್ಲಿ ವಿಶ್ವ ಚದುರಂಗ ಚಾಂಪಿಯನ್) ಎಂಬ ಕೆತ್ತನೆಯು, ಗುಕೇಶ್ ಅವರ ಮಹಾನ್ ಸಾಧನೆಯನ್ನು ಸೂಚಿಸುತ್ತದೆ. 

ಡಯಲ್ನಲ್ಲಿನ ಪ್ರಕಾಶಮಾನ ಕೈಗಳ ಶಾಂತ ಚಲನೆ, ಗುಕೇಶ್ ಅವರ ಆಟದ ಏಕಾಗ್ರತೆ ಮತ್ತು ನಿಯಂತ್ರಣವನ್ನು ಪ್ರತಿಬಿಂಬಿಸುತ್ತದೆ. ಗ್ರ್ಯಾಂಡ್ಮಾಸ್ಟರ್ ನೈಟ್ ಕೌಂಟರ್ಪಾಯಿಸ್ ಎಂಬ ವಿಶಿಷ್ಟ ಸ್ಪರ್ಶವು, ತಂತ್ರಜ್ಞಾನ, ಶ್ರೇಷ್ಠತೆ ಸಂಕೇತವಾಗಿ ಗಮನ ಸೆಳೆಯುತ್ತದೆ, ನೀಲಮಣಿ ಸ್ಫಟಿಕವು ಕೈಗಡಿಯಾರದ ಸಂಯೋಜನೆಯನ್ನು ರಕ್ಷಿಸುತ್ತದೆ. ರೋಸ್ ಗೋಲ್ಡ್ ಫಿನಿಶ್ ಹೊಂದಿರುವ 316 ಸ್ಟೇನ್ಲೆಸ್ ಸ್ಟೀಲ್ ಕೇಸ್ ಮತ್ತು ಬೆಸೆಲ್ ಇದಕ್ಕೆ ಮೃದುವಾದ ಆಸರೆ ಮತ್ತು ಸಮತೋಲನ ಒದಗಿಸುತ್ತದೆ. ಟೈಟನ್ಗೆ ಸೇರಿರುವ ಅಟೊಮ್ಯಾಟಿಕ್ ಮೂವ್ಮೆಂಟ್ನಿಂದ ನಡೆಸಲ್ಪಡುವ ಹಾಗೂ ಸೀಮಿತ ಸಂಖ್ಯೆಯಲ್ಲಿ ತಯಾರಿಸಿರುವ ಈ ಆವೃತ್ತಿಯ 500 ಕೈಗಡಿಯಾರಗಳು ಗುಲಾಬಿ ಚಿನ್ನದ ಸೌಮ್ಯ ಹೊಳಪು ಮತ್ತು ಗಾಢ ಕಪ್ಪು ಇಟಾಲಿಯನ್ ಚರ್ಮದ ಪಟ್ಟಿ ಹೊಂದಿವೆ. ಇದು ಈ ಕೈಗಡಿಯಾರಕ್ಕೆ ಸರಳ ಹಾಗೂ ಆಕರ್ಷಕ ನೋಟ ಒದಗಿಸುವುದರ ಜೊತೆಗೆ ಸಮಕಾಲೀನ ಹಾಗೂ ಬಾಳಿಕೆ ಒದಗಿಸಲಿದೆ.

ಟೈಟನ್ ಕಂಪನಿ ಲಿಮಿಟೆಡ್ನ ಕೈಗಡಿಯಾರ ವಿಭಾಗದ ಉಪಾಧ್ಯಕ್ಷ, ಮುಖ್ಯ ಮಾರಾಟ ಹಾಗೂ ಮಾರ್ಕೆಟಿಂಗ್ ಅಧಿಕಾರಿ ರಾಹುಲ್ ಶುಕ್ಲಾ ಮಾತನಾಡಿ, "ಆರಂಭದಿಂದಲೂ, ಟೈಟನ್ ಭಾರತದ ಯುಗಧರ್ಮದ ಭಾಗವಾಗಿದೆ, ಇದು ದೇಶದ ಬದಲಾಗುತ್ತಿರುವ ಗುರುತು, ಸಮಾನ ಆಕಾಂಕ್ಷೆಗಳು ಮತ್ತು ದೃಢ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ. 'ವರ್ಷದ ಟೈಟನ್' ಈ ಪರಂಪರೆಯ ಸ್ಪಷ್ಟವಾದ ವಿಸ್ತರಣೆಯಾಗಿದ್ದು, ವೈಯಕ್ತಿಕ ಶ್ರೇಷ್ಠತೆ ಮತ್ತು ಸಾಮೂಹಿಕ ರಾಷ್ಟ್ರೀಯ ಹೆಮ್ಮೆಯ ಸಂಭ್ರಮಾಚರಿಸುತ್ತದೆ. ಈ ವೇದಿಕೆಯೊಂದಿಗೆ, ಶಾಶ್ವತ ಗಡಿಯಾರ ವಿಜ್ಞಾನದ ಗ್ಯಾಲರಿ ರೂಪಿಸುವುದು ನಮ್ಮ ಉದ್ದೇಶವಾಗಿದೆ. ಅದು ಸಮಯದ ಮೂಲಕ ಭಾರತದ ಪ್ರತಿಭೆಯನ್ನು ನಿರೂಪಿಸಲಿದೆ. ವಿಶ್ವ ವೇದಿಕೆಯಲ್ಲಿ ದೇಶದ ಉಪಸ್ಥಿತಿಯನ್ನು ಬಲಪಡಿಸುವ ಮೂಲಕ ದಿಗಂತವನ್ನು ಮೀರಿ ವಿಸ್ತರಿಸುವ ಕೊಡುಗೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ನಾವು ಗುರುತಿಸುತ್ತೇವೆ. ಪ್ರತಿಯೊಂದು ಕೈಗಡಿಯಾರವು

ಈ ಪರಂಪರೆಯ ಸಂಗ್ರಹದಿಂದ ವಾಸ್ತವ ಕಥೆಯೊಂದನ್ನು ಧರಿಸುವ ಅವಕಾಶವನ್ನು ಗ್ರಾಹಕರಿಗೆ ಒದಗಿಸಲಿದೆ. ಜಾಗತಿಕ ಚೆಸ್ ಲೋಕದಲ್ಲಿ ಅಸಾಧಾರಣ ಸಾಧನೆಗಳು ಮತ್ತು ಸ್ಪೂರ್ತಿದಾಯಕ ಪ್ರಯಾಣದೊಂದಿಗೆ ಗುಕೇಶ್ ಅವರು ಈ ಗೌರವಕ್ಕೆ ಸಹಜ ಆಯ್ಕೆ ಯಾಗಿದ್ದಾರೆ. ಕಿರಿಯ ವಯಸ್ಸಿನಲ್ಲಿ ಅವರ ಅನುಕರಣೀಯ ಸಾಧನೆಗಳು ಹೊಸ ಭಾರತದ ಉತ್ಸಾಹ, ಪರಿಶ್ರಮ, ಮಹತ್ವಾಕಾಂಕ್ಷೆ ಮತ್ತು ವಿಶ್ವಾಸವನ್ನು ಸೆರೆಹಿಡಿಯುತ್ತವೆ" ಎಂದು ಹೇಳಿದ್ದಾರೆ.

ಗ್ರ್ಯಾಂಡ್ಮಾಸ್ಟರ್ ಗುಕೇಶ್ ದೊಮ್ಮರಾಜು ಪ್ರತಿಕ್ರಿಯಿಸಿ, ʼವರ್ಷದ ಟೈಟನ್' ಎಂದು ಗುರುತಿಸಲ್ಪಟ್ಟಿರುವುದು ನನ್ನ ಪಾಲಿಗೆ ಅರ್ಥಪೂರ್ಣ ಕ್ಷಣವಾಗಿದೆ. ಜಾಗತಿಕ ಚೆಸ್ ವೇದಿಕೆಯಲ್ಲಿ ಭಾರತದ ಬೆಳೆಯುತ್ತಿರುವ ಉಪಸ್ಥಿತಿಯನ್ನು ಇದು ಸೂಚಿಸುತ್ತದೆ. ನನ್ನ ಹಾದಿಯನ್ನು ರೂಪಿಸಿರುವ ನಿರಂತರ ಸಿದ್ಧತೆ, ಶಿಸ್ತು ಮತ್ತು ಸಮಯದ ಪಾತ್ರ, ತಾಳ್ಮೆ ಮತ್ತು ನಿಖರತೆ ಗುಣ ವಿಶೇಷತೆಗಳನ್ನು ಈ ಕೈಗಡಿಯಾರದಲ್ಲಿ ಚಿಂತನಶೀಲತೆಯಿಂದ ಅಳವಡಿಸಲಾಗಿದೆ. ಈ ಮನ್ನಣೆಯು ದೇಶಾದ್ಯಂತದ ಯುವ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಬದ್ಧತೆ ಮತ್ತು ನಂಬಿಕೆಯಿಂದ ಏನೆಲ್ಲ ಸಾಧ್ಯ ಎಂಬು ದನ್ನು ಇದು ಅವರಿಗೆ ಮನದಟ್ಟು ಮಾಡಿಕೊಡಲಿದೆ. ನನ್ನ ಪ್ರಯಾಣದ ಈ ಹಂತದಲ್ಲಿ ನಂಬಿಕೆ, ಕರಕುಶಲತೆ ಮತ್ತು ಶ್ರೇಷ್ಠತೆಗೆ ಹೆಸರುವಾಸಿಯಾದ ಬ್ರ್ಯಾಂಡ್ ಟೈಟನ್ ಜೊತೆಗೆ ಸಂಬಂಧ ಹೊಂದುವುದು ನನ್ನ ಪಾಲಿಗೆ ಗೌರವದ ಸಂಗತಿಯಾಗಿದೆ. ಈ ಅನುಭವವನ್ನು ನಾನು ಸದಾ ಕೃತಜ್ಞತೆಯೊಂದಿಗೆ ನೆನಪಿಸಿಕೊಳ್ಳುತ್ತೇನೆʼ ಎಂದು ಹೇಳಿದ್ದಾರೆ.

ಸಂಗ್ರಾಹಕರಿಗಾಗಿ ರೂಪಿಸಲಾದ ಈ ವಿಶೇಷ ಆವೃತ್ತಿಯು ಗುಕೇಶ್ ಅವರ ವೈಯಕ್ತಿಕ ಸಂದೇಶವನ್ನು ಒಳಗೊಂಡಿದೆ. ವಿಶೇಷವಾಗಿ ವಿನ್ಯಾಸಗೊಳಿಸಿದ ಪ್ಯಾಕೇಜಿಂಗ್ನಲ್ಲಿ ಲಭ್ಯವಿದೆ.

₹ 69,995 ಬೆಲೆಯ ಈ ಸೀಮಿತ ಮೇರು ಆವೃತ್ತಿಯ ಕೈಗಡಿಯಾರವನ್ನು ಆಯ್ದ ಟೈಟನ್ ವರ್ಲ್ಡ್ ಷೋರೂಮ್ಗಳು, ದೊಡ್ಡ ರಿಟೇಲ್ ಮಳಿಗೆಗಳು, ಪ್ರೀಮಿಯಂ ವಾಚ್ ರಿಟೇಲರ್ಗಳು ಮತ್ತು www.titan.co.in ಅಂತರ್ಜಾಲ ತಾಣದಲ್ಲಿ ಖರೀದಿಸಬಹುದು.