ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರೈಡಿಂಗ್ ಮಾಡಿ, ಪರಿಸರ ಕಾಪಾಡಿ

ರೈಡಿಂಗ್ ಮಾಡಿ, ಪರಿಸರ ಕಾಪಾಡಿ

image-32688a28-f449-4ef4-89e7-7408201cc1a2.jpg
image-c08656f9-939d-4b19-924b-1a86e4be4d67.jpg
ಬೈಕೋಬೇಡಿ ಅಶೋಕ್ ನಾಯಕ್ ಗೇರ್ ವಿತ್ ಬೈಕ್ ಅನ್ನು ಕೆಲವರು ಇಷ್ಟಪಟ್ಟರೆ, ಕೆಲವರದ್ದು ಡಿಫರೆಂಟ್ ಟೇಸ್ಟ್. ಸ್ಕೂಟರ್‌ಗಳನ್ನು ಬಯಸುವವರು ಗೇರ್ ವ್ಯವಸ್ಥೆ ಇಲ್ಲದಿದ್ದರೂ ಮರುಕಪಡುವುದಿಲ್ಲ. ಸ್ಮೂತ್ ಹಾಗೂ ನೈಸ್ ರೈಡ್‌ಗೆ ಸ್ಕೂಟರ್ ಹೆಚ್ಚು ಹಿತಮಿತ. ಮಾಲಿನ್ಯವನ್ನು ನಿಯಂತ್ರಿಸಲು ಅಥವಾ ಹೆಚ್ಚು ಹೊಗೆ ಉಗುಳುವು ದನ್ನು ಕಡಿಮೆ ಮಾಡಲು ವಿದ್ಯುತ್ ಚಾಲಿತ ಬೈಕ್‌ಗಳನ್ನು ಬಳಸುವ ಕಾರಣ, ಇಲ್ಲಿ ಚಾರ್ಜಿಂಗ್ ಇಟ್ಟುಕೊಳ್ಳುವುದು ಹೆಚ್ಚು ಸುಲಭವಲ್ಲ. ಅಂತೆಯೇ ಕಷ್ಟವೂ ಅಲ್ಲ. ಜೋಯ್ ಇ-ಬೈಕ್ ಡೆಲ್‌ ಗೋ ಜೋಯ್ ಇ-ಬೈಕ್ ಮೂರು ವಿದ್ಯುತ್ ಚಾಲಿತ ಸ್ಕೂಟರ್ ಗಳನ್ನು ಪರಿಚಯಿಸಿದೆ. ಸುಮಾರು ನೂರು ಕಿ.ಮೀ. ವೇಗವನ್ನು ಪಡೆಯಬಲ್ಲದು. ೧೫೦೦ ವ್ಯಾಟ್‌ನ ಡಿಸಿ ಮೋಟಾರು, ಪೋರ್ಟೆಬಲ್ ೬೦ವಿ ೩೫ಎಹೆಚ್, ಲಯನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ೨೦ ಎಎಂಪಿ ಸ್ಮಾರ್ಟ್ ಚಾರ್ಚಿಂಗ್‌ನಲ್ಲಿ ನಾಲ್ಕರಿಂದ ಐದು ಗಂಟೆ ಚಾಜ್ ಮಾಡಬಹುದು. ಈ ಮೂಲಕ ಸುಮಾರು ನೂರು ಕಿ.ಮೀ. ದೂರ ವ್ಯಯಿಸಬಲ್ಲದು. ಎರಡು ಬದಿಯ ಬ್ರೇಕಿಂಗ್ ವ್ಯವಸ್ಥೆಯೊಂದಿಗೆ ರೀರ್ನಲ್ಲಿ ಮೊನೋಶಾಕ್ ಹಾಗೂ ಟೆಲಿಸ್ಕೋಪಿಕ್ -ರ್ಕ್ ಅಪ್ ಫ್ರಂಟ್ ಮುಂತಾದವು ಈ ಬೈಕಿಗೆ ಇರುವ ಇತರ ಫೀಚರ್ಸ್ಗಳು. ಈ ಬೈಕಿನ ಬೆಲೆ ಒಂದು ಲಕ್ಷ ರೂಪಾಯಿಗಳಿಂದ ಆರಂಭ. ಎಎಂಒ ಎಲೆಕ್ಟ್ರಿಕ್ ಜಾಂಟಿ ಪ್ಲಸ್ ಸುಮಾರು ೧.೧೦ ಲಕ್ಷ ರೂಪಾಯಿ ಬೆಲೆ ಬಾಳುವ ಈ ಬೈಕ್‌ನಲ್ಲಿ ೧.೨ ಕಿಲೋ ವ್ಯಾಟ್ ಬಿಎಲ್ಡಿಸಿ ಹಬ್ ಮೋಟಾರು ಜೋಡಿ, ೬೦ವಿ ೪೦ಎಹೆಚ್ ಲೀಥಿಯಮ್ ಐಯಾನ್ ಬ್ಯಾಟರಿ ಪ್ಯಾಕ್, ಅದಕ್ಕೂ ಹೆಚ್ಚಾಗಿ, ಚಾರ್ಜಿಂಗ್ ಸಮಯ ಉಳಿತಾಯ ಮಾಡಲು ಫಾಸ್ಟ್ ಚಾರ್ಜರ್ ಸಾಧನ ನೀಡಲಾಗಿದೆ. ಈ ಮೂಲಕ ಸಾಮಾನ್ಯವಾಗಿ ಐದು ಗಂಟೆ ತೆಗೆದುಕೊಳ್ಳುವ ಚಾರ್ಜರ್‌ನ್ನು ನಾಲ್ಕು ಗಂಟೆಗೆ ಕಡಿತಗೊಳಿಸಬಹುದು. ಎಎಂಒ ಜಾಂಟಿ ಪ್ಲಸ್‌ನ ಡಿಸೈನ್ ಹಾಗೂ ಜಾಂಟಿ ಬೈಕ್‌ನ ಡಿಸೈನ್ ಒಂದೇ ರೀತಿ ಇದೆ. ಎಲ್ಇಡಿ ಡಿಆರ್‌ಎಲ್ ಜತೆ ಎಲ್ಇಡಿ ಹೆಡ್ ಲೈಟ್ ಸೌಲಭ್ಯವೂ ಇದೆ. ಆದಾಗ್ಯೂ, ಕೆಳಮುಖ ಮತ್ತು ಇಂಡಿಕೇಟರುಗಳು ಎರಡೂ ಬಲ್ಬ ಯೂನಿಟ್ಗಳು. ವಾಹನದ ಬ್ರೇಕಿಂಗ್ ಸಿಸ್ಟಮ್ ಅನ್ನು ಡಿಸ್ಕ್ ಬ್ರೇಕ್ ಅಪ್ ಫ್ರಂಟ್ ಮತ್ತು ರೀರ್‌ನಲ್ಲಿನ ಡ್ರಮ್ ಯೂನಿಟ್ ಮೂಲಕ ನಿಯಂತ್ರಿಸಬಹುದು.