ರಿಯಲ್‌ಮಿ 16 ಪ್ರೊ ಸರಣಿ ಬಿಡುಗಡೆ: ಆಕರ್ಷಕ ಬೆಲೆ ಹಾಗೂ ಅತ್ಯಾಧುನಿಕ ಟೆಕ್ನಾಲಜಿ ಒಳಗೊಂಡ ಸ್ಮಾರ್ಟ್ ಫೋನ್
ರಿಯಲ್‌ಮಿ ಇಂಡಿಯಾ ಇದರೊಂದಿಗೆ ಪ್ರೀಮಿಯಂ ಮಿಡ್-ರೇಂಜ್ ವಿಭಾಗದಲ್ಲಿ ತನ್ನ ಮಾನದಂಡ ವನ್ನು ಇನ್ನಷ್ಟು ಬಲಪಡಿಸಿಕೊಂಡಿದೆ. ರಿಯಲ್ ಮಿ 16 ಪ್ರೊ+ ಮತ್ತು ಎಲ್ಲ ಅಗತ್ಯಗಳನ್ನು ಪೂರೈಸುವ ರಿಯಲ್ ಮಿ 16 ಪ್ರೊ ಮಾದರಿಗಳನ್ನು ಒಳಗೊಂಡಿ ರುವ ಈ ಸರಣಿ, ಪರ್ಫಾರ್ಮೆನ್ಸ್ ಮತ್ತು ಡಿಸೈನ್ ಅಲ್ಲಿ ಮಾಸ್ಟರ್‌ಕ್ರಾಫ್ಟ್ ಶ್ರೇಷ್ಠತೆಯನ್ನು ಹೊಂದಿ ದೆ.
-
ಬೆಂಗಳೂರು: ಯುವಸಮೂಹವನ್ನು ಆಕರ್ಷಿಸುವ ವಿಶಿಷ್ಟ ವಿನ್ಯಾಸದೊಂದಿಗೆ ರಿಯಲ್‌ಮೀ ತನ್ನ ಬಹುನಿರೀಕ್ಷೆಯ 16 ಪ್ರೊ ಸರಣಿ ಬಿಡುಗಡೆ ಮಾಡಿದೆ.
ಬಿಡುಗಡೆಗೊಳಿಸಿ ಮಾತನಾಡಿದ ರಿಯಲ್‌ಮಿ ಇಂಡಿಯಾ ಪ್ರಾಡಕ್ಟ್ ಸ್ಟಾಟರ್ಜಿ ಮ್ಯಾನೇಜರ್ ದೇವೇಂದರ್ ಸಿಂಗ್ ಮಾತನಾಡಿ, ರಿಯಲ್‌ಮಿ ಇಂಡಿಯಾ ಇದರೊಂದಿಗೆ ಪ್ರೀಮಿಯಂ ಮಿಡ್-ರೇಂಜ್ ವಿಭಾಗದಲ್ಲಿ ತನ್ನ ಮಾನದಂಡವನ್ನು ಇನ್ನಷ್ಟು ಬಲಪಡಿಸಿಕೊಂಡಿದೆ. ರಿಯಲ್ ಮಿ 16 ಪ್ರೊ+ ಮತ್ತು ಎಲ್ಲ ಅಗತ್ಯಗಳನ್ನು ಪೂರೈಸುವ ರಿಯಲ್ ಮಿ 16 ಪ್ರೊ ಮಾದರಿಗಳನ್ನು ಒಳಗೊಂಡಿ ರುವ ಈ ಸರಣಿ, ಪರ್ಫಾರ್ಮೆನ್ಸ್ ಮತ್ತು ಡಿಸೈನ್ ಅಲ್ಲಿ ಮಾಸ್ಟರ್‌ಕ್ರಾಫ್ಟ್ ಶ್ರೇಷ್ಠತೆಯನ್ನು ಹೊಂದಿ ದೆ. ಜೊತೆಗೆ, ಪೋರ್ಟ್ರೇಟ್ ಇಮೇಜಿಂಗ್ ಮಾನದಂಡಗಳನ್ನು ಮರುನಿರ್ವಹಿಸುವ ಕ್ರಾಂತಿಕಾರಿ ಕೇಂದ್ರೀಕರಣದೊಂದಿಗೆ ಗಮನ ಸೆಳೆಯುತ್ತದೆ.
200MP ಪೋರ್ಟ್ರೇಟ್ ಮಾಸ್ಟರ್: ಪ್ರೀಮಿಯಂ ಮಿಡ್-ರೇಂಜ್ ವಿಭಾಗದಲ್ಲಿ 200MP ಪೋರ್ಟ್ರೇಟ್ ಮಾಸ್ಟರ್ ಆಗಿ ರಿಯಲ್ ಮಿ 16 ಪ್ರೊ ಸರಣಿ ಹೊರಹೊಮ್ಮಿದೆ. 200MP ಲೂಮಾಕಲರ್ ಕ್ಯಾಮೆರಾ ಹಾಗೂ 3.5× ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಹೊಂದಿರುವ ರಿಯಲ್ ಮಿ 16 ಪ್ರೊ+, “ಸ್ನ್ಯಾಪ್ ಯುವರ್ ವೈಬ್ ಅಟ್ ಎವೆರಿ ಜೂಮ್” ಎಂಬ ಧ್ಯೇಯ ದೊಂದಿಗೆ, ಬಳಕೆದರ ಸ್ನೇಹಿಯಾಗಲಿದೆ.
TÜV Rheinland ಪ್ರಮಾಣೀಕರಣ ಹೊಂದಿರುವ ಈ ಕ್ಯಾಮೆರಾ, ನೈಸರ್ಗಿಕ ಚರ್ಮದ ಟೋನ್, ಅದ್ಭುತ ಡೆಪ್ತ್ ಮತ್ತು ವಾತಾವರಣದ ಲೈಟಿಂಗ್‌ನೊಂದಿಗೆ ಗಮನ ಸೆಳೆಯುವ ಪೋರ್ಟ್ರೇಟ್‌ಗಳನ್ನು ನೀಡುತ್ತದೆ. ಜೊತೆಗೆ, ಫುಲ್‌ಫೋಕಲ್ ಪೋರ್ಟ್ರೇಟ್ ಲೆನ್ಸ್ ಕಿಟ್ ಹಾಗೂ ಪ್ರೊಡೆಪ್ತ್ ಬೋಕೇ ಅಲ್ಗೋರಿದಮ್‌ನೊಂದಿಗೆ ಸಂಯೋಜಿತವಾಗಿದೆ. ಇದಷ್ಟೇ ಅಲ್ಲದೆ, 7× ಕ್ಲೋಸ್-ಅಪ್, 10× ಸ್ಟೇಜ್ ಕ್ಯಾಪ್ಚರ್‌ಗಳು ಮತ್ತು ಗರಿಷ್ಠ 120× ಸೂಪರ್ ಜೂಮ್‌ನಲ್ಲಿಯೂ ಸೂಪರ್ ಕ್ಲಾರಿಟಿ ನೀಡಲಿದೆ. ಇನ್ನು,ವೈಬ್ ಮಾಸ್ಟರ್ ಮೋಡ್ , AI ಎಡಿಟ್ ಜೀನಿ ಇರಲಿದೆ.
ಈ ನೂತನ ಸರಣಿಯಲ್ಲಿ, Naoto Fukasawa ಅವರ ಅರ್ಬನ್ ವೈಲ್ಡ್ ಡಿಸೈನ್ ಸಹ ಅಳವಡಿಸ ಲಾಗಿರುವುದು ವಿಶೇಷ. “ಅರ್ಬನ್ ವೈಲ್ಡ್ ಡಿಸೈನ್” ತತ್ವದ ಪ್ರಕಾರ, ಸಣ್ಣ ಸಣ್ಣ ಪ್ರಕೃತಿಯ ಸಹಜ ಸೌಂದರ್ಯವನ್ನು ಪೂರ್ಣವಾಗಿ ಸೆರೆಯಿಡಿಯಲಿದೆ.
ಮೊದಲ ಅರ್ಗ್ಯಾನಿಕ್ ಸಿಲಿಕೋನ್ ಬ್ಯಾಕ್ ಕವರ್: ರಿಯಲ್ ಮಿ 16 ಪ್ರೊ+ ಇಂಡಸ್ಟ್ರಿಯಲ್ಲೇ ಮೊದಲ ಬಾರಿಗೆ ಬಯೋ-ಬೇಸ್‌ಡ್ ಆರ್ಗ್ಯಾನಿಕ್ ಸಿಲಿಕೋನ್ ಬ್ಯಾಕ್ ಕವರ್ ಅನ್ನು ಪರಿಚಯಿಸು ತ್ತದೆ. USDA ಪ್ರಮಾಣೀಕೃತವಾದ ಈ ಪರಿಸರ ಸ್ನೇಹಿ ಮೆಟೀರಿಯಲ್ ಮೃದು ಹಾಗೂ ರಿಸೈಲೆನ್ಸ್ ಟೆಕ್ಸ್ಚರ್ ಅನ್ನು ನೀಡುತ್ತದೆ. ಈ ಹೊಸ ಸರಣಿಯು, ಮಾಸ್ಟರ್ ಗೋಲ್ಡ್ , ಮಾಸ್ಟರ್ ಗ್ರೇ ಹಾಗೂ ಕ್ಯಾಮೇಲಿಯ ಪಿಂಕ್ ಮೂರು ಬಣ್ಣದಲ್ಲಿ ಲಭ್ಯವಿದೆ.
ವಿನ್ಯಾಸದ ಹೊರತಾಗಿ, IP69 ಪ್ರೊ-ಲೆವೆಲ್ ವಾಟರ್ ರೆಸಿಸ್ಟೆನ್ಸ್ ಒದಗಿಸುತ್ತಿದ್ದು, ಇಂಡಸ್ಟ್ರಿಯಲ್ಲಿನ ಅತಿ ಉನ್ನತ ಮಟ್ಟದ ನೀರಿನ ಮತ್ತು ಧೂಳಿನ ರಕ್ಷಣೆ ಮಾನದಂಡಗಳನ್ನು ಪೂರೈಸುತ್ತದೆ.
ರಿಯಲ್ ಮಿ 16 ಪ್ರೊ + ಸ್ನ್ಯಾಪ್ ಡ್ರ್ಯಾಗನ್® 7 ಜೆನ್ 4 ಚಿಪ್‌ಸೆಟ್, 120FPS ಗೇಮಿಂಗ್‌ನಲ್ಲಿ ಲ್ಯಾಗ್ ರಹಿತ ಅನುಭವಕ್ಕಾಗಿ 1.44 ಮಿಲಿಯನ್ AnTuTu ಸ್ಕೋರ್ ನೀಡಿದೆ. ಇನ್ನು, 6.8-inch ಉದ್ದವನ್ನು ಒಳಗೊಂಡಿದೆ. ಉತ್ತಮ ಬ್ಯಾಕಪ್‌ಗಾಗಿ ಅಲ್ಟ್ರಾ-ಸ್ಲಿಮ್ 7000mAh ಟೈಟನ್ ಬ್ಯಾಟರಿ ಮತ್ತು ಓವರ್‌ಹೀಟಿಂಗ್ ರೆಸಿಸ್ಟೆಂಟ್ ಇರಲಿದೆ. ಜೊತೆಗೆ, ಏರ್ ಫ್ಲೋ VC ಕೂಲಿಂಗ್ ಸಿಸ್ಟಮ್ ಸೇರಿವೆ.
ಬೆಲೆ : ರಿಯಲ್ ಮಿ 16 ಪ್ರೊ ಸರಣಿಯು ಮಧ್ಯಮವರ್ಗದವರ ಕೈಗೆಟುಕುವ ದರದಲ್ಲಿ ಉತ್ತಮ ಫೀಚರ್ಸ್‌ಗಳನ್ನು ನೀಡಿದೆ.
ರಿಯಲ್ ಮಿ 16 ಪ್ರೊ+ ಆರಂಭಿಕ ಬೆಲೆ 39,999 ರೂ. ಇದ್ದು, , ರಿಯಲ್ ಮಿ 16 ಪ್ರೊ ಆರಂಭಿಕ ಬೆಲೆ 31,999 ರೂ.ನಿಂದ ಪ್ರಾರಂಭವಾಗಲಿದೆ,