ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೆಟ್ರೋ ಟಿಕೆಟ್ ಪಡೆಯುವ ಸೇವೆ ಆರಂಭಿಸಿದ ಉಬರ್

ಉಬರ್ ತನ್ನ ಲಾಜಿಸ್ಟಿಕ್ಸ್ ಸೇವೆಗಳನ್ನು ಓಎನ್‌ಡಿಸಿ ನೆಟ್‌ವರ್ಕ್‌ ಗೆ ವಿಸ್ತರಿಸುತ್ತಿರುವ ಈ ಸಂದರ್ಭ ದಲ್ಲಿ ತನ್ನ ಹೊಸ ಬಿ2ಬಿ ಸೇವೆಯು ಈಗಾಗಲೇ ಇರುವ ಗ್ರಾಹಕರ ಡೆಲಿವರಿ ಆಯ್ಕೆಗಿಂತ ಹೇಗೆ ಭಿನ್ನ ಎಂಬು ದನ್ನು ಸ್ಪಷ್ಟಪಡಿಸಿದೆ. ಉಬರ್ ಈಗಾಗಲೇ ಒದಗಿಸುತ್ತಿರುವ ಉಬರ್ ಕೊರಿಯರ್ ಸೇವೆಗಿಂತ ಇದು ಭಿನ್ನವಾಗಿದ್ದು, ಉಬರ್ ಕೊರಿಯರ್ ಅನ್ನು ಗ್ರಾಹಕರು ನೇರವಾಗಿ ಉಬರ್ ಆಪ್‌ ನಲ್ಲಿ ಬುಕ್ ಮಾಡು ತ್ತಾರೆ.

ಬೆಂಗಳೂರು: ಪ್ರತಿಷ್ಠಿತ ಉಬರ್ ಕಂಪನಿ ಇಂದು ತನ್ನ ಹೊಸ ಉಬರ್ ಡೈರೆಕ್ಟ್ ಸೌಲಭ್ಯವನ್ನು ಆರಂಭ ಮಾಡಿದ್ದು, ಈ ಮೂಲಕ ಬಿಜಿನೆಸ್- ಟು- ಬಿಜಿನೆಸ್ (ಬಿ2ಬಿ) ಲಾಜಿಸ್ಟಿಕ್ಸ್ ಕ್ಷೇತ್ರಕ್ಕೆ ಕಾಲಿ ಟ್ಟಿದೆ. ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಓಎನ್‌ಡಿಸಿ) ನೆಟ್‌ವರ್ಕ್‌ ಆಧಾರದಲ್ಲಿ ಉಬರ್ ಡೈರೆಕ್ಟ್ ಕಾರ್ಯನಿರ್ವಹಿಸಲಿದ್ದು, ವಿವಿಧ ಬ್ರಾಂಡ್ ಗಳ ವಸ್ತುಗಳನ್ನು ಗ್ರಾಹಕರಿಗೆ ಡೆಲಿವರಿ ತಲುಪಿಸುವ ಕೆಲಸ ಮಾಡಲಿದೆ. ಇದೇ ಸಂದರ್ಭದಲ್ಲಿ ಕಂಪನಿಯು ಬೆಂಗಳೂರಿನಲ್ಲಿ ಉಬರ್ ಆಪ್‌ ನಲ್ಲಿಯೇ ಮೆಟ್ರೋ ಟಿಕೆಟ್ ಬುಕ್ ಮಾಡುವ ವಿಶೇಷ ಸೌಲಭ್ಯವನ್ನೂ ಆರಂಭಿಸಿದ್ದು, ಈ ಸೇವೆಯೂ ಓಎನ್‌ಡಿಸಿ ನೆಟ್‌ವರ್ಕ್‌ ಸಂಯೋಜನೆಯಲ್ಲಿ ನಡೆಯಲಿದೆ.

ಈ ಎರಡೂ ಹೊಸ ಸೌಲಭ್ಯಗಳು ಭಾರತದ ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್ ಮೇಲೆ ಆಧಾರಿತ ವಾಗಿದ್ದು, ಭಾರತದಾದ್ಯಂತ ಲಕ್ಷಾಂತರ ಬಳಕೆದಾರರಿಗೆ ಸುಲಭವಾಗಿ, ಒಂದೇ ಆಪ್‌ ನಲ್ಲಿ ಸುಲಭ ಸಾರಿಗೆ ವ್ಯವಸ್ಥೆ ಮತ್ತು ವ್ಯಾಪಾರ ಸೇವೆಗಳನ್ನು ಒದಗಿಸುವ ಉಬರ್‌ ನ ಬದ್ಧತೆಯ ಫಲವಾಗಿ ಮೂಡಿ ಬಂದಿವೆ.

ಉಬರ್ ತನ್ನ ಲಾಜಿಸ್ಟಿಕ್ಸ್ ಸೇವೆಗಳನ್ನು ಓಎನ್‌ಡಿಸಿ ನೆಟ್‌ವರ್ಕ್‌ ಗೆ ವಿಸ್ತರಿಸುತ್ತಿರುವ ಈ ಸಂದರ್ಭ ದಲ್ಲಿ ತನ್ನ ಹೊಸ ಬಿ2ಬಿ ಸೇವೆಯು ಈಗಾಗಲೇ ಇರುವ ಗ್ರಾಹಕರ ಡೆಲಿವರಿ ಆಯ್ಕೆಗಿಂತ ಹೇಗೆ ಭಿನ್ನ ಎಂಬುದನ್ನು ಸ್ಪಷ್ಟಪಡಿಸಿದೆ. ಉಬರ್ ಈಗಾಗಲೇ ಒದಗಿಸುತ್ತಿರುವ ಉಬರ್ ಕೊರಿಯರ್ ಸೇವೆಗಿಂತ ಇದು ಭಿನ್ನವಾಗಿದ್ದು, ಉಬರ್ ಕೊರಿಯರ್ ಅನ್ನು ಗ್ರಾಹಕರು ನೇರವಾಗಿ ಉಬರ್ ಆಪ್‌ ನಲ್ಲಿ ಬುಕ್ ಮಾಡುತ್ತಾರೆ. ಆದರೆ ಉಬರ್ ಡೈರೆಕ್ಟ್ ಹಿನ್ನೆಲೆಯಲ್ಲಿ ಕಾರ್ಯಾಚರಿಸಲಿದ್ದು, ಉದ್ಯಮಗಳಿಗಾಗಿ ಲಾಜಿಸ್ಟಿಕ್ಸ್ ಎಂಜಿನ್ ಆಗಿ ಕೆಲಸ ಮಾಡುತ್ತದೆ.

ಇದನ್ನೂ ಓದಿ: Bangalore News: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಒಂದು ಕಿ.ಮೀ ಉದ್ದ ಕನ್ನಡ ಧ್ವಜದ ಮೆರವಣಿಗೆ

ಗ್ರಾಹಕರು ಮಾರಾಟಗಾರರ ಆಪ್ ಅಥವಾ ವೆಬ್‌ ಸೈಟ್‌ ನಲ್ಲಿ ಆರ್ಡರ್ ಮಾಡಿದ ನಂತರ, ಡೆಲಿವರಿ ಯನ್ನು ಉಬರ್ ಡೈರೆಕ್ಟ್ ಡೆಲಿವರಿ ಮಾಡುತ್ತದೆ, ಇಲ್ಲಿ ಗ್ರಾಹಕನಿಗೆ ಉಬರ್ ಆಪ್ ತೆರೆಯುವ ಅಗತ್ಯವೇ ಇಲ್ಲ. ಡೆಲಿವರಿ ಪಾರ್ಟನರ್ ಬಾಗಿಲಿಗೆ ಬರುವವರೆಗೂ ಉಬರ್ ಜೊತೆ ವ್ಯವಹರಿಸ ಬೇಕಾಗಿಯೇ ಇಲ್ಲ. ಇದರಿಂದ ಓಎನ್‌ಡಿಸಿ ಮೂಲಕ ಚಾಲಿತವಾದ ಉಬರ್ ಡೈರೆಕ್ಟ್ ಸೇವೆಯು, ಉದ್ಯಮಗಳಿಗೆ ಸುಲಭವಾಗಿ ಒದಗಿಬರುವ, ವಿಶ್ವಾಸಾರ್ಹವಾದ, ಹೊಂದಿಕೊಳ್ಳುವ ಮತ್ತು ದೊಡ್ಡ ಮಟ್ಟದಲ್ಲಿ ಬೆಳೆಸಬಹುದಾದ ಡೆಲಿವರಿ ಸೇವೆಯಾಗಿದೆ.

ಈ ಉಬರ್ ಡೈರೆಕ್ಟ್ ಸೇವೆ ಇಂದು ಬೆಂಗಳೂರಲ್ಲಿ ಓಎನ್‌ಡಿಸಿಯ ಓಪನ್ ಡಿಜಿಟಲ್ ವ್ಯವಸ್ಥೆಗಳಲ್ಲಿ ಉದ್ಘಾಟನೆ ಆಗಿದೆ. ಈಗಾಗಲೇ ಜೆಪ್ಟೋ ಮತ್ತು ಕೆಪಿಎ ಫಾರ್ಮ್ ಫ್ರೆಶ್ ನಂತಹ ಬ್ರ್ಯಾಂಡ್‌ ಗಳ ದಿನಸಿ ವಸ್ತುಗಳ ಡೆಲಿವರಿಗಳನ್ನು ಉಬರ್ ಡ್ರೈವರ್‌ ಗಳು ಮಾಡುತ್ತಿದ್ದಾರೆ. ಕೆಲವೇ ವಾರಗಳಲ್ಲಿ ಈ ಸೇವೆ ಫುಡ್ ಡೆಲಿವರಿ ವಿಭಾಗಕ್ಕೂ ವಿಸ್ತರಣೆಯಾಗಲಿದ್ದು, ಕೆ ಎಫ್ ಸಿ, ಬರ್ಗರ್ ಕಿಂಗ್, ಟ್ಯಾಕೋ ಬೆಲ್ ಮತ್ತು ರೆಬೆಲ್ ಫುಡ್ಸ್ ನಂತಹ ಜಾಗತಿಕ ಹಾಗೂ ಭಾರತೀಯ ಬ್ರ್ಯಾಂಡ್‌ ಗಳ ಆರ್ಡರ್‌ ಗಳನ್ನೂ ಗ್ರಾಹಕರಿಗೆ ತಲುಪಿಸಲಿದೆ.

ಇನ್ನು ಮುಂದೆ ಬೆಂಗಳೂರಿನಲ್ಲಿಯೂ ಉಬರ್ ಆಪ್‌ ನಲ್ಲಿ ಮೆಟ್ರೋ ಟಿಕೆಟ್ ಅನ್ನೂ ಬುಕ್ ಮಾಡಬಹುದಾಗಿದ್ದು, ಈ ಸೇವೆಯೂ ಓಎನ್‌ಡಿಸಿ ಮೂಲಕ ಚಾಲಿತವಾಗಿದೆ. ಈಗಾಗಲೇ ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿ ಈ ಸೇವೆಯನ್ನು ಆರಂಭಿಸಲಾಗಿದ್ದು, ತುಂಬಾ ಜನಪ್ರಿಯವಾಗಿದೆ. ಒಂದೇ ಆಪ್‌ ನಲ್ಲಿ ಪಬ್ಲಿಕ್ ಟ್ರಾನ್ಸ್‌ ಪೋರ್ಟ್ ಹುಡುಕಿ, ಪ್ಲಾನ್ ಮಾಡಿ, ಅದರ ಟಿಕೆಟ್ ಖರೀದಿಸುವ ಈ ಸುಲಭ ಸೌಲಭ್ಯಕ್ಕೆ ಹೆಚ್ಚು ಜನ ಆಕರ್ಷಿತರಾಗಿದ್ದಾರೆ. ಬೆಂಗಳೂರು ಈ ಪಯಣದಲ್ಲಿ ಮುಂದಿನ ಮಹತ್ವದ ಹೆಜ್ಜೆಯಾಗಿದ್ದು, ಉಬರ್ ತನ್ನ ಉತ್ಪನ್ನದಲ್ಲಿ ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಮಹತ್ವದ ಭಾಗವನ್ನಾಗಿ ಮಾಡುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಉಬರ್ ಇಂಡಿಯಾ & ಸೌತ್ ಏಷಿಯಾ ಅಧ್ಯಕ್ಷ ಪ್ರಭಜೀತ್ ಸಿಂಗ್ ಅವರು,“ಬೆಂಗಳೂರು ಎಂದರೆ ಹೊಸತನಕ್ಕೆ ಆಟದ ಮೈದಾನ ಇದ್ದಂತೆ. ಆದ್ದರಿಂದ ಇಲ್ಲಿ ಓಎನ್‌ಡಿಸಿ ಜೊತೆಗಿನ ನಮ್ಮ ಸಂಯೋಜನೆಯನ್ನು ಮತ್ತಷ್ಟು ಗಾಢಗೊಳಿಸಿ ಜನರ ಸಾರಿಗೆ ಸಮಸ್ಯೆ ಹಾಗೂ ಉದ್ಯಮಗಳ ಲಾಜಿಸ್ಟಿಕ್ಸ್ ಸಮಸ್ಯೆಗಳನ್ನು ಬಗೆಹರಿಸಲು ಇದು ಉತ್ತಮ ಸ್ಥಳವಾಗಿದೆ. ಬೆಂಗಳೂರಲ್ಲಿ ಮೆಟ್ರೋ ಟಿಕೆಟಿಂಗ್ ಮತ್ತು ಉಬರ್ ಡೈರೆಕ್ಟ್ ಬಿಡುಗಡೆ ಮಾಡುವ ಮೂಲಕ ‘ಗೋ ಎನೀವೇರ್, ಗೆಟ್ ಎನೀಥಿಂಗ್’ (ಎಲ್ಲಾದರೂ ಹೋಗಿ, ಏನನ್ನಾದರೂ ಪಡೆಯಿರಿ) ಎಂಬ ನಮ್ಮ ದೃಷ್ಟಿ ಸಾಕಾರಗೊಳ್ಳುತ್ತಿದೆ. ಓಎನ್‌ಡಿಸಿ ಜೊತೆಗೆ ಇದನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಮಾಡಲು ನಾವು ಉತ್ಸುಕರಾಗಿದ್ದೇವೆ. ಇದೊಂದು ಮತ್ತೊಂದು ಮಹತ್ವದ ಸಂಯೋಜನೆ ಆಗಿದೆ ಮತ್ತು ಇನ್ನಷ್ಟು ಇಂಥಾ ಸಂಯೋಜನೆ ಹೊಂದಲು ಎದುರು ನೋಡು ತ್ತಿದ್ದೇವೆ” ಎಂದು ಹೇಳಿದರು.

ಓಎನ್‌ಡಿಸಿಯ ನಾಮ ನಿರ್ದೇಶಿತ ಸಿಇಓ ಹಾಗೂ ಸಿಓಓ ಶ್ರೀ ವಿಭೋರ್ ಜೈನ್ ಮಾತನಾಡಿ, “ಓ ಎನ್ ಡಿ ಸಿಯಲ್ಲಿ ಉಬರ್‌ ನ ನಿರಂತರವಾಗಿ ವಿಸ್ತರಣೆ ಹೊಂದುತ್ತಲೇ ಇದೆ. ಮೊದಲು ಹಲವು ನಗರಗಳಲ್ಲಿ ಮೆಟ್ರೋ ಟಿಕೆಟ್ ವ್ಯವಸ್ಥೆ ಆರಂಭಿಸಿತು, ಈಗ ಅಧಿಕೃತವಾಗಿ ಉಬರ್ ಡೈರೆಕ್ಟ್ ಬಿಡುಗಡೆ ಮಾಡಿದೆ. ಇದು ಪರಸ್ಪರ ಕಾರ್ಯಸಾಧುವಾದ ಡಿಜಿಟಲ್ ಉದ್ಯಮದ ನಿಜವಾದ ಸಾಮರ್ಥ್ಯವನ್ನು ತೋರಿಸುತ್ತದೆ. ಉಬರ್ ಡೈರೆಕ್ಟ್ ಸೇವೆಯು ಉದ್ಯಮಗಳಿಗೆ ಸ್ಟ್ಯಾಂಡರ್ಡ್ ಆದ, ಅತ್ಯಂತ ಸುಲಭವಾಗಿ ಒದಗುವ ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಒದಗಿಸಿ, ಪೂರ್ತಿ ನೆಟ್‌ ವರ್ಕ್‌ ಗೆ ದಕ್ಷತೆ ಮತ್ತು ನಾವೀನ್ಯತೆ ಒದಗಿಸಲಿದೆ. ಬೆಂಗಳೂರಿನಲ್ಲಿ ಈ ಸೇವೆ ಆರಂಭಿಸುವ ಮೂಲಕ ಉಬರ್‌ಗೆ ಈ ಮೌಲ್ಯಯುತ ಸೇವೆ ನೀಡುವುದು ಸಾಧ್ಯವಾಗುವಂತೆ ಬೆಂಬಲ ನೀಡಲು ನಾವು ಉತ್ಸುಕರಾಗಿದ್ದೇವೆ” ಎಂದು ಹೇಳಿದರು.

ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ ರವಿಶಂಕರ್ ಮಾತನಾಡಿ, “ಓಎನ್‌ಡಿಸಿ ನೆಟ್‌ವರ್ಕ್ ಮೂಲಕ ನಮ್ಮ ಮೆಟ್ರೋ ಟಿಕೆಟಿಂಗ್ ಅನ್ನು ಉಬರ್ ಆಪ್ ಜೊತೆ ಸಂಯೋಜಿಸಿರುವ ಉಬರ್‌ ನ ಈ ಯೋಜನೆಯನ್ನು ನಾವು ಮುಕ್ತವಾಗಿ ಸ್ವಾಗತಿಸುತ್ತೇವೆ. ಇದರಿಂದ ಪ್ರಯಾಣಿಕರಿಗೆ ಟಿಕೆಟ್ ಬುಕ್ ಮಾಡುವುದು ಮತ್ತು ಪ್ರಯಾಣ ಇನ್ನಷ್ಟು ಸುಲಭವಾಗಲಿದೆ. ಈ ವಿಧಾನವು ಬಿಎಂಆರ್‌ಸಿಎಲ್‌ನ ಮಲ್ಟಿ- ಆಪರೇಟರ್ ಟಿಕೆಟಿಂಗ್ ವಿಧಾನಕ್ಕೆ ಸಂಪೂರ್ಣವಾಗಿ ಹೊಂದಿ ಕೊಳ್ಳುತ್ತಿದ್ದು, ಈ ವಿಧಾನದಲ್ಲಿ ಹಲವು ಡಿಜಿಟಲ್ ವೇದಿಕೆಗಳು ನಮ್ಮ ವ್ಯವಸ್ಥೆಯ ಜೊತೆ ಸಂಯೋಜನೆಗೊಳ್ಳಬಹುದಾಗಿದೆ. ಉಬರ್‌ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವುದರಿಂದ ಮೊದಲ ಮತ್ತು ಕೊನೆಯ ಹಂತದ ಸಂಪರ್ಕ ವ್ಯವಸ್ಥೆ ಬಲಗೊಳ್ಳಲಿದೆ ಮತ್ತು ಪ್ರಯಾಣಿಕರಿಗೆ ಹೆಚ್ಚು ಆಯ್ಕೆ ನೀಡುವುದು ಸಾಧ್ಯವಾಗುತ್ತದೆ. ಇಂತಹ ಪಾಲುದಾರಿಕೆಗಳನ್ನು ಹೆಚ್ಚಿಸಿ ಸಾರ್ವಜನಿಕ ಸಾರಿಗೆ ಯನ್ನು ಇನ್ನಷ್ಟು ಅನುಕೂಲಕರವಾಗಿಸಲಿದ್ದೇವೆ ಮತ್ತು ತಾಂತ್ರಿಕವಾಗಿ ಸಮರ್ಥವಾಗಿಸು ತ್ತೇವೆ” ಎಂದು ಹೇಳಿದರು.

ಉಬರ್ ಭಾರತೀಯರ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಹರಿಸಿದೆ. ತಂತ್ರಜ್ಞಾನದಿಂದ ದೈನಂದಿನ ಸಾರಿಗೆ ವ್ಯವಸ್ಥೆ ಮತ್ತು ವ್ಯಾಪಾರ ಕಾರ್ಯಗಳನ್ನು ಹೇಗೆ ಸುಲಭ ಗೊಳಿಸಬಹುದು ಎಂಬುದನ್ನು ತೋರಿಸಿ ಕೊಡುತ್ತಿದೆ. ಓಎನ್‌ಡಿಸಿ ನೆಟ್‌ವರ್ಕ್‌ ನಿಂದ ಚಾಲಿತ ವಾದ ಮೆಟ್ರೋ ಟಿಕೆಟ್ ವ್ಯವಸ್ಥೆ ಮತ್ತು ಉಬರ್ ಡೈರೆಕ್ಟ್ ಸೌಲಭ್ಯವು, ಜನರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಉಬರ್ ತನ್ನ ಸೇವೆಗಳನ್ನು ವೈವಿಧ್ಯಗೊಳಿಸುತ್ತಿರುವುದನ್ನು ತೋರಿಸುತ್ತದೆ. 2026ರಲ್ಲಿ ಇನ್ನಷ್ಟು ನಗರಗಳಲ್ಲಿ ಮೆಟ್ರೋ ಟಿಕೆಟ್ ಸೇವೆ ಆರಂಭವಾಗಲಿವೆ ಮತ್ತು ಉಬರ್ ಡೈರೆಕ್ಟ್ ಇತರ ನಗರಗಳಿಗೆ ವಿಸ್ತರಣೆ ಹೊಂದಲಿದೆ.

ಬೆಂಗಳೂರಿನ ಉಬರ್ ಬಳಕೆದಾರರು ಇಂದಿನಿಂದಲೇ ಈ ಸೇವೆಗಳನ್ನು ಪಡೆಯಬಹುದು-

  • ಉಬರ್ ಆಪ್‌ ನಲ್ಲಿಯೇ ಬೆಂಗಳೂರು ಮೆಟ್ರೋ ಕ್ಯೂರ್ ಟಿಕೆಟ್ ಖರೀದಿಸಬಹುದು
  • ಆಯಾ ಸಮಯದ ಮೆಟ್ರೋ ಮಾಹಿತಿ ನೋಡಬಹುದು
  • ಪೇಮೆಂಟ್ ಕೇವಲ ಯುಪಿಐ ಮೂಲಕ ಮಾತ್ರ ಮಾಡಬಹುದು

ಜೊತೆಗೆ ಉಬರ್ ಡೈರೆಕ್ಟ್ ಸೇವೆ ಕೂಡ ಆರಂಭವಾಗಿದ್ದು, ಉದ್ಯಮಗಳು ಉಬರ್‌ ನ ವಿಶಾಲವಾದ ಮತ್ತು ವಿಶ್ವಾಸಾರ್ಹ ಡ್ರೈವರ್ ನೆಟ್‌ ವರ್ಕ್ ಬಳಸಿ ಆನ್- ಡಿಮ್ಯಾಂಡ್ ಮತ್ತು ಶೆಡ್ಯೂಲ್ಡ್ ಡೆಲಿವರಿಗಳನ್ನು ಪೂರೈಸಬಹುದು