ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಹೊಸ ಎಕ್ಸ್‌ ಪೀ ತೆರೆಯುವ ಮೂಲಕ ರಿಟೇಲ್ ಮತ್ತು ಸರ್ವೀಸ್ ನೆಟ್‌ವರ್ಕ್ ಬಲಪಡಿಸಿಕೊಂಡ Ultraviolette

ಎಕ್ಸ್‌ ಪೀರಿಯೆನ್ಸ್ ಸೆಂಟರ್‌ನಲ್ಲಿ ಕಂಪನಿಯ ಪರ್ಫಾರ್ಮೆನ್ಸ್ ಮೋಟಾರ್‌ಸೈಕಲ್‌ಗಳಾದ X-47 ಮತ್ತು F77 ಗಳು ಪ್ರದರ್ಶಿಸಲ್ಪಡುತ್ತವೆ. ಈ ಉತ್ಪನ್ನಗಳು 40.2 ಎಚ್ ಪಿ ಪವರ್ ಮತ್ತು 100 ಎನ್ ಎಂ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯದ ಪವರ್‌ಟ್ರೇನ್‌ ಹೊಂದಿದ್ದು, ಅದ್ಭುತ ಎಲೆಕ್ಟ್ರಿಕ್ ಕಾರ್ಯಕ್ಷಮತೆ ಒದಗಿಸುತ್ತವೆ.

ಬೆಂಗಳೂರು: ಅತ್ಯಂತ ಪ್ರತಿಷ್ಠಿತ ಅಟೋಮೊಬೈಲ್ ಕಂಪನಿಗಳಲ್ಲಿ ಒಂದಾಗಿರುವ Ultraviolette Automotive ಸಂಸ್ಥೆಯು ಬೆಂಗಳೂರಿನ ನಾಗರಭಾವಿಯಲ್ಲಿ ತನ್ನ ಹೊಸ UV ಸ್ಪೇಸ್ ಸ್ಟೇಷನ್ ಎಂಬ ಎಕ್ಸ್ ಪೀರಿಯನ್ಸ್ ಸೆಂಟರ್ ಅನ್ನು ಉದ್ಘಾಟಿಸಿದೆ.

ಇದು ನಗರದಲ್ಲಿ ಕಂಪನಿಯ ನಾಲ್ಕನೇ ಎಕ್ಸ್‌ ಪೀರಿಯನ್ಸ್ ಸೆಂಟರ್ ಆಗಿದ್ದು, ರಾಷ್ಟ್ರೀಯ ಮಟ್ಟ ದಲ್ಲಿ ರಿಟೇಲ್ ಮತ್ತು ಸರ್ವೀಸ್ ನೆಟ್‌ವರ್ಕ್ ಬಲಪಡಿಸುವ ನಿಟ್ಟಿನಲ್ಲಿ ಕಂಪನಿಯ ಮಹತ್ವದ ಹೆಜ್ಜೆಯಾಗಿದೆ. ಕಂಪನಿಯು ಇತ್ತೀಚೆಗೆ ಅತ್ಯುನ್ನತ ತಂತ್ರಜ್ಞಾನ ಹೊಂದಿರುವ ಅತ್ಯಾಧುನಿಕ X-47 Crossover ಮತ್ತು UV Crossfade carbon-fibre helmet ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದು, ಅದರ ಬೆನ್ನಲ್ಲಿಯೇ ಈ ಹೊಸ ಎಕ್ಸ್ ಪೀರಿಯನ್ಸ್ ಸೆಂಟರ್ ಆರಂಭಿಸ ಲಾಗಿದೆ.

ಇದು ಅತ್ಯುತ್ತಮ ಎಲೆಕ್ಟ್ರಿಕ್ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಮತ್ತು ವಿಸ್ತರಿಸುವ Ultraviolette ನ ನಿರಂತರ ಪ್ರಯತ್ನವನ್ನು ಸಾರುತ್ತದೆ. ಈ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ಕಂಪನಿಯು ಗ್ರಾಹಕರಿಗೆ ತನ್ನ ಉತ್ಕೃಷ್ಟವಾದ, ಕಾರ್ಯಕ್ಷಮತೆ ಆಧಾರಿತ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಿದ್ದು, ಈ ಮೂಲಕ ತನ್ನ ಎಂಜಿನಿಯರಿಂಗ್, ಇನ್ನೋವೇಷನ್ ಮತ್ತು ಉತ್ಪನ್ನ ಅಭಿವೃದ್ಧಿಯ ಕೇಂದ್ರಬಿಂದುವಾಗಿರುವ ಬೆಂಗಳೂರಿನ ಸ್ಥಾನವನ್ನು ಇನ್ನಷ್ಟು ಬಲಪಡಿಸಿಕೊಂಡಿದೆ.

ಇದನ್ನೂ ಓದಿ: Bangalore News: 21ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಐಐಎಚ್‌ಎಮ್‌ಆರ್ ಮಾಜಿ ವಿದ್ಯಾರ್ಥಿಗಳ ಸಭೆ

ಆದ್ಯಾ ಇಂಕ್‌ ಡೀಲರ್ ಜೊತೆಗಿನ ಪಾಲುದಾರಿಕೆಯಲ್ಲಿ ಆರಂಭಗೊಂಡಿರುವ ಹೊಸ UV ಸ್ಪೇಸ್ ಸ್ಟೇಷನ್ ಗ್ರಾಹಕರಿಗೆ Ultraviolette ನ ಅತ್ಯಾಧುನಿಕ ಮೋಟಾರ್‌ ಸೈಕಲ್‌ ಗಳಾದ X-47 ಮತ್ತು F77 ಗಳ ಕುರಿತು ಹೆಚ್ಚು ಹೆಚ್ಚು ಅರಿತುಕೊಳ್ಳಲು ಅನುವು ಮಾಡಿಕೊಡುತ್ತದೆ. UV ಸ್ಪೇಸ್ ಸ್ಟೇಷನ್ ಒಂದು 3ಎಸ್ ಸೌಲಭ್ಯ (ಸೇಲ್ಸ್, ಸರ್ವೀಸ್, ಸ್ಪೇರ್ಸ್) ಒದಗಿಸುತ್ತಿದ್ದು, ಇದನ್ನು ಟೆಸ್ಟ್ ರೈಡ್ ಅನುಭವದಿಂದ ಹಿಡಿದು ಮಾರಾಟ, ಸರ್ವೀಸ್ ಮತ್ತು ಮೋಟಾರ್‌ ಸೈಕಲ್ ಆಕ್ಸೆಸರೀಸ್‌ ಲಭ್ಯತೆ ವರೆಗೆ ಎಲ್ಲವನ್ನೂ ಒಂದೇ ಕಡೆ ಒದಗಿಸಲು ವಿನ್ಯಾಸಗೊಳಿಸಲಾಗಿದೆ.

Image 2 ok

ಎಕ್ಸ್‌ ಪೀರಿಯೆನ್ಸ್ ಸೆಂಟರ್‌ನಲ್ಲಿ ಕಂಪನಿಯ ಪರ್ಫಾರ್ಮೆನ್ಸ್ ಮೋಟಾರ್‌ಸೈಕಲ್‌ಗಳಾದ X-47 ಮತ್ತು F77 ಗಳು ಪ್ರದರ್ಶಿಸಲ್ಪಡುತ್ತವೆ. ಈ ಉತ್ಪನ್ನಗಳು 40.2 ಎಚ್ ಪಿ ಪವರ್ ಮತ್ತು 100 ಎನ್ ಎಂ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯದ ಪವರ್‌ಟ್ರೇನ್‌ ಹೊಂದಿದ್ದು, ಅದ್ಭುತ ಎಲೆಕ್ಟ್ರಿಕ್ ಕಾರ್ಯಕ್ಷಮತೆ ಒದಗಿಸುತ್ತವೆ. ಇದು ಕೇವಲ 2.8 ಸೆಕೆಂಡ್‌ಗಳಲ್ಲಿ ಗಂಟೆಗೆ 0 ರಿಂದ 60 ಕಿ.ಮೀ. ವೇಗ ಪಡೆಯುತ್ತದೆ. 10.3 ಕೆಡಬ್ಲ್ಯೂಎಚ್ ಬ್ಯಾಟರಿ ಹೊಂದಿದ್ದು, ಒಮ್ಮೆ ಪೂರ್ತಿ ಚಾರ್ಜ್‌ ಮಾಡಿದರೆ 323 ಕಿ.ಮೀ. ಐಡಿಸಿ ರೇಂಜ್ ನೀಡುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ Ultravioletteನ ಸಹ- ಸಂಸ್ಥಾಪಕರು ಮತ್ತು ಸಿಟಿಓ ನೀರಜ್ ರಾಜ್‌ಮೋಹನ್ ಅವರು, “ಬೆಂಗಳೂರಿನಲ್ಲಿ ನಾಲ್ಕನೇ UV ಸ್ಪೇಸ್ ಸ್ಟೇಷನ್ ಉದ್ಘಾಟನೆ ಮಾಡಿದ್ದು ಸಂತೋಷ ತಂದಿದೆ. ಇದು ನಮ್ಮ ಉತ್ಪನ್ನಗಳ ಕಾರ್ಯಕ್ಷಮತೆ ಮತ್ತು ಉತ್ಕೃಷ್ಟತೆಗೆ ತಕ್ಕಂತೆ ಭವಿಷ್ಯ ಸಿದ್ಧ ರಿಟೇಲ್ ಮತ್ತು ಸರ್ವೀಸ್ ವ್ಯವಸ್ಥೆ ನಿರ್ಮಿಸುವ Ultraviolette ನ ಬದ್ಧತೆಗೆ ಸಾಕ್ಷಿಯಾಗಿದೆ. ಬೆಂಗಳೂರು ನಮ್ಮ ಎಂಜಿನಿಯರಿಂಗ್ ಮತ್ತು ಇನ್ನೋವೇಷನ್ ಪಯಣದ ಕೇಂದ್ರವಾಗಿದ್ದು, ಹೊಸ ಈ ಎಕ್ಸ್ ಪೀರಿಯನ್ಸ್ ಸೆಂಟರ್ ನಮ್ಮ ಅತ್ಯಂತ ಮುಖ್ಯ ಮಾರುಕಟ್ಟೆ ಗಳಲ್ಲಿ ಗ್ರಾಹಕರಿಗೆ ಸುಗಮವಾದ, ಸಂಪೂರ್ಣ ಮಾಲೀಕತ್ವ ಅನುಭವ ಒದಗಿಸುವ ಸಂಸ್ಥೆಯ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ. 2026ರಲ್ಲಿ ಭಾರತಾದ್ಯಂತ 100 UV ಸ್ಪೇಸ್ ಸ್ಟೇಷನ್‌ ಗಳನ್ನು ಸ್ಥಾಪಿಸುವ ದಿಸೆಯನ್ನು ನಾವು ಮುನ್ನಡೆಯುತ್ತಿದ್ದೇವೆ. ಪ್ರತೀ ಹೊಸ ಘಟಕ ವನ್ನೂ ಕಾರ್ಯಾಚರಣೆಯ ಶ್ರೇಷ್ಠತೆಯನ್ನು ಹೆಚ್ಚಿಸಲು, ಗ್ರಾಹಕರ ತೊಡಗಿಸಿಕೊಳ್ಳುವಿಕೆ ಹೆಚ್ಚಿಸಲು ಮತ್ತು ಸುಧಾರಿತ ಎಲೆಕ್ಟ್ರಿಕ್ ಸಾರಿಗೆ ಅಳವಡಿಕೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸ ಲಾಗುತ್ತಿದೆ. ನಮ್ಮ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಉಪಸ್ಥಿತಿಯ ಜೊತೆಗೆ ಈ ಬ್ರಾಂಡ್ ವಿಸ್ತರಣಾ ಕಾರ್ಯವು Ultraviolette ನ ತಂತ್ರಜ್ಞಾನ ಮತ್ತು ದೀರ್ಘಕಾಲೀನ ದೂರದೃಷ್ಟಿಯ ಜಾಗತಿಕ ಮಹತ್ವವನ್ನು ಸಾರುತ್ತದೆ” ಎಂದು ಹೇಳಿದರು.

Ultraviolette ತನ್ನ ಉತ್ಪನ್ನಗಳನ್ನು ನಿರಂತರವಾಗಿ ಸುಧಾರಿಸುತ್ತಾ ಬರುತ್ತಿದೆ. ಇತ್ತೀಚಿಗೆ ಸಂಸ್ಥೆ ಯು ‘GEN3 Powertrain Firmware’ ಮತ್ತು ‘Ballistic+’ performance enhancement ಎಂಬ ಎರಡು ವಿನೂತನ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಇವು ಎಲೆಕ್ಟ್ರಿಕ್ ಸಾರಿಗೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಬಹಳ ಮಹತ್ವದ, ನಿರ್ಣಾಯಕ ಕ್ಷಣವಾಗಿದೆ. ಈ ತಂತ್ರಜ್ಞಾನಗಳು ಹಳೆಯ ಮತ್ತು ಹೊಸ ಎಲ್ಲಾ F77 ಗ್ರಾಹಕರಿಗೆ ‘ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ’ ಲಭ್ಯವಿರಲಿದೆ. X-47 ಮತ್ತು F77ಗಳು ಈಗ ಹೆಚ್ಚು ತೀಕ್ಷ್ಣ ಪ್ರತಿಕ್ರಿಯೆ, ತ್ವರಿತ ಆಕ್ಸಲರೇಷನ್ ಮತ್ತು ಅತ್ಯುತ್ತಮ ಆರಂಭಿಕ ವೇಗ ಒದಗಿಸುತ್ತವೆ. 2024ರಲ್ಲಿ F77ರ ಆರಂಭಿಕ ಹಂತದಲ್ಲಿಯೇ ಟ್ರ್ಯಾಕ್ಷನ್ ಕಂಟ್ರೋಲ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್ (ಯು ವಿ ಡಿ ಎಸ್ ಸಿ), 10 ಲೆವೆಲ್ ರಿಜನರೇಟಿವ್ ಬ್ರೇಕಿಂಗ್, ಹಿಲ್-ಹೋಲ್ಡ್ ಅಸಿಸ್ಟ್, ವೈಯೊಲೆಟ್ ಎಐ ಮುಂತಾದ ಸುರಕ್ಷತಾ ವೈಶಿಷ್ಟ್ಯಗಳನ್ನು ಪರಿಚಯಿಸ ಲಾಗಿತ್ತು.

ಈ ವರ್ಷದ ಆರಂಭದಲ್ಲಿ Ultraviolette ತನ್ನ ಎರಡು ಹೊಸ ಮುಖ್ಯವಾಹಿನಿ ಉತ್ಪನ್ನಗಳಿಗೆ ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ವಿಶ್ವದ ಅತ್ಯಂತ ಸುಧಾರಿತ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವ ‘Tesseract’ - ಸೆಗ್ಮೆಂಟ್‌ನಲ್ಲಿ ಮೊದಲ ಬಾರಿಗೆ ಇಂಟಿಗ್ರೇಟೆಡ್ ರಾಡಾರ್ ಮತ್ತು ಡ್ಯಾಶ್‌ಕ್ಯಾಮ್ ಹೊಂದಿದ್ದು, ಓಮ್ನಿಸೆನ್ಸ್ ಮಿರರ್‌ಗಳೊಂದಿಗೆ ಸೊಗಸಾಗಿ ವಿನ್ಯಾಸ ಗೊಂಡಿದೆ. ಜೊತೆಗೆ, ಉತ್ಸಾಹಿ ರೈಡರ್‌ಗಳ ಬೇಡಿಕೆಗೆ ತಕ್ಕಂತೆ ವಿನ್ಯಾಸಗೊಳಿಸಲಾದ ಡಿಸ್ರಪ್ಟಿವ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ‘Shockwave’ ಕೂಡ ಜನರ ಮನಸ್ಸು ಗೆಲ್ಲಲು ಯಶಸ್ವಿಯಾಗಿದೆ.

*

ನಾಗರಭಾವಿಯಲ್ಲಿ UV ಸ್ಪೇಸ್ ಸ್ಟೇಷನ್ ಉದ್ಘಾಟನೆ ಆಗಿದ್ದು, ಈ ಮೂಲಕ Ultraviolette ನ  ರಾಷ್ಟ್ರೀಯ ಉಪಸ್ಥಿತಿ ವಿಸ್ತಾರವಾಗಿದೆ. ಕಂಪನಿಯು ದೇಶಾದ್ಯಂತ ಇರುವ 34 ನಗರಗಳಲ್ಲಿ ಅತ್ಯುತ್ತಮ ನೆಟ್ ವರ್ಕ್ ಅನ್ನು ಹೊಂದಿದೆ.

  • ಗ್ರಾಹಕರಿಗೆ ಅನುಕೂಲತೆ: ಗ್ರಾಹಕರ ಎಲ್ಲಾ ಅಗತ್ಯಗಳನ್ನು ಪೂರೈಸುವ ಮೂಲಕ ಆಸಕ್ತರಿಗೆ ಆಕರ್ಷಕ ಬ್ರ್ಯಾಂಡ್ ಅನುಭವ ನೀಡುತ್ತದೆ.
  • ವೈಯಕ್ತೀಕರಿಸಿದ ಟೆಸ್ಟ್ ರೈಡ್ ಮತ್ತು ಸರ್ವೀಸ್ ಸೌಲಭ್ಯ: ಎಕ್ಸ್‌ ಪೀರಿಯನ್ಸ್ ಸೆಂಟರ್‌ನಲ್ಲಿ ವೈಯಕ್ತಿಕ ಟೆಸ್ಟ್ ರೈಡ್ ಅವಕಾಶ, ಉತ್ತಮ ಸರ್ವೀಸ್ ನೆರವು ದೊರೆಯುತ್ತದೆ ಮತ್ತು ನಿಜವಾದ ಬಿಡಿ ಭಾಗಗಳ ಲಭ್ಯತೆ ಇರುತ್ತದೆ.