ಕೊರೊನಾ ವೈರಸ್ ನಿಯಂತ್ರಣ ಸಂಸ್ಥೆಯ ಮುಖ್ಯಸ್ಥರಿಗೆ ಕೊರೊನಾ ಸೋಂಕು
ಕೊರೊನಾ ವೈರಸ್ ನಿಯಂತ್ರಣ ಸಂಸ್ಥೆಯ ಮುಖ್ಯಸ್ಥರಿಗೆ ಕೊರೊನಾ ಸೋಂಕು
-
Vishwavani News
Dec 19, 2020 5:51 PM
ಇಸ್ಲಾಮಾಬಾದ್: ಪಾಕಿಸ್ತಾನದ ಯೋಜನಾ ಮಂತ್ರಿ ಹಾಗೂ ಕೊರೊನಾ ವೈರಸ್ ನಿಯಂತ್ರಣ ಸಂಸ್ಥೆ ಮುಖ್ಯಸ್ಥರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
ಪಾಕಿಸ್ತಾನ ಯೋಜನಾಭಿವೃದ್ಧಿ ಹಾಗೂ ವಿಶೇಷ ಉಪಕ್ರಮಗಳ ಸಚಿವ ಅಸಾದ್ ಉಮರ್, ನನ್ನ ಕೋವಿಡ್ ಪರೀಕ್ಷಾ ವರದಿ ಕೈ ಸೇರಿದ್ದು, ಸೋಂಕಿಗೆ ಒಳಗಾಗಿದ್ದೇನೆ. ಮನೆಯಲ್ಲಿ ಪ್ರತ್ಯೇಕವಾಗಿ ಇರಲಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ಕೊರೊನಾ ವೈರಸ್ಗೆ ತುತ್ತಾದ ತೀರಾ ಇತ್ತೀಚಿನ ಪಾಕಿಸ್ತಾನಿ ರಾಜಕಾರಣಿ ಇವರು. ಸಿಂಧ್ ಗವರ್ನರ್ ಇಮ್ರಾನ್ ಇಸ್ಮಾಯಿಲ್, ಸಿಂಧ್ ಸಿಎಂ ಮುರಾದ್ ಅಲಿ ಶಾ, ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಅಸದ್ ಖೈಸರ್, ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಸೇರಿದಂತೆ ಅನೇಕರು ಈವರೆಗೆ ಕೊರೊನಾ ಸೋಂಕಿಗೆ ಗುರಿಯಾಗಿದ್ದಾರೆ.