ಸರಿಯಾದ ಟೂಥ್ ಪೇಸ್ಟ್ ನಿಮ್ಮ ಬಾಯಿ ಆರೋಗ್ಯಕ್ಕೆ ಮಹತ್ತರ ಬದಲಾವಣೆ ತರಬಲ್ಲದು. ಏಕೆ ಎನ್ನುವುದನ್ನು ನೀವೇ ತಿಳಿಯಿರಿ
ದಂತಕವಚವು ಹಲ್ಲಿನ ಹೊರಗಿನ ರಕ್ಷಣಾತ್ಮಕ ಪದರವಾಗಿದ್ದು ಈ ಖನಿಜಯುಕ್ತ ರಕ್ಷಣೆಯು ಅಗಿಯುವುದು, ಆಮ್ಲೀಯ ಆಹಾರಗಳ ಸೇವನೆ ಮತ್ತು ದೈನಂದಿನ ಸ್ವಚ್ಛತೆಯ ಅಭ್ಯಾಸದ ಒತ್ತಡಗಳನ್ನು ತಡೆದುಕೊಳ್ಳುತ್ತದೆ. ಇದು ಮಾನವರ ದೇಹದಲ್ಲಿ ಅತ್ಯಂತ ಗಟ್ಟಿ ವಸ್ತುವಾಗಿದ್ದು ಅದು ಸಹಜ ರಕ್ಷಣೆಯಾಗಿ ಕೆಲಸ ಮಾಡುತ್ತದೆ ಆದರೆ ಒಮ್ಮೆ ಹಾನಿಯಾದರೆ ಮತ್ತೆ ಸರಿಪಡಿ ಸಲು ಸಾಧ್ಯವಿಲ್ಲ
-
ಡಾ.ಶಾಹುಲ್ ಹಮೀದ್, ಬಿಡಿಎಸ್, ಎಂಡಿಎಸ್
ಡಿಪ್ಲೊಮೇಟ್ ಬ್ರೇನ್ಮಾರ್ಕ್, ಆಸ್ಟಿಯೊಇಂಟಿಗ್ರೇಷನ್ ಸೊಸೈಟಿ-ಇಂಪ್ಲಾಂಟಾಲಜಿ
ರೀಡರ್- ಡಿಪಾರ್ಟ್ಮೆಂಟ್ ಆಫ್ ಪ್ರೊಸ್ಥೊಡಾಂಟಿಕ್ಸ್, ಆಕ್ಸ್ಫರ್ಡ್ ಡೆಂಟಲ್ ಕಾಲೇಜ್, ಬೆಂಗಳೂರು
ಬಾಯಿ ಆರೈಕೆ ಎಂದರೆ ಹಲ್ಲು ಉಜ್ಜುವುದು ಎಂದಷ್ಟೇ ತಿಳಿಯುತ್ತೇವೆ, ಆದರೆ ನಿಜವಾದ ದಂತ ಸ್ವಚ್ಛತೆಯು ಅದನ್ನು ಮೀರಿಯೂ ಮುಂದುವರಿಯುತ್ತದೆ. ಇಡೀ ದಿನ ನಮ್ಮ ಹಲ್ಲು ಆಮ್ಲೀಯ ಆಹಾರಗಳು, ಸಕ್ಕರೆಯ ತಿನಿಸು ಮತ್ತು ಪಾನೀಯಗಳಿಗೆ ಒಡ್ಡಿಕೊಳ್ಳುತ್ತದೆ. ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜುವುದು ಅಗತ್ಯ ಹಾಗೆಯೇ ಅದರ ಸಮಯ ಮತ್ತು ತಂತ್ರವೂ ಮುಖ್ಯ. ಉದಾಹರಣೆಗೆ, ಸಿಟ್ರಸ್ ಹಣ್ಣುಗಳ ಸೇವನೆಯ ನಂತರ ತಕ್ಷಣ ಬ್ರಷ್ ಮಾಡುವುದು ಹಲ್ಲು ಆಗ ಮೃದುವಾಗಿರುವುದರಿಂದ ನಿಮ್ಮ ದಂತವಚಕ್ಕೆ ಹಾನಿಯುಂಟು ಮಾಡುತ್ತದೆ.
ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳೋಣ: ದಂತಕವಚವು ಹಲ್ಲಿನ ಹೊರಗಿನ ರಕ್ಷಣಾ ತ್ಮಕ ಪದರವಾಗಿದ್ದು ಈ ಖನಿಜಯುಕ್ತ ರಕ್ಷಣೆಯು ಅಗಿಯುವುದು, ಆಮ್ಲೀಯ ಆಹಾರಗಳ ಸೇವನೆ ಮತ್ತು ದೈನಂದಿನ ಸ್ವಚ್ಛತೆಯ ಅಭ್ಯಾಸದ ಒತ್ತಡಗಳನ್ನು ತಡೆದುಕೊಳ್ಳುತ್ತದೆ. ಇದು ಮಾನವರ ದೇಹದಲ್ಲಿ ಅತ್ಯಂತ ಗಟ್ಟಿ ವಸ್ತುವಾಗಿದ್ದು ಅದು ಸಹಜ ರಕ್ಷಣೆಯಾಗಿ ಕೆಲಸ ಮಾಡುತ್ತದೆ ಆದರೆ ಒಮ್ಮೆ ಹಾನಿಯಾದರೆ ಮತ್ತೆ ಸರಿಪಡಿಸಲು ಸಾಧ್ಯವಿಲ್ಲ. ಇದರಿಂದ ಕಾಲ ಕಳೆದಂತೆ ಸದೃಢ, ಆರೋಗ್ಯಕರ ಹಲ್ಲಿಗೆ ಎನಾಮಲ್ ನ ಪ್ರತಿನಿತ್ಯದ ಆರೈಕೆಯು ಅತ್ಯಗತ್ಯ.
ಎನಾಮಲ್ ರಕ್ಷಣೆ ಏಕೆ ಮುಖ್ಯ?
ದಂತಕವಚವು ತಡೆಯಂತೆ ಕೆಲಸ ಮಾಡುವ ಮೂಲಕ ಹಲ್ಲಿನ ಒಳ ರಚನೆಗಳನ್ನು ಯಾಂತ್ರಿಕ ಒತ್ತಡ, ಉಷ್ಣತೆಯ ಏರಿಳಿತಗಳು ಮತ್ತು ಬ್ಯಾಕ್ಟೀರಿಯಾ ಚಟುವಟಿಕೆಗಳಿಂದ ರಕ್ಷಿಸುತ್ತದೆ. ಅದು ಸವೆದು ಹೋದಾಗ ಹಲ್ಲುಗಳು ಸಂವೇದನೆಗೆ ಒಳಪಡುತ್ತವೆ, ಅಸೌಖ್ಯ ಮತ್ತು ಕಾರ್ಯ ನಿರ್ವಹಣೆಯ ಸಾಮರ್ಥ್ಯ ಕುಸಿತ ಕಾಣುತ್ತವೆ. ದಂತಕವಚದಲ್ಲಿ ಸಣ್ಣ ಬದಲಾವಣೆಗಳೂ ಕೂಡಾ ಅಗಿಯುವ ಸಾಮರ್ಥ್ಯಕ್ಕೆ ಹಾಗೂ ದೀರ್ಘಾವಧಿ ಬಾಯಿ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತವೆ. ಆದ್ದರಿಂದ ದಂತಕವಚ ರಕ್ಷಿಸುವುದು ಅಸೌಖ್ಯ ವನ್ನು ತಡೆಯುವುದೇ ಅಲ್ಲದೆ ಪ್ರತಿನಿತ್ಯದ ಕಾರ್ಯ ಮತ್ತು ಪೌಷ್ಠಿಕತೆಯು ರಾಜಿಯಾಗಿಲ್ಲ ಎಂದು ದೃಢೀಕರಿಸಿಕೊಳ್ಳುವುದಾಗಿದೆ.
ಇದನ್ನೂ ಓದಿ: Health Tips: ಹಿಪ್ಪಲಿಯ ಔಷಧೀಯ ಗುಣಗಳ ಬಗ್ಗೆ ಗೊತ್ತೆ?
ದಂತಕವಚ ಸವೆತ ಏಕಾಗುತ್ತದೆ?
ದಂತಕವಚ ಸವೆತವು ಜೀವನಶೈಲಿಯ ಅಂಶಗಳಿಂದ ಉಂಟಾಗುತ್ತದೆ. ಸೋಡಾಗಳು, ಸಿಟ್ರಸ್ ಜ್ಯೂಸ್ ಗಳಂತಹ ಆಮ್ಲೀಯ ಪಾನೀಯ ಮತ್ತು ವೈನ್ ಸೇವಿಸುವುದು ದಂತ ಕವಚದ ಖನಿಜವನ್ನು ನಿವಾರಿಸುತ್ತದೆ, ಅದರ ರಚನೆಯನ್ನು ಮೃದುಗೊಳಿಸುತ್ತದೆ. ಹಾಗೆಯೇ ಬಾಯಿಯ ಬ್ಯಾಕ್ಟೀರಿಯಾದಿಂದ ಉತ್ಪಾದನೆಯಾಗುವ ಆಮ್ಲಗಳು ಕಾಲ ಕಳೆದಂತೆ ರಕ್ಷಣಾತ್ಮಕ ಪದರ ದುರ್ಬಲಗೊಳಿಸುತ್ತವೆ. ಹೆಚ್ಚು ಜೋರಾಗಿ ಬ್ರಷ್ ಮಾಡು ವುದು ಅಥವಾ ಒರಟಾದ ಬ್ರಿಸ್ಲ್ ಇರುವ ಟೂಥ್ ಬ್ರಷ್ ಬಳಸುವುದು ಈ ಪ್ರಕ್ರಿಯೆಯನ್ನು ಯಾಂತ್ರಿಕವಾಗಿ ದಂತಕವಚವನ್ನು ಹರಿದು ಈ ಪ್ರಕ್ರಿಯೆಗೆ ವೇಗ ನೀಡುತ್ತದೆ. ಸವೆತ ಹೆಚ್ಚಾದಂತೆ ಕೆಳಗಿನ ದಂತದ್ರವ್ಯ ಹೊರಕ್ಕೆ ಬರುತ್ತದೆ, ಇದರಿಂದ ಸೆನ್ಸಿಟಿವಿಟಿ, ಬಣ್ಣ ಗುಂದುವುದು ಮತ್ತು ದಂತಕುಳಿಗಳ ಹೆಚ್ಚಿನ ರಿಸ್ಕ್ ಇರುತ್ತದೆ.
ವಿಶೇಷ ಟೂಥ್ ಪೇಸ್ಟ್ ಗಳ ಪಾತ್ರ
ಟೂಫ್ ಪೇಸ್ಟ್ ತನ್ನ ಸೂತ್ರ ಆಧರಿಸಿ ದಂತಕವಚಚನ್ನು ರಕ್ಷಿಸಬಹುದು ಅಥವಾ ವಿಫಲ ವಾಗಬಹುದು. ನಿಯಮಿತ ಟೂಥ್ ಪೇಸ್ಟ್ ಗಳು ಮುಖ್ಯವಾಗಿ ಸ್ವಚ್ಛತೆಗೆ ಆದ್ಯತೆ ನೀಡಿದರೆ, ವಿಶೇಷ ಸೂತ್ರಗಳು ಅದಕ್ಕಿಂತ ಹೆಚ್ಚಿನದಕ್ಕಾಗಿ ವಿನ್ಯಾಸಗೊಳಿಸಲಾಗುತ್ತದೆ. ಆಪ್ಟಿಮೈಸ್ಡ್ ಫ್ಲೋರೈಡ್ ಫಾರ್ಮುಲೇಷನ್ ನಿಂದ ಉನ್ನತಗೊಳಿಸಿರುವ ಟೂಥ್ ಪೇಸ್ಟ್'ಗಳನ್ನು ಈ ಅಂಶಗಳಿಗೆ ವಿನ್ಯಾಸಗೊಳಿಸಲಾಗಿದೆ:
- ಮೃದುವಾದ ದಂತಕವಚ ಸದೃಢಗೊಳಿಸಲು, ಅದನ್ನು ಮರುಕಳಿಸುವ ಆಮ್ಲೀಯತೆಯನ್ನು ತಡೆಯಲು ರೂಪಿಸಲಾಗಿರುತ್ತದೆ
- ರೀಮಿನರಲೈಸೇಷನ್ ಉತ್ತೇಜಿಸಲು, ಖನಿಜಗಳನ್ನು ಉಳಿಸಲು ನೆರವಾಗಲು
- ದಂತಕವಚವನ್ನು ಹರಿಯುವುದು ಮತ್ತು ಸವೆತದಿಂದ ರಕ್ಷಿಸಲು ದೀರ್ಘಾವಧಿ ತಡೆಯ ಸರ್ಫೇಸ್ ನಿರ್ಮಾಣದ ಮೂಲಕ ರಕ್ಷಣೆ ನೀಡಲು
ಟೂಥ್ ಪೇಸ್ಟ್ ಗಳನ್ನು ಸ್ವಚ್ಛತೆಗಿಂತ ಹೆಚ್ಚು ಮಾಡುವ ಫ್ಲೋರೈಡ್ ಲಭ್ಯತೆ ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ; ಅವು ದಂತಕವಚವನ್ನು ಮರು ಖನಿಜಯುಕ್ತಗೊಳಿಸಲು ಮತ್ತು ದೈನಂದಿನ ನಾಶದಿಂದ ರಕ್ಷಣೆ ನೀಡಲು ನೆರವಾಗುತ್ತವೆ. ಮೃದು- ಬ್ರಿಸ್ಲ್ ಬ್ರಷ್ ಗಳು ಯಾಂತ್ರಿಕ ಹಾನಿ ಕಡಿಮೆ ಮಾಡಿ, ನಿಮ್ಮ ಬಾಯಿ ಆರೈಕೆಯನ್ನು ಪರಿಣಾಮಕಾರಿ ಮತ್ತು ಮೃದುವಾಗಿಸಿ ಈ ಆರೈಕೆಗೆ ನೆರವಾಗುತ್ತವೆ.
ದಂತಕವಚ ಬೆಂಬಲಿಸುವ ಪ್ರತಿನಿತ್ಯದ ರೂಢಿಗಳು
ದಿನಚರಿಯಲ್ಲಿ ಸರಳ ಹೊಂದಾಣಿಕೆಗಳು ವಿಶೇಷ ಟೂಥ್ ಪೇಸ್ಟ್ ಬಳಕೆಗೆ ಪೂರಕ ವಾಗಿರತ್ತವೆ:
-ಆಮ್ಲೀಯ ಆಹಾರಗಳು ಮತ್ತು ಪಾನೀಯಗಳ ಸೇವನೆ ಮಿತಿಗೊಳಿಸುವುದು ಅಥವಾ ನಂತರ ಬಾಯಿಯನ್ನು ಮುಕ್ಕಳಿಸುವುದು
-ಆಮ್ಲೀಯ ಆಹಾರಸೇವನೆಯ ತಕ್ಷಣವೇ ಬ್ರಷ್ ಮಾಡುವುದನ್ನು ತಪ್ಪಿಸುವುದು; ಕನಿಷ್ಠ 30 ನಿಮಿಷಗಳು ಕಾಯುವುದು ಲಾಲಾರಸವು ನೈಸರ್ಗಿಕವಾಗಿ ಖನಿಜಗಳನ್ನು ಉಳಿಸಲು ನೆರವಾಗುತ್ತದೆ
ದಿನಕ್ಕೆ ಎರಡು ಬಾರಿ ನಿಯಮಿತ ಹಲ್ಲು ಉಜ್ಜುವುದು ಸ್ಥಿರವಾದ ದಂತಕವಚ ರಕ್ಷಣೆ ನೀಡುತ್ತದೆ
ದಂತಕವಚಕ್ಕೆ ತನ್ನಷ್ಟಕ್ಕೆ ತಾನು ರಿಪೇರಿ ಮಾಡುವ ಸಾಮರ್ಥ್ಯ ಹೊಂದಿಲ್ಲ, ಇದರಿಂದ ಪ್ರತಿನಿತ್ಯದ ರಕ್ಷಣೆ ಅತ್ಯಗತ್ಯ. ವಿಶೇಷ, ಫ್ಲೋರೈಡ್ ಯುಕ್ತ ಟೂಥ್ ಪೇಸ್ಟ್ ಬಳಸುವುದರ ಮೂಲಕ ಜನರು ಅವರ ದಂತಕವಚ ಸದೃಢಗೊಳಿಸಿಕೊಳ್ಳಬಹುದು ಮತ್ತು ಸವೆತದ ತೊಂದರೆ ಕಡಿಮೆ ಮಾಡಿಕೊಳ್ಳಬಹುದು. ಈ ವಿಧಾನವು ಬಾಯಿಯ ಸೌಖ್ಯ ಕಾಪಾಡುವು ದಲ್ಲದೆ ದೀರ್ಘಾವಧಿ ದಂತ ಆರೋಗ್ಯ ಮತ್ತು ಕಾರ್ಯವನ್ನು ಕೂಡಾ ಸಂರಕ್ಷಿಸುತ್ತದೆ.