ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Health Tips: ಅಬ್ಬಬ್ಬಾ! ಕೇವಲ ಎರಡೇ ವಾರ ಸಕ್ಕರೆಯಿಂದ ಅಂತರ ಕಾಯ್ದುಕೊಂಡರೆ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನ ಸಿಗುತ್ತೆ ಗೊತ್ತಾ?

Sugar Break: AIIMS‌ನಲ್ಲಿ ತರಬೇತಿ ಪಡೆದ ಗ್ಯಾಸ್ಟ್ರೋಎಂಟೆರಾಲಜಿಸ್ಟ್ ಡಾ. ಸೌರಭ್ ಸೇಠಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ 2 ವಾರ ಸಕ್ಕರೆಯಿಂದ ಅಂತರ ಕಾಯ್ದುಕೊಂಡರೆ ದೇಹಕ್ಕೆ ಏನೆಲ್ಲಾ ಲಾಭ ಸಿಗುತ್ತದೆ ಎಂಬುವುದನ್ನು ವಿವರಿಸಿದ್ದಾರೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ಅಬ್ಬಬ್ಬಾ! ಎರಡು ವಾರ ಸಕ್ಕರೆಗೆ ನೋ ಅಂದ್ರೆ ಇಷ್ಟು ಲಾಭನಾ?

ಸಿಹಿ ತಿಂಡಿ -

Profile
Sushmitha Jain Jan 25, 2026 7:00 AM

ಬೆಂಗಳೂರು, ಜ. 25: ಇಂದು ಸಕ್ಕರೆ ನಮ್ಮ ಆಹಾರದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಬಾಳೆಹಣ್ಣು, ಮಾವು ಮುಂತಾದ ಹಣ್ಣುಗಳಿಂದ ಹಿಡಿದು, ಚಹಾ–ಕಾಫಿ, ಪಾನೀಯ ಹಾಗೆಯೇ ಮೊಸರು, ಜೇನುತುಪ್ಪ, ಹಾಲು, ಬೆಲ್ಲ ಸೇರಿದಂತೆ ಬಹುತೇ ದೈನಂದಿನ ಆಹಾರಗಳಲ್ಲೂ ಸಕ್ಕರೆ ಇದೆ. ಸಕ್ಕರೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಎಂಬುದು ಸತ್ಯವಾದರೂ, ಬೇಕರಿ ಪದಾರ್ಥಗಳು, ಪ್ಯಾಕೇಜ್ಡ್ ಸ್ನ್ಯಾಕ್ಸ್, ಸಿಹಿ ತಿಂಡಿಗಳು ಹಾಗೂ ಸಕ್ಕರೆಯುಕ್ತ ಪಾನೀಯಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

AIIMS‌ನಲ್ಲಿ ತರಬೇತಿ ಪಡೆದ ಗ್ಯಾಸ್ಟ್ರೋಎಂಟೆರಾಲಜಿಸ್ಟ್ ಡಾ. ಸೌರಭ್ ಸೇಠಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ 2 ವಾರ ಸಕ್ಕರೆಯಿಂದ ಅಂತರ ಕಾಯ್ದುಕೊಂಡರೆ ದೇಹಕ್ಕೆ ಏನೆಲ್ಲ ಲಾಭ ಸಿಗುತ್ತದೆ ಎಂಬುವುದನ್ನು ವಿವರಿಸಿದ್ದಾರೆ.

ವಿಡಿಯೊ ನೋಡಿ

ವಿಡಿಯೊದಲ್ಲಿ ಅವರು ಹೇಳುವಂತೆ, “ನೀವು ಕೇವಲ ಎರಡು ವಾರಗಳ ಕಾಲ ಸಕ್ಕರೆ ಸೇವನೆ ನಿಲ್ಲಿಸಿದರೆ, ಇನ್ಸುಲಿನ್‌ನಿಂದ ಉಂಟಾಗುವ ನೀರಿನ ಸಂಗ್ರಹ ಇಳಿಕೆಯಾಗಿ ನಿಮ್ಮ ಮುಖದ ಊತ ಕಡಿಮೆಯಾಗುತ್ತದೆ. ಇನ್ಸುಲಿನ್ ಮಟ್ಟ ಇಳಿಯುತ್ತಿದ್ದಂತೆ ತೂಕವು ಕ್ರಮೇಣ ಕಡಿಮೆಯಾಗಲಿದ್ದು, ಉಬ್ಬಿರ ಹೊಟ್ಟೆ ಸಮತಟ್ಟಾಗುತ್ತದೆ”. ಇಷ್ಟೇ ಅಲ್ಲದೇ, “ಯಕೃತ್ತಿನ ಮೇಲೆ ಇರುವ ಸಕ್ಕರೆಯ ಒತ್ತಡ ಕಡಿಮೆಯಾಗುತ್ತದೆ. ಇದು ಫ್ಯಾಟಿ ಲಿವರ್ ಸಮಸ್ಯೆಗೆ ಬಹಳ ಮುಖ್ಯ. ಸಕ್ಕರೆ ಪ್ರಮಾಣ ಕಡಿಮೆಯಾದಾಗ ಫರ್ಮೆಂಟೇಶನ್, ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಕಡಿಮೆಯಾಗಲಿದ್ದು, ಗಟ್ ಆರೋಗ್ಯ ಉತ್ತಮವಾಗುತ್ತದೆ. ಅಲ್ಲದೆ ಮೊಡವೆ ಅಥವಾ ಇನ್ನಿತರ ಸಮಸ್ಯೆಗಳು ನಿವಾರಣೆಯಾಗಿ, ಚರ್ಮವೂ ನಿಧಾನವಾಗಿ ಸ್ವಚ್ಛವಾಗಲು ಆರಂಭವಾಗುತ್ತದೆ” ಎಂದು ಹೇಳಿದ್ದಾರೆ.

“ಸಕ್ಕರೆ ಕೇವಲ ಕ್ಯಾಲೊರಿಯನ್ನು ಮಾತ್ರವಲ್ಲ ಹಸಿವು, ಇನ್ಸುಲಿನ್ ಮತ್ತು ಲೀವರ್ ‌ಫ್ಯಾಟ್ ಅನ್ನು ಗೊತ್ತೆಯಾಗದಂತೆ ಹೆಚ್ಚಿಸುತ್ತದೆ. ಅದಕ್ಕಾಗಿಯೇ ನಾನು ನನ್ನ ರೋಗಿಗಳಿಗೆ 14 ದಿನ ಸಕ್ಕರೆ ಸೇವಿಸದೇ ಇರಲು ಪ್ರಯತ್ನಿಸುವಂತೆ ಹೇಳುತ್ತೇನೆ” ಎಂದು ಅವರು ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

ಆರೋಗ್ಯಕ್ಕೆ ಒಳ್ಳೆಯದು ಅಂತ ಜಾಸ್ತಿ ಕಾಮಕಸ್ತೂರಿ ಬೀಜ ತಿಂತೀರಾ?

ಸಕ್ಕರೆ ಬಿಡುತ್ತಿದ್ದಂತೆಯೇ ಮೊದಲು ಅನುಭವವಕ್ಕೆ ಬರುವ ಲಕ್ಷಣಗಳು

  • ಸಿಹಿ ಆಹಾರದ ತೀವ್ರ ಆಸೆ (Cravings)
  • ತಲೆನೋವು ಅಥವಾ ದಣಿವು
  • ಕಿರಿಕಿರಿ
  • ಮನಸ್ಸು ಮಂಕಾಗಿರುವಂತೆ ಭಾಸವಾಗುವುದು (Brain fog)

ಇದು ಸಕ್ಕರೆಯನ್ನು ಮತ್ತೆ ತಿನ್ನಲು ಪ್ರೇರೆಪಿಸುವುದಲ್ಲ, ನಿಮ್ಮ ಮೆದುಳು ತನ್ನ ‘ರಿವಾರ್ಡ್ ಸಿಗ್ನಲ್‌ಗಳನ್ನು’ ಮರುಸಂಯೋಜಿಸುತ್ತಿರುವ ಪ್ರಕ್ರಿಯೆ.

ಕ್ರಮೇಣ ಆಗುವ ಬದಲಾವಣೆಗಳು

  • ಸಿಹಿ ತಿನ್ನುವ ಆಸೆ ಕಡಿಮೆಯಾಗುತ್ತದೆ
  • ಶಕ್ತಿ ಮಟ್ಟ ಸ್ಥಿರವಾಗುತ್ತದೆ
  • ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ
  • ಮಧ್ಯಾಹ್ನದ ದಣಿವು ಕಡಿಮೆಯಾಗುತ್ತದೆ
  • ಇನ್ಸುಲಿನ್ ಪ್ರತಿಕ್ರಿಯೆ ಸುಧಾರಿಸಲು ಆರಂಭಿಸುತ್ತದೆ

ಎರಡನೇ ವಾರಕ್ಕೆ ಅನೇಕರು ಗಮನಿಸುವುದು

  • ಸಮತಟ್ಟಾದ ಹೊಟ್ಟೆ
  • ಉತ್ತಮ ನಿದ್ರೆ
  • ಹಸಿವಿನ ಸ್ಪಷ್ಟ ಸೂಚನೆ
  • ಆಹಾರದ ಮೇಲಿನ ಅನಾವಶ್ಯಕ ಆಸೆಗಳು ಕಡಿಮೆಯಾಗುವುದು
  • ಫಾಸ್ಟಿಂಗ್ ಗ್ಲೂಕೋಸ್ ಮಟ್ಟ ಸುಧಾರಣೆ

ತೂಕದ ಅಳತೆಯಲ್ಲಿ ದೊಡ್ಡ ಬದಲಾವಣೆ ಕಾಣಿಸದಿರಬಹುದು. ಆದರೆ ದೇಹದ ಮೆಟಾಬಾಲಿಸಂ ಒಳಗಡೆಯಿಂದ ಬದಲಾಗುತ್ತಿರುತ್ತದೆ.

14 ದಿನ ಸಕ್ಕರೆ ಬಿಡುವುದರಿಂದ ಆಗುವ ಪ್ರಯೋಜನಗಳು

  • ಇನ್ಸುಲಿನ್ ಸ್ಪೈಕ್‌ಗಳು ಶಾಂತಗೊಳ್ಳುತ್ತವೆ
  • ಲೀವರ್ ಮೇಲೆ ಸಕ್ಕರೆಯ ಒತ್ತಡ ಕಡಿಮೆಯಾಗುತ್ತದೆ
  • ದೇಹದಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತದೆ
  • ರುಚಿಕಣಗಳು ಮರು ಹೊಂದಿಕೊಳ್ಳುತ್ತವೆ