ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Health Tips: ಆರೋಗ್ಯಕ್ಕೆ ಒಳ್ಳೆಯದು ಅಂತ ಜಾಸ್ತಿ ಕಾಮಕಸ್ತೂರಿ ಬೀಜ ತಿಂತೀರಾ?; ಇದರಿಂದ ಲಾಭಕ್ಕಿಂತ ಅಪಾಯ ಹೆಚ್ಚು ಎನ್ನುತ್ತಾರೆ ಪೌಷ್ಠಿಕ ತಜ್ಞರು

ಕಾಮಕಸ್ತೂರಿ ಬೀಜಗಳು ಆರೋಗ್ಯಕ್ಕೆ ಉಪಕಾರಿ ಎಂದು ಪ್ರಸಿದ್ಧಿಯಾದರೂ, ಎಲ್ಲರಿಗೂ ಅವು ಸೂಕ್ತವಲ್ಲ. ಕೆಲವು ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿರುವವರು ಈ ಬೀಜಗಳನ್ನು ಸೇವಿಸಿದರೆ ಲಾಭಕ್ಕಿಂತ ಅಪಾಯ ಹೆಚ್ಚಾಗಬಹುದು ಎಂದು ಪೌಷ್ಠಿಕ ತಜ್ಞರು ಎಚ್ಚರಿಸಿದ್ದಾರೆ. ಇತ್ತೀಚಿನ ಇನ್‌ಸ್ಟಾಗ್ರಾಂ ವಿಡಿಯೋದಲ್ಲಿ ಪೌಷ್ಠಿಕ ತಜ್ಞೆ ದೀಪ್ಸಿಖಾ ಜೈನ್ ಅವರು, ಕಾಮಕಸ್ತೂರಿ ಬೀಜಗಳನ್ನು ಸೇವಿಸಬಾರಾದ ನಾಲ್ಕು ಆರೋಗ್ಯ ಪರಿಸ್ಥಿತಿಗಳನ್ನು ವಿವರಿಸಿದ್ದಾರೆ. ಆ ಕುರಿತಾದ ಮಾಹಿತಿ ಇಲ್ಲಿದೆ.

ಈ 4 ಸಮಸ್ಯೆಗಳಿದ್ದರೆ ಕಾಮಕಸ್ತೂರಿ ಬೀಜ ಸೇವಿಸಲೇ ಬೇಡಿ!

ಕಾಮಕಸ್ತೂರಿ ಬೀಜ -

Profile
Sushmitha Jain Jan 23, 2026 6:00 AM

ಬೆಂಗಳೂರು: ಕಾಮಕಸ್ತೂರಿ ಬೀಜ (Chia seeds) ಗಳು ಹೆಚ್ಚಿನ ನಾರಿನಾಂಶ (ಫೈಬರ್), ಆರೋಗ್ಯಕರ ಕೊಬ್ಬುಗಳು ಮತ್ತು ಅಗತ್ಯ ಖನಿಜಗಳನ್ನು ಹೊಂದಿರುವುದರಿಂದ “ಸೂಪರ್‌ಫುಡ್(superfood)” ಎಂಬ ಖ್ಯಾತಿಯನ್ನು ಪಡೆದಿವೆ. ಜೀರ್ಣಕ್ರಿಯೆ (digestion) ಮತ್ತು ಹೃದಯ ಆರೋಗ್ಯ(heart health) ಸುಧಾರಣೆ ಹಾಗೂ ತೂಕ ನಿಯಂತ್ರಣ(weight management)ಕ್ಕೆ ಸಹಕಾರಿ ಎಂದು ಇವುಗಳನ್ನು ಹೆಚ್ಚಾಗಿ ಪ್ರಚಾರ ಮಾಡಲಾಗುತ್ತಿದೆ. ಆದರೆ, ಈ ಬೀಜಗಳು ಎಲ್ಲರಿಗೂ ಸೂಕ್ತವಲ್ಲ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಕೆಲವು ವೈದ್ಯಕೀಯ ಸಮಸ್ಯೆಗಳಿರುವವರಿಗೆ, ಕಾಮಕಸ್ತೂರಿ ಬೀಜ ಸೇವನೆಯು ಲಾಭಕ್ಕಿಂತ ಹೆಚ್ಚು ಹಾನಿಕಾರಕವಾಗಬಹುದು.

ಇತ್ತೀಚೆಗೆ ಇನ್‌ಸ್ಟಾಗ್ರಾಮ್(Instagram) ವೀಡಿಯೊವೊಂದರಲ್ಲಿ ಪೌಷ್ಠಿಕ ತಜ್ಞೆ ದೀಪ್ಸಿಖಾ ಜೈನ್(Deepsikha Jain) ಅವರು, "ಯಾವು ನಾಲ್ಕು ಆರೋಗ್ಯ ಸಮಸ್ಯೆಗಳು ಇರುವವರು ಕಾಮಸ್ತೂರಿ ಬೀಜ ಸೇವನೆ ಮಾಡಬಾರದು ಎಂಬುವುದನ್ನು ವಿವರಿಸಿದ್ದಾರೆ.

ಕಡಿಮೆ ರಕ್ತದೊತ್ತಡ (Low Blood Pressure)

ಕಡಿಮೆ ರಕ್ತದೊತ್ತಡ ಇರುವವರು ಕಾಮಕಸ್ತೂರಿ ಬೀಜದಿಂದ ದೂರವಿರುವಂತೆ ಎಂದು ಜೈನ್ ಸಲಹೆ ನೀಡಿದ್ದಾರೆ. ಕಾಮಕಸ್ತೂರಿ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಇದ್ದು, ಅದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. “ನಿಮ್ಮ ರಕ್ತದೊತ್ತಡ ಈಗಾಗಲೇ ಕಡಿಮೆಯಿದ್ದರೆ, ಕಾಮಕಸ್ತೂರಿ ಬೀಜ ಸೇವನೆಯಿಂದ ಅದು ಇನ್ನಷ್ಟು ಇಳಿದು ತಲೆಸುತ್ತು, ದುರ್ಬಲತೆ ಅಥವಾ ಅತಿಯಾದ ದಣಿವನ್ನು ಉಂಟುಮಾಡಬಹುದು,” ಎಂದು ಅವರು ತಿಳಿಸಿದ್ದಾರೆ.

ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು

ಗ್ಯಾಸ್ಟ್ರಿಕ್ ಸಮಸ್ಯೆ, ಹೊಟ್ಟೆ ಹುಣ್ಣು, ಅಸಿಡಿಟಿ ಅಥವಾ ಅತಿಯಾದ ಗ್ಯಾಸ್ ಸಮಸ್ಯೆ ಇರುವವರು ಕಾಮಕಸ್ತೂರಿ ಬೀಜ ಸೇವನೆ ತಪ್ಪಿಸಬೇಕು. ಈ ಬೀಜಗಳಲ್ಲಿ ಹೆಚ್ಚಿನ ನಾರಿನಾಂಶವಿದ್ದು, ಸಾಮಾನ್ಯವಾಗಿ ಅದು ಜೀರ್ಣಕ್ರಿಯೆಗೆ ಒಳ್ಳೆಯದು. ಆದರೆ, ಸೂಕ್ಷ್ಮ ಅಥವಾ ಉರಿಯೂತ, ಕರುಳಿನ ಪದರುಗಳಿಗೆ ಇದು ಸಮಸ್ಯೆಯನ್ನು ಹೆಚ್ಚಿಸಬಹುದು ಎಂದು ದೀಪ್ಸಿಖಾ ಜೈನ್ ಎಚ್ಚರಿಸಿದ್ದಾರೆ. “ಇವು ಗ್ಯಾಸ್ ಹೆಚ್ಚಿಸಬಹುದು, ಹೊಟ್ಟೆ ನೋವನ್ನು ತೀವ್ರಗೊಳಿಸಬಹುದು ಮತ್ತು ಈಗಾಗಲೇ ಉರಿದಿರುವ ಜೀರ್ಣನಾಳವನ್ನು ಕಿರಿಕಿರಿಗೊಳಿಸಬಹುದು,” ಎಂದು ಅವರು ಹೇಳಿದ್ದಾರೆ.

ರಕ್ತ ತೆಳುಗೊಳಿಸುವ (Blood Thinners) ಔಷಧ ಸೇವಿಸುವವರು

ರಕ್ತವನ್ನು ತೆಳುವಾಗಿಸುವ ಔಷಧಗಳನ್ನು ಸೇವಿಸುತ್ತಿರುವವರು ಕಾಮಕಸ್ತೂರಿ ಬೀಜ ಸೇವನೆಗೆ ಮುನ್ನ ಎಚ್ಚರಿಕೆ ವಹಿಸಬೇಕು. ಕಾಮಕಸ್ತೂರಿ ಬೀಜಗಳಲ್ಲಿ ಇರುವ ಓಮೆಗಾ-3 ಕೊಬ್ಬು ಆಮ್ಲಗಳು ಸ್ವಾಭಾವಿಕವಾಗಿ ರಕ್ತವನ್ನು ತೆಳುವಾಗಿಸುವ ಗುಣ ಹೊಂದಿವೆ. “ಆಸ್ಪಿರಿನ್ ಅಥವಾ ಇತರ ರಕ್ತ ತೆಳುವಾಗಿಸುವ ಔಷಧಗಳನ್ನು ಈಗಾಗಲೇ ಸೇವಿಸುತ್ತಿದ್ದರೆ, ಕಾಮಕಸ್ತೂರಿ ಬೀಜಗಳು ರಕ್ತಸ್ರಾವದ ಅಪಾಯವನ್ನು ಹೆಚ್ಚಿಸಬಹುದು,” ಎಂದು ಜೈನ್ ಹೇಳಿದ್ದಾರೆ.

ಕಿಡ್ನಿ ಸಂಬಂಧಿತ ಕಾಯಿಲೆಗಳು

ಕಿಡ್ನಿ ಸಮಸ್ಯೆ ಇರುವವರು ಕಾಮಕಸ್ತೂರಿ ಬೀಜ ಸೇವನೆ ತಪ್ಪಿಸಬೇಕು ಎಂದು ಜೈನ್ ತಿಳಿಸಿದ್ದಾರೆ. ಈ ಬೀಜಗಳಲ್ಲಿ ಪೊಟ್ಯಾಸಿಯಮ್ ಮತ್ತು ಫಾಸ್ಫರಸ್ ಅಧಿಕವಾಗಿದ್ದು, ಆರೋಗ್ಯಕರ ಕಿಡ್ನಿಗಳು ಸಾಮಾನ್ಯವಾಗಿ ಇವುಗಳನ್ನು ನಿಭಾಯಿಸಬಲ್ಲವು. “ಆದರೆ ಕಿಡ್ನಿ ಸಮಸ್ಯೆ ಇರುವವರಿಗೆ ಈ ಖನಿಜಗಳು ಹೆಚ್ಚುವರಿ ಒತ್ತಡ ಉಂಟುಮಾಡಿ ಕಿಡ್ನಿಗೆ ಹಾನಿ ಮಾಡಬಹುದು,” ಎಂದು ಅವರು ಹೇಳಿದ್ದಾರೆ.

ಕಾಮಕಸ್ತೂರಿ ಬೀಜಗಳು ಪೌಷ್ಟಿಕವಾಗಿದ್ದರೂ, ಅವು ಎಲ್ಲರಿಗೂ ಸೂಕ್ತವಲ್ಲ ಎಂಬುದನ್ನು ಆರೋಗ್ಯ ತಜ್ಞರು ಒತ್ತಿ ಹೇಳಿದ್ದಾರೆ. ‘ಸೂಪರ್‌ಫುಡ್’ ಎಂದು ಕರೆಯಲ್ಪಡುವ ಆಹಾರಗಳ ಸೇವನೆ ಆರೋಗ್ಯ ಟ್ರೆಂಡ್‌ಗಳಿಗಿಂತ ವ್ಯಕ್ತಿಯ ವೈಯಕ್ತಿಕ ಆರೋಗ್ಯ ಅಗತ್ಯಗಳನ್ನು ಆಧರಿಸಿರಬೇಕು ಎಂಬುವುದು ಪೌಷ್ಠಿಕ ತಜ್ಞರು ಸಲಹೆಯಾಗಿದೆ.