ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Winter: ಈ ಚಳಿಗಾಲದಲ್ಲಿ ಫ್ಲೂ ಮತ್ತು ನ್ಯುಮೋನಿಯಾದಿಂದ ದೂರವಿರಲು 5 ಸಲಹೆಗಳು

ಅನೇಕ ಲಕ್ಷಣಗಳು ಒಂದೇ ರೀತಿ ಇರುವುದರಿಂದ, ಅದು ಸಾಮಾನ್ಯ ಫ್ಲೂ ಅಥವಾ ಅದಕ್ಕಿಂತ ಗಂಭೀರ ವಾದ ಕಾಯಿಲೆಯೇ ಎಂದು ಪತ್ತೆ ಹಚ್ಚುವುದು ಕಷ್ಟವಾಗಬಹುದು. ಜ್ವರ, ಕೆಮ್ಮು, ಆಯಾಸ, ಗಂಟಲು ನೋವು, ಮೈಕೈ ನೋವು ಮತ್ತು ಉಸಿರಾಟದ ತೊಂದರೆ ಇವೆಲ್ಲವೂ ಫ್ಲೂ ಅಥವಾ ನ್ಯುಮೋನಿಯಾ ದಂತಹ ಉಸಿರಾಟದ ಸೋಂಕಿನ ಲಕ್ಷಣಗಳಾಗಿರಬಹುದು.

ಫ್ಲೂ ಮತ್ತು ನ್ಯುಮೋನಿಯಾದಿಂದ ದೂರವಿರಲು 5 ಸಲಹೆಗಳು

-

Ashok Nayak
Ashok Nayak Jan 22, 2026 3:46 PM

ಚಳಿಗಾಲದಲ್ಲಿ ಕೆಮ್ಮು, ಶೀತ ಮತ್ತು ಫ್ಲೂ ಹಾಗೂ ನ್ಯುಮೋನಿಯಾದಂತಹ ಸೋಂಕುಗಳು ಎಲ್ಲಾ ಕಡೆ ಕಾಣಿಸಿಕೊಳ್ಳುತ್ತವೆ. ಸುತ್ತಮುತ್ತ ಇರುವವರಲ್ಲಿ ಯಾರಾದರೊಬ್ಬರು ಕೆಮ್ಮು, ಶೀತದಿಂದ ಬಳಲುತ್ತಿರುವುದನ್ನು ನೀವು ಗಮನಿಸಿರಬಹುದು ಅಥವಾ ನೀವೇ ಆ ಬಾಧೆಗೆ ಒಳಗಾಗಿರಬಹುದು. ಅದು ಯಾಕೆಂದರೆ ಶೀತ ವಾತಾವರಣದಲ್ಲಿ ವೈರಸ್‌ಗಳ ಹರಡುವಿಕೆ ಸುಲಭ. ಹಾಗಾಗಿ ಈ ಸಮಯದಲ್ಲಿ ಹೆಚ್ಚು ಜನರು ಕಾಯಿಲೆಗೆ ತುತ್ತಾಗಬಹುದು. ಹಾಗಂತ ತಲೆಬಿಸಿ ಮಾಡಿಕೊಳ್ಳ ಬೇಕಿಲ್ಲ. ಆಗಾಗ್ಗೆ ಕೈ ತೊಳೆಯುವುದು, ಉತ್ತಮ ಆಹಾರ ಸೇವನೆ ಮತ್ತು ದೇಹವನ್ನು ಬೆಚ್ಚ ಗಿರಿಸಿಕೊಳ್ಳುವಂತಹ ಸರಳ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಮತ್ತು ನಿಮ್ಮ ಕುಟುಂಬವನ್ನು ಈ ಕಾಯಿಲೆಗಳಿಂದ ರಕ್ಷಿಸಿಕೊಳ್ಳಬಹುದು.

ಅನೇಕ ಲಕ್ಷಣಗಳು ಒಂದೇ ರೀತಿ ಇರುವುದರಿಂದ, ಅದು ಸಾಮಾನ್ಯ ಫ್ಲೂ ಅಥವಾ ಅದಕ್ಕಿಂತ ಗಂಭೀರವಾದ ಕಾಯಿಲೆಯೇ ಎಂದು ಪತ್ತೆ ಹಚ್ಚುವುದು ಕಷ್ಟವಾಗಬಹುದು. ಜ್ವರ, ಕೆಮ್ಮು, ಆಯಾಸ, ಗಂಟಲು ನೋವು, ಮೈಕೈ ನೋವು ಮತ್ತು ಉಸಿರಾಟದ ತೊಂದರೆ ಇವೆಲ್ಲವೂ ಫ್ಲೂ ಅಥವಾ ನ್ಯುಮೋನಿಯಾದಂತಹ ಉಸಿರಾಟದ ಸೋಂಕಿನ ಲಕ್ಷಣಗಳಾಗಿರಬಹುದು. ಈ ಲಕ್ಷಣಗಳು ಮುಂದುವರಿದರೆ ಅಥವಾ ಉಲ್ಬಣಗೊಂಡರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ದೆಹಲಿಯ ಡಾ. ಅರುಣ್ ವಾಧ್ವಾ ಕ್ಲಿನಿಕ್‌ನ ಮಕ್ಕಳ ತಜ್ಞರಾದ ಎಂಬಿಬಿಎಸ್, ಎಂಡಿ ಡಾ. ಅರುಣ್ ವಾಧ್ವಾ ಅವರು ಈ ಅವಧಿಯಲ್ಲಿ ನಿಖರವಾಗಿ ರೋಗನಿರ್ಣಯ ಮಾಡುವುದು ಬಹಳ ಮುಖ್ಯ ಎನ್ನುತ್ತಾರೆ. ಈ ಕುರಿತು ವಿವರವಾಗಿ ಮಾತನಾಡುವ ಅವರು, "ಚಳಿಗಾಲದಲ್ಲಿ ಕಾಯಿಲೆಗಳು ಹೆಚ್ಚಾಗುತ್ತಿರುವಾಗ, ಚೇತರಿಸಿಕೊಳ್ಳಲು ಮತ್ತು ಮುಂದೆ ಆಗಬಹುದಾದ ತೊಂದರೆಗಳನ್ನು ತಪ್ಪಿಸಲು ಸರಿಯಾಗಿ ರೋಗನಿರ್ಣಯ ಮಾಡುವುದು ಬಹಳ ಮುಖ್ಯ. ನಿಮಗೆ ಅನಾರೋಗ್ಯ ಅನ್ನಿಸಿದರೆ, ಅದನ್ನು ನಿರ್ಲಕ್ಷಿಸಬೇಡಿ. ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಲು ತಕ್ಷಣ ವೈದ್ಯ ರನ್ನು ಸಂಪರ್ಕಿಸಿ" ಎಂದು ಹೇಳಿದರು.

ಇದನ್ನೂ ಓದಿ: Drumstick Health Benefits: ತೂಕ ಇಳಿಸುವುದಕ್ಕೆ ನುಗ್ಗೆ ನೆರವಾಗುವುದೇ? ಯಾವ ರೀತಿ ಬಳಸಿದರೆ ಉತ್ತಮ?

ಸಕಾಲಿಕ ತಪಾಸಣೆಯ ಅಗತ್ಯತೆ

ನಮ್ಮ ಆಧುನಿಕ ಕಾಲದ ವೇಗದ ಜೀವನದಲ್ಲಿ, ಯಾರೂ ಅನಾರೋಗ್ಯದಿಂದ ಮನೆಯಲ್ಲಿ ಕೂರಲು ಬಯಸುವುದಿಲ್ಲ. ಇಲ್ಲಿ ' ರ‍್ಯಾಪಿಡ್ ಟೆಸ್ಟಿಂಗ್' (ತ್ವರಿತ ತಪಾಸಣೆ) ಪ್ರಮುಖ ಪಾತ್ರ ವಹಿಸುತ್ತದೆ, ಈ ತಪಾಸಣೆ ಫ್ಲೂ ಮತ್ತು ನ್ಯುಮೋನಿಯಾದಂತಹ ಉಸಿರಾಟದ ಕಾಯಿಲೆಗಳನ್ನು ಪತ್ತೆ ಹಚ್ಚಲು ತ್ವರಿತ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ.

ಅಬಾಟ್ ಸಂಸ್ಥೆಯ ಸಾಂಕ್ರಾಮಿಕ ರೋಗಗಳ ವಿಭಾಗದ ವೈದ್ಯಕೀಯ ವ್ಯವಹಾರಗಳ ನಿರ್ದೇಶಕ ರಾದ ಡಾ. ಸೋನು ಭಟ್ನಾಗರ್ ಅವರು ಸಕಾಲಿಕ ತಪಾಸಣೆಯ ಮಹತ್ವದ ಕುರಿತು ಮಾತನಾಡಿ, "ಉಸಿರಾಟದ ಸೋಂಕುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ತ್ವರಿತ ತಪಾಸಣೆಯು ನಿರ್ಣಾಯಕ ಪಾತ್ರ ವಹಿಸುತ್ತದೆ. ವಿವಿಧ ಉಸಿರಾಟದ ಕಾಯಿಲೆಗಳಿಗೆ ತ್ವರಿತ ತಪಾಸಣಾ ಆಯ್ಕೆಗಳು ಲಭ್ಯವಿದ್ದು, ಇವು ವೇಗವಾದ ಮತ್ತು ನಿಖರವಾದ ರೋಗನಿರ್ಣಯಕ್ಕೆ ಸಹಾಯ ಮಾಡುತ್ತವೆ" ಎಂದು ಹೇಳಿದರು.

Dr

ಚಳಿಗಾಲದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ತೆಗೆದುಕೊಳ್ಳಬೇಕಾದ ಕೆಲವು ಸರಳ ಕ್ರಮಗಳು ಇಲ್ಲಿವೆ:

  1. ತಪಾಸಣೆ ಮಾಡಿಸಿಕೊಳ್ಳಿ: ನಿಮಗೆ ಯಾವ ಕಾರಣಕ್ಕೆ ಅನಾರೋಗ್ಯ ಉಂಟಾಗುತ್ತಿದೆ ಎಂದು ತಿಳಿಯುವುದು ಗುಣಮುಖರಾಗಲು ಮೊದಲ ಹೆಜ್ಜೆಯಾಗಿದೆ. ನಿಮಗೆ ಉಸಿರಾಟದ ಸೋಂಕಿನ ಲಕ್ಷಣಗಳಿದ್ದರೆ, ನಿಮ್ಮ ವೈದ್ಯರೊಂದಿಗೆ ಮಾತನಾಡಿ ಮತ್ತು ತ್ವರಿತ ತಪಾಸಣೆ ಮಾಡಿ. ರ‍್ಯಾಪಿಡ್ ಟೆಸ್ಟ್‌ ಗಳು ತ್ವರಿತ ಉತ್ತರಗಳನ್ನು ನೀಡುತ್ತವೆ. ಇದರಿಂದ ವೈದ್ಯರು ಸರಿಯಾದ ಚಿಕಿತ್ಸೆಯನ್ನು ಆಯ್ಕೆ ಮಾಡಲು ಮತ್ತು ನೀವು ಬೇಗನೆ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ.
  2. ನಿಮ್ಮ ಸ್ಥಿತಿಯನ್ನು ಗಮನಿಸುತ್ತಿರಿ: ನಿಮ್ಮ ರೋಗ ಲಕ್ಷಣಗಳು ಮತ್ತು ಅವುಗಳ ತೀವ್ರತೆಯ ಮೇಲೆ ನಿಗಾ ಇಡಿ. ನಿಮ್ಮ ಜ್ವರ ಹೆಚ್ಚಾಗುತ್ತಿದ್ದರೆ ಅಥವಾ ಪರಿಸ್ಥಿತಿ ಹದಗೆಡುತ್ತಿದ್ದರೆ, ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
  3. ಚಿಕಿತ್ಸೆ ಪಡೆಯಿರಿ: ಆರಂಭಿಕ ಹಂತದಲ್ಲಿ ಸೂಕ್ತ ರೋಗನಿರ್ಣಯ ಮಾಡಿದರೆ ನೀವು ತಕ್ಷಣ ಚಿಕಿತ್ಸೆಯನ್ನು ಪಡೆಯಬಹುದು. ರೋಗ ಲಕ್ಷಣಗಳನ್ನು ಕಡಿಮೆ ಮಾಡಲು ಮತ್ತು ಸೋಂಕಿನ ವಿರುದ್ಧ ಹೋರಾಡಲು ನಿಮ್ಮ ವೈದ್ಯರು ಸೂಚಿಸಿದ ಔಷಧಿಗಳ ಸಂಪೂರ್ಣ ಕೋರ್ಸ್ ಮತ್ತು ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸುವುದು ಅವಶ್ಯ.
  4. ನಿಮ್ಮ ಬಗ್ಗೆ ಕಾಳಜಿ ವಹಿಸಿ: ಸಾಕಷ್ಟು ವಿಶ್ರಾಂತಿ ಪಡೆಯಿರಿ ಮತ್ತು ಚೆನ್ನಾಗಿ ನಿದ್ರೆ ಮಾಡಿ. ಒತ್ತಡವಿಲ್ಲದೆ ಇರುವುದನ್ನು ರೂಢಿಸಿಕೊಳ್ಳಿ, ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಿ. ಉದಾಹರಣೆಗೆ ನೀರು, ಎಳನೀರು ಅಥವಾ ತಾಜಾ ಜ್ಯೂಸ್ ಕುಡಿಯುತ್ತಿರಿ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ.
  5. ಮನೆಯಲ್ಲೇ ಇರಿ: ನಿಮಗೆ ಅನಾರೋಗ್ಯದ ಲಕ್ಷಣಗಳಿದ್ದರೆ, ನೀವು ವಿಶ್ರಾಂತಿ ಪಡೆಯಲು ಮತ್ತು ಗುಣಮುಖರಾಗಲು ಮನೆಯಲ್ಲಿಯೇ ಇರಿ, ಇತರರಿಂದ ದೂರವಿರಿ. ಇದರಿಂದ ಸೋಂಕು ಇತರ ಜನರಿಗೆ ಹರಡದಂತೆ ತಡೆಯಲು ಸಹಾಯವಾಗುತ್ತದೆ.

ಚಳಿ ಹೆಚ್ಚಿರುವುದರಿಂದ ಹೆಚ್ಚು ಜಾಗರೂಕರಾಗಿರುವುದು ಮತ್ತು ನಿಮ್ಮ ಆರೋಗ್ಯವನ್ನು ರಕ್ಷಿಸಿ ಕೊಳ್ಳುವುದು ಮುಖ್ಯವಾಗಿದೆ. ನೀವು ಆರೋಗ್ಯವಾಗಿದ್ದಾಗ ಕೈ ತೊಳೆಯುವುದು, ಕಿಕ್ಕಿರಿದ ಸ್ಥಳ ಗಳಲ್ಲಿ ಮಾಸ್ಕ್ ಧರಿಸುವುದು ಮತ್ತು ಅಂತರವನ್ನು ಕಾಯ್ದುಕೊಳ್ಳುವಂತಹ ಸರಳ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ. ಫ್ಲೂ ಮತ್ತು ನ್ಯುಮೋನಿಯಾ ಲಸಿಕೆಗಳು ರಕ್ಷಣೆ ಪಡೆಯಲು ಇರುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿವೆ. ಈ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ನೀವು ಚಳಿಗಾಲದಲ್ಲಿ ಸುರಕ್ಷಿತವಾಗಿ ಇರಬಹುದು ಮತ್ತು ನಿಮ್ಮ ಪ್ರೀತಿಪಾತ್ರರನ್ನು ಕೂಡ ಆರೋಗ್ಯ ವಾಗಿಡಬಹುದು. ನಿಮಗೆ ಚಳಿಗಾಲದ ಬೆಚ್ಚಗಿನ ಶುಭ ಹಾರೈಕೆಗಳು!