ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಬ್ಬಾಟ್ಟ್'ನಿಂದ ಭಾರತದಲ್ಲಿ ಟ್ರೈಕ್ಲಿಪ್ ಬಿಡುಗಡೆ, ಸೋರುವ ಟ್ರೈಕಸ್ಪಿಡ್ ಕವಾಟ ರಿಪೇರಿ ಮಾಡಲು ವಿನೂತನ ಸಾಧನ

ಇದು ತಂತ್ರಜ್ಞಾನ ಮತ್ತು ಮಿತ್ರಾ ಕ್ಲಿಪ್ ಸಾಧನದಿಂದ ಸದೃಢವಾದ ಪುರಾವೆಯಿಂದ ಸನ್ನದ್ಧ ವಾಗಿದ್ದು ಇದು ಸೋರುತ್ತಿರುವ ಮಿತ್ರಲ್ ವಾಲ್ವ್ ಗಳ ರಿಪೇರಿಗೆ ಕನಿಷ್ಠ ಕತ್ತರಿಕೆಯ ಆಯ್ಕೆ ಯಾಗಿದೆ. ಈ ಟ್ರೈಕ್ಲಿಪ್ ಹೃದಯದ ಬಲಭಾಗದಲ್ಲಿ ಸಂಚರಿಸಲು ವಿಶೇಷವಾದ ಪೂರೈಕೆ ವ್ಯವಸ್ಥೆ ಹೊಂದಿದೆ. ಟ್ರೈಕ್ಲಿಪ್ ಪಡೆಯುವ ಜನರಿಗೆ ಚೇತರಿಸಿಕೊಳ್ಳಲು ಮತ್ತು ಮನೆಗೆ ಹಿಂದಿರುಗಲು ಒಂದು ದಿನ ಮಾತ್ರ ಸಾಕಾಗುತ್ತದೆ.

• ಟ್ರೈಕಸ್ಪಿಡ್ ಕವಾಟ ರಿಪೇರಿ ಬಯಸುವ ಆದರೆ ಶಸ್ತ್ರಚಿಕಿತ್ಸೆ ತಡೆದುಕೊಳ್ಳದ ರೋಗಿಗಳಿಗೆ ಟ್ರೈಕ್ಲಿಪ್ ಸುರಕ್ಷಿತ, ಕನಿಷ್ಠ ಕತ್ತರಿಕೆಯ ಚಿಕಿತ್ಸೆಯಾಗಿದೆ

• ಚಿಕಿತ್ಸೆಗಳ ಪುರಾವೆಯ ಟ್ರೈಕ್ಲಿಪ್ ವಾಲ್ವ್ ಸೋರಿಕೆ ಕಡಿಮೆ ಮಾಡಬಲ್ಲದು ಮತ್ತು ಅರ್ಥಪೂರ್ಣ, ದೀರ್ಘಕಾಲ ಉಳಿಯುವ ಸುಧಾರಣೆಗಳನ್ನು ರೋಗಿಗಳ ಪ್ರತಿನಿತ್ಯದ ಜೀವನದಲ್ಲಿ ನೀಡುತ್ತದೆ

ಬೆಂಗಳೂರು: ಜಾಗತಿಕ ಆರೋಗ್ಯಸೇವಾ ಕ್ಷೇತ್ರದ ನಾಯಕ ಅಬ್ಬಾಟ್ಟ್ ಇಂದು ಭಾರತದಲ್ಲಿ ಟ್ರೈಕ್ಲಿಪ್™ ಟ್ರಾನ್ಸ್ ಕ್ಯಾಥರರ್ ಎಡ್ಜ್-ಟು-ಎಡ್ಜ್ ರಿಪೇರ್ (ಟಿಇಇಆರ್) ಸಿಸ್ಟಂ ಅನ್ನು ಬಿಡುಗಡೆ ಮಾಡಿದೆ. ಈ ಸಾಧನವನ್ನು ವಿಶೇಷವಾಗಿ ಟ್ರೈಕಸ್ಪಿಡ್ ರಿಗರ್ಗಿಟೇಷನ್ (ಟಿ.ಆರ್.) ಅಥವಾ ಸೋರುವ ಟ್ರೈಕಸ್ಪಿಡ್ ವಾಲ್ವ್ ಚಿಕಿತ್ಸೆಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಕಾಲಿನಲ್ಲಿನ ರಕ್ತನಾಳದ ಮೂಲಕ ನೀಡಲಾಗುವ ಟ್ರೈಕ್ಲಿಪ್ ನ ಟೀರ್ ತಂತ್ರಜ್ಞಾನವು ಲೀಫ್ಲೆಟ್ ಗಳು ಅಥವಾ ಜೀವಕೋಶಗಳ ಫ್ಲಾಪ್ ಗಳ ಭಾಗವನ್ನು ಕ್ಲಿಪ್ಪಿಂಗ್ ಮಾಡುವ ಮೂಲಕ ಟ್ರೈಕಸ್ಪಿಡ್ ಕವಾಟ ರಿಪೇರಿ ಮಾಡುತ್ತದೆ ಮತ್ತು ತೆರೆದ ಹೃದಯದ ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲದೆ ರಕ್ತದ ಹರಿವು ಸರಿಯಾದ ದಿಕ್ಕಿಗೆ ಹರಿಯುವಂತೆ ಮಾಡಲು ನೆರವಾಗುತ್ತದೆ.

ಇದು ತಂತ್ರಜ್ಞಾನ ಮತ್ತು ಮಿತ್ರಾ ಕ್ಲಿಪ್ ಸಾಧನದಿಂದ ಸದೃಢವಾದ ಪುರಾವೆಯಿಂದ ಸನ್ನದ್ಧವಾಗಿದ್ದು ಇದು ಸೋರುತ್ತಿರುವ ಮಿತ್ರಲ್ ವಾಲ್ವ್ ಗಳ ರಿಪೇರಿಗೆ ಕನಿಷ್ಠ ಕತ್ತರಿಕೆಯ ಆಯ್ಕೆಯಾಗಿದೆ. ಈ ಟ್ರೈಕ್ಲಿಪ್ ಹೃದಯದ ಬಲಭಾಗದಲ್ಲಿ ಸಂಚರಿಸಲು ವಿಶೇಷವಾದ ಪೂರೈಕೆ ವ್ಯವಸ್ಥೆ ಹೊಂದಿದೆ. ಟ್ರೈಕ್ಲಿಪ್ ಪಡೆಯುವ ಜನರಿಗೆ ಚೇತರಿಸಿಕೊಳ್ಳಲು ಮತ್ತು ಮನೆಗೆ ಹಿಂದಿರುಗಲು ಒಂದು ದಿನ ಮಾತ್ರ ಸಾಕಾಗುತ್ತದೆ.

ಇದನ್ನೂ ಓದಿ: Health Tips: ಬ್ರೇಕ್‌ಫಾಸ್ಟ್‌ ಸ್ಕಿಪ್‌ ಮಾಡ್ತಿದ್ದೀರಾ? ಈ ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರ!

ಈ ಟ್ರೈಕಸ್ಪಿಡ್ ವಾಲ್ವ್ ಹೃದಯದ ಬಲ ಹೃತ್ಕರ್ಣದಿಂದ ಬಲ ಕುಹರಕ್ಕೆ ಹರಿಯುವ ರಕ್ತದ ಹರಿವನ್ನು ನಿಯಂತ್ರಿಸುತ್ತದೆ. ಟಿ.ಆರ್. ವಾಲ್ವ್ ಸರಿಯಾಗಿ ಮುಚ್ಚಿಕೊಳ್ಳದಿದ್ದಾಗ ಉಂಟಾ ಗುತ್ತದೆ, ಇದರಿಂದ ಸೋರಿಕೆ ಉಂಟಾಗುತ್ತದೆ ಮತ್ತು ರಕ್ತವು ಹೃದಯಕ್ಕೆ ಹಿಮ್ಮುಖ ಹರಿಯುತ್ತದೆ. ಟಿ.ಆರ್. ಹೃದಯಕ್ಕೆ ಹೆಚ್ಚು ಕಠಿಣವಾಗಿ ಕೆಲಸ ಮಾಡಲು ಒತ್ತಾಯ ಮಾಡುತ್ತದೆ, ಇದರಿಂದ ಆಯಾಸ ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ ಟಿ.ಆರ್. ಅಟ್ರಿಯಲ್ ಫೈಬ್ರಿಲೇಷನ್ (ಅನಿಯಮಿತ ಹೃದಯಬಡಿತ) ಮತ್ತು ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ. ಈ ರೋಗಲಕ್ಷಣಗಳು ಮುಂದು ವರಿದವರಿಗೆ ಅಥವಾ ವೈದ್ಯಕೀಯ ಚಿಕಿತ್ಸೆಯ ನಂತರವೂ ಟಿ.ಆರ್. ಉಳಿದಿದ್ದರೆ ಮತ್ತು ಶಸ್ತ್ರಚಿಕಿತ್ಸೆಗೆ ಉತ್ತಮ ಅಭ್ಯರ್ಥಿ ಅಲ್ಲ ಎನಿಸಿದರೆ ಟ್ರೈಕ್ಲಿಪ್ ವ್ಯಕ್ತಿಯ ಜೀವನದ ಗುಣಮಟ್ಟ ಸುಧಾರಿಸುವ ಆಯ್ಕೆಯಾಗುತ್ತದೆ ಮತ್ತು ಹೃದಯ ವೈಫಲ್ಯದಿಂದ ಆಸ್ಪತ್ರೆ ಸೇರುವುದನ್ನು ಕಡಿಮೆ ಮಾಡುತ್ತದೆ.

ಭಾರತದಲ್ಲಿ ಟ್ರೈಕಸ್ಪಿಡ್ ರಿಸರ್ಜಿಟೇಷನ್: ವಿಕಾಸಗೊಳ್ಳುತ್ತಿರುವ ಹೊರೆ

ಭಾರತದಲ್ಲಿ ಮುಖ್ಯವಾಗಿ ವೃದ್ಧರಲ್ಲಿ ಮತ್ತು ರುಮಾಟಿಕ್ ಹೃದಯ ರೋಗಗಳು, ಏಟ್ರಿಯಲ್ ಫೈಬ್ರಿಲ್ಲೇಷನ್, ಪಲ್ಮನರಿ ಹೈಪರ್ ಟೆನ್ಷನ್ ಅಥವಾ ಕವಾಟದ ಸಮಸ್ಯೆ ಗಳುಳ್ಳವರಲ್ಲಿ ಟಿ.ಆರ್. ಹೆಚ್ಚಾಗಿ ಸಾಮಾನ್ಯ ಆದರೆ ಕಡಿಮೆ ಪರೀಕ್ಷಿಸಲ್ಪಡುವ ಹೃದಯದ ಕವಾಟದ ಸಮಸ್ಯೆಯಾಗಿದೆ. ಪ್ರಕಟಿಸಲಾದ ರಿವ್ಯೂಗಳು ಮತ್ತು ಎಕೊಕಾರ್ಡಿಯಾಗ್ರಫಿ-ಆಧರಿತ ದತ್ತಾಂಶದಲ್ಲಿ ಚಿಕಿತ್ಸೆಯ ದೃಷ್ಟಿಯಿಂದ ಮುಖ್ಯವಾದ ಟಿ.ಆರ್. ಅನ್ನು ಸಾಮಾನ್ಯ ಹೃದಯರೋಗದ ರೂಢಿಯಂತೆ ಕಾಣಲಾಗುತ್ತದೆ ಮತ್ತು ಚಿಕಿತ್ಸೆ ನೀಡದಿದ್ದಲ್ಲಿ ಕಾಲ ಕಳೆದಂತೆ ಪ್ರಗತಿಯಾಗುತ್ತದೆ[1] ಎನ್ನುವುದು ಈ ರೋಗ ಕುರಿತು ಭಾರತದಲ್ಲಿ ತುರ್ತಾಗಿ ಗಮನ ಹರಿಸುವ ಅಗತ್ಯ ಎತ್ತಿ ತೋರಿಸಿದೆ.

“ಬಹಳ ಕಾಲದಿಂದ ಟ್ರೈಕಸ್ಪಿಡ್ ರಿಗರ್ಗಿಟೇಷನ್ ಸಮಸ್ಯೆಯೊಂದಿಗೆ ಜೀವಿಸುತ್ತಿರುವ ರೋಗಿಗಳಿಗೆ ಸೀಮಿತ ಚಿಕಿತ್ಸೆಯ ಅವಕಾಶಗಳಿದ್ದು ಅದು ಅವರ ಜೀವನದ ಗುಣಮಟ್ಟಕ್ಕೆ ಪರಿಣಾಮ ಉಂಟು ಮಾಡುತ್ತಿತ್ತು. ಟ್ರೈಕ್ಲಿಪ್ ಅನ್ನು ಭಾರತದಲ್ಲಿ ಪರಿಚಯಿಸಿರುವುದು ಆರೈಕೆಯ ಸುಧಾರಣೆಯಲ್ಲಿ ಪ್ರಮುಖವಾಗಿದ್ದು ಕನಿಷ್ಠ ಕತ್ತರಿಕೆಯ ಆಯ್ಕೆಯಾಗಿದ್ದು ಅದು ರೋಗಲಕ್ಷಣಗಳಿಂದ ಸುಧಾರಿಸುತ್ತದೆ ಮತ್ತು ರೋಗಿಯ ಫಲಿತಾಂಶಗಳಿಗೆ ಅರ್ಥಪೂರ್ಣವಾಗಿ ಪರಿಣಾಮ ಬೀರುತ್ತದೆ” ಎಂದು ಭಾರತದಲ್ಲಿ ಅಬ್ಬಾಟ್ಟ್ ನ ಸ್ಟ್ರಕ್ಚರಲ್ ಹಾರ್ಟ್ ಬಿಸಿನೆಸ್ ಕಂಟ್ರಿ ಮ್ಯಾನೇಜರ್ ಸುಧೀರ್ ಮಿರಜ್ಕರ್ ಹೇಳಿದರು. “ಭಾರತದಲ್ಲಿ ನಮ್ಮ ವಿಸ್ತಾರ ರಚನಾತ್ಮಕ ಹೃದಯ ಚಿಕಿತ್ಸೆಗೆ ಟ್ರೈಕ್ಲಿಪ್ ಸೇರ್ಪಡೆಯಿಂದ ನಾವು ಜೀವನ ಉನ್ನತಗೊಳಿಸುವ ಪ್ರಯೋಜನಗಳನ್ನು ಹೃದಯರೋಗದ ರೋಗಿಗಳಿಗೆ ತರುತ್ತಿದ್ದೇವೆ” ಎಂದರು.

ದೊಡ್ಡ ಸಂಕೀರ್ಣತೆಯ ಕವಾಟವು ಹೃದಯದ ಇತರೆ ಕವಾಟಗಳಿಗೆ ಹೋಲಿಸಿದರೆ ಕಡಿಮೆ ಗಮನ ಪಡೆಯುತ್ತದೆ, ಅದಕ್ಕೆ ಕಾರಣ ರೋಗಲಕ್ಷಣಗಳು ನಿಧಾನವಾಗಿ ಅಭಿವೃದ್ಧಿ ಯಾಗುತ್ತವೆ ಮತ್ತು ಚಿಕಿತ್ಸೆಯ ಆಯ್ಕೆಗಳು ಸೀಮಿತವಾಗಿರುತ್ತವೆ. ಆದರೂ ಅದು ಹೃದಯದ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೀವಕೋಶದ ಮೃದು ಫ್ಲಾಪ್ ಗಳು ಪ್ರತಿ ಹೃದಯಬಡಿತದೊಂದಿಗೆ ಚಲಿಸುತ್ತವೆ ಹಾಗೂ ಅಗಲ ಮತ್ತು ಅಸಮ ಆಕಾರ ಪಡೆಯುತ್ತವೆ, ಅದು ಹೃದಯದ ಬಲ ಭಾಗದಲ್ಲಿರುತ್ತದೆ, ಅದು ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸಗೊಳ್ಳಬಹುದು. ಅದರ ಕಾರ್ಯವು ಸುತ್ತುವರಿದ ಹೃದಯದ ಚೇಂಬರ್ ಗಾತ್ರ ಮತ್ತು ಚಲನೆಗೆ ಹತ್ತಿರದಿಂದ ಸಂಪರ್ಕ ಹೊಂದಿರುತ್ತದೆ, ಅಂದರೆ ಸಣ್ಣ ಬದಲಾವಣೆಯೂ ಕವಾಟ ಹೇಗೆ ಕೆಲಸ ಮಾಡುತ್ತದೆ ಎನ್ನುವುದರ ಮೇಲೆ ಪರಿಣಾಮ ಬೀರಬಲ್ಲದು. ಈ ಅಂಶಗಳು ಬಹಳ ಸಂಕೀರ್ಣ ಮತ್ತು ಚಿಕಿತ್ಸೆ ನೀಡಲು ಸವಾಲಿನದಾಗಿರುವುದು ಏಕೆ ಈ ಕ್ಷೇತ್ರದಲ್ಲಿ ನವೀಕರಿಸಿದ ಆದ್ಯತೆ ಮತ್ತು ಆವಿಷ್ಕಾರ ಮುಖ್ಯ ಎನ್ನುವುದನ್ನು ತೋರಿಸಿದೆ.

ಟ್ರೈಕ್ಲಿಪ್ ಗೆ ಸದೃಢವಾದ ಚಿಕಿತ್ಸಾ ವಿಜ್ಞಾನದ ಬೆಂಬಲವಿದೆ

ಯು.ಎಸ್.ನಲ್ಲಿ ಅನುಮೋದನೆಯ ಪ್ರಕ್ರಿಯೆಯ ಭಾಗವಾಗಿ ಯು.ಎಸ್. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಟ್ರೈಲುಮಿನೇಟ್ ಪಿವೋಟಲ್ ಟ್ರಯಲ್ ಫಲಿತಾಂಶಗಳನ್ನು ಪರಿಶೀಲಿ ಸಿದ್ದು ಇದು ಟಿ.ಆರ್.ನಿಂದ ಬಳಲುತ್ತಿರುವ ಮಧ್ಯಮ ಹಂತದ ಅಥವಾ ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಹೆಚ್ಚಿನ ತೊಂದರೆ ಹೊಂದಿದ್ದ ಜನರಲ್ಲಿ ಟ್ರೈಕ್ಲಿಪ್ ಸಿಸ್ಟಂನ ಸುರಕ್ಷತೆ ಮತ್ತು ಪರಿಣಾಮಕಾರಿತ್ವಕ್ಕೆ ವಿಶ್ವದ ಮೊದಲ ಯಾದೃಚ್ಛಿಕ, ನಿಯಂತ್ರಿತ ಕ್ಲಿನಿಕಲ್ ಅಧ್ಯಯನವಾಗಿದ್ದು ವೈದ್ಯಕೀಯ ಚಿಕಿತ್ಸೆಯೊಂದಿಗೆ ಹೋಲಿಕೆ ಮಾಡಲಾಗಿದೆ. ಈ ಫಲಿತಾಂಶಗಳಲ್ಲಿ ಟ್ರೈಕ್ಲಿಪ್ ಸಿಸ್ಟಂ ಪಡೆದ ಸುಮಾರು ಶೇ.90ರಷ್ಟು ರೋಗಿಗಳು ಅವರ ಟಿ.ಆರ್. ಗ್ರೇಡ್ ನಲ್ಲಿ ಸುಧಾರಣೆ ಅನುಭವ ಪಡೆದಿದ್ದು ಅದು ಗಂಭೀರ ಅಥವಾ ಹೆಚ್ಚಿನದಿಂದ ಸಾಧಾರಣ ಅಥವಾ ಕಡಿಮೆಯಾಗಿರುವುದನ್ನು 30 ದಿನಗಳಲ್ಲಿ ಕಂಡು ಕೊಂಡಿದ್ದು ಈ ಕಡಿತವು ಒಂದು ವರ್ಷದವರೆಗೆ ಉಳಿದಿದೆ. ಈ ಟ್ರಯಲ್ ನಲ್ಲಿ ಅತ್ಯಂತ ಸುರಕ್ಷಿತ ಸುರಕ್ಷತೆಯ ಪ್ರೊಫೈಲ್ ನಿರೂಪಿಸಿದ್ದು ಶೇ.98ರಷ್ಟು ರೋಗಿಗಳು 30 ದಿನಗಳ ಕಾಲ ಯಾವುದೇ ಪ್ರಮುಖ ದುಷ್ಪರಿಣಾಮಗಳಿಂದ ಮುಕ್ತವಾಗಿದ್ದಾರೆ ಮತ್ತು ಜೀವನದ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡಿದ್ದಾರೆ. ಟ್ರೈಲುಮಿನೇಟ್ ಪಿವೋಟಲ್ ಅಧ್ಯಯನದ ಎರಡು ವರ್ಷದ ಫಲಿತಾಂಶಗಳು ಅಬ್ಬಾಟ್ಟ್ ಟ್ರೈಕ್ಲಿಪ್ ಸಿಸ್ಟಂ ಹೃದಯದ ವೈಫಲ್ಯದ ಆಸ್ಪತ್ರೆ ಸೇರುವಿಕೆಯನ್ನು ಶೇ.28ರಷ್ಟು ಕಡಿಮೆ ಮಾಡಿದೆ ಮತ್ತು ಟ್ರೈಕುಸ್ಪಿಡ್ ರಿಗರ್ಗಿಟೇಷ್ ಮತ್ತು ಜೀವನದ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಗಳನ್ನು ಕಂಡಿರುವುದನ್ನು ತೋರಿಸಿದೆ.