Health Tips: ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡ್ತಿದ್ದೀರಾ? ಈ ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರ!
Skipping Breakfast: ನೀವು ಸೇವಿಸುವ ಆಹಾರ ನಿಮ್ಮ ದೈಹಿಕ ಆರೋಗ್ಯ ಮಾತ್ರವಲ್ಲದೆ ಮನಸ್ಥಿತಿ ಮೇಲೂ ಪರಿಣಾಮ ಬೀರುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಲಿದ್ದು, ಒತ್ತಡಕ್ಕೂ ಕಾರಣವಾಗುತ್ತದೆ. ನಮ್ಮ ಮೆದುಳು ದಿನಕ್ಕೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಕೇವಲ ಒಂದು ಗ್ಲಾಸ್ ಟಿ ಅಥವಾ ಬಿಸ್ಕೆಟ್ ನಮ್ಮ ಮನಸ್ಥಿತಿಯನ್ನು ಕುಗ್ಗಿಸಬಹುದು.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಮೇ 4: ಇತ್ತೀಚೆಗೆ ಹೆಚ್ಚಿನವರು ಕೆಲಸದ ಒತ್ತಡ, ತೂಕ ಇಳಿಕೆ ಹೀಗೆ ನಾನಾ ಕಾರಣದಿಂದ ಬೆಳಗಿನ ಉಪಹಾರವನ್ನು ತ್ಯಜಿಸುತ್ತಾರೆ (Skipping Breakfast). ಆದರೆ ಈ ಒಂದು ಅಭ್ಯಾಸವು ದೀರ್ಘಕಾಲದ ಸಮಸ್ಯೆಗೆ ಕಾರಣವಾಗಬಹುದು. ಅಷ್ಟೇ ಅಲ್ಲದೆ ನಿಮ್ಮ ಚಯಾಪಚಯ, ಮನಸ್ಥಿತಿ ಮತ್ತು ದಿನವಿಡೀಯ ಚಟುವಟಿಕೆ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಸಲಹೆ ನೀಡಿದ್ದಾರೆ. ಹಾಗಾದರೆ ಬೆಳಗಿನ ಉಪಹಾರ ಸ್ಕಿಪ್ ಮಾಡಿದರೆ ಏನು ಸಮಸ್ಯೆಯಾಗಬಹುದು?
ನೀವು ಸೇವಿಸುವ ಆಹಾರ ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ಮನಸ್ಥಿತಿ ಮೇಲೂ ಪರಿಣಾಮ ಬೀರುತ್ತದೆ. ಆದರೆ ಬೆಳಗಿನ ಆಹಾರ ತಪ್ಪಿಸುವ ಅಭ್ಯಾಸ ಕೆಲಸ, ಮೂಡ್ ಮೇಲೆ ಪರಿಣಾಮ ಬೀರಿ ಒತ್ತಡಕ್ಕೂ ಕಾರಣವಾಗುತ್ತದೆ. ನಮ್ಮ ಮೆದುಳು ದಿನಕ್ಕೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ನಾವು ಸೇವಿಸುವ ಆಹಾರವು ಇದರ ಮೇಲೆ ಪ್ರಭಾವ ಬೀರುತ್ತದೆ. ಕೇವಲ ಒಂದು ಗ್ಲಾಸ್ ಟಿ ಅಥವಾ ಬಿಸ್ಕೆಟ್ ನಿಮ್ಮ ಮನಸ್ಥಿತಿಯನ್ನು ಕುಗ್ಗಿಸಬಹುದು. ಹಾಗಾಗಿ ಬೆಳಗ್ಗೆ ಸರಿಯಾದ ಪ್ರಮಾಣದ ಉಪಹಾರ ಸೇವಿಸುವುದು ಮುಖ್ಯ.
ಏನು ಪರಿಣಾಮ ಬೀರಬಹುದು?
ಏಕಾಗ್ರತೆ ಕೊರತೆ: ಬೆಳಗ್ಗಿನ ಉಪಾಹಾರವನ್ನು ಬಿಟ್ಟುಬಿಡುವುದು ದೇಹ ಮತ್ತು ಮನಸ್ಸು ಎರಡನ್ನೂ ದುರ್ಬಲಗೊಳಿಸುತ್ತದೆ. ಮೆದುಳಿಗೆ ಸರಿಯಾದ ಗ್ಲುಕೋಶ್ ಅಂಶ ಸಿಗದೇ ಇದ್ದಾಗ ಸ್ಮರಣಶಕ್ತಿಯ ಸಮಸ್ಯೆ ಕಾಣಿಸಿಕೊಂಡು ಏಕಾಗ್ರತೆ ಕುಂಠಿತಗೊಳ್ಳಬಹುದು.
ಒಂದೇ ಕಡೆ ಕೂತಿರುತ್ತೀರಾ? ಈ ಸಮಸ್ಯೆಗಳ ಬಗ್ಗೆ ನಿಗಾ ಇರಲಿ!
ನಿಮ್ಮ ಶಕ್ತಿ ಇಳಿಕೆಯಾಗಬಹುದು: ಮೆದುಳಿಗೆ ಸರಿಯಾದ ಗ್ರಹಿಸುವಿಕೆ ಇಲ್ಲದಾಗ ಯೋಚನ ಶಕ್ತಿ ಕುಂಠಿತಗೊಂಡು, ಶೀಘ್ರವಾಗಿ ಸುಸ್ತು ಆವರಿಸಬಹುದು.
ಕೋಪ, ಒತ್ತಡ ಹೆಚ್ಚಾಗಬಹುದು: ಹಸಿವಿನಿಂದಾಗಿ ದೇಹದಲ್ಲಿ ಒತ್ತಡದ ಹಾರ್ಮೋನ್‌ಗಳು ಹೆಚ್ಚಾಗಿ ಇದರಿಂದ ಸಣ್ಣ ವಿಷಯಗಳಿಗೂ ಅತಿಯಾದ ಕೋಪ ಅಥವಾ ಕಿರಿಕಿರಿ ಉಂಟುಮಾಡಬಹುದು.
ನಿಧಾನ ಚಯಾಪಚಯ ಕ್ರಿಯೆ: ಬೆಳಗಿನ ಆಹಾರದ ಪ್ರಭಾವದಿಂದ ನಿಮ್ಮ ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ. ಇದು ದಿನವಿಡೀ ಆ್ಯಕ್ಟೀವ್ ಆಗಿರುವುದನ್ನು ಕುಂಠಿತಗೊಳಿಸಬಹುದು.
ಆಯಾಸ: ನಿಮ್ಮ ಮೆದುಳು ಗ್ಲೂಕೋಸ್ ಮಟ್ಟದ ಸುಧಾರಣೆ ಊಟ, ಉಪಹಾರದ ಮೇಲೆ ಅವಲಂಬಿಸಿದೆ. ಇದು ನೀಡದೆ ಇದ್ದಲ್ಲಿ ದೈಹಿಕವಾಗಿ ಆಲಸ್ಯ ಮತ್ತು ನಿಶ್ಯಕ್ತಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಇಡೀ ದಿನ ಲವಲವಿಕೆಯಿಂದ ಇರಲು ಸಮತೋಲಿತ ಆಹಾರ ಆಯ್ಕೆ ಮಾಡಿ.