ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಖಾಲಿ ಹೊಟ್ಟೆಯಲ್ಲಿ ಮೂಲಂಗಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

ಮೂಲಂಗಿ ಒಂದು ಸೂಪರ್‌ ಫುಡ್ ಆಗಿದ್ದು, ಇದರಲ್ಲಿ ಪೋಷಕಾಂಶಗಳು ಹೇರಳವಾಗಿದೆ. ದಿನಕ್ಕೊಂದು ಲೋಟ ತಾಜಾ ಮೂಲಂಗಿ ಜ್ಯೂಸ್ ಕುಡಿಯುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳು ಲಭಿಸಲಿದ್ದು, ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನ ನೀಡುತ್ತವೆ. ಜೀರ್ಣಾಂಗ ವ್ಯವಸ್ಥೆ, ತ್ವಚೆಯ ಆರೋಗ್ಯ, ಹೃದಯದ ಆರೋಗ್ಯಕ್ಕೂ ಒಳ್ಳೆಯದಾಗಿದ್ದು, ಈ ತರಕಾರಿಯ ರಸವನ್ನು ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮೂಲಂಗಿ ಜ್ಯೂಸ್

ಬೆಂಗಳೂರು: ಚಳಿಗಾಲ(Winter Season) ಪ್ರಾರಂಭ ಆಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಈ ಕಾಲಕ್ಕೆ ಸೂಕ್ತ ಎನಿಸುವ ತರಕಾರಿ ಸೊಪ್ಪುಗಳು ಮಾರುಕಟ್ಟೆಗೆ ಬರುತ್ತವೆ. ಅಂತಹ ತರಕಾರಿಗಳಲ್ಲಿ ಮೂಲಂಗಿ(Radish) ಕೂಡ ಒಂದಾಗಿದ್ದು, ಇದು ಶಾಖಾಹಾರಿಗಳಿಗೆ ಹೇಳಿ ಮಾಡಿಸಿದ ಆಹಾರವಾಗಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಬಿ ನಂತಹ ಮಿಟಮಿನ್‌ಗಳಿವೆ. ಹಾಗಾಗಿ ಪ್ರತಿದಿನ ಮೂಲಂಗಿಯ ಜ್ಯೂಸ್(Radish Juice) ಅನ್ನು ಸೇವಿಸುವುದರಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದರಿಂದ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಬಹುದು.

ಅಲ್ಲದೇ ಮೂಲಂಗಿ ಜ್ಯೂಸ್ ನಲ್ಲಿ ವಿಟಮಿನ್ ಸಿ ಮತ್ತು ಕೆ ಅಂಶ ಅಧಿಕವಾಗಿದ್ದು, ಇದು ಉತ್ಕರ್ಷಣ ನಿರೋಧಕವನ್ನು ನೀಡುತ್ತದೆ. ಹಾಗದ್ರೆ ಬನ್ನಿ ನಿಮ್ಮ ಸಂಪೂರ್ಣ ಆರೋಗ್ಯ ಸುರಕ್ಷತೆಗೆ ಬೇಕಾಗಿರುವ ಪೋಷಕಾಂಶವನ್ನು ನೀಡುವ ಮೂಲಂಗಿ ಜ್ಯೂಸ್ ಕುಡಿಯುವ ಅಭ್ಯಾಸವನ್ನು ಇಟ್ಟುಕೊಂಡರೆ ಅದರಿಂದಾಗುವ ಸಿಗವ ಆರೋಗ್ಯ ಪ್ರಯೋಹನಗಳೇನು ಎಂಬುದನ್ನು ತಿಳಿದುಕೊಳ್ಳೋಣಾ..

ಮೂಲಂಗಿ ಜ್ಯೂಸ್ ಸೇವನೆಯ ಆರೋಗ್ಯ ಪ್ರಯೋಜನಗಳು

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಮೂಲಂಗಿ ಜ್ಯೂಸ್ ನಲ್ಲಿ ಕಂಡುಬರುವ ವಿಟಮಿನ್ ಎ ಮತ್ತು ಸಿ ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತದೆ. ಇವೆರಡೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡಲು ಬೇಕಾಗುವ ಅಂಶಗಳು. ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಕ್ಯಾರೆಟ್ ಜ್ಯೂಸ್ ಕುಡಿಯುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಕ್ಯಾರೆಟ್ ಜ್ಯೂಸ್ ವಿಟಮಿನ್ ಬಿ6 ನ ಸಮೃದ್ಧ ಮೂಲವಾಗಿದೆ.

ಕ್ಯಾನ್ಸರ್ ವಿರೋಧಿ ಗುಣವಿದೆ: ಮೂಲಂಗಿಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವಿದೆ. ಕ್ಯಾನ್ಸರ್ ತಡೆಗಟ್ಟುವ ಕ್ಯಾರೊಟಿನಾಯ್ಡ್‌ ಎನ್ನುವ ಅಂಶ ಅಧಿಕ ಪ್ರಮಾಣದಲ್ಲಿದೆ, ಇವು ಕ್ಯಾನ್ಸರ್‌ ಸೆಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅಲ್ಲದೇ ಇದರಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಇದು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ.

ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣ: ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಿಸಲು ಮೂಲಂಗಿ ಜ್ಯೂಸ್ ಒಳ್ಳೆಯದು. ದೇಹಕ್ಕೆ ಸುಸ್ತು, ಆಯಾಸ, ಅಸ್ವಸ್ಥತೆಯ ಸಮಸ್ಯೆ ಉಂಟಾಗುತ್ತಿದ್ದರೆ ಮೂಲಂಗಿ ಜ್ಯೂಸ್ ಕುಡಿಯಿರಿ. ಇದು ನಿಮಗೆ ಶಕ್ತಿಯನ್ನು ನೀಡುತ್ತದೆ. ಜತೆಗೆ ದೇಹದ ಒತ್ತಡ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

ಚರ್ಮದ ಆರೋಗ್ಯಕ್ಕೆ ಒಳ್ಳೆಯದು: ಮೂಲಂಗಿ ಜ್ಯೂಸ್ ವಿಟಮಿನ್ ಸಿ ಅಂಶವನ್ನು ಒದಗಿಸುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ನಿಮ್ಮ ಚರ್ಮವನ್ನು ಹಾನಿಗೊಳಗಾಗದಂತೆ ರಕ್ಷಿಸುತ್ತದೆ. ಜೊತೆಗೆ ಈ ಜ್ಯೂಸ್ ಕುಡಿಯುವುದರಿಂದ ಹೊಳೆಯುವ ಚರ್ಮ ನಿಮ್ಮದಾಗಲಿದ್ದು, ಮೂಲಂಗಿ ಟಾಕ್ಸಿನ್‌ಗಳನ್ನು ಕಡಿಮೆ ಮಾಡುತ್ತದೆ ಮತ್ತು ಜೀವಕೋಶಗಳು ಸಾಯುವುದನ್ನು ತಡೆಯುತ್ತದೆ. ಇದರಿಂದಾಗಿ ಚರ್ಮವು ಆರೋಗ್ಯಕರವಾಗಿ ಕಾಣುತ್ತದೆ.

ಯಕೃತ್ತಿಗೆ ಪ್ರಯೋಜನಕಾರಿ: ಮೂಲಂಗಿ ಅಲ್ಲಿರುವ ಜ್ಯೂಸ್‌ನಲ್ಲಿರುವ ಕ್ಯಾರೊಟಿನಾಯ್ಡ್‌ಗಳು ಯಕೃತ್ತಿನ ಆರೋಗ್ಯವನ್ನು ಕಾಪಾಡಲಿದ್ದು, ಇದು ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಪಿತ್ತಜನಕಾಂಗದ ಕಾಯಿಲೆಗಳಿಂದ ಯಕೃತ್ತನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಹೇರಳ ಪೌಷ್ಟಿಕಾಂಶಗಳಿವೆ: ಮೂಲಂಗಿಗಳು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಅವು ವಿಟಮಿನ್ ಸಿ, ಫೋಲೇಟ್, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಬಿ 6 ನಂತಹ ಪೋಷಕಾಂಶಗಳನ್ನು ಹೊಂದಿರುತ್ತವೆ. ಫೈಬರ್, ಆ್ಯಂಟಿ ಆಕ್ಸಿಡೆಂಟ್ಸ್ ಮತ್ತು ಗ್ಲುಕೋಸಿನೋಲೇಟ್‌ಗಳ ಅಂಶವನ್ನು ಹೊಂದಿರುವ ಮೂಲಂಗಿ ಆರೋಗ್ಯವನ್ನು ಉತ್ತಮವಾಗಿಸುತ್ತದೆ.