ಬೆಂಗಳೂರು: ಪ್ರತಿಷ್ಠಿತ ಅಪೋಲೋ ಆಸ್ಪತ್ರೆಯು ಭಾರತ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ರೋಗಿಗಳನ್ನು ತುರ್ತಾಗಿ ಸ್ಥಳಾಂತರಿಸಲು ಹೊಸ ‘ರೋಗಿಗಳ ವರ್ಗಾವಣೆ ಯೋಜನೆ’ ಅನ್ನು ಆರಂಭಿಸುತ್ತಿರುವುದಾಗಿ ಘೋಷಿಸಿದೆ.
ಈ ಯೋಜನೆಯಡಿ, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಸಕಾಲದಲ್ಲಿ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ಸಿಗುವಂತೆ ಮಾಡಲು ಏರ್ ಆಂಬ್ಯುಲೆನ್ಸ್ ಸೇವೆಗಳನ್ನು ಈಗ ಮತ್ತಷ್ಟು ಬಲಪಡಿಸಲಾಗಿದೆ. ಅಪೋಲೋ ಆಸ್ಪತ್ರೆಯು ಈ ನಿಟ್ಟಿನಲ್ಲಿ ಕಳೆದ ಕೆಲವು ತಿಂಗಳುಗಳಿಂದ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಏರ್ ಆಂಬ್ಯುಲೆನ್ಸ್ ಸೇವಾ ಪೂರೈಕೆದಾರರೊಂದಿಗೆ ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡಿದೆ ಮತ್ತು ಎಂಓಯುಗಳಿಗೆ ಸಹಿ ಹಾಕಿದೆ.
ಅಪೋಲೋದ '1066 ಎಮರ್ಜೆನ್ಸಿ ರೆಸ್ಪಾನ್ಸ್ ನೆಟ್ ವರ್ಕ್' ಮೂಲಕ ಈ ಸೇವೆಯನ್ನು ಒದಗಿಸಲಾಗುತ್ತಿದ್ದು, ಈ ಸೇವೆಯು ರೋಗಿಗಳನ್ನು ವೇಗವಾಗಿ ಮತ್ತು ವ್ಯವಸ್ಥಿತವಾಗಿ ಅತ್ಯಾಧುನಿಕ ಚಿಕಿತ್ಸೆ ದೊರೆಯುವ ಆಸ್ಪತ್ರೆಗೆ ತಲುಪಿಸಲು ನೆರವಾಗಲಿದೆ. ಅತ್ಯುತ್ತಮ ವೈದ್ಯಕೀಯ ವೈದ್ಯಕೀಯ ಸೇವೆ ಲಭ್ಯವಿಲ್ಲದ ಪ್ರದೇಶಗಳಿಂದ ರೋಗಿಗಳನ್ನು ಸ್ಥಳಾಂ ತರಿಸುವಾಗ ಎದುರಾಗುವ ಅವ್ಯವಸ್ಥೆ, ಹೆಚ್ಚಿನ ವೆಚ್ಚ ಮತ್ತು ಮಧ್ಯವರ್ತಿಗಳ ಅವಲಂಬನೆ ಮಾಡಬೇಕಾದ ಅಗತ್ಯ ಇತ್ಯಾದಿಗಳನ್ನು ತಪ್ಪಿಸಿ, ತುರ್ತು ಸೇವೆಗಳು ಸಾಮಾನ್ಯ ಜನರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು ಅಪೋಲೋ ಸಂಸ್ಥೆಯ ಈ ಯೋಜನೆಯ ಉದ್ದೇಶವಾಗಿದೆ.
ಇದನ್ನೂ ಓದಿ: Apollo Tyres: ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಸ್ಪಾನ್ಸರ್ ಘೋಷಿಸಿದ ಬಿಸಿಸಿಐ!
ಏರ್ ಆಂಬ್ಯುಲೆನ್ಸ್ ಸೇವೆಗಳ ಉನ್ನತೀಕರಣದ ಕುರಿತು ಮಾತನಾಡಿದ ಅಪೋಲೋ ಆಸ್ಪತ್ರೆಯ ಎಕ್ಸಿಕ್ಯೂಟಿವ್ ವೈಸ್ ಚೇರ್ ಪರ್ಸನ್ ಡಾ.ಪ್ರೀತಾ ರೆಡ್ಡಿ, "ತುರ್ತು ಪರಿಸ್ಥಿತಿ ಗಳಲ್ಲಿ, ಅತ್ಯುನ್ನತ ವೈದ್ಯಕೀಯ ಸೌಲಭ್ಯ ದೊರಕುವ ಸರಿಯಾದ ಆಸ್ಪತ್ರೆಯನ್ನು ಶೀಘ್ರ ವಾಗಿ ತಲುಪುವುದು ಜೀವ ಉಳಿಸುವಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಇದೀಗ ನಾವು ವಿಶೇಷ ಏರ್ ಆಂಬ್ಯುಲೆನ್ಸ್ ಸೇವೆ ಪೂರೈಸುವ ಸಂಸ್ಥೆಯ ಜೊತೆಗೆ ಸಹಭಾಗಿತ್ವ ಮಾಡಿಕೊಂಡಿದ್ದು, ಈ ಮೂಲಕ, ರೋಗಿಗಳು ಮತ್ತು ಅವರ ಕುಟುಂಬದವರು ವಿವಿಧ ನಗರಗಳು ಹಾಗೂ ಗಡಿಗಳನ್ನು ದಾಟಿ ಅತ್ಯಾಧುನಿಕ ಚಿಕಿತ್ಸೆಯನ್ನು ಹೆಚ್ಚು ಸಮನ್ವಯ ದೊಂದಿಗೆ, ಸುಲಭವಾಗಿ ಮತ್ತು ಪಾರದರ್ಶಕವಾಗಿ ಪಡೆಯಲು ದಾರಿ ಮಾಡಿಕೊಡು ತ್ತಿದ್ದೇವೆ. ನಮ್ಮ '1066' ಪ್ರತಿಕ್ರಿಯೆ ಜಾಲವನ್ನು ಇದರೊಂದಿಗೆ ಸಂಯೋಜಿಸುವುದರಿಂದ, ರೋಗಿಗಳಿಗೆ ಉತ್ತಮ ವೈದ್ಯಕೀಯ ಸಮನ್ವಯ ಸೇವೆ ಮತ್ತು ಆಸ್ಪತ್ರೆ ಮೊದಲೇ ಸಿದ್ಧವಾಗಿರುವ ಅನುಕೂಲತೆಯ ಲಾಭ ದೊರೆಯುತ್ತದೆ. ಈ ವ್ಯವಸ್ಥೆಯು ರೋಗಿಗಳಿಗೆ ಸಂಕಟದ ಸಂದರ್ಭದಲ್ಲಿ ಅತ್ಯಗತ್ಯವಾಗಿ ಬೇಕಾದ ಸಮಯದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯಲು ಸಹಕಾರಿಯಾಗುವ ಒಂದು ಸುಸಜ್ಜಿತ ಸಂಪರ್ಕ ಮಾರ್ಗವನ್ನು ಒದಗಿಸುತ್ತದೆ," ಎಂದು ತಿಳಿಸಿದರು.
ಈ ಯೋಜನೆಯ ಮೊದಲ ಹಂತದಲ್ಲಿ, ಅಪೋಲೋ ಆಸ್ಪತ್ರೆಯು ದೇಶೀಯ ಮತ್ತು ಅಂತರಾಷ್ಟ್ರೀಯ ರೋಗಿಗಳ ವರ್ಗಾವಣೆಗಾಗಿ ಹಲವಾರು ಏರ್ ಆಂಬ್ಯುಲೆನ್ಸ್ ಸೇವಾ ಪೂರೈಕೆದಾರರ ಜೊತೆಗೆ ಈ ಕುರಿತು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಲ್ಲಿ ಯುಎಇ ಮೂಲದ ಬ್ಲೂಡಾಟ್ ಚಾರ್ಟರ್ಸ್ ಮತ್ತು ಏರ್ ಆಂಬ್ಯುಲೆನ್ಸ್ ಸರ್ವಿಸಸ್, ಏರೋಮೆಡ್ ಇಂಟರ್ ನ್ಯಾಷನಲ್ ರೆಸ್ಕ್ಯೂ ಸರ್ವಿಸಸ್, ಜಂಕರ್ ಏವಿಯೇಷನ್, ಐ- ಕ್ಯಾಟ್ ಹೆಲ್ತ್ ಸೊಲ್ಯೂಷನ್ಸ್, ಏರ್ ರೆಸ್ಕ್ಯೂಯರ್ಸ್ ವರ್ಲ್ಡ್ ವೈಡ್, ವೇದಾಂತ್ ಏರ್ ರೆಸ್ಕ್ಯೂ, ಏರೋಕೇರ್ ಏರ್ ಆಂಬ್ಯುಲೆನ್ಸ್ ಸರ್ವಿಸ್, ಆಯುಸೇವಾ ಏರ್ ಅಂಡ್ ಟ್ರೈನ್ ಆಂಬ್ಯುಲೆನ್ಸ್, ಏರ್ ಮೆಡಿಕಲ್ 24ಘಿ7 ಮತ್ತು ಫ್ಲಾಪ್ಸ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ಸೇರಿವೆ. ಬಹಳ ತುರ್ತು ಪರಿಸ್ಥಿತಿಯಲ್ಲಿರುವ, ತಕ್ಷಣವೇ ಉನ್ನತ ಚಿಕಿತ್ಸೆ ಬಯಸುವ ರೋಗಿಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಉನ್ನತ ಮಟ್ಟದ ಮತ್ತು ಅತ್ಯುನ್ನತ ಹಂತದ ಚಿಕಿತ್ಸಾ ಕೇಂದ್ರಗಳಿಗೆ ಸ್ಥಳಾಂತರಿಸಲು ಈ ಸಹಭಾಗಿತ್ವವು ಸಹಕಾರಿ ಯಾಗಲಿದೆ.
ಈ ಕುರಿತು ಅಪೋಲೋ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಕ್ಲಿನಿಕಲ್ ಡೈರೆಕ್ಟರ್ ಡಾ.ಧವಪಳನಿ ಅಳಗಪ್ಪನ್ ಅವರು ಮಾತನಾಡಿ, "ಏರ್ ಆಂಬ್ಯುಲೆನ್ಸ್ ಗಳು ಲೈಫ್- ಸಪೋರ್ಟ್ ಸಿಸ್ಟಮ್ಸ್, ವೆಂಟಿಲೇಟರ್ ಗಳು, ಡಿಫಿಬ್ರಿಲೇಟರ್ ಗಳು ಮತ್ತು ಇತರ ಸುಧಾರಿತ ವೈದ್ಯಕೀಯ ಉಪಕರಣಗಳನ್ನು ಹೊಂದಿರುತ್ತವೆ. ಇದರಿಂದಾಗಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಪ್ರಯಾಣದ ಸಮಯದಲ್ಲಿಯೂ ತೀವ್ರ ನಿಗಾ ಘಟಕದ (ಐಸಿಯು) ಮಾದರಿ ಯಲ್ಲೇ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. ಇಡೀ ಪ್ರಯಾಣದ ಉದ್ದಕ್ಕೂ ತರಬೇತಿ ಪಡೆದ ವೈದ್ಯಕೀಯ ತಂಡ ಮತ್ತು ಪ್ರಮಾಣೀಕೃತ ವೈದ್ಯರು ರೋಗಿಗಳ ಆರೋಗ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಾರೆ ಹಾಗೂ ರೋಗಿಯ ಸ್ಥಿತಿಯನ್ನು ಸ್ಥಿರವಾಗಿ ಡಲು ಅಗತ್ಯ ಔಷಧಿ ಮತ್ತು ಚಿಕಿತ್ಸೆ ನೀಡುತ್ತಾರೆ. ತುರ್ತು ಚಿಕಿತ್ಸಾ ಘಟಕದಲ್ಲಿ ದೊರೆ ಯುವ ವೈದ್ಯಕೀಯ ಆರೈಕೆಯು ರೋಗಿಗಳ ವರ್ಗಾವಣೆಯ ಸಮಯದಲ್ಲೂ ದೊರೆಯು ವುದು ಬಹಳ ಮುಖ್ಯ, ಈ ಅನುಕೂಲತೆಯನ್ನು ನಾವು ಈಗ ಎಲ್ಲರಿಗೂ ಒದಗಿಸಲಿದ್ದೇವೆ," ಎಂದು ತಿಳಿಸಿದರು.
ಅಪೋಲೋ ಆಸ್ಪತ್ರೆಯ ಹೆಲ್ತ್ ಕೇರ್ ಲಾಜಿಸ್ಟಿಕ್ಸ್ ನ ಚೀಫ್ ಆಪರೇಟಿಂಗ್ ಆಫೀಸರ್ ಡಾ.ರಾಮಕೃಷ್ಣ ವಿಜಯ್ ವರ್ಮಾ ಈ ಕುರಿತು ಮಾತನಾಡಿ, "ಅಪೋಲೋದ ತುರ್ತು ಸಹಾಯವಾಣಿ 1066ಕ್ಕೆ ಕರೆ ಬಂದ ತಕ್ಷಣ, ನಮ್ಮ ತುರ್ತು ಪ್ರತಿಕ್ರಿಯೆ ತಂಡವು ರೋಗಿಯ ಸ್ಥಿತಿಯನ್ನು ಪರಿಶೀಲಿಸುತ್ತದೆ. ನಂತರ ಸೂಕ್ತವಾದ ಸಾರಿಗೆ ವ್ಯವಸ್ಥೆಯನ್ನು ನಿರ್ಧರಿಸಿ, ಪಾಲುದಾರ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಸ್ಥಳಾಂತರ ಪ್ರಕ್ರಿಯೆಯನ್ನು ಆರಂಭಿಸುತ್ತದೆ. ವಿಮಾನಯಾನದ ವ್ಯವಸ್ಥೆಗಳನ್ನು ಏರ್ ಆಂಬ್ಯುಲೆನ್ಸ್ ನಿರ್ವಾಹಕರು ನೋಡಿಕೊಳ್ಳುತ್ತಾರೆ. ಇತ್ತೀಚೆಗೆ ಈ ಸೇವೆಯನ್ನು ಬಳಸಿದ ರೋಗಿಗಳಿಗೆ ವೆಚ್ಚದಲ್ಲಿ ಗಣನೀಯ ಉಳಿತಾಯವಾಗಿದೆ. ಏಕೆಂದರೆ ದರಗಳನ್ನು ಮೊದಲೇ ನಿಗದಿಪಡಿಸ ಲಾಗಿರುತ್ತದೆ ಮತ್ತು