ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Health Tips: ಸೌತೆಕಾಯಿ ತಿನ್ನುವ ಮೊದಲು ತಜ್ಞರ ಈ ಸಲಹೆ ಗೊತ್ತಿರಲಿ!

ಸೌತೆಕಾಯಿಗಳಲ್ಲಿ 90 ಪ್ರತಿಶತಕ್ಕೂ ಹೆಚ್ಚು ನೀರಿನಂಶವಿರುತ್ತದೆ. ಅವುಗಳನ್ನು ಸಾಮಾನ್ಯವಾಗಿ ಸಲಾಡ್‌ ಗಳಲ್ಲಿ ಅಥವಾ ಸೈಡ್ ಡಿಶ್ ಹಸಿಯಾಗಿ ತಿನ್ನಲಾಗುತ್ತದೆ. ಆದರೆ ಇದರ ಪೌಷ್ಟಿಕಾಂಶದ ಪರಿಣಾಮವು ನಾವು ತಿನ್ನುವ ವಿಧಾನದಲ್ಲಿಯೂ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಇಂಟರ್ ನೆಟ್ ಚಿತ್ರ

ನವದೆಹಲಿ: ತರಕಾರಿಗಳಲ್ಲಿ ​ಸೌತೆಕಾಯಿಯನ್ನು (Cucumber For Health) ಆರೋಗ್ಯಕರ ಎಂದು ಪರಿಗಣಿಸಲಾಗುತ್ತದೆ. ದೇಹಕ್ಕೆ ನೀರಿನಂಶದ ಜೊತೆಗೆ ಹಲವು ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚಿನ ಬೇಡಿಕೆಯಿದ್ದು ಇದರಲ್ಲಿ ವಿಟಮಿನ್ ಮತ್ತು ಆಂಟಿಆಕ್ಸಿಡೆಂಟ್‌ಗಳಿದ್ದು, ಜೀರ್ಣಕ್ರಿಯೆಗೆ ಹಾಗೂ ದೇಹದ ಉಷ್ಣತೆ ಕಾಪಾಡಲು ಸಹಾಯ ಮಾಡುತ್ತದೆ. ಆದರೆ ತಜ್ಞರ ಪ್ರಕಾರ ಹಲವರು ತಪ್ಪಾಗಿ ಸೌತೆಕಾಯಿಯನ್ನು ತಿನ್ನುವ ವಿಧಾನವನ್ನು ರೂಢಿಸಿಕೊಂಡರೆ ಅದರ ಪ್ರಯೋಜನಗಳು ಕಡಿಮೆಯಾಗುತ್ತವೆ ಎಂದು ಸಲಹೆ ನೀಡಿದ್ದಾರೆ.

ಸೌತೆಕಾಯಿಗಳಲ್ಲಿ 90 ಪ್ರತಿಶತಕ್ಕೂ ಹೆಚ್ಚು ನೀರಿನಂಶವಿರುತ್ತದೆ. ಅವುಗಳನ್ನು ಸಾಮಾನ್ಯವಾಗಿ ಸಲಾಡ್‌ಗಳಲ್ಲಿ ಅಥವಾ ಸೈಡ್ ಡಿಶ್ ಹಸಿಯಾಗಿ ತಿನ್ನಲಾಗುತ್ತದೆ. ಆದರೆ ಇದರ ಪೌಷ್ಟಿಕಾಂಶದ ಪರಿಣಾಮವು ನಾವು ತಿನ್ನುವ ವಿಧಾನದಲ್ಲಿಯೂ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಸಿಪ್ಪೆಯನ್ನು ತೆಗೆಯುವುದು:

​ಹಲವರು ಮಾಡುವ ಮೊದಲ ತಪ್ಪು ಎಂದರೆ ಸೌತೆಕಾಯಿಯ  ಸಿಪ್ಪೆ ತೆಗೆದು ಸೇವಿಸುವುದು. ಅದರ ರುಚಿ ಅಥವಾ ನೈರ್ಮಲ್ಯದ ಕಾರಣಕ್ಕಾಗಿ ಸಿಪ್ಪೆ ತೆಗೆದು ಸೇವನೆ ಮಾಡಲಾಗುತ್ತದೆ. ಆದರೆ ಈ ಅಭ್ಯಾಸವು ಸೌತೆಕಾಯಿಯಲ್ಲಿರುವ ಪ್ರಮುಖ ಪೋಷಕಾಂಶಗಳು ಇಲ್ಲದಂತೆ ಮಾಡುತ್ತದೆ.

ಸಿಪ್ಪೆಯಲ್ಲಿ ಏನು ಗುಣಗಳಿದೆ?

ಇದು ಜೀರ್ಣಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ನಾರಿನಂಶವು ಕರುಳಿನ ಚಲನೆಯನ್ನು ನಿಯಂತ್ರಿಸಿ ಆರೋಗ್ಯವನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ತೂಕ ಇಳಿಕೆಗೆ ಸಹಕಾರಿಯಾಗಲಿದ್ದು ಹೊಟ್ಟೆ ತುಂಬಿದ ಭಾವನೆಯನ್ನು ನೀಡಲು ಸಹಾಯ ಮಾಡುತ್ತದೆ. ಸಿಪ್ಪೆಯನ್ನು ತೆಗೆದಾಗ ಈ ಆರೋಗ್ಯಕರ ಲಾಭ ಸಿಗುವುದಿಲ್ಲ.

Vishwavani Health: ಮಕ್ಕಳು ಚುರುಕಾಗಿರಬೇಕಾದರೆ ಗರ್ಭಿಣಿಯರು ಈ ಸೊಪ್ಪು ಸೇವಿಸಲೇಬೇಕು

ಆಂಟಿಆಕ್ಸಿಡೆಂಟ್‌ಗಳನ್ನು ಹೊಂದಿರುತ್ತವೆ:

ಸಿಪ್ಪೆಯಲ್ಲಿ ಆಂಟಿಆಕ್ಸಿಡೆಂಟ್ ಗಳು ಇದ್ದು ಆರೋಗ್ಯಕರ ಗುಣಲಕ್ಷಣವನ್ನು ಬೆಂಬಲಿಸುತ್ತವೆ. ಒತ್ತಡ, ವಯಸ್ಸಾಗುವಿಕೆ ಮತ್ತು ವಿವಿಧ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಅವುಗಳ ಸಿಪ್ಪೆಯು ಆರೋಗ್ಯಕ್ಕೆ ಉತ್ತಮ ಕೊಡುಗೆ ನೀಡುತ್ತದೆ.

​ಕೀಟನಾಶಕಗಳ ಭಯ ಮತ್ತು ಪರಿಹಾರ:

​ಸಿಪ್ಪೆ ತೆಗೆಯಲು ಪ್ರಮುಖ ಕಾರಣ ಕೀಟನಾಶಕಗಳ ಭಯ ಇರುತ್ತದೆ. ಇದಕ್ಕೆ ತಜ್ಞರು ನೀಡುವ ಸಲಹೆಯೆಂದರೆ, ಸಿಪ್ಪೆಯನ್ನು ತೆಗೆಯುವ ಬದಲು, ಹರಿಯುವ ನೀರಿನಲ್ಲಿ ಸೌತೆಕಾಯಿಯನ್ನು ಚೆನ್ನಾಗಿ ತೊಳೆಯಿರಿ. ಅಥವಾ ಸ್ವಲ್ಪ ಸಮಯ ನೀರಿನಲ್ಲಿ ನೆನೆಸಿಟ್ಟು ಬಳಸುವುದು ಉತ್ತಮ.