Vishwavani Health: ಮಕ್ಕಳು ಚುರುಕಾಗಿರಬೇಕಾದರೆ ಗರ್ಭಿಣಿಯರು ಈ ಸೊಪ್ಪು ಸೇವಿಸಲೇಬೇಕು
ಆರೋಗ್ಯವಾಗಿರಬೇಕಾದರೆ ದೇಹಕ್ಕೆ ಬೇಕಾದ ಎಲ್ಲಾ ಪೂರಕ ಗುಣಗಳು ಇರುವ ಏಕೈಕ ಆಹಾರ ಪದಾರ್ಥವೆಂದರೆ ಅದು ಸೊಪ್ಪುಗಳು. ಮಕ್ಕಳು ಚುರುಕಾಗಿರಬೇಕಾದರೆ ಎಲ್ಲಾ ಬಗ್ಗೆಯ ಸೊಪ್ಪುಗಳ ಸೇವನೆ ಬಹಳ ಮುಖ್ಯ. ದಿನಕ್ಕೊಂದು ಸೊಪ್ಪು ಆಹಾರದಲ್ಲಿದ್ದರೆ ದೇಹಾರೋಗ್ಯದೊಂದಿಗೆ ಮನಸ್ಸಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎನ್ನುತ್ತಾರೆ ಮೈಸೂರು ವಿವಿಯ ಡಾ. ಸುತ್ತೂರು ಮಾಲಿನಿ.
ಡಾ. ಸುತ್ತೂರು ಮಾಲಿನಿ -
ಬೆಂಗಳೂರು: ಸೊಪ್ಪಿನಲ್ಲಿ (leves) ಕೇವಲ ವಿಟಮಿನ್ ಗಳು ಮಾತ್ರವಲ್ಲ ಬಯೋ ಆಕ್ಟಿವ್ ಕಾಂಪೋಂಡ್ ಗಳಿವೆ. ಇವು ದೇಹಾರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಆರೋಗ್ಯವಾಗಿರಬೇಕಾದರೆ ದೇಹಕ್ಕೆ ಬೇಕಾದ ಎಲ್ಲಾ ಪೂರಕ ಗುಣಗಳು ಇರುವ ಏಕೈಕ ಆಹಾರ ಪದಾರ್ಥವೆಂದರೆ ಅದು ಸೊಪ್ಪುಗಳು ಎಂದು ಮೈಸೂರು ವಿಶ್ವವಿದ್ಯಾಲಯದ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸುತ್ತೂರು ಮಾಲಿನಿ (Dr. Suttur Malini) ಹೇಳಿದರು. ವಿಶ್ವವಾಣಿ ಹೆಲ್ತ್ (Vishwavani Health) ಯುಟ್ಯೂಬ್ ಚಾನಲ್‌ನಲ್ಲಿ ಕೇಶವ್ ಪ್ರಸಾದ್ ಅವರೊಂದಿಗಿನ ಸಂದರ್ಶನದಲ್ಲಿ ಅವರು ಮಾತನಾಡಿದರು.
ಚುರುಕಾದ ಮಕ್ಕಳನ್ನು ಪಡೆಯಲು ಗರ್ಭಿಣಿ ಇದ್ದಾಗಲೇ ಸೊಪ್ಪಗಳನ್ನು ಯಥೇಚ್ಛ ಪ್ರಮಾಣದಲ್ಲಿ ಸೇವಿಸಬೇಕು. ಒಂದೇ ಬಗೆಯದಲ್ಲ. ಎಲ್ಲಾ ರೀತಿಯ ಸೊಪ್ಪಗಳನ್ನು ತಿನ್ನಬೇಕು. ಸೊಪ್ಪುಗಳಲ್ಲಿ ವಿಟಮಿನ್ ಎ, ಸಿ, ಕೆ, ಬಿ, ಕ್ಯಾಲ್ಸಿಯಂ, ಮೆಗ್ನಿಶಿಯಂ, ಐರನ್, ಜಿಂಕ್ ಸೇರಿದಂತೆ ಹಲವಾರು ಅಂಶಗಳು ಇರುತ್ತವೆ. ಮೆದುಳಿನ ಆರೋಗ್ಯಕ್ಕೆ ಇದು ಅತ್ಯಂತ ಪೂರಕವಾಗಿದೆ ಎಂದರು.
Vishwavani Health: ಸದಾ ಏಕಾಂತ ಬಯಸುವ ಜೆನ್ ಝೀಗಳ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ಹೇಗೆ?
ಪಾಲಕ್ ಸೊಪ್ಪು ಮೆದುಳಿನ ಬೆಳವಣಿಗೆಗೆ ಅತ್ಯಂತ ಪೂರಕವಾಗಿದೆ. ಮಕ್ಕಳಿಗೆ ಇದನ್ನು ನೀಡಲೇಬೇಕು. ಇದರೊಂದಿಗೆ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ತೊಡೆದು ಹಾಕಲು ಸೊಪ್ಪುಗಳು ಸಹಾಯ ಮಾಡುತ್ತದೆ. ಇನ್ನು ನರಕೋಶಗಳ ಹೊರ ಪದರ ರಕ್ಷಣೆಗೆ ಸೊಪ್ಪುಗಳು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.
ಹೃದಯದ ಆರೋಗ್ಯ ಕಾಪಾಡಲು ಕೂಡ ಸೊಪ್ಪುಗಳು ಸಹಾಯ ಮಾಡುತ್ತದೆ. ಮುಖ್ಯವಾಗಿ ರಕ್ತನಾಳಗಳನ್ನು ಹಿಗ್ಗಿಸುವುದು, ರಕ್ತ ಹೆಪ್ಪು ಗಟ್ಟದಂತೆ ನೋಡಿಕೊಳ್ಳುವುದು, ರಕ್ತನಾಳದಲ್ಲಿ ತಡೆ ಆಗದಂತೆ ನೋಡಿಕೊಳ್ಳುವ ಜೀನ್ ಅನ್ನು ಬಿಡುಗಡೆ ಮಾಡುವ ಕಾರ್ಯವನ್ನು ಸೊಪ್ಪುಗಳು ಮಾಡುತ್ತವೆ ಎಂದು ತಿಳಿಸಿದರು.
ಸಂಪೂರ್ಣ ಆರೋಗ್ಯಕ್ಕೆ ದಿನಕ್ಕೊಂದು ಸೊಪ್ಪು ಪಲ್ಯ ಸೇವಿಸುವುದು ಒಳ್ಳೆಯದು ಎಂದ ಅವರು, ಸೊಪ್ಪುಗಳು ವಯಸ್ಸಾಗುವ ಪ್ರಕ್ರಿಯೆಯನ್ನು ತಡೆಯುತ್ತದೆ. ದೇಹದಲ್ಲಿ ಬಿಡುಗಡೆಯಾಗುವ ವಿಷವನ್ನು ನಿರ್ವಿಷವಾಗಿರುವ ಗುಣವನ್ನು ಸೊಪ್ಪುಗಳು ಹೊಂದಿವೆ ಎಂದರು.
ಇನ್ನು ಕಣ್ಣಿನ ಆರೋಗ್ಯಕ್ಕೆ ಸೊಪ್ಪುಗಳು ಬೇಕೇಬೇಕು. ಇದರೊಂದಿಗೆ ಮೂಳೆಗಳು ಗಟ್ಟಿಯಾಗಲು ಬೇಕಾಗುವ ವಿಟಮಿನ್ ಕೆ, ಡಿ ಕೂಡ ಸೊಪ್ಪಿನಲ್ಲಿದೆ. ಫೈಬರ್ ಅಂಶ ಸೊಪ್ಪಿನಲ್ಲಿ ಹೇರಳವಾಗಿರುವುದರಿಂದ ಇದು ಮಲಬದ್ಧತೆ ತೊಂದರೆಗಳು ನಿವಾರಣೆ ಮಾಡುತ್ತದೆ.ಕರುಳು, ಲಿವರ್ ಆರೋಗ್ಯಕ್ಕೂ ಸೊಪ್ಪು ಮುಖ್ಯವಾಗಿರುತ್ತದೆ ಎಂದು ಅವರು ತಿಳಿಸಿದರು.
ಇನ್ನು ಸೊಪ್ಪಿನಲ್ಲಿ ಕೆಂಪು ರಕ್ತ ಕಣಗಳಿಗೆ ಬೇಕಾಗುವ ಅಂಶಗಳು ಕೂಡ ಇವೆ ಎಂದ ಅವರು ದೇಹದಲ್ಲಿ ನಡೆಯುವ ರಾಸಾಯನಿಕ ಪ್ರಕ್ರಿಯೆಗಳು ಒಂದಕ್ಕೊಂದು ಪೂರಕವಾಗಿರುವುದರಿಂದ ಅವುಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸೊಪ್ಪುಗಳು ಬೇಕೇ ಬೇಕು ಎಂದು ತಿಳಿಸಿದರು.
Vishwavani Health: ಕುಡಿಯುವ ನೀರಿನಿಂದಲೇ ಶುಗರ್ ಬರುತ್ತಾ? ಏನಂತಾರೆ ತಜ್ಞರು ?
ತಿನ್ನುವ ಸೊಪ್ಪುಗಳು 101 ಬಗೆ ಇದೆ ಎನ್ನುತ್ತಾರೆ ಹಳ್ಳಿಗರು. ಹೀಗಾಗಿ ಈ ಬಗ್ಗೆ ತಿಳಿದುಕೊಂಡು ದಿನಕ್ಕೊಂದು ಸೊಪ್ಪು ಅಡುಗೆಯಲ್ಲಿ ಬಳಸಿದರೆ ದೀರ್ಘಕಾಲ ಆರೋಗ್ಯವಾಗಿ ಬಾಳಬಹುದು. ಒಳ್ಳೆಯ ಸೊಪ್ಪನ್ನು ಹುಡುಕಿ ಸೇವಿಸಬೇಕು. ಒಳ್ಳೆಯ ಸೊಪ್ಪಿನ ಆಯ್ಕೆಗೆ ಸಾಮಾನ್ಯ ಜ್ಞಾನ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.