ಡಾ.ಪ್ರಶಾಂತ್ ಶೆಟ್ಟಿ, BNYS, MSc & PhD (Yoga & Naturopathy) ಮುಖ್ಯ ವೈದ್ಯಕೀಯ ಅಧಿಕಾರಿ (CMO) ಹಾಗೂ ಪ್ರಾಂಶುಪಾಲರು, SDM College of Naturopathy & Yogic Sciences and Hospital, ಧರ್ಮಸ್ಥಳ
BNYS ಪದವಿಯ ಪ್ರಮುಖ ವೈಶಿಷ್ಟ್ಯವೇನು?
BNYS ಪದವಿಯು ಆಧುನಿಕ ವೈದ್ಯಕೀಯ ವಿಜ್ಞಾನದ ಜ್ಞಾನವನ್ನು ಭಾರತದ ಪಾರಂಪರಿಕ ಪ್ರಕೃತಿ ಚಿಕಿತ್ಸೆ, ಯೋಗ ಹಾಗೂ ಇತರ ಔಷಧರಹಿತ ಚಿಕಿತ್ಸಾ ವಿಧಾನಗಳೊಂದಿಗೆ ವೈಜ್ಞಾನಿಕವಾಗಿ ಸಮನ್ವಯಗೊಳಿಸುವ ಸಮಗ್ರ ಶಿಕ್ಷಣ ಮಾದರಿಯಾಗಿದೆ. “Best of the West” ಮತ್ತು “Best of the East” ಪರಿಕಲ್ಪನೆಗಳ ಅತ್ಯುತ್ತಮ ಅಂಶಗಳನ್ನು ಒಗ್ಗೂಡಿಸುವುದು ಇದರ ಪ್ರಮುಖ ವೈಶಿಷ್ಟ್ಯ.
MBBS ಅವಕಾಶವಿದ್ದರೂ ಕೆಲವು ವಿದ್ಯಾರ್ಥಿಗಳು BNYS ಅನ್ನು ಏಕೆ ಆಯ್ಕೆ ಮಾಡುತ್ತಿದ್ದಾರೆ?
ಪ್ರಕೃತಿ ಚಿಕಿತ್ಸೆ ಮತ್ತು ಯೋಗದಿಂದ ದೊರೆತ ವೈಯಕ್ತಿಕ ಅನುಭವ, ಆರೋಗ್ಯಕರ ಜೀವನಶೈಲಿಯ ಬಗ್ಗೆ ಹೆಚ್ಚುತ್ತಿರುವ ಅರಿವು ಹಾಗೂ Integrative Medicine ಕ್ಷೇತ್ರದ ಜಾಗತಿಕ ಬೆಳವಣಿಗೆ ವಿದ್ಯಾರ್ಥಿ ಗಳ ಆಸಕ್ತಿಯನ್ನು ಹೆಚ್ಚಿಸುತ್ತಿದೆ. ನಮ್ಮ ಕಾಲೇಜಿನಲ್ಲಿಯೇ ಸುಮಾರು ಶೇ. 10ರಷ್ಟು ವಿದ್ಯಾರ್ಥಿಗಳು MBBS ಸೀಟು ದೊರೆತಿದ್ದರೂ BNYS ಅನ್ನು ಆಯ್ಕೆ ಮಾಡಿಕೊಂಡಿರುವ ಉದಾಹರಣೆಗಳಿವೆ.
ಇದನ್ನೂ ಓದಿ: Vishwavani Health: ಸಿಹಿ ತಿಂದರೆ ಒತ್ತಡ ನಿವಾರಣೆಯಾಗುತ್ತೆ ಎನ್ನುವುದು ನಿಜವೆ? ಈ ಬಗ್ಗೆ ತಜ್ಞರು ಹೇಳುವುದೇನು?
“Prevention is better than cure” ಎಂಬ ತತ್ವ BNYSನಲ್ಲಿ ಹೇಗೆ ಪ್ರಮುಖವಾಗಿದೆ?
ರೋಗ ಉಂಟಾದ ನಂತರ ಚಿಕಿತ್ಸೆ ನೀಡುವುದರ ಜೊತೆಗೆ, ಆರೋಗ್ಯಕರ ಜೀವನಶೈಲಿ, ದೈಹಿಕ ಚಟುವಟಿಕೆ, ಮಾನಸಿಕ ಆರೋಗ್ಯ ಮತ್ತು ಒಟ್ಟಾರೆ ಕ್ಷೇಮವನ್ನು ಕಾಪಾಡಿಕೊಳ್ಳುವ ಮೂಲಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವುದಕ್ಕೂ BNYS ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. COVID-19 ಅವಧಿಯಲ್ಲಿ ಯೋಗ, ಜೀವನಶೈಲಿ ನಿರ್ವಹಣೆ ಮತ್ತು ಆರೋಗ್ಯ ಜಾಗೃತಿಯ ಕುರಿತು ನಡೆದ ಕಾರ್ಯಕ್ರಮಗಳು ಈ ಕ್ಷೇತ್ರದ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿವೆ.
BNYS ಪದವೀಧರರಿಗೆ ಉದ್ಯೋಗಾವಕಾಶಗಳು ಹೇಗಿವೆ?
ನಮ್ಮ ಕಾಲೇಜಿನಲ್ಲಿ ಶೇ. 100ರಷ್ಟು ವಿದ್ಯಾರ್ಥಿಗಳು ಕ್ಯಾಂಪಸ್ ಇಂಟರ್ವ್ಯೂಗಳ (Campus Interviews) ಮೂಲಕ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದಾರೆ. ಆಸ್ಪತ್ರೆ ಗಳು, Wellness Centres, Integrative Health Centres, Clinical Practice ಹಾಗೂ Research ಕ್ಷೇತ್ರಗಳಲ್ಲಿ ಅವಕಾಶಗಳು ಹೆಚ್ಚುತ್ತಿವೆ.
BNYS ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಯಾವ ಅವಕಾಶಗಳಿವೆ?
Fellowship Courses ಹಾಗೂ PhD ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ವಿಶೇಷ ಪರಿಣತಿ ಮತ್ತು ಸಂಶೋಧನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಹುದು. ಕ್ಲಿನಿಕಲ್ ಪ್ರಾಕ್ಟೀಸ್‌ನಿಂದ ಹಿಡಿದು ಸಂಶೋಧನೆಯವರೆಗೆ ಹಲವು ಕ್ಷೇತ್ರಗಳಲ್ಲಿ ಮುಂದು ವರಿಯಲು ಅವಕಾಶಗಳಿವೆ.
ಭಾರತ ಮತ್ತು ವಿದೇಶಗಳಲ್ಲಿ BNYSಗೆ ಬೇಡಿಕೆ ಹೇಗಿದೆ?
Wellness Centres, Integrative Health Centres, Lifestyle Management, Clinical Practice ಹಾಗೂ Research and Development ಕ್ಷೇತ್ರಗಳಲ್ಲಿ ದೇಶ-ವಿದೇಶಗಳಲ್ಲಿ ಅವಕಾಶಗಳು ಹೆಚ್ಚುತ್ತಿವೆ. Wellness Clinics, Spa & Wellness Management ಸೇರಿದಂತೆ ಹೊಸ ಕ್ಷೇತ್ರಗಳಲ್ಲಿಯೂ ವೃತ್ತಿ ಅವಕಾಶಗಳು ರೂಪುಗೊಳ್ಳುತ್ತಿವೆ.
BNYS ಶಿಕ್ಷಣದಲ್ಲಿ ಆಧುನಿಕ ಬದಲಾವಣೆಗಳು ಯಾವುವು?
Integrative Medicine ಕ್ಷೇತ್ರದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಪಠ್ಯಕ್ರಮದಲ್ಲಿ ಆಧುನಿಕ ವೈದ್ಯಕೀಯ ವಿಜ್ಞಾನ, ಔಷಧರಹಿತ ಚಿಕಿತ್ಸಾ ವಿಧಾನಗಳು ಮತ್ತು ಸಂಶೋಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಪಾರಂಪರಿಕ ಜ್ಞಾನವನ್ನು ವೈಜ್ಞಾನಿಕ ದೃಷ್ಟಿಕೋನದೊಂದಿಗೆ ಸಂಯೋಜಿಸಿ, ಭವಿಷ್ಯದ ಆರೋಗ್ಯ ಕ್ಷೇತ್ರಕ್ಕೆ ಅಗತ್ಯವಿರುವ ಜ್ಞಾನ, ಕೌಶಲ್ಯ ಮತ್ತು ಸಂಶೋಧನಾ ಸಾಮರ್ಥ್ಯ ಹೊಂದಿರುವ BNYS ವೈದ್ಯರನ್ನು ರೂಪಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ.