Health Tips: ನಾವು ತಿನ್ನುವ ಹಣ್ಣುಗಳಿಂದ ಕ್ಯಾನ್ಸರ್ ಅಪಾಯ ತಡೆಯಬಹುದೇ? ವೈದ್ಯರು ಹೇಳಿದ್ದೇನು?
ಕ್ಯಾನ್ಸರ್ ಎಂದಾಗ ಹೆಚ್ಚಿನವರು ಭಯಭೀತರಾಗುವುದೇ ಜಾಸ್ತಿ. ಇದರಲ್ಲಿ ಹಲವು ಪ್ರಕಾರಗಳಿದ್ದು ಅವು ಯಾವುದೇ ಲಕ್ಷಣಗಳನ್ನು ತೋರದೆ ಹಲವು ವಿಧಗಳಲ್ಲಿ ಮತ್ತು ಹಲವು ಕಾರಣದಿಂದ ಬರಬಹುದು. ಹಾಗಾಗಿ ಇದನ್ನು ಮೊದಲ ಹಂತದಲ್ಲೇ ಗುಣ ಪಡಿಸಲು ವೈದ್ಯಕೀಯ ನೆರವು ಪಡೆಯಬೇಕು. ಅದ ರಲ್ಲೂ ಇದನ್ನು ಹಣ್ಣು ಅಥವಾ ತರಕಾರಿಗಳ ಸೇವನೆಯಿಂದ ಗಣಪಡಿಸಬಹುದು ಎಂದು ಕೆಲವು ತಜ್ಞರು ಸಲಹೆ ನೀಡುತ್ತಾರೆ. ಇದು ನಿಜವೋ? ಈ ಕ್ಯಾನ್ಸರ್ ಮತ್ತು ಹಣ್ಣು ತರಕಾರಿಗಳ ಸೇವನೆಗೆ ಏನು ಸಂಬಂಧ ಇದೆ? ಹಣ್ಣುಗಳ ಸೇವನೆಯಿಂದ ಕ್ಯಾನ್ಸರ್ ಹೇಗೆ ಗುಣ ಪಡಿಸಬಹುದು ಎಂದು ಪ್ರೋ.ಸುತ್ತೂರು ಮಾಲಿನಿ ತಿಳಿಸಿಕೊಟ್ಟಿದ್ದಾರೆ.
ಹಣ್ಣಿನ ಸೇವನೆಯಿಂದ ಕ್ಯಾನ್ಸರ್ ತಡೆಯಬಹುದೇ? -
ಬೆಂಗಳೂರು, ಜ. 28: ಇತ್ತೀಚಿನ ವಿದ್ಯಮಾನಗಳಲ್ಲಿ ಕ್ಯಾನ್ಸರ್ ಸಮಸ್ಯೆ ಎನ್ನುವುದು ಸಾಮಾನ್ಯವಾಗಿ ಬಿಟ್ಟಿದೆ. ಕ್ಯಾನ್ಸರ್ (Cancer Treatment) ಎಂದಾಗ ಹೆಚ್ಚಿನವರು ಭಯಭೀತರಾಗುವುದೇ ಜಾಸ್ತಿ. ಇದರಲ್ಲಿ ಹಲವು ಪ್ರಕಾರಗಳಿದ್ದು ಅವು ಯಾವುದೇ ಲಕ್ಷಣಗಳನ್ನು ತೋರದೆ ಹಲವು ವಿಧಗಳಲ್ಲಿ ಮತ್ತು ಹಲವು ಕಾರಣದಿಂದ ಬರಬಹುದು. ಹಾಗಾಗಿ ಇದನ್ನು ಮೊದಲ ಹಂತದಲ್ಲೇ ಗುಣ ಪಡಿಸಲು ವೈದ್ಯಕೀಯ ನೆರವು ಪಡೆಯಬೇಕು. ಅದರಲ್ಲೂ ಇದನ್ನು ಹಣ್ಣು ಅಥವಾ ತರಕಾರಿಗಳ ಸೇವನೆಯಿಂದ ಗಣಪಡಿಸಬಹುದು ಎಂದು ಕೆಲವು ತಜ್ಞರು ಸಲಹೆ ನೀಡುತ್ತಾರೆ. ಇದು ನಿಜವೋ? ಈ ಕ್ಯಾನ್ಸರ್ ಮತ್ತು ಹಣ್ಣು ತರಕಾರಿಗಳ ಸೇವನೆಗೆ ಏನು ಸಂಬಂಧ ಇದೆ? ಹಣ್ಣುಗಳ ಸೇವನೆಯಿಂದ ಕ್ಯಾನ್ಸರ್ ಹೇಗೆ ಗುಣ ಪಡಿಸಬಹುದು ಎಂದು ಪ್ರೋ.ಸುತ್ತೂರು ಮಾಲಿನಿ ತಿಳಿಸಿಕೊಟ್ಟಿದ್ದಾರೆ.
ಇಂದು ಕ್ಯಾನ್ಸರ್ ಬರದಂತೆ ಮೊದಲೇ ನಿಗಾವಹಿಸಿದ್ರೂ ಅನೇಕರು ಕ್ಯಾನ್ಸರ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಇದನ್ನು ಜಗತ್ತನ್ನು ಕಾಡುವ ಮಾರಕ ರೋಗ ಎಂದು ಕೂಡ ಕರೆಯುತ್ತಾರೆ. ಮನುಷ್ಯನಿಗೆ ವಯಸ್ಸಾಗುತ್ತಿದ್ದಂತೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿದೆ. ಅದರಲ್ಲೂ ಇದಕ್ಕೆ ವೈದ್ಯಕೀಯ ಶಸ್ತ್ರಚಿಕಿತ್ಸೆ, ಕೀಮೋಥೆರಪಿ, ರೇಡಿಯೇಶನ್ ಇಮ್ಯುನೊಥೆರಪಿ ಅಂತಹ ವೈದ್ಯಕೀಯ ಚಿಕಿತ್ಸೆಗಳು ಇವೆ. ಆದರೆ ಈ ಚಿಕಿತ್ಸೆಗಳ ಬೆಲೆ ದುಬಾರಿಯಾಗಿಯಾಗಿದ್ದು ಜನ ಸಾಮಾನ್ಯರಿಗೆ ಕಷ್ಟವೆ ಆಗಿದೆ.ಹೀಗಾಗಿ ಮೊದಲೇ ಈ ಬಗ್ಗೆ ಎಚ್ಚೆತ್ತುಕೊಂಡರೆ ಬಾರದಂತೆ ತಡೆಯಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ವಿಡಿಯೋ ನೋಡಿ:
ಕ್ಯಾನ್ಸರ್ ಬಾರದೇ ಇರುವ ಹಾಗೆ ತಡೆಗಟ್ಟುವುದು ಹೇಗೆ?
ಕೆಲವೊಂದು ಹಣ್ಣು- ತರಕಾರಿಗಳ ಸೇವನೆಯಿಂದ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು. ಹಣ್ಣು ತರಕಾರಿಯಲ್ಲಿರುವ ಪ್ರೋಟಿನ್, ಪೋಷಕಾಂಶ ,ಆಂಟಿಆಕ್ಸಿಡೆಂಟ್‌ಗಳು ದೇಹಕ್ಕೆ ರಕ್ಷಣೆ ಯನ್ನು ನೀಡುತ್ತವೆ. ಇವುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಮತ್ತು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತವೆ.
ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ-ಕಾನ್ಸರ್ ಗುಣಲಕ್ಷಣಗಳನ್ನು ಹೊಂದಿರುವ ಹಣ್ಣು ತರಕಾರಿ ಸೇವನೆ ಮಾಡುವುದರಿಂದ ಕ್ಯಾನ್ಸರ್ ಬರದಂತೆ ತಡೆಯಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಉದಾ, ಕ್ಯಾರೆಟ್, ಬ್ರೊಕೊಲಿ, ಸೋರೆಕಾಯಿ, ಬೆರಿಹಣ್ಣುಗಳು , ಬ್ಲೂಬೆರ್ರಿಗಳು, ಸ್ಟ್ರಾಬೆರಿಗಳು ಇವುಗಳಲ್ಲಿ ನಿರೋಧಕಗಳು ಹೆಚ್ಚು ಇರುತ್ತವೆ. ಅದೇ ರೀತಿ ಅರಶಿನ, ದಾಲ್ಚಿನಿ,ಶುಂಠಿ ಇತ್ಯಾದಿ ದಿನ ನಿತ್ಯದ ಅಡುಗೆಯಲ್ಲಿ ಬಳಿಸುವುದರಿಂದ ದೇಹಕ್ಕೆ ರಕ್ಷಣೆ ಸಿಗುತ್ತದೆ ಎಂದಿದ್ದಾರೆ.
ಒಣದ್ರಾಕ್ಷಿ ಅಥವಾ ಪ್ರೆಶ್ ದ್ರಾಕ್ಷಿ ಗಳಲ್ಲಿ ಬರ್ಮೊಟಿನ್ ಎಂಬ ಜೈವಿಕ ಸಕ್ರಿಯ ಅಂಶವು ಕಂಡುಬರುತ್ತದೆ. ಇವುಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಅದೇ ರೀತಿ ದಾಳಿಂಬೆ ಸೇವನೆಯೂ ಕ್ಯಾನ್ಸರ್ ಜೀವ ಕೋಶ ನಾಶ ಪಡಿಸುವ ಗುಣ ಹೊಂದಿದ್ದು ಇದರ ಸೇವನೆಯು ಕ್ಯಾನ್ಸರ್ ಕಾರಕಗಳಿಂದ ಡಿಎನ್ಎಯನ್ನು ರಕ್ಷಿಸುತ್ತವೆ. ಆಯಾ ಋತುಗಳಲ್ಲಿ ಸಿಗುವ ಹಣ್ಣು-ತರಕಾರಿಗಳನ್ನು ತಿನ್ನುವುದು ಉತ್ತಮ. ಇದರಿಂದ ನಿಮ್ಮ ಆರೋಗ್ಯ ಹೆಚ್ಚುವುದಲ್ಲದೆ ಕರುಳಿನ ಕ್ಯಾನ್ಸರ್ ,ಹೊಟ್ಟೆ ಕ್ಯಾನ್ಸರ್ ಇತ್ಯಾದಿಯನ್ನು ತಡೆಗಟ್ಟಬಹುದು. ಹೀಗಾಗಿ ವಾರದಲ್ಲಿ ಎರಡು-ಮೂರು ಬಾರಿಯಾದರೂ, ಇಂತಹ ಹಣ್ಣುಗಳನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್ ಅಪಾಯ ತಡೆಯಬಹುದು.