ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಫೋರ್ಟಿಸ್ ಆಸ್ಪತ್ರೆ-ಅಜಿಲಸ್ ಡಯಾಗ್ನೋಸ್ಟಿಕ್ಸ್ ಸಹಯೋಗ: ಅಜಿಲಸ್- ಫೋರ್ಟಿಸ್ ಕಾರ್ಡಿಯೋ- ರೀನಲ್- ಮೆಟಬಾಲಿಕ್ ಕ್ಲಿನಿಕ್ ನೂತನ ಚಿಕಿತ್ಸಾ ಕೇಂದ್ರ ಲೋಕಾರ್ಪಣೆ

ಹೃದ್ರೋಗ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಮತ್ತು ಮಧುಮೇಹದ ನಡುವಿನ ನಿಕಟವಾದ ಪರಸ್ಪರ ಸಂಬಂಧವನ್ನು ಸಂಪೂರ್ಣವಾಗಿ ಮನಗಂಡು, ರೋಗಿಗಳಿಗೆ ಸಮನ್ವಯತೆಯುಳ್ಳ ಮೌಲ್ಯ ಮಾಪನ, ಆರೋಗ್ಯದ ಅಪಾಯಗಳ ಮುಂಚಿತ ಪತ್ತೆ ಹಾಗೂ ಸಮಗ್ರ, ಸಂಯೋಜಿತ ನಿರ್ವಹಣೆಯನ್ನು ಒದಗಿಸಲು ಈ ಕ್ಲಿನಿಕ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಬೆಂಗಳೂರು: ಬನ್ನೇರುಘಟ್ಟ ರಸ್ತೆಯಲ್ಲಿರುವ ಪ್ರಸಿದ್ಧ ಫೋರ್ಟಿಸ್ ಆಸ್ಪತ್ರೆಯು, ಅಜಿಲಸ್ ಡಯಾಗ್ನೋಸ್ಟಿಕ್ಸ್ ಸಹಯೋಗದೊಂದಿಗೆ, ಹೃದಯ, ಮೂತ್ರಪಿಂಡ ಮತ್ತು ಮೆಟಬಾಲಿಕ್ ಆರೋಗ್ಯದ ಸಮಗ್ರ ಆರೈಕೆಗಾಗಿ ಬಸವನಗುಡಿಯಲ್ಲಿ ಅಜಿಲಸ್- ಫೋರ್ಟಿಸ್ ಕ್ಲಿನಿಕ್ ಎಂಬ ಸುಸಜ್ಜಿತ ಸಂಯೋಜಿತ ಕ್ಲಿನಿಕ್ ಅನ್ನು ಅಧಿಕೃತವಾಗಿ ಆರಂಭಿಸಿದೆ.

ಈ ನೂತನ ಯೋಜನೆಯು ಇಂಟರ್ವೆನ್ಷನಲ್ ಕಾರ್ಡಿಯಾಲಜಿ, ಹಾರ್ಟ್ ಫೇಲ್ಯೂರ್, ನೆಫ್ರಾಲಜಿ ಹಾಗೂ ಎಂಡೋಕ್ರೈನಾಲಜಿ ತಜ್ಞರನ್ನು ಒಂದೇ ಏಕೀಕೃತ, ಬಹುಶಿಸ್ತೀಯ ಆರೈಕೆ ಮಾದರಿಯಡಿ ಯಲ್ಲಿ ಒಟ್ಟುಗೂಡಿಸುತ್ತದೆ.

ಹೃದ್ರೋಗ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಮತ್ತು ಮಧುಮೇಹದ ನಡುವಿನ ನಿಕಟವಾದ ಪರಸ್ಪರ ಸಂಬಂಧವನ್ನು ಸಂಪೂರ್ಣವಾಗಿ ಮನಗಂಡು, ರೋಗಿಗಳಿಗೆ ಸಮನ್ವಯತೆಯುಳ್ಳ ಮೌಲ್ಯಮಾಪನ, ಆರೋಗ್ಯದ ಅಪಾಯಗಳ ಮುಂಚಿತ ಪತ್ತೆ ಹಾಗೂ ಸಮಗ್ರ, ಸಂಯೋಜಿತ ನಿರ್ವಹಣೆಯನ್ನು ಒದಗಿಸಲು ಈ ಕ್ಲಿನಿಕ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ಒಂದೇ ಸೂರಿನಡಿ ಹಲವು ಪ್ರಮುಖ ವೈದ್ಯಕೀಯ ತಜ್ಞತೆಗಳನ್ನು ತರುವ ಮೂಲಕ, ಪರಸ್ಪರ ಸಂಬಂಧ ಹೊಂದಿರುವ ಕಾರ್ಡಿಯೋ- ರೀನಲ್- ಮೆಟಬಾಲಿಕ್ ಆರೋಗ್ಯ ಸಮಸ್ಯೆಗಳ ತಡೆಗಟ್ಟುವಿಕೆ, ಆರಂಭಿಕ ಪತ್ತೆ ಮತ್ತು ಪರಿಣಾಮಕಾರಿ ನಿರ್ವಹಣೆಗೆ ಸುಲಭ ಹಾಗೂ ತಡೆರಹಿತ ವಿಧಾನವನ್ನು ಒದಗಿಸುವುದು ಅಜಿಲಸ್- ಫೋರ್ಟಿಸ್ ಕ್ಲಿನಿಕ್‌ ನ ಪ್ರಮುಖ ಉದ್ದೇಶವಾಗಿದೆ.

ಇದನ್ನೂ ಓದಿ: Health Tips: ಆಯಾಸವೇ? ದೈಹಿಕ, ಮಾನಸಿಕ ಚೈತನ್ಯಕ್ಕೆ ಕಪ್ಪು ಎಳ್ಳು ಸೇವಿಸಿ

ಹೃದಯ, ಮೂತ್ರಪಿಂಡ ಮತ್ತು ಮೆಟಬಾಲಿಕ್ ಸಮಸ್ಯೆಗಳ ನಡುವಿನ ಪರಸ್ಪರ ಪ್ರಭಾವವು ಇತ್ತೀಚಿನ ದಿನಗಳಲ್ಲಿ ಪ್ರಮುಖ ಸಾರ್ವಜನಿಕ ಆರೋಗ್ಯ ಸವಾಲಾಗಿ ಹೊರಹೊಮ್ಮುತ್ತಿರುವ ಸಂದರ್ಭದಲ್ಲೇ ಈ ಕ್ಲಿನಿಕ್ ಆರಂಭವಾಗಿದೆ. ಮಧುಮೇಹ, ಮೂತ್ರಪಿಂಡ ಕಾಯಿಲೆ ಮತ್ತು ಹೃದ್ರೋಗ ಪರಿಸ್ಥಿತಿಗಳು ಪರಸ್ಪರ ನಿಕಟ ಸಂಬಂಧ ಹೊಂದಿದ್ದು, ಒಂದು ಕಾಯಿಲೆಯು ಮತ್ತೊಂದು ಕಾಯಿಲೆಯ ಅಪಾಯ ಅಥವಾ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ತನ್ನ ಸಮಗ್ರ ಆರೈಕೆ ಮಾದರಿಯ ಮೂಲಕ, ಈ ಪರಸ್ಪರ ಸಂಬಂಧಿತ ಕಾಯಿಲೆಗಳ ಸರಣಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ವಿವಿಧ ವೈದ್ಯಕೀಯ ವಿಭಾಗಗಳ ಪರಿಣಿತ ತಜ್ಞರನ್ನು ಒಗ್ಗೂಡಿಸಿ ಸಮನ್ವಯ ಮೌಲ್ಯಮಾಪನ, ಆರಂಭಿಕ ಚಿಕಿತ್ಸೆ ಮತ್ತು ಸಮಗ್ರ ರೋಗಿ ನಿರ್ವಹಣೆ ಯನ್ನು ಈ ಕ್ಲಿನಿಕ್ ಒದಗಿಸಲಿದೆ.

ಅಜಿಲಸ್- ಫೋರ್ಟಿಸ್‌ ನ ಬಹುಶಿಸ್ತೀಯ ತಜ್ಞರ ತಂಡದಲ್ಲಿ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಮತ್ತು ಹಾರ್ಟ್ ಫೇಲ್ಯೂರ್ ವಿಭಾಗದ ನಿರ್ದೇಶಕ ರಾದ ಡಾ. ರಾಜ್‌ಪಾಲ್ ಸಿಂಗ್ ಆರ್. ಎಲ್., ನೆಫ್ರಾಲಜಿ ವಿಭಾಗದ ಹಿರಿಯ ಕನ್ಸಲ್ಟೆಂಟ್ ಡಾ. ಆಶಿಶ್ ಪಾರೇಖ್ ಹಾಗೂ ಎಂಡೋಕ್ರೈನಾಲಜಿ ವಿಭಾಗದ ಕನ್ಸಲ್ಟೆಂಟ್ ಡಾ. ಅನುಷಾ ಎನ್. ಡಿ. ಸೇರಿದ್ದಾರೆ.

ಈ ಕ್ಲಿನಿಕ್ “ಮೂರು ತಜ್ಞತೆಗಳು. ಒಂದೇ ತಂಡ. ನಿಮ್ಮ ಆರೋಗ್ಯ. ನಮ್ಮ ಬದ್ಧತೆ” ಎಂಬ ಧ್ಯೇಯ ವಾಕ್ಯದೊಂದಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ. ಈ ಮೂರು ತಜ್ಞತೆಗಳ ನಿಕಟ ಸಹಯೋಗದೊಂದಿಗೆ, ರೋಗಿಗಳಿಗೆ ಹೃದಯ, ಮೂತ್ರಪಿಂಡ ಮತ್ತು ಮೆಟಬಾಲಿಕ್ ಆರೋಗ್ಯ ವನ್ನು ಒಳಗೊಂಡ ಸುಲಭ ಹಾಗೂ ಉತ್ಕೃಷ್ಟ ಚಿಕಿತ್ಸಾ ಮಾರ್ಗವನ್ನು ಕಲ್ಪಿಸುವುದು ಅಜಿಲಸ್- ಫೋರ್ಟಿಸ್‌ ನ ಮುಖ್ಯ ಗುರಿಯಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಮತ್ತು ಹಾರ್ಟ್ ಫೇಲ್ಯೂರ್ ವಿಭಾಗದ ನಿರ್ದೇಶಕರಾದ ಡಾ. ರಾಜ್‌ಪಾಲ್ ಸಿಂಗ್ ಆರ್.ಎಲ್. ಅವರು, "ಹೃದಯ, ಮೂತ್ರಪಿಂಡ ಮತ್ತು ಮೆಟಬಾಲಿಕ್ ಆರೋಗ್ಯಗಳು ಒಂದಕ್ಕೊಂದು ನಿಕಟ ಸಂಬಂಧ ಹೊಂದಿವೆ. ಮಧುಮೇಹ ಅಥವಾ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಹೃದಯ ಸಂಬಂಧಿ ತೊಂದರೆಗಳ ಗಂಭೀರ ಅಪಾಯವೂ ಅಧಿಕವಾಗಿರುತ್ತದೆ. ಕಾಲಾನಂತರದಲ್ಲಿ ಈ ಸಮಸ್ಯೆಗಳು ಪರಸ್ಪರ ಪ್ರಭಾವ ಬೀರಿ ರೋಗಿಯ ಆರೋಗ್ಯ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಬಹುದು. ಈ ಎಲ್ಲಾ ವೈದ್ಯಕೀಯ ತಜ್ಞತೆಗಳನ್ನು ಒಟ್ಟಿಗೆ ತರುವುದರಿಂದ, ನಾವು ಪ್ರತಿಯೊಬ್ಬ ರೋಗಿಯನ್ನು ಸಮಗ್ರ ದೃಷ್ಟಿಕೋನ ದಿಂದ ನೋಡಲು, ಪರಸ್ಪರ ಸಂಬಂಧಿತ ಅಪಾಯಗಳನ್ನು ಆರಂಭಿಕ ಹಂತದಲ್ಲೇ ನಿಖರವಾಗಿ ಗುರುತಿಸಲು ಮತ್ತು ಸೂಕ್ತ ಚಿಕಿತ್ಸೆ ಹಾಗೂ ದೀರ್ಘಕಾಲೀನ ಆರೈಕೆಗೆ ವೈಯಕ್ತಿಕ, ಸಮನ್ವಯತೆಯ ವಿಧಾನವನ್ನು ರೂಪಿಸಲು ನಮಗೆ ಸಾಧ್ಯವಾಗುತ್ತದೆ" ಎಂದರು.

ಅಜಿಲಸ್ ಡಯಾಗ್ನೋಸ್ಟಿಕ್ಸ್‌ ನ ದಕ್ಷಿಣ ವಿಭಾಗದ ಟೆಕ್ನಿಕಲ್ ಲೀಡ್ ಹಾಗೂ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಲ್ಯಾಬ್ ಕಾರ್ಯಾಚರಣೆಗಳ ಮುಖ್ಯಸ್ಥ ಡಾ.ಸುನೀತ್ ಕೌರ್ ಮಾತನಾಡಿ, "ಅಜಿಲಸ್ ಡಯಾಗ್ನೋಸ್ಟಿಕ್ಸ್ ಮತ್ತು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ನಡುವಿನ ಈ ಮಹತ್ವದ ಸಹಯೋಗವು ಸುಧಾರಿತ ರೋಗನಿರ್ಣಯ ಸಾಮರ್ಥ್ಯಗಳು ಹಾಗೂ ವಿಶೇಷ ಕ್ಲಿನಿಕಲ್ ಪರಿಣತಿಯನ್ನು ಒಗ್ಗೂಡಿಸಿ, ರೋಗಿಗಳಿಗೆ ಸೊಗಸಾದ ಮತ್ತು ಸಮನ್ವಯತೆಯ ಸಮಗ್ರ ಆರೈಕೆ ಕ್ರಮವನ್ನು ಸುಲಭವಾಗಿ ಒದಗಿಸುತ್ತದೆ. ಅಜಿಲಸ್- ಫೋರ್ಟಿಸ್ ಕ್ಲಿನಿಕ್ ಮೂಲಕ, ಸೂಕ್ತ ವೈದ್ಯಕೀಯ ತಜ್ಞರು ಮತ್ತು ಸಕಾಲಿಕ ರೋಗನಿರ್ಣಯ ಮೌಲ್ಯಮಾಪನವನ್ನು ಸುಲಭವಾಗಿ ಒದಗಿಸುವುದು ಹಾಗೂ ಸಂಯೋಜಿತ, ಬಹುಶಿಸ್ತೀಯ ವಿಧಾನದ ಮೂಲಕ ರೋಗಿಗಳು ಪರಿಪೂರ್ಣ ಆರೈಕೆ ಪಡೆದುಕೊಳ್ಳುವಂತೆ ಮಾಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ" ಎಂದು ಹೇಳಿದರು.

ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗಳ ವಿಪಿ ಮತ್ತು ಬಿಸಿನೆಸ್ ಹೆಡ್ ಡಾ.ಅನಂತ್ ರಾವ್ ಅವರು ಮಾತನಾಡಿ, "ಫೋರ್ಟಿಸ್ ಆಸ್ಪತ್ರೆಗಳ ಸಮೂಹದಲ್ಲಿ ನಾವು ರೋಗಿಗಳ ಬದಲಾಗುತ್ತಿರುವ ಆರೋಗ್ಯ ಅಗತ್ಯಗಳಿಗೆ ಸದಾ ಸ್ಪಂದಿಸುವ ವಿನೂತನ ಆರೋಗ್ಯ ಸೇವಾ ಮಾದರಿಗಳನ್ನು ನಿರಂತರ ವಾಗಿ ಅನ್ವೇಷಿಸುತ್ತಿದ್ದೇವೆ. ಹೃದ್ರೋಗ, ಮೂತ್ರಪಿಂಡ ಕಾಯಿಲೆ ಮತ್ತು ಮಧುಮೇಹಗಳು ಹಲವು ಬಾರಿ ಪರಸ್ಪರ ಒಂದಕ್ಕೊಂದು ಅಡ್ಡ ಹಾಯುತ್ತವೆ. ಇಂಹ ಗಂಭೀರ ಸಮಸ್ಯೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಲು ವಿವಿಧ ವೈದ್ಯಕೀಯ ವಿಭಾಗಗಳ ನಿಕಟ ಸಹಯೋಗ ಅತ್ಯಗತ್ಯವಾಗಿದೆ. ಅಜಿಲಸ್-ಫೋರ್ಟಿಸ್ ಕ್ಲಿನಿಕ್ ಈ ಎಲ್ಲಾ ಪರಿಣತಿಯನ್ನು ಒಂದು ಸಮನ್ವಯ ಮಾದರಿಯಲ್ಲಿ ತರುತ್ತಿದ್ದು, ರೋಗಿಗಳಲ್ಲಿ ಆರಂಭಿಕ ಹಂತದಲ್ಲೇ ಅಪಾಯಗಳನ್ನು ಗುರುತಿಸಲು, ಸಮಗ್ರ ನಿರ್ವಹಣೆ ಹಾಗೂ ಅತ್ಯುತ್ತಮ ನಿರಂತರ ಆರೈಕೆಯನ್ನು ಬೆಂಬಲಿಸುವ ಸ್ಪಷ್ಟ ಗುರಿ ಹೊಂದಿದೆ" ಎಂದು ತಿಳಿಸಿದರು.