ಬೆಂಗಳೂರು: ಬೇಸಗೆಯಲ್ಲಿ ಮಾತ್ರವಲ್ಲ ಚಳಿಗಾಲದಲ್ಲೂ(Winter) ತುಟಿ (Lips) ಒಣಗಿ ಬಿರುಕು ಬಿಟ್ಟಂತಾಗುತ್ತದೆ. ಇಷ್ಟಾದರೆ ತೊಂದರೆ ಇಲ್ಲ, ಕೆಲವೊಮ್ಮೆ ತುಟ್ಟಿಯ ಸಿಪ್ಪೆ ಸುಲಿದು ರಕ್ತ ಬರುತ್ತದೆ. ಹಾಗಾಗಿ ಚಳಿಗಾಲದಲ್ಲಿ ದೇಹದ ಆರೋಗ್ಯದ ಜತೆ ತ್ವಚೆಯ ಆರೋಗ್ಯವನ್ನು(Skin Care) ನೋಡಿಕೊಳ್ಳುವುದು ಬಹಳ ಮುಖ್ಯ. ಚಳಿಗಾಲದಲ್ಲಿ ಕಾಡುವ ಈ ತುಟಿ ಒಡೆಯುವ ಸಮಸ್ಯೆ ಕಡಿಮೆ ಮಾಡಲು ಮನೆಮದ್ದುಗಳನ್ನು(Home Remedies) ಬಳಸಬಹುದಾಗಿದೆ. ಮನೆಯಲ್ಲಿಯೇ ಅನೇಕ ರೀತಿಯ ನೈಸರ್ಗ ಪದಾರ್ಥಗಳನ್ನು ಬಳಸಿದರೆ ಚರ್ಮಕ್ಕೆ ಹಾನಿಯಾಗದು. ಅಲ್ಲದೆ ತುಟಿಯ ಚರ್ಮ ಸೂಕ್ಷ್ಮವಾಗಿರುವುದರಿಂದ ನೈಸರ್ಗಿಕ ಪದಾರ್ಥಗಳನ್ನೇ ಹೆಚ್ಚು ಬಳಸುವುದು ಒಳಿತು. ಚಳಿಗಾಲದಲ್ಲಿ ಸೌಂದರ್ಯದ ಆರೈಕೆ ಮಾಡಿಕೊಳ್ಳುವುದು ತುಸು ಕಷ್ಟದ ಕೆಲಸವೇ. ಅದರಲ್ಲೂ ಅಂದದ ತುಟಿಗಳನ್ನು ಕಾಪಿಟ್ಟುಕೊಳ್ಳಲು ದಿನನಿತ್ಯ ಆರೈಕೆಯ ಅಗತ್ಯವಿರುತ್ತದೆ. ಹಾಗಾದರೆ ಒಡೆದ ತುಟಿಗಳು ಸರಿಪಡಿಸಿಕೊಳ್ಳಲು ಏನು ಮಾಡಬಹುದು ಎನ್ನುವ ಟಿಪ್ಸ್ ಇಲ್ಲಿದೆ.
ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯು ಆಳವಾದ ಪೋಷಣೆಯ ಗುಣಗಳನ್ನು ಹೊಂದಿದೆ. ಇದು ಒಡೆದ ತುಟಿಗಳನ್ನು ತ್ವರಿತವಾಗಿ ಗುಣಪಡಿಸಲು ಸಹಾಯ ಮಾಡುತ್ತದೆ. ನೋವಿನಿಂದ ತಕ್ಷಣದ ಪರಿಹಾರ ಮತ್ತು ಹೊಸ ಅಂಗಾಂಶಗಳ ಬೆಳವಣಿಗೆಗೆ ತ್ವರಿತವಾಗಿ ಸಹಾಯ ಮಾಡುವ ಅತ್ಯುತ್ತಮ ಚಿಕಿತ್ಸೆ. ಒಡೆದ ತುಟಿಗಳನ್ನು ಗುಣಪಡಿಸಲು ಇದು ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಔಷಧ.
ಈ ಸುದ್ದಿಯನ್ನು ಓದಿ: Health Tips: ಬೆಳಗ್ಗೆ ಖಾಲಿ ಹೊಟ್ಟೆಗೆ ನೆನೆಹಾಕಿದ ಒಣ ದ್ರಾಕ್ಷಿ ತಿಂದರೆ, ಇಷ್ಟೆಲ್ಲಾ ಲಾಭಗಳು ಸಿಗುತ್ತವೆ ನೋಡಿ...!
ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆಯು ಅದರ ನೈಸರ್ಗಿಕ ಆರ್ಧ್ರಕ ಗುಣಲಕ್ಷಣಗಳಿಂದಾಗಿ ಅತ್ಯಂತ ಪ್ರಸಿದ್ಧ ತೈಲಗಳಲ್ಲಿ ಒಂದು. ಇದು ವರ್ಧಿತ ಪೌಷ್ಟಿಕ ಜಲಸಂಚಯನದೊಂದಿಗೆ ಜೀವಕೋಶಗಳ ಆಳವಾದ ಪೋಷಣೆಗೆ ಸಹಾಯ ಮಾಡುತ್ತದೆ. ಮೃದುವಾದ ಚರ್ಮಕ್ಕೆ ಇದು ಅವಶ್ಯಕ. ತುಟಿಗಳ ಮೇಲೆ ಇದನ್ನು ಬಳಸುವುದರಿಂದ ಹೆಚ್ಚಿನ ಹೊಳಪನ್ನು ನೀಡುತ್ತದೆ.
ಸೌತೆಕಾಯಿ
ಸೌತೆಕಾಯಿಯು ಅತ್ಯಧಿಕ ಪ್ರಮಾಣದ ನೀರಿನ ಅಂಶವನ್ನು ಹೊಂದಿರುವ ತಂಪಾದ ತರಕಾರಿ. ಇದು ನಿರ್ಜಲೀಕರಣವನ್ನು ನಿವಾರಿಸಲು ಪರಿಣಾಮಕಾರಿ ಎಂದು ಎಲ್ಲರಿಗೂ ಗೊತ್ತಿದೆ. ಬಿರುಕು ಬಿಟ್ಟ ತುಟಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಅದರ ಶುದ್ಧೀಕರಣ ಮತ್ತು ಆಳವಾದ ಜಲಪೂರಿತ ಗುಣಲಕ್ಷಣಗಳಿಗಾಗಿ ಇದನ್ನು ಫೇಸ್ ಮಾಸ್ಕ್ ಮತ್ತು ಇತರ ಸೌಂದರ್ಯವರ್ಧಕಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಜೇನುತುಪ್ಪ
ಅನೇಕ ಆರೋಗ್ಯ, ಸೌಂದರ್ಯ ಗುಣಗಳನ್ನು ಹೊಂದಿರುವ ಜೇನುತುಪ್ಪ ತುಟಿಗಳ ಸೌಂದರ್ಯಕ್ಕೂ ಒಳ್ಳೆಯದು. ತುಟಿಗಳ ಒಣಗಿ ಚರ್ಮ ಸುಲಿದಂತೆ ಆದಾಗ ಜೇನುತುಪ್ಪವನ್ನು ಬಳಸಿ. ಒಂದು ಚಮಚ ಜೇನುತುಪ್ಪಕ್ಕೆ ಅರ್ಧ ಚಮಚದಷ್ಟು ವ್ಯಾಸಲಿನ್‌ನ್ನು ಮಿಶ್ರಣ ಮಾಡಿ. ಎರಡನ್ನು ಚೆನ್ನಾಗಿ ಮಿಶ್ರಣ ಮಾಡಿ ತುಟಿಗೆ ಹಚ್ಚಿಕೊಳ್ಳಿ. 10ರಿಂದ 15 ನಿಮಷಗಳ ಕಾಲ ಹಾಗೆಯೇ ಬಿಟ್ಟು ನಂತರ ಅದನ್ನು ಹತ್ತಿ ಅಥವಾ ಕಾಟನ್ ಬಟ್ಟೆಯಿಂದ ಸ್ವಚ್ಛಗೊಳಿಸಿಕೊಳ್ಳಿ. ದಿನಕ್ಕೆ ಒಂದು ಬಾರಿ ಮಾತ್ರ ಈ ಮಿಶ್ರಣವನ್ನು ತುಟಿಗೆ ಹಚ್ಚಿಕೊಳ್ಳಿ.
ಕ್ಯಾರೆಟ್ ರಸ
ಮೊದಲು ಕ್ಯಾರಟ್ ರುಬ್ಬಿಕೊಂಡು ತೆಳುವಾದ ಹತ್ತಿ ಬಟ್ಟೆಯ ಸಹಾಯದಿಂದ ರಸವನ್ನು ಹಿಂಡಿ ತೆಗೆಯಿರಿ. ಆ ರಸವನ್ನು ತುಟಿಗೆ ಹಚ್ಚಿ. ಅರ್ಧ ಗಂಟೆಗಳ ಕಾಲ ಹಾಗೇ ಒಣಗಲು ಬಿಡಿ. ಇದನ್ನು ಎರಡು ದಿನಕ್ಕೊಮ್ಮೆ ಮಾಡಿ. ಕ್ಯಾರೆಟ್ ರಸದಲ್ಲಿ ವಿಟಮಿನ್ ಎ ಹಾಗೂ ಆ್ಯಂಟಿ ಆಕ್ಸಿಡೆಂಟ್ ಅಂಶ ಅಧಿಕವಿದೆ. ಇದು ಚರ್ಮವನ್ನು ಸ್ವಚ್ಛಗೊಳಿಸುವುದಲ್ಲದೇ ತುಟಿಯ ಚರ್ಮವನ್ನು ಗುಲಾಬಿ ರಂಗಿಗೆ ತಿರುಗುವಂತೆ ಮಾಡುತ್ತದೆ.