#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Winter Lipstick Awareness 2025: ಚಳಿಗಾಲದಲ್ಲಿ ನೀವು ಹಚ್ಚಬಾರದ ಲಿಪ್‌ಸ್ಟಿಕ್‌ಗಳಿವು!

Winter Lipstick Awareness 2025: ಚಳಿಗಾಲದಲ್ಲಿ ಒಂದಿಷ್ಟು ಬಗೆಯ ಲಿಪ್‌ಸ್ಟಿಕ್‌ ಹಚ್ಚಲೇಕೂಡದು. ಅವು ಯಾವುವು? ಯಾಕೆ? ಯಾವುದು ಸೂಕ್ತ? ಎಂಬುದರ ಬಗ್ಗೆ ಸೌಂದರ್ಯ ತಜ್ಞೆ ಮಾಲಾ ಸಿಂಪಲ್ ಆಗಿ ತಿಳಿಸಿದ್ದಾರೆ.

Winter Lipstick Awareness 2025: ಚಳಿಗಾಲದಲ್ಲಿ ನೀವು ಹಚ್ಚಬಾರದ ಲಿಪ್‌ಸ್ಟಿಕ್‌ಗಳಿವು!

ಚಿತ್ರಕೃಪೆ: ಪಿಕ್ಸೆಲ್

Profile Siddalinga Swamy Jan 28, 2025 7:36 PM

| ಶೀಲಾ ಸಿ. ಶೆಟ್ಟಿ, ಬೆಂಗಳೂರು

ಚಳಿಗಾಲದಲ್ಲಿ ನೀವು ಒಂದಿಷ್ಟು ಬಗೆಯ ಲಿಪ್‌ಸ್ಟಿಕ್‌ ಹಚ್ಚಬಾರದು! ಹೌದು, ಈ ಸೀಸನ್‌ನಲ್ಲಿ (Winter Lipstick Awareness 2025), ಎಲ್ಲಾ ಬಗೆಯ ಲಿಪ್‌ಸ್ಟಿಕ್‌ ಹಚ್ಚಲು ಸಾಧ್ಯವಿಲ್ಲ! ಹಚ್ಚಿದರೂ, ನಿಮ್ಮ ತುಟಿಯ ಆರೋಗ್ಯ ಹದಗೆಡಬಹುದು ಇಲ್ಲವೇ ತುಟಿ ಬಿರುಕು ಮೂಡಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ಸ್. ಹಾಗಾಗಿ, ಈ ಸೀಸನ್‌ನಲ್ಲಿ ನೀವು ಇಂತಹ ಲಿಪ್‌ಸ್ಟಿಕ್‌ ಅವಾಯ್ಡ್ ಮಾಡಬೇಕು. ಅವು ಯಾವುವು? ಎಂಬುದರ ಬಗ್ಗೆ ಸೌಂದರ್ಯ ತಜ್ಞರು ಇಲ್ಲಿ ತಿಳಿಸಿದ್ದಾರೆ.

ತುಟಿ ಒಣಗಿಸುವ ಮ್ಯಾಟ್ ಲಿಪ್‌ಸ್ಟಿಕ್‌ ಬೇಡ

ತುಟಿಗಳನ್ನು ಒಣಗಿಸುವ ಮ್ಯಾಟ್ ಲಿಪ್‌ಸ್ಟಿಕ್‌ಗಳನ್ನು ಆದಷ್ಟೂ ಚಳಿಗಾಲದಲ್ಲಿ ಹಚ್ಚುವುದನ್ನು ಅವಾಯ್ಡ್ ಮಾಡಿ. ಇಲ್ಲವಾದಲ್ಲಿ ತುಟಿಯ ಆರೋಗ್ಯಕ್ಕೆ ಧಕ್ಕೆಯುಂಟಾಗುವುದು. ಯಾಕೆಂದರೆ, ಮ್ಯಾಟ್ ಲಿಪ್‌ಸ್ಟಿಕ್‌ಗಳು ತುಟಿಯನ್ನು ಡ್ರೈ ಆಗಿರಿಸುತ್ತವೆ. ಇವುಗಳಲ್ಲಿ ಮಾಯಿಶ್ಚರೈಸರ್ ಅಂಶವಿರುವುದಿಲ್ಲ. ಹಚ್ಚಿದ ನಂತರ ತುಟಿಗಳು ಒಣಗಿದಂತಾಗುತ್ತವೆ.

4

ಬಿರುಕು ಮೂಡಿಸುವ ಲಾಂಗ್ ಲಾಸ್ಟಿಂಗ್ ಲಿಪ್‌ಸ್ಟಿಕ್‌

ಅತಿ ಹೆಚ್ಚು ಸಮಯವಿರುವಂತಹ ಲಾಂಗ್ ಲಾಸ್ಟಿಂಗ್ ಹೆಸರಲ್ಲಿ ಬರುವ ಲಿಪ್‌ಸ್ಟಿಕ್‌ಗಳನ್ನು ಈ ಸೀಸನ್‌ನಲ್ಲಿ ಅತಿ ಹೆಚ್ಚಾಗಿ ಹಚ್ಚಬೇಡಿ. ಇದು ಇಡೀ ದಿನವೇನೋ ನಿಮ್ಮ ತುಟಿಯಲ್ಲಿ ಉಳಿದಿರುತ್ತದೆ. ಆದರೆ, ಕೊನೆಯಲ್ಲಿ ರಾತ್ರಿ ಲಿಪ್‌ಸ್ಟಿಕ್‌ ತೆಗೆದ ನಂತರ ಬಿರುಕು ಮೂಡಿಸುತ್ತವೆ.

5

ತುಟಿಯ ಚರ್ಮ ಕಿತ್ತು ಬರುವಂತೆ ಮಾಡುವ ವಾಟರ್ ಪ್ರೂಫ್ ಲಿಪ್‌ಸ್ಟಿಕ್ಸ್

ತುಟಿಯ ಚರ್ಮವನ್ನು ಕಿತ್ತು ಬರುವಂತೆ ಮಾಡುವ, ವಾಟರ್ ಪ್ರೂಫ್ ಲಿಪ್‌ಸ್ಟಿಕ್ಸ್‌ಗಳನ್ನು ಚಳಿಗಾಲದಲ್ಲಿ ಆದಷ್ಟೂ ಬಳಸಬೇಡಿ. ಇವು ಚಳಿ-ಗಾಳಿಗೆ ಹೊಂದುವುದಿಲ್ಲ! ಬದಲಿಗೆ ಮತ್ತಷ್ಟು ತುಟಿಯ ಚರ್ಮವನ್ನು ಒಣಗಿಸಿ, ಪದರ ಪದರದಂತೆ ಬಿರುಕು ಮೂಡಿಸಿ, ಕಿತ್ತು ಬರುವಂತೆ ಮಾಡುತ್ತವೆ.

ಈ ಸುದ್ದಿಯನ್ನೂ ಓದಿ | Winter Fringe Jacket Fashion: ಚಳಿಗಾಲದಲ್ಲಿ ಟ್ರೆಂಡಿಯಾದ ಫ್ರಿಂಜ್ ಜಾಕೆಟ್ಸ್ & ಕೋಟ್ಸ್

ಇನ್ಯಾವ ಲಿಪ್‌ಸ್ಟಿಕ್‌ ಹಚ್ಚಬೇಕು?

ಮಾಯಿಶ್ಚರೈಸರ್ ಇರುವಂತಹ ಗ್ಲೋಸಿ ಲಿಪ್‌ಸ್ಟಿಕ್ಸ್ ಬೆಸ್ಟ್. ಇದರೊಳಗಿರುವ ಪೆಟ್ರೊಲಿಯಂ ಜೆಲ್ಲಿ ಅಂಶಗಳು ತುಟಿಯನ್ನು ಮಾಯಿಶ್ಚರೈಸರ್‌ನಂತೆ ಕಾಪಾಡುತ್ತವೆ. ಒಣಗಲು ಬಿಡುವುದಿಲ್ಲ. ಸುಕೋಮಲವಾಗಿರಲು ಸಹಾಯ ಮಾಡುತ್ತವೆ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)