Curd Vs Buttermilk: ಮಜ್ಜಿಗೆ ಮತ್ತು ಮೊಸರು- ಜೀರ್ಣಕ್ರಿಯೆಗೆ ಯಾವುದು ಬೆಸ್ಟ್..?
ಅಜೀರ್ಣ, ಹೊಟ್ಟೆ ಉಬ್ಬರ, ಕರುಳು ಇತ್ಯಾದಿ ಸಮಸ್ಯೆ ಬಂದಾಗ ಮೊಸರು ಮತ್ತು ಮಜ್ಜಿಗೆಯಂತಹ ಹುದುಗು ಬರಿಸಿದ ಡೈರಿ ಉತ್ಪನ್ನಗಳನ್ನು ಸೇವಿಸಲು ವೈದ್ಯ ರು ಸಲಹೆ ನೀಡುತ್ತಾರೆ. ಮಜ್ಜಿಗೆ ಮೊಸರು ಎರಡು ಕೂಡ ಪ್ರೋಬಯಾಟಿಕ್ ಗಳಲ್ಲಿ ಸಮೃದ್ಧವಾಗಿದ್ದು ಇವು ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯವನ್ನು ರಕ್ಷಿಸುವ ಉತ್ತಮ ಬ್ಯಾಕ್ಟೀರಿಯಾಗಳಲ್ಲಿ ಸಮೃದ್ಧವಾಗಿದೆ.


ನವದೆಹಲಿ: ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ವಿವಿಧ ರೀತಿಯ ಪೋಷಕಾಂಶ ಭರಿತ ಆಹಾರಗಳನ್ನು ಸೇವಿಸುತ್ತೇವೆ. ಅದರಲ್ಲೂ ಡೈರಿ ಉತ್ಪನ್ನಗಳಾದ ಹಾಲು ಮೊಸರು, ಮಜ್ಜಿಗೆ ಇತ್ಯಾದಿ ದೇಹವನ್ನು ತಂಪಾಗಿಸುವ ಜೊತೆಗೆ ಆರೋಗ್ಯ ರಕ್ಷಣೆಗೂ ಒಳಿತು. ಹಲವರು ಊಟದ ಜೊತೆ ಮೊಸರು ಹಾಕಿ ಸೇವನೆ ಮಾಡುತ್ತಾರೆ. ಇನ್ನು ಕೆಲವರು ಮಜ್ಜಿಗೆ ಸೇವನೆ ಇಷ್ಟ ಪಡುತ್ತಾರೆ. ಮೊಸರು ಮತ್ತು ಮಜ್ಜಿಗೆ (Curd Vs Buttermilk) ಎರಡೂ ದೇಹ ಮತ್ತು ಆರೋ ಗ್ಯಕ್ಕೆ ಒಳ್ಳೆಯದಾಗಿದ್ದರೂ ಜೀರ್ಣಕ್ರಿಯೆ ಸಮಸ್ಯೆಗೆ ಇವೆರಡಲ್ಲಿ ಯಾವುದು ಉತ್ತಮ ಎಂಬ ಬಗ್ಗೆ ಹಲವರಲ್ಲಿ ಗೊಂದಲವಿದೆ. ಮೊಸರಿನಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಫಾಸ್ಫರಸ್, ವಿಟಮಿನ್ ಬಿ 12, ಮತ್ತು ಪ್ರೊಟೀನ್‌ಗಳನ್ನು ಹೊಂದಿದ್ದರೆ, ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ 12 ಮತ್ತು ಬಿ 2, ಸತು ಮತ್ತು ಪ್ರೊಟೀನ್‌ಗಳಲ್ಲಿ ಸಮೃದ್ಧವಾಗಿದ್ದು ಮೊಸರು ಮಜ್ಜಿಗೆ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ ಎನ್ನುವ ಮಾಹಿತಿ ಇಲ್ಲಿದೆ.
ಅಜೀರ್ಣ, ಹೊಟ್ಟೆ ಉಬ್ಬರ, ಕರುಳು ಇತ್ಯಾದಿ ಸಮಸ್ಯೆ ಬಂದಾಗ ಮೊಸರು ಮತ್ತು ಮಜ್ಜಿಗೆಯಂತಹ ಹುದುಗು ಬರಿಸಿದ ಡೈರಿ ಉತ್ಪನ್ನಗಳನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ. ಮಜ್ಜಿಗೆ ಮೊಸರು ಎರಡು ಕೂಡ ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿದ್ದು ಇವು ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯವನ್ನು ರಕ್ಷಿಸುವ ಉತ್ತಮ ಬ್ಯಾಕ್ಟೀರಿಯಾಗಳಲ್ಲಿ ಸಮೃದ್ಧ ವಾಗಿದೆ.
ಮೊಸರನ್ನು ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾದೊಂದಿಗೆ ಹಾಲನ್ನು ಹುದುಗು ಬರಿಸುವ ಮೂಲಕ ತಯಾರು ಮಾಡಲಾಗುತ್ತದೆ. ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ ಇತ್ಯಾದಿ ಅಂಶಗಳು ಹೆಚ್ಚಳವಾಗಿದ್ದು ಇದು ಜೀರ್ಣ ಕ್ರಿಯೆ ಯನ್ನು ಸುಧಾರಿಸಲು ಬಹಳಷ್ಟು ಸಹಕಾರಿ. ಇದರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಜೊತೆಗೆ ಮೂಳೆಯ ಆರೋಗ್ಯ ಕರುಳಿನ ಆರೋಗ್ಯವನ್ನು ಉತ್ತೇಜಿಸುವ ಗುಣವನ್ನು ಹೊಂದಿವೆ ಎಂದು ಕೆಲವು ಅಧ್ಯಯನಗಳು ವರದಿ ಮಾಡಿವೆ. ಮೊಸರಿನಲ್ಲಿರುವ ಪೋಷಕಾಂಶಗಳು ಅಧಿಕ ರಕ್ತದೊತ್ತಡ, ಹೃದ್ರೋಗ ಸಮಸ್ಯೆಗಳನ್ನು ತಡೆಯುತ್ತದೆ.
ಮಜ್ಜಿಗೆ ಕೆನೆಯಿಂದ ಬೆಣ್ಣೆಯನ್ನು ಹೊರ ತೆಗೆದ ನಂತರ ಉಳಿದಿರುವ ದ್ರವವಾಗಿದ್ದು ಇದು ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿ ರುವ ಪದಾರ್ಥ ವಾಗಿದೆ. ಇದು ತೂಕ ಕಡಿಮೆ ಮಾಡಿಕೊಳ್ಳುವವರಿಗೆ ಸೂಕ್ತವಾದ ಪಾನೀಯವಾಗಿದ್ದು ಆರೋಗ್ಯಕ್ಕೂ ಒಳಿತು. ದಿ ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿ ಷನ್‌ನಲ್ಲಿ ಪ್ರಕಟವಾದ ಅಧ್ಯಯನ ಪ್ರ ಕಾರ ಮಜ್ಜಿಗೆಯಲ್ಲಿ ಜೈವಿಕವಾಗಿ ಸಕ್ರಿಯವಾಗಿರುವ ಪ್ರೋಟೀನ್‌ಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮಜ್ಜಿಗೆಯ ಪೆಪ್ಟೈಡ್‌ಗಳು ಉರಿ ಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನವು ತಿಳಿಸಿದೆ.
ಜೀರ್ಣಕ್ರಿಯೆಗೆ ಯಾವುದು ಉಪಯುಕ್ತ?
ಮಜ್ಜಿಗೆ ದ್ರವ ಪದಾರ್ಥವಾಗಿದ್ದು ಹೊಟ್ಟೆಯಲ್ಲಿ ತಿಂದ ಆಹಾರ ಬೇಗನೆ ಜೀರ್ಣವಾಗುವಂತೆ ಮಾಡಲಿದೆ. ಅಲ್ಲದೆ ಹೊಟ್ಟೆಯ ಉರಿಯನ್ನೂ ಕೂಡ ಮಜ್ಜಿಗೆ ಸರಿಪಡಿಸುತ್ತದೆ. ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಇದು ಉತ್ತ ಮ ಪದಾರ್ಥ ವಾಗಿದೆ.ಮಜ್ಜಿಗೆಯ ಬಯೋಆಕ್ಟಿವ್ ಪೆಪ್ಟೈಡ್‌ಗಳು ಕರುಳಿನ ಬ್ಯಾಕ್ಟೀರಿಯಾವನ್ನು ನಿಯಂತ್ರಿಸಲು, ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಕಾರಿ ಯಾಗಲಿದ್ದು ನಿಮಗೆ ಹೊಟ್ಟೆ ಉಬ್ಬುವುದು ಅಥವಾ ಜೀರ್ಣಕ್ರಿಯೆ ಸಮಸ್ಯೆ ಇದ್ದರೆ ಮಜ್ಜಿಗೆ ಉತ್ತಮ, ನಿಮಗೆ ಹೆಚ್ಚುವರಿ ಕ್ಯಾಲ್ಸಿ ಯಂ ಮತ್ತು ಪೋಷಕಾಂಶಗಳ ಅಗತ್ಯವಿದ್ದರೆ, ಮೊಸರು ಉತ್ತಮ ಆಯ್ಕೆ ಯಾಗಿದೆ. ಆದರೆ ಮೊಸರು ಸ್ವಲ್ಪ ಗಟ್ಟಿ ಪದಾರ್ಥವಾಗಿರುವ ಕಾರಣ ಬೇಗನೆ ಜೀರ್ಣವಾಗುವುದಿಲ್ಲ. ಅದೂ ಅಲ್ಲದೆ ಹಸಿದ ಹೊಟ್ಟೆಯಲ್ಲಿ ಮೊಸ ರನ್ನು ಸೇವಿಸಿದರೆ ಗ್ಯಾಸ್ಟ್ರಿಕ್ ಉಂಟಾಗುವ ಸಾಧ್ಯತೆಗಳಿರುತ್ತದೆ.
ಇದನ್ನು ಓದಿ: Health Tips: ದೇಹದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಿಸಲು ಈ ಆಹಾರ ತ್ಯಜಿಸಿ!
ಆದರೆ ಮೊಸರು ಮತ್ತು ಮಜ್ಜಿಗೆಯನ್ನು ಸರಿಯಾದ ಸಮಯದಲ್ಲಿ ಸೇವಿ ಸಿದರೆ ಎರಡೂ ದೇಹಕ್ಕೆ ಒಳಿತು. ಸಾಮಾನ್ಯವಾಗಿ ಮೊಸರು ಜಡತ್ವವನ್ನು ಉಂಟು ಮಾಡುವ ಕಾರಣ ರಾತ್ರಿ ಹೊತ್ತು ಸೇವನೆ ಮಾಡಬಾರದು ಎಂದು ಹೇಳುತ್ತಾರೆ.ಹೀಗಾಗಿ ಮೊಸರನ್ನು ಹಗಲು ಸೇವನೆ ಮಾಡುವುದು ಒಳಿತು. ಮಜ್ಜಿಗೆಯನ್ನು ಇಡೀ ದಿನದಲ್ಲಿ ಯಾವ ಸಮಯದಲ್ಲೂ ಸೇವಿಸ ಬಹುದಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.