ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ದೇಹದಲ್ಲಿ ಸಕ್ಕರೆ ಪ್ರಮಾಣ ನಿಯಂತ್ರಿಸಲು ಈ ಆಹಾರ ತ್ಯಜಿಸಿ!

Health Tips: ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಾಗ ಅನೇಕ ಆರೋಗ್ಯದ ತೊಂದರೆಗಳು ಕಂಡು ಬರಲು ಪ್ರಾರಂಭವಾಗುತ್ತದೆ. ಹಾಗಾಗಿ ಸಕ್ಕರೆ ಅಂಶ ಹೆಚ್ಚಿರುವ ಆಹಾರವನ್ನು ತ್ಯಜಿಸಬೇಕಾಗುತ್ತದೆ. ಕೆಲವೊಮ್ಮೆ ರುಚಿಯಲ್ಲಿ ಸಿಹಿಯಿಲ್ಲ ಎಂದು ತಿಂದು ಬಿಡುತ್ತೇವೆ. ಆದರೆ ಇಂತಹ ಹೆಚ್ಚಿನ ಆಹಾರವು ಸಕ್ಕರೆ ಮಟ್ಟವನ್ನುಹೆಚ್ಚಾಗಿ ಹೊಂದಿರುತ್ತವೆ.

ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಿಸುವ ಆಹಾರಗಳಿವು!

Profile Pushpa Kumari Mar 12, 2025 6:30 AM

ನವದೆಹಲಿ: ಇಂದಿನ ಜೀವನ ಶೈಲಿಯಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ. ಅದರಲ್ಲೂ ಮಧುಮೇಹ ಸಮಸ್ಯೆ ಇಂದು ಸಾಮಾನ್ಯ ಎನಿಸಿದ್ದು ಹೆಚ್ಚಿನ ಜನರು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಹೋರಾಡುತ್ತಿರುತ್ತಾರೆ(Health Tips). ಮಧುಮೇಹವನ್ನು ನಿಯಂತ್ರಿಸಲು ಹೆಚ್ಚಿನ ಜನ ಔಷಧಿಗಳ ಮೇಲೆ ಅವಲಂಬಿತರುತ್ತಾರೆ. ಆದರೂ ನಿತ್ಯ ಸೇವಿಸುವಂತಹ ಆಹಾರ ಕ್ರಮ ಕೂಡ ಬಹಳ ಮಧುಮೇಹ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುವ ಬಗ್ಗೆ ಹೆಚ್ಚಿನವರಿಗೆ ಮಾಹಿತಿ ಇಲ್ಲ. ಅದರಲ್ಲೂ ಮಧುಮೇಹಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ಬಹಳ ಅಗತ್ಯವಾಗಿದ್ದು ದೇಹದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಾಗ ಅನೇಕ ಆರೋಗ್ಯದ ತೊಂದರೆಗಳು ಕಂಡು ಬರಲು ಪ್ರಾರಂಭವಾಗುತ್ತದೆ. ಹಾಗಾಗಿ ಸಕ್ಕರೆ ಅಂಶ ಹೆಚ್ಚಿರುವ ಆಹಾರವನ್ನು ತ್ಯಜಿಸಬೇಕಾಗುತ್ತದೆ. ಹಾಗಾದರೆ ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಆಹಾರಗಳು ಯಾವುದು ಎಂದು ತಿಳಿದು ಸೇವನೆ ಮಾಡುವುದು ಅಗತ್ಯ.

ಬ್ರೆಡ್ ಮತ್ತು ಬನ್:

ಮಾರುಕಟ್ಟೆಯಲ್ಲಿ ಸಿಗುವ ತರಹೇವಾರಿ ಬ್ರೆಡ್ ಮತ್ತು ಬನ್‌ಗಳಲ್ಲಿ ಹೆಚ್ಚಿನ ಸಕ್ಕರೆ ಪ್ರಮಾಣ ಇರಲಿದ್ದು ಇದನ್ನು ಸೇವಿಸುವ ಮುನ್ನ ಜಾಗೃತರಾಗಿ ಇರಬೇಕು., ಇವುಗಳು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಮತ್ತು ಹೈಡ್ರೋಜನೀಕರಿಸಿದ ಆಹಾರ ಪದಾರ್ಥಗಳಾಗಿದ್ದು ಮಧುಮೇಹ ಇರುವವರು ಬ್ರೆಡ್ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ಹಣ್ಣಿನ ರಸಗಳು:

ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು‌ ಹಣ್ಣಿನ ರಸ ಕುಡಿದರೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರಲಿದೆ. ಏಕೆಂದರೆ ಹಣ್ಣಿನ ರಸದಲ್ಲಿ ಸಕ್ಕರೆ ಪ್ರಮಾಣ ಹೆಚ್ಚು. ನೀವು ಹಣ್ಣಿನ ರಸವನ್ನು ಸೇವಿಸಿದಾಗ, ಸಕ್ಕರೆ ನಿಮ್ಮ ರಕ್ತಪ್ರವಾಹಕ್ಕೆ ತ್ವರಿತವಾಗಿ ಪ್ರವೇಶಿಸುತ್ತದೆ, ಇದು ರಕ್ತ ದಲ್ಲಿನ ಸಕ್ಕರೆಯ ಮಟ್ಟದಲ್ಲಿ ತ್ವರಿತ ಹೆಚ್ಚಳವನ್ನು ಉಂಟುಮಾಡುತ್ತದೆ. ಹಾಗಾಗಿ ಹಣ್ಣಿನ ಜ್ಯೂಸ್​ ಸೇವನೆ ಮಾಡಿದರೆ ಅದು ಸಕ್ಕರೆ ಮಟ್ಟ ಹೆಚ್ಚಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಸಕ್ಕರೆ ಸೇರಿಸಿದ ಸಿಹಿತಿಂಡಿಗಳು:

ಸಕ್ಕರೆ ಸೇರಿದ ಬೇಕರಿ ಸಹಿ ತಿಂಡಿಗಳು ನಿಮ್ಮ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಸಲಿದೆ. ಕುಕೀಸ್, ಮಿಠಾಯಿ ಕೇಕ್ ​​ಮತ್ತು ಇತರ ಸಕ್ಕರೆ ತಿಂಡಿಗಳು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿಸಿ ಮಧುಮೇಹಿಗಳಿಗೆ ಮತ್ತಷ್ಟು ಸಮಸ್ಯೆ ‌ಉಂಟಾಗಲಿದೆ. ಈ ಆಹಾರಗಳು ಹೆಚ್ಚಿನ ಪ್ರಮಾಣದ ಸಕ್ಕರೆಗಳನ್ನು ಹೊಂದಿರುತ್ತವೆ. ಈ ಸಿಹಿತಿಂಡಿಗಳನ್ನು ನಿಯಮಿತ ವಾಗಿ ಸೇವಿಸುವುದರಿಂದ ಆಗಾಗ್ಗೆ ರಕ್ತದಲ್ಲಿನ ಸಕ್ಕರೆಯ ಏರಿಕೆಗೆ ಕಾರಣವಾಗಬಹುದು.

ಕರಿದ ಆಹಾರಗಳು:

ಅದೇ ರೀತಿ ಹೊರಗೆ ಸಂಸ್ಕರಿಸಿದ ಹುರಿದ ಆಹಾರಗಳು ಕೂಡ ಸಕ್ಕರೆ ಮಟ್ಟವನ್ನು ಹೆಚ್ಚಿಸಲಿದೆ. ಫ್ರೈಡ್ ಫುಡ್ ಗಳಾದ ಫ್ರೆಂಚ್ ಫ್ರೈಸ್ ಮತ್ತು ಫ್ರೈಡ್ ಚಿಕನ್ ಗಳು ಅನಾರೋಗ್ಯಕರ ಕೊಬ್ಬಿನಂಶವನ್ನು ಹೊಂದಿರುವುದು ಮಾತ್ರವಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗ ಬಹುದು. ಈ ಆಹಾರಗಳು ಸಾಮಾನ್ಯವಾಗಿ ಹೆಚ್ಚಿನ ಗ್ಲೈಸೆಮಿಕ್ ಹೊಂದಿರುತ್ತವೆ ಮತ್ತು ಕಾಲಾನಂತರದಲ್ಲಿ ಇನ್ಸುಲಿನ್ ಪ್ರತಿರೋಧಕ್ಕೆ ಕಾರಣ ವಾಗಬಹುದು. ಹೆಚ್ಚುವರಿಯಾಗಿ, ಟ್ರಾನ್ಸ್ ಕೊಬ್ಬುಗಳಲ್ಲಿ ಹೆಚ್ಚಿನ ತೈಲ ಗಳಲ್ಲಿ ಆಹಾರವನ್ನು ಹುರಿಯುವುದು ಉರಿಯೂತ ಮತ್ತು ಇನ್ಸುಲಿನ್ ಸಂವೇದನೆಯನ್ನು ಇನ್ನಷ್ಟು ಹದಗೆಡಿಸುತ್ತದೆ,

ಇದನ್ನು ಓದಿ: Health Tips: ದೇಹದ ಶಕ್ತಿ ಹೆಚ್ಚಿಸಲು ದಿನನಿತ್ಯ ಈ ಆಹಾರ ಸೇವಿಸಿ

ಲಸ್ಸಿ ಮತ್ತು ಹಾಲು ಆಧಾರಿತ ಪಾನೀಯಗಳು:

ಹಾಲು ಮತ್ತು ಲಸ್ಸಿ, ಸಿಹಿ ರುಚಿಯನ್ನು ನೀಡಲಿದ್ದು ಇವುಗಳಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿ ಇರಲಿದೆ. ಇವು ದೇಹಕ್ಕೆ ಪೌಷ್ಟಿಕಾಂಶವನ್ನು ಒದ ಗಿಸಿದರೂ ಇದರ ಲ್ಲಿ ಸಕ್ಕರೆ ಅಂಶವು ಬೇಗನೆ ಹೆಚ್ಚಾಗುತ್ತದೆ. ಹಾಗಾಗಿ ಮಧುಮೇಹಿಗಳು ಸಕ್ಕರೆ ಹಾಕದ ಹಾಲು ಅಥವಾ ಮೊಸರನ್ನು ಆರಿಸಿ.

ವೈಟ್ ರೈಸ್:

ಅನೇಕ ಮನೆಗಳಲ್ಲಿ ಪ್ರಧಾನ ಆಹಾರವಾಗಿರುವ ಬಿಳಿ ಅಕ್ಕಿಯು ಹೆಚ್ಚಿನ ಗ್ಲೈಸೆಮಿಕ್ ಅಂಶವನ್ನು ಹೊಂದಿದ್ದು ಇದು , ರಕ್ತದಲ್ಲಿನ ಸಕ್ಕರೆ ಏರಿಕೆಗೆ ಕಾರಣವಾಗುತ್ತದೆ. ಹಾಗಾಗಿ ಮಧುಮೇಹಿಗಳು ಈ ಆಹಾರವನ್ನು ಸೇವಿಸದೇ ಇರುವುದೇ ಉತ್ತಮ.‌