ಬೆಂಗಳೂರು, ಡಿ. 26: ಇತ್ತೀಚಿನ ದಿನದಲ್ಲಿ ಮಧುಮೇಹ ಕಾಯಿಲೆ ಸಾಮಾನ್ಯ ಎಂಬಂತಾಗಿದೆ. ಜೀವನ ಶೈಲಿಯ ಬದಲಾವಣೆಯೇ ಇದಕ್ಕೆ ಮುಖ್ಯ ಕಾರಣ. ಇನ್ನು ಬಹುತೇಕರಿಗೆ ಡಯಾಬಿಟಿಸ್ ಮತ್ತು ರಕ್ತದಲ್ಲಿ ಇರುವ ಶುಗರ್ ಲೆವೆಲ್ ಬಗ್ಗೆ ವ್ಯತ್ಯಾಸ ತಿಳಿದಿಲ್ಲ. ಇವೆರಡು ಒಂದೇ ಎಂದು ಬಹುತೇಕರು ಅಂದುಕೊಂಡಿದ್ದಾರೆ. ಹೀಗಾಗಿ ಸಕ್ಕರೆ ಕಾಯಿಲೆಯ ಚಿಕಿತ್ಸೆಗಾಗಿ ವೈದ್ಯರ ಮೊರೆ ಹೋಗಿದ್ದೂ ಇದೆ. ಕೂಲಂಕುಷ ಪರೀಕ್ಷೆಯ ನಂತರ ಇದೆ ಇವೆರಡು ವ್ಯತ್ಯಾಸ ತಿಳಿದುಕೊಂಡವರೂ ಇದ್ದಾರೆ. ವಿಶ್ವವಾಣಿ ಹೆಲ್ತ್ ಚಾನೆಲ್‌ನಲ್ಲಿ ಮಾತನಾಡಿದ ಖ್ಯಾತ ಆಯುರ್ವೇದ ತಜ್ಞ ಡಾ. ಮಲ್ಲಿಕಾರ್ಜುನ ಡಂಬಳ (Dr. Mallikarjuna Dambala) ಇವೆರಡರ ವ್ಯತ್ಯಾಸ ತಿಳಿಸಿಕೊಟ್ಟಿದ್ದಾರೆ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಲು ನಾನಾ ಕಾರಣ ಇದೆ. ಅವೆಲ್ಲವೂ ಕೂಡ ಡಯಾಬಿಟಿಸ್ ಆಗಲಾರದು. ಡಯಾಬಿಟಿಸ್‌ನಲ್ಲಿ ಬ್ಲಡ್ ಶುಗರ್ ಲೆವೆಲ್ ಏರಳಿತ ಆಗುವುದು ಸಾಮಾನ್ಯ. ಆದರೆ ರಕ್ತದಲ್ಲಿರುವ ಶುಗರ್ ಲೆವೆಲ್ ಎಲ್ಲವೂ ಡಯಾಬಿಟಿಸ್ ಅಲ್ಲ ಎಂದು ಅವರು ಹೇಳಿದ್ದಾರೆ.
ಒತ್ತಡದಿಂದಾಗಿ ಬಹುತೇಕರಲ್ಲಿ ಡಯಾಬಿಟಿಸ್ ಕಾಣಿಸಿಕೊಳ್ಳುತ್ತದೆ. ಒತ್ತಡ ಆಗಿದ್ದ ಸಂದರ್ಭದಲ್ಲಿ ಹೆಚ್ಚಿನ ಆಹಾರ ಸೇವಿಸಬೇಕು. ಜತೆಗೆ ದೇಹಕ್ಕೆ ಗ್ಲುಕೋಸ್ ಅಗತ್ಯವಾಗಿ ಬೇಕಾಗುತ್ತದೆ. ಆದರೆ ಆಗ ಬಹುತೇಕ ಜನರು ಆಹಾರ ಸೇವಿಸುವ ಬದಲು ಮಾತ್ರೆಯ ಮೊರೆ ಹೋಗುತ್ತಾರೆ. ಹೀಗೆ ಮಾಡುವುದರಿಂದ ದೇಹಕ್ಕೆ ಬೇಕಾದ ಆಹಾರ ಸಿಗಲಾರದು. ಆಗ ರಕ್ತದ ಶುಗರ್ ಲೆವೆಲ್ ಕೂಡ ಹೆಚ್ಚು ಕಮ್ಮಿ ಆಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ವಿಡಿಯೊ ನೋಡಿ:
ನಮ್ಮ ರಕ್ತದಲ್ಲಿ ಇರುವ ಸಕ್ಕರೆಯ ಅಂಶವನ್ನು (ಗ್ಲೂಕೋಸ್) 'ಬ್ಲಡ್ ಶುಗರ್' ಎನ್ನಲಾಗುತ್ತದೆ. ಇದು ನಾವು ಸೇವಿಸುವ ಆಹಾರದಿಂದ ಸಿಗುತ್ತದೆ. ನಾವು ಸೇವಿಸುವ ಆಹಾರ ಅತಿಯಾದರೆ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪೋಷಕಾಂಶ, ಹೈ ಪ್ರೋಟಿನ್ ಸಿಕ್ಕರೆ ಅದು ಬೊಜ್ಜಾಗಿ ಸಂಗ್ರಹವಾಗುತ್ತದೆ. ಅಂತಹವರು ಉಪವಾಸ ಮಾಡಬೇಕು. ಆದರೆ ಯಾರೆಲ್ಲ ಆಹಾರ ತಿನ್ನುವುದು ಸ್ವಲ್ಪ ತಡವಾದರೂ ಕೈಕಾಲೆಲ್ಲ ನಡುಕ ಬರಲಿದೆಯೋ ಅವರಿಗೆ ಡಯಾಬಿಟಿಸ್ ರೋಗ ಬರುವ ಸಾಧ್ಯತೆ ಇದೆ ಎಂದೇ ಅರ್ಥ. ಹೀಗಾಗಿ ಮೊದಲೇ ಎಚ್ಚೆತ್ತುಕೊಳ್ಳಬೇಕು ಎಂದು ಅವರು ವಿವರಿಸಿದ್ದಾರೆ.
ನಿಮ್ಮ ಮೆದುಳು ಚುರುಕಾಗಬೇಕೇ? ತಪ್ಪದೇ ಈ ವರ್ಕೌಟ್ ಮಾಡಿ
ದೇಹವು ಸರಿಯಾಗಿ ಇನ್ಸುಲಿನ್ ಉತ್ಪಾದಿಸದಿದ್ದಾಗ ಅಥವಾ ಉತ್ಪತ್ತಿಯಾದ ಇನ್ಸುಲಿನ್ ಅನ್ನು ಸರಿಯಾಗಿ ಬಳಸಿಕೊಳ್ಳದಿದ್ದಾಗ ಸಕ್ಕರೆಯು ರಕ್ತದಲ್ಲೇ ಉಳಿದುಬಿಡುತ್ತದೆ. ಆಗ ಡಯಾಬಿಟಿಸ್ ರೋಗ ಬಂದು ಅದು ದೀರ್ಘಕಾಲದ ತನಕ ಇರಲಿದೆ. ಹೀಗಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಎಷ್ಟಿದೆ ಎಂದು ತಿಳಿದು ಅದನ್ನೇ ಡಯಾಬಿಟಿಸ್ ಟೆಸ್ಟ್ ಎನ್ನುವವರು ಇದ್ದಾರೆ. ಆದರೆ ನಮಗೆ ಡಯಾಬಿಟಿಸ್ ಎಷ್ಟರ ಮಟ್ಟಿಗೆ ಇದೆ ಎಂದು ತಿಳಿಯಲು ಮೂತ್ರ ಪರೀಕ್ಷೆ ಮಾಡಿಸಬೇಕು. ಆಗ ನಮಗೆ ಸರಿಯಾದ ಮಾಹಿತಿ ಸಿಗಲಿದೆ. ಡಯಾಬಿಟಿಸ್ ಬಂದಿದೆ ಎಂದು ತಿಳಿದ ಮೇಲೆ ಮಾತ್ರೆಗಳನ್ನು ಅತಿಯಾಗಿ ಸೇವಿಸುತ್ತಾರೆ. ಡಯಾಬಿಟಿಸ್‌ಗಿಂತಲೂ ಅದರ ಶಮನಕ್ಕಾಗಿ ನಾವು ಸೇವಿಸುವ ಔಷಧಗಳ ಸೈಡ್ ಎಫೆಕ್ಟ್ ತುಂಬಾ ಇದೆ ಎಂದು ಅವರು ಹೇಳಿದ್ದಾರೆ.
ಹೀಗೆ ಮಾಡಿ
- ಮನೆ ಆಹಾರವನ್ನೇ ಹೆಚ್ಚಾಗಿ ಸೇವಿಸಬೇಕು.
- ಜಂಕ್ ಫುಡ್ ಇತರ ತಿಂಡಿ ತಿನಿಸುಗಳನ್ನು ಸೇವಿಸುದನ್ನು ಆದಷ್ಟು ಕಡಿಮೆ ಮಾಡಬೇಕು.
- ದೇಹಕ್ಕೆ ಅಗತ್ಯವಾಗಿ ಬೇಕಾದಷ್ಟೇ ಪೋಷಕಾಂಶ ಇರುವ ಆಹಾರ ನೀಡಬೇಕು.
- ಆಹಾರ ಸೇವಿಸಿದಷ್ಟೆ ಕೆಲಸವನ್ನು ಕೂಡ ಚೆನ್ನಾಗಿ ಮಾಡಬೇಕು ಆಗ ಕೂಡ ಡಯಾಬಿಟಿಸ್ ನಿಯಂತ್ರಣದಲ್ಲಿರುತ್ತದೆ.
- ಒತ್ತಡಗೊಳ್ಳದೆ ಸರಿಯಾದ ವಿಧಾನದಿಂದ ಕೆಲಸ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು.