ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ನಿಮ್ಮ ಮೆದುಳು ಚುರುಕಾಗಬೇಕೇ..? ಹಾಗಾದ್ರೆ ತಪ್ಪದೇ ಈ ವರ್ಕೌಟ್ ಮಾಡಿ

Brain Workouts: ದೇಹದ ಪ್ರತಿಯೊಂದು ಭಾಗವೂ ಕೂಡ ಬಹಳ ಮುಖ್ಯ. ಅವುಗಳನ್ನು ಆರೋಗ್ಯವಾಗಿ ನೋಡಿಕೊಳ್ಳಲು ನಮ್ಮ ಜೀವನಶೈಲಿ ಚೆನ್ನಾಗಿ ಇರಬೇಕಾಗುತ್ತದೆ. ಅದರಲ್ಲಿಯೂ ಮೆದುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ಮೆದುಳನ್ನು ಚುರುಕುಗೊಳಿಸುವುದು ಅತ್ಯವಶ್ಯವಾಗಿದ್ದು, ಅದಕ್ಕಾಗಿ ಕೆಲವೊಂದು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಹಾಗಾಗಿ ನಾವಿಂದು ನಿಮಗೆ ಕೆಲವೊಂದು ಬ್ರೈನ್ ವರ್ಕೌಟ್ ಗಳನ್ನು ಹೇಳಿಕೊಡುತ್ತಿದ್ದೇವೆ. ಇದನ್ನು ಪಾಲಿಸುವುದರಿಂದ ನಾವು ಕ್ರೀಯಾಶೀಲರಾಗುವುದರ ಜೊತೆಗೆ ಚುರುಕುತ್ತೇವೆ.

ಈ ವ್ಯಾಯಾಮಗಳನ್ನ ಮಾಡಿ, ಮೆದುಳು ಕಂಪ್ಯೂಟರ್ ಗಿಂತ ವೇಗವಾಗುತ್ತೆ

ಮೆದುಳನ್ನು ಚುರುಕಾಗಿರಿಸಲು ಕೆಲವೊಂದು ವರ್ಕೌಟ್‌ಗಳಿವೆ (ಸಾಂದರ್ಭಿಕ ಚಿತ್ರ) -

Profile Sushmitha Jain Nov 6, 2025 8:00 AM

ಬೆಂಗಳೂರು: ಮನುಷ್ಯ ದೇಹದಲ್ಲಿನ ಪ್ರತಿಯೊಂದು ಭಾಗವೂ ಬಹಳ ಮುಖ್ಯವಾಗಿದ್ದು, ಇದಕ್ಕೆ ಮೆದಲು(Brain) ಹೊರತಾಗಿಲ್ಲ. ಹಾಗಾಗಿ ಮೆದುಳಿನ ಆರೋಗ್ಯವನ್ನು(Brain Health) ಕಾಪಾಡಿಕೊಳ್ಳುವುದು ಅತ್ಯವಶ್ಯವಾಗುತ್ತದೆ. ನಮ್ಮ ಯೋಚನಾಶಕ್ತಿಯನ್ನು ವೃದ್ಧಿಸುವುದರಿಂದ ಹಿಡಿದು ನೆನಪಿನ ಶಕ್ತಿಯನ್ನು ಹೆಚ್ಚಿಸುವುದರಲ್ಲಿಯೂ ಮೆದಲು ಪ್ರಮುಖ ಪಾತ್ರ ವಹಿಸುತ್ತದೆ. ಇದರೊಂದಿಗೆ ನಮ್ಮ ಕ್ರಿಯಾಶೀಲತೆಯು(Activity) ನಮ್ಮ ಮೆದುಲಿನ ಮೇಲೆ ನಿರ್ಧರಿತವಾಗಿದ್ದು, ನಾವು ಅರೋಗ್ಯವಾಗಿ ಸಕ್ರಿಯ ಜೀವನ ನಡೆಸಲು ಮೆದುಳು ಬಹಳ ಮುಖ್ಯವಾಗುತ್ತದೆ. ಅದರಲ್ಲೂ ಈ ಆಧುನಿಕ ಯುಗದಲ್ಲಿ ನಾವು ಸೃಜನಶೀಲರಾಗಿರುವುದರ ಜೊತೆಗೆ, ನಮ್ಮತನವನ್ನು ನಾವು ಸಾಬೀತು ಮಾಡಿಕೊಂಡು ಯಶಸ್ಸು ಗಳಿಸುವುದು ಮುಖ್ಯವಾಗುತ್ತದೆ. ಅದಕ್ಕೆ ಮುಖ್ಯವಾಗಿ ನಮ್ಮ ಮೆದುಲು ಚುರುಕಾಗಿರಬೇಕಾಗುತ್ತದೆ. ಬೇರೆಯವರಿಗಿಂತ ಬುದ್ಧಿವಂತರಾಗಲು, ಸಂದರ್ಭಕ್ಕೆ ತಕ್ಕಂತೆ ಒಳ್ಳೆಯ ನಿರ್ಧಾರಗಳನ್ನು ಕೈಗೊಳ್ಳಲು ಸಹಕಾರಿಯಾಗಿರುವ ಮೆದುಲಿಗೆ ಅತ್ಯುತ್ತಮ ಆಹಾರ ಪದ್ಧತಿಯನ್ನು ಮಾಡಿಸುವುದರ ಜೊತೆಗೆ ಮೆದುಳನ್ನು ಚುರುಕಾಗಿ ಇರಿಸುವಂತಹ ಚಟುವಟಿಕೆಗಳನ್ನು ಮಾಡುವುದು ಅತ್ಯವಶ್ಯವಾಗಿದೆ.

ಅರೇ ಮೆದುಳನ್ನು ಹೇಗೆ ಚುರುಕು ಮಾಡುವುದು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತದೆಯೇ..? ಯೋಚನೆ ಮಾಡಿ ಪ್ರತಿದಿನ ಈ ಬ್ರೈನ್ ವರ್ಕೌಟ್‌ಗಳನ್ನ (Brain Workouts) ಮಾಡಿದ್ರೆ ಸಾಕು ನಿಮ್ಮ ಬುದ್ಧಿ ಶಕ್ತಿ ಜಾಸ್ತಿ ಆಗುವುದರ ಜೊತೆಗೆ ಮೆದುಳು ಪಾದರಸದಂತಾಗುತ್ತದೆ.

ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳಿ

ಹೌದು ಮೆದುಳನ್ನು ಕ್ರಿಯಾಶೀಲವಾಗಲು ಪುಸ್ತಕಗಳನ್ನು ಓದುವುದು, ಒಗಟುಗಳನ್ನು ಬಿಡಿಸುವುದು, ಹೊಸ ಭಾಷೆ ಅಥವಾ ಸಂಗೀತ ವಾದ್ಯವನ್ನು ಕಲಿಯುವುದು ಅಥವಾ ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಇದರಿಂದ ಮೆದುಳಿನಲ್ಲಿ ಹೊಸ ಹೊಸ ಸಂಪರ್ಕಗಳು ಏರ್ಪಡುತ್ತವೆ. ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಚುರುಕುತನ ಹೆಚ್ಚುತ್ತದೆ. ಜೊತೆಗೆ ಮೆದುಳಿಗೆ ವಯಸ್ಸಾಗುವುದನ್ನು ಕಡಿಮೆ ಮಾಡುತ್ತವೆ.

ವ್ಯಾಯಮ ಮಾಡಿ

ನಾವು ಹೇಗೆ ದೇಹವನ್ನು ಫಿಟ್ ಆಗಿಡಲು ಜಿಮ್, ವ್ಯಾಯಾಮ ಮಾಡುತ್ತೇವೆಯೋ, ಹಾಗೇ ಮೆದುಳನ್ನು ಚುರುಕಾಗಿ ಇಡಲು ಕೂಡಾ ಕೆಲವೊಂದು ವ್ಯಾಯಾಮಗಳಿವೆ. ವಾರದಲ್ಲಿ ಕನಿಷ್ಟ 5 ದಿನಗಳಾದರೂ 20ರಿಂದ 30 ನಿಮಿಷಗಳ ವೇಗದ ನಡಿಗೆ(ವಾಕಿಂಗ್), ಸೈಕ್ಲಿಂಗ್ ಅಥವಾ ಹೃದಯ ಬಡಿತ ಸ್ವಲ್ಪ ಹೆಚ್ಚಿಸುವ ಯಾವುದೇ ಚಟುವಟಿಕೆಯನ್ನು ಮಾಡಿ. ಇದರಿಂದ ನಿಮ್ಮಲ್ಲಿ ಕ್ರಿಯಾಶೀಲತೆ ಹೆಚ್ಚುತ್ತದೆ.

ಈ ಸುದ್ದಿಯನ್ನು ಓದಿ: Astro Tips: ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಮಲಗುವ ಮುನ್ನ ಈ ಮಂತ್ರಗಳನ್ನು ಪಠಿಸಿ

ಹೊಸ ಕೌಶಲ್ಯವನ್ನು ಕಲಿಯಿರಿ

ಹೊಸ ಕೌಶಲವನ್ನು ಕಲಿಯುವುದು ನಿಮ್ಮ ಮೆದುಳಿಗೆ ಇನ್ನಷ್ಟು ಕೆಲಸ ನೀಡಿದಂತೆ ಅಡುಗೆ ಮಾಡಲು ಕಲಿಯುವುದು, ಟೂತ್‌ಪಿಕ್‌ಗಳಿಂದ ಕಟ್ಟಡಗಳನ್ನು, ಪಿರಾಮೀಡ್ ಗಳನ್ನು ನಿರ್ಮಿಸುವುದು, ಹೀಗೆ ಏನಾದರೂ ನಿಮಗೆ ನೀವೇ ವಿಭಿನ್ನ ಟಾಸ್ಕಗಳನ್ನು ಕೊಟ್ಟು ಯಾವಾಗಾಲೂ ಬ್ಯುಸಿ ಆಗಿರುವಂತೆ ನೋಡಿಕೊಳ್ಳಿ.

ಮೆದುಳಿಗೆ ಕೆಲಸ ನೀಡುವ ಆಟ ಆಡಿ

ನಿಮ್ಮ ಮೆದುಳು ಆರೋಗ್ಯವಾಗಿರಬೇಕೆಂದರೆ ಅದಕ್ಕೆ ಹೆಚ್ಚಿನ ಚಟುವಟಿಕೆ ಅಗತ್ಯ. ಸುಡೊಕೊ, ಪದ ಬಂಧ, ಪಜಲ್ಸ್ ಇತ್ಯಾದಿ ಇನ್ನಿತರ ಅಟಗಳನ್ನು ಆಡಿದರೆ ನಿಮ್ಮ ಮೆದುಳಿನ ಚುರುಕುತನ ಹೆಚ್ಚಾಗುತ್ತದೆ. ಇದರೊಂದಿಗೆ ಧ್ಯಾನ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದರಿಂದ ನಿಮ್ಮ ಮನಸ್ಸು/ದೇಹಕ್ಕೆ ಬಹಳ ಪ್ರಯೋಜನಗಳಿದ್ದು, ಧ್ಯಾನವು ನಿಮಗೆ ವಿಶ್ರಾಂತಿ ನೀಡುವುದಲ್ಲದೆ, ನಿಮ್ಮ ಮೆದುಳಿಗೆ ಚಟುವಟಿಕೆ ನೀಡುತ್ತದೆ.

ಹೊಸತನ್ನು ಏನಾದರೂ ಪ್ರಯತ್ನಿಸಿ

ಕಲಿಕೆಗೆ ವಯಸ್ಸಿನ ಹಂಗಿಲ್ಲ ಅನ್ನುತ್ತಾರೆ, ಹಾಗಾಗಿ ಸಮಯ ಸಿಕ್ಕಾಗಲೆಲ್ಲ ಹೊಸತನ್ನು ಏನಾದರೂ ಕಲಿಯುವ ಪ್ರಯತ್ನ ಮಾಡಿ, ಹೊಸ ಭಾಷೆಯೊಂದನ್ನು ಕಲಿಯುವುದು, ಸಂಗೀತ, ಚಿತ್ರ ಮೊದಲಾದ ಕಲಾಪ್ರಾಕಾರಗಳು, ಪುಸ್ತಕವೊಂದನ್ನು ಬರೆಯುವುದು, ಸ್ವಿಮ್ಮಿಂಗ್ ಹೀಗೆ ಮೊದಲಾದ ಹವ್ಯಾಸಗಳನ್ನು ಬೆಳಸಿಕೊಳ್ಳಿ ಇದರಿಂದ ಮೆದುಳಿಗೆ ಕೆಲಸ ನೀಡಿದಂತಾಗುತ್ತದೆ.