ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Watermelon: ಕಲ್ಲಂಗಡಿ ತಿಂದ ಮೇಲೆ ಈ ಆಹಾರ ಸೇವಿಸುವ ಅಭ್ಯಾಸ ನಿಮಗಿದ್ರೆ ಇಂದೇ ಬಿಟ್ಟು ಬಿಡಿ!

ಕಲ್ಲಂಗಡಿ ಹಣ್ಣು(Watermelon) ಸೇವಿಸಿದ‌ ನಂತರ ಕೆಲವೊಂದು ಆಹಾರವನ್ನು ಸೇವಿಸಲೇ ಬಾರದು. ಕಲ್ಲಂಗಡಿ ಹಣ್ಣನ್ನು ತಿಂದ ತಕ್ಷಣ ಕೆಲವೊಂದು ಆಹಾರ ಸೇವಿಸು ವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ಅನೇಕ ಹೊಟ್ಟೆ ಸಮಸ್ಯೆಗಳನ್ನು ಉಂಟುಮಾಡುವ ಜೊತೆಗೆ ಆಮ್ಲೀಯತೆ, ಗ್ಯಾಸ್ಟ್ರಿಕ್ ನಂತಹ ಸಮಸ್ಯೆಯನ್ನು ಉಂಟು ಮಾಡಬಹುದು. ಹಾಗಾಗಿ ಕಲ್ಲಂಗಡಿ ಹಣ್ಣು ತಿಂದ ನಂತರ ಎಂದಿಗೂ ಈ ಆಹಾರಗಳನ್ನು ಸೇವಿಸಬಾರದು.

ಕಲ್ಲಂಗಡಿ ಹಣ್ಣು ತಿಂದ ತಕ್ಷಣ ಈ ಆಹಾರಗಳ ಸೇವನೆ ಮಾಡ್ಲೇಬಾರದು!

Profile Pushpa Kumari Mar 22, 2025 5:00 AM

ನವದೆಹಲಿ: ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿನ ಸೇವನೆಗೆ ಹೆಚ್ಚಿನ ಆಧ್ಯತೆ ನೀಡುತ್ತಾರೆ. ಇದರಲ್ಲಿ ಅಧಿಕ ನೀರಿನಾಂಶ ಇರುವ ಕಾರಣ ಆರೋಗ್ಯಕ್ಕೆ ಬಹಳ‌ ಒಳ್ಳೆಯದು. ಈ ರಸಭರಿತವಾದ ಹಣ್ಣಿನಲ್ಲಿ ಥಯಾಮಿನ್, ರೈಬೋ ಫ್ಲಾವಿನ್, ನಿಯಾಸಿನ್, ಪ್ಯಾಂಟೊಥೆನಿಕ್  ಪೊಟ್ಯಾಸಿಯಮ್, ಮ್ಯಾಂಗ ನೀಸ್ ನಂತಹ ಹಲವು ರೀತಿಯ ಪೋಷಕಾಂಶಗಳು ಇರಲಿದ್ದು ಇದು ನಮ್ಮ ದೇಹವನ್ನು ತಾಜಾವಾಗಿರಲು ಮತ್ತು ದೇಹವನ್ನು ಹೈಡ್ರೀಕರಿಸಲು ಸಹಾಯ ಮಾಡುತ್ತದೆ. ಆದರೆ ಕಲ್ಲಂಗಡಿ ಹಣ್ಣು ಸೇವಿಸಿದ‌ ನಂತರ ಕೆಲ ವೊಂದು ಆಹಾರವನ್ನು ಸೇವಿಸಲೇಬಾರದು. ಕಲ್ಲಂಗಡಿ ಹಣ್ಣನ್ನು ತಿಂದ ತಕ್ಷಣ ಕೆಲವೊಂದು ಆಹಾರ ಸೇವಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ಅನೇಕ ಹೊಟ್ಟೆ ಸಮಸ್ಯೆಗಳನ್ನು ಉಂಟು ಮಾಡುವ ಜೊತೆಗೆ ಆಮ್ಲೀಯತೆ, ಗ್ಯಾಸ್ಟ್ರಿಕ್ ನಂತಹ ಸಮಸ್ಯೆ ಯನ್ನು ಉಂಟು ಮಾಡಬಹುದು. ಹಾಗಾಗಿ ಕಲ್ಲಂಗಡಿ ಹಣ್ಣು ತಿಂದ ನಂತರ ಎಂದಿಗೂ ಈ ಆಹಾರಗಳನ್ನು ಸೇವಿಸಬಾರದು...(Health Tips)

ಯಾವೆಲ್ಲ ಆಹಾರಗಳನ್ನು ಸೇವಿಸಬಾರದು?

ಮೊಟ್ಟೆ​: ಕಲ್ಲಂಗಡಿ ಹಣ್ಣು ತಿಂದ ನಂತರ ಮೊಟ್ಟೆಯನ್ನು ಸೇವಿಸಬಾರದು. ಮೊಟ್ಟೆಯಲ್ಲಿ ಪ್ರೋಟೀನ್, ಒಮೆಗಾ 3 ಕೊಬ್ಬಿನಾಮ್ಲಗಳು ಸಮೃದ್ಧವಾಗಿದ್ದು ಇದರೊಂದಿಗೆ ಕಲ್ಲಂಗಡಿ ತಿಂದರೆ ಜೀರ್ಣಕಾರಿ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದರಿಂದ ಹೊಟ್ಟೆ ಉಬ್ಬುವುದು ಮತ್ತು ಮಲಬದ್ಧತೆ ಯಂತಹ ಸಮಸ್ಯೆಗೆ ಕಾರಣವಾಗಬಹುದು. ಇವೆರಡೂ ಹೊಟ್ಟೆಯಲ್ಲಿ ಪರಸ್ಪರ ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಹೊಟ್ಟೆಯ ಅಸ್ವಸ್ಥತೆಯನ್ನು ಉಂಟು ಮಾಡಬಹುದು.

ಹಾಲು: ಕಲ್ಲಂಗಡಿ ತಿಂದ ನಂತರ ಹಾಲುಕೂಡ ಸೇವಿಸಬಾರದು. ಕಲ್ಲಂಗಡಿಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ತಕ್ಷಣ ಹಾಲು ಕುಡಿದಾಗ ಆರೋಗ್ಯಕ್ಕೆ ಹಾನಿಯಾಗಬಹುದು.ಇದು ಕಳಪೆ ಜೀರ್ಣಕ್ರಿಯೆ ಹೊಟ್ಟೆ ಹುಣ್ಣು ಇತ್ಯಾದಿ ಸಮಸ್ಯೆ ಯನ್ನು  ಉಂಟುಮಾಡುತ್ತದೆ. ಹಾಗಾಗಿ ಕಲ್ಲಂಗಡಿ ಹಣ್ಣು ತಿಂದ ನಂತರ ಹಾಲು ಕುಡಿಯಬಾರದು

ಪ್ರೋಟೀನ್ ಆಹಾರಗಳು:

ಪ್ರೋಟೀನ್‌ಯುಕ್ತ ಆಹಾರಗಳು ನಮ್ಮ ದೇಹಕ್ಕೆ ಬಹಳ ಅಗತ್ಯವಾಗಿದ್ದರೂ ಕಲ್ಲಂಗಡಿ ಹಣ್ಣಿನ ಸೇವನೆ ನಂತರ ಪ್ರೊಟೀನ್‌ ಇರುವ ಆಹಾರವನ್ನು ಸೇವಿಸಬಾರದು. ಏಕೆಂದರೆ ಕಲ್ಲಂಗಡಿಯಲ್ಲಿ  ಜೀವಸತ್ವಗಳು ಮತ್ತು ಖನಿಜಗಳು ಅಧಿಕವಾಗಿದ್ದು ಬೇಳೆ ಕಾಳುಗಳಂತಹ ಪ್ರೋಟೀನ್ ಇರುವ ಆಹಾರ ಸೇವಿಸಲೇ ಬಾರದು. ಇದು ಜೀರ್ಣಕಾರಿ ಕಿಣ್ವಗಳಿಗೆ ಸಮಸ್ಯೆ ಯಾಗಿ ಹೊಟ್ಟೆ ನೋವಿನಂತಹ ಸಮಸ್ಯೆ ಉಂಟು ಮಾಡಬಹುದು.

​ಉಪ್ಪು​ : ಕಲ್ಲಂಗಡಿ ಹಣ್ಣಿನ ಜೊತೆ ಉಪ್ಪು ಸೇರಿಸಿ ತಿನ್ನಬಾರದು. ಕಲ್ಲಂಗಡಿ ಯೊಂದಿಗೆ ಉಪ್ಪನ್ನು ತಿನ್ನುವುದರಿಂದ, ಅದರ ಪೋಷಕಾಂಶಗಳು ದೇಹ ದಲ್ಲಿ ಸೇರಿಕೊಳ್ಳುವ ಬದಲು ಆರೋಗ್ಯ ಸಮಸ್ಯೆಗಳೇ ಹೆಚ್ಚಾಗಿ ಕಾಡಲಿದೆ, ಇದು ರಕ್ತದೊತ್ತಡವನ್ನು ಹೆಚ್ಚು ಮಾಡಿ ಹೃದಯದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.

ಮಾಂಸ ಸೇವನೆ:

ಕಲ್ಲಂಗಡಿಯ ಸೇವನೆ ನಂತರ ಕೋಳಿ ಮಾಂಸದಂತ ಯಾವುದೇ ಆಹಾರ ತಿನ್ನಬಾರದು.ಇವು ಮತ್ತು ಕಲ್ಲಂಗಡಿ ಹಣ್ಣು ದೇಹಕ್ಕೆ ಸರಿಯಾಗಿ ಹೊಂದಿ ಕೊಳ್ಳುವುದಿಲ್ಲ. ಇದು ಹೊಟ್ಟೆಯಲ್ಲಿ ವ್ಯತ್ಯಾಸವನ್ನುಂಟು ಮಾಡಿ ಅಜೀರ್ಣ ಗ್ಯಾಸ್ಟ್ರಿಕ್‌ ನಂತಹ ಸಮಸ್ಯೆ ಉಂಟು ಮಾಡಬಹುದು.

ಇದನ್ನು ಓದಿ: Health Tips: ಗರ್ಭಾವಸ್ಥೆಯಲ್ಲಿ ಪ್ಯಾರಾಸಿಟಮಾಲ್ ಮಾತ್ರೆ ಸೇವನೆ ಮುನ್ನ ಈ ವಿಚಾರ ಗಮನದಲ್ಲಿರಲಿ

ಡೈರಿ ಉತ್ಪನ್ನಗಳನ್ನು ತಿನ್ನಬೇಡಿ: ಕಲ್ಲಂಗಡಿ ಹಣ್ಣಿನ ಸೇವನೆ ಬಳಿಕ ಹಾಲಿನೊಂದಿಗೆ ಮಾಡಿದ ಸ್ಮೂಥಿ ಗಳನ್ನು ಸೇವಿಸಲೇಬಾರದು. ಹಾಗೆಯೇ ಕಲ್ಲಂಗಡಿ ತಿಂದ ತಕ್ಷಣ ಮೊಸರು ಮಜ್ಜಿಗೆ ಇತ್ಯಾದಿ ಯನ್ನು ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಕರ ಎಂದು ತಜ್ಞರು ಸಲಹೆ ನೀಡುತ್ತಾರೆ. ಹಾಗಾಗಿ ಹಾಲಿನ ಉತ್ಪನ್ನ ಮತ್ತು ಈ ಹಣ್ಣು ಒಟ್ಟಿಗೆ ಸೇವಿಸುವುದರಿಂದ ಗ್ಯಾಸ್ಟ್ರಿಕ್ಟ್ ಸೇರಿದಂತೆ ಮುಂತಾದ ಸಮಸ್ಯೆಗಳು ಉಂಟಾಗಬಹುದು.

ಕರಿದ ಆಹಾರ: ವಾಟರ್ ಮೆಲೋನ್ ತಿಂದ ನಂತರ ಕರಿದ ಆಹಾರವನ್ನು ಸೇವಿಸಲೇ ಬಾರದು ಕರಿದ ಆಹಾರಗಳು ದೇಹಕ್ಕೆ ಬಹಳಷ್ಟು ಹಾನಿಕಾರಕವಾಗಿದ್ದು ಕಲ್ಲಂಗಡಿ ತಿಂದ ತಕ್ಷಣ ಕರಿದ ಆಹಾರವನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಬರಬಹುದು.ಇದರ ಜೊತೆ ಇವರೆಡು ದೇಹಕ್ಕೆ ಹೊಂದಿಕೊಳ್ಳದೆ ಹೆಚ್ಚಿನ ಅನಾರೋಗ್ಯ ಸಮಸ್ಯೆ ಉಂಟು ಮಾಡಬಹುದು.