ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

KAR vs JK: ಕರ್ನಾಟಕ 293 ರನ್‌ಗಳಿಗೆ ಆಲ್‌ಔಟ್‌, ಚೊಚ್ಚಲ ರಣಜಿ ಟ್ರೋಫಿ ಗೆಲ್ಲುವ ಸನಿಹದಲ್ಲಿ ಜಮ್ಮು ಮತ್ತು ಕಾಶ್ಮೀರ!

ಆಕಿಬ್‌ ನಬಿ ಮಾರಕ ಬೌಲಿಂಗ್‌ ದಾಳಿ ಹಾಗೂ ಕಮ್ರಾನ್‌ ಇಕ್ಬಾಲ್‌ ಬ್ಯಾಟಿಂಗ್‌ ನೆರವಿನಿಂದ ಜಮ್ಮು ಮತ್ತು ಕಾಶ್ಮೀರ ತಂಡ, 2025-26ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡದ ಎದುರು ನಾಲ್ಕನೇ ದಿನವೂ ಭಾರಿ ಮುನ್ನಡೆ ಪಡೆದಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ಜಮ್ಮು ಮತ್ತು ಕಾಶ್ಮೀರ ತಂಡ 477 ರನ್‌ಗಳ ಮುನ್ನಡೆಯನ್ನು ಪಡೆಯುವ ಮೂಲಕ ಚೊಚ್ಚಲ ರಣಜಿ ಟ್ರೋಫಿ ಗೆಲ್ಲುವ ಸನಿಹದಲ್ಲಿದೆ.

ಚೊಚ್ಚಲ ರಣಜಿ ಟ್ರೋಫಿ ಗೆಲ್ಲುವ ಸನಿಹದಲ್ಲಿ ಜಮ್ಮು ಮತ್ತು ಕಾಶ್ಮೀರ!

ಚೊಚ್ಚಲ ರಣಜಿ ಟ್ರೋಫಿ ಗೆಲ್ಲುವ ಸನಿಹದಲ್ಲಿ ಜಮ್ಮು ಮತ್ತು ಕಾಶ್ಮೀರ. -

Profile
Ramesh Kote Feb 27, 2026 7:10 PM

ಹುಬ್ಬಳ್ಳಿ: ಮಯಾಂಕ್‌ ಅಗರ್ವಾಲ್‌ (Mayank Agarwal) ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಕರ್ನಾಟಕ ತಂಡ 2025-26ರ ಸಾಲಿನ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯ ಫೈನಲ್‌ ಪಂದ್ಯದ ನಾಲ್ಕನೇ ದಿನವೂ ಜಮ್ಮು ಮತ್ತು ಕಾಶ್ಮೀರ ಎದುರು ಹಿನ್ನಡೆಯನ್ನು ಅನುಭವಿಸಿದೆ. ಆಕಿಬ್‌ ನಬಿ (Aquib Nabi) ಮಾರಕ ಬೌಲಿಂಗ್‌ ದಾಳಿ ಹಾಗೂ ಕಮ್ರಾನ್‌ ಇಕ್ಬಾಲ್‌ ಅವರ ಬ್ಯಾಟಿಂಗ್‌ ಬಲದಿಂದ ಜಮ್ಮು ಮತ್ತು ಕಾಶ್ಮೀರ ತಂಡ, ನಾಲ್ಕನೇ ದಿನ 477 ರನ್‌ಗಳ ಬೃಹತ್‌ ಮುನ್ನಡೆಯನ್ನು ಪಡೆದಿದೆ ಹಾಗೂ ಚೊಚ್ಚಲ ರಣಜಿ ಟ್ರೋಫಿ ಗೆಲ್ಲುವ ಸನಿಹ ಬಂದು ನಿಂತಿದೆ.

ಇಲ್ಲಿನ ಕೆಎಸ್‌ಸಿಎ ಮೈದಾನದಲ್ಲಿ ನಾಲ್ಕನೇ ದಿನವಾದ ಶುಕ್ರವಾರ, 5 ವಿಕೆಟ್‌ ಕಳೆದುಕಂಡು 220 ರನ್‌ಗಳಿಂದ ಪ್ರಥಮ ಇನಿಂಗ್ಸ್‌ ಮುಂದುವರಿಸಿದ ಕರ್ನಾಟಕ ತಂಡಕ್ಕೆ ಆಕಿಬ್‌ ನಬಿ ಶಾಕ್‌ ನೀಡಿದರು. ಬಳಿಗ್ಗೆ ಕ್ರೀಸ್‌ಗೆ ಬಂದ ಮಯಾಂಕ್‌ ಅಗರ್ವಾಲ್‌ ಹಾಗೂ ಕೃತಿಕ್‌ ಕೃಷ್ಣ ದೀರ್ಘಾವಧಿ ಕ್ರೀಸ್‌ನಲ್ಲಿ ಉಳಿಯಲಿಲ್ಲ. 101 ಎಸೆತಗಳಲ್ಲಿ 36 ರನ್‌ ಗಳಿಸಿದ ಕೃತಿಕ್‌ ಕೃಷ್ಣ ಅವರನ್ನು ಸಾಹಿಲ್‌ ಲೋಥ್ರಾ ಔಟ್‌ ಮಾಡಿದರು.

ರಣಜಿ ಫೈನಲ್‌; 293 ರನ್‌ಗೆ ಕರ್ನಾಟಕ ಆಲೌಟ್‌, 302 ರನ್‌ ಲೀಡ್‌ ಪಡೆದ ಜಮ್ಮು-ಕಾಶ್ಮೀರ

ಪಂದ್ಯದ ಮೂರನೇ ದಿನ ಅಜೇಯ ಶತಕ ಬಾರಿಸಿದ್ದ ಮಯಾಂಕ್‌ ಅಗರ್ವಾಲ್‌ ನಾಲ್ಕನೇ ದಿನವೂ ಹೋರಾಟವನ್ನು ಮುಂದುವರಿಸಿದರು. ಮತ್ತೊಂದು ತುದಿಯಲ್ಲಿ ಯಾರೂ ಸಾಥ್‌ ನೀಡದೇ ಇದ್ದರೂ ಅವರು ಏಕಾಂಗಿಯಾಗಿ ಬ್ಯಾಟ್‌ ಮಾಡಿದ್ದರು. ಅವರು ನಾಲ್ಕನೇ ದಿನ 266 ಎಸೆತಗಳಲ್ಲಿ 22 ಮನಮೋಹಕ ಬೌಂಡರಿಗಳೊಂದಿಗೆ 160 ರನ್‌ಗಳನ್ನು ಗಳಿಸಿದ ಬಳಿಕ ಆಕಿಬ್‌ ನಬಿಗೆ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ ಕರ್ನಾಟಕ ತಂಡ, 93.3 ಓವರ್‌ಗಳಿಗೆ 293 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಪ್ರಥಮ ಇನಿಂಗ್ಸ್‌ನಲ್ಲಿ 302 ರನ್‌ಗಳ ಭಾರಿ ಹಿನ್ನಡೆಯನ್ನು ಅನುಭವಿಸಿತು.

ಜಮ್ಮು ಮತ್ತು ಕಾಶ್ಮೀರ ತಂಡದ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಆಕಿಬ್‌ ನಬಿ ಅವರು 23 ಓವರ್‌ಗಳಿಗೆ 54 ರನ್‌ ನೀಡಿ 5 ವಿಕೆಟ್‌ ಸಾಧನೆ ಮಾಡಿದರು. ಸುನೀಲ್‌ ಕುಮಾರ್‌ ಹಾಗೂ ಯಧುವೀರ್‌ ಸಿಂಗ್‌ ಚರಕ್‌ ತಲಾ ಎರಡು ವಿಕೆಟ್‌ಗಳನ್ನು ಪಡೆದರು.

T20 World Cup: ಅಭಿಷೇಕ್‌ ಶರ್ಮಾರನ್ನು ʻಸ್ಲಾಗರ್‌ʼ ಎಂದಿದ್ದ ಮೊಹಮ್ಮದ್‌ ಆಮಿರ್‌ ಯು-ಟರ್ನ್‌!

477 ರನ್‌ ಮುನ್ನಡೆಯಲ್ಲಿರುವ ಜಮ್ಮು ಮತ್ತು ಕಾಶ್ಮೀರ

ಬೃಹತ್‌ ಮೊತ್ತದ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಜಮ್ಮು ಮತ್ತು ಕಾಶ್ಮೀರ ತಂಡ, ಕಮ್ರಾನ್‌ ಇಕ್ಬಾಲ್‌ ಅವರ ಬ್ಯಾಟಿಂಗ್‌ ಬಲದಿಂದ ನಾಲ್ಕನೇ ದಿನದಾಟದ ಅಂತ್ಯಕ್ಕೆ 57 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 286 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ ಒಟ್ಟಾರೆಯಾಗಿ 477 ರನ್‌ಗಳ ಮುನ್ನಡೆಯನ್ನು ಹೊಂದಿದೆ. ಆ ಮೂಲಕ ಆತಿಥೇಯ ಕರ್ನಾಟಕ ತಂಡಕ್ಕೆ ಬೃಹತ್‌ ಮೊತ್ತದ ಗುರಿಯನ್ನು ನೀಡುವ ಹಾದಿಯಲ್ಲಿದೆ.

ನಾಲ್ಕನೇ ದಿನ ಜಮ್ಮು ಮತ್ತು ಕಾಶ್ಮೀರ ತಂಡದ ಸೋಗಸಾಗಿ ಬ್ಯಾಟ್‌ ಮಾಡಿದ ಕಮ್ರಾನ್‌ ಇಕ್ಬಾಲ್‌ ಅವರು 160 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 11 ಬೌಂಡರಿಗಳೊಂದಿಗೆ ಅಜೇಯ 94 ರನ್‌ ಗಳಿಸಿ ಐದನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. 32 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದ ಅಬ್ದುಲ್‌ ಸಮದ್‌ ಶ್ರೇಯಸ್‌ ಗೋಪಾಲ್‌ಗೆ ವಿಕೆಟ್‌ ಒಪ್ಪಿಸಿದರು. ಅಜೇಯ 16 ರನ್‌ ಗಳಿಸಿರುವ ಸಾಹಿಲ್‌ ಲೋಥ್ರಾ ಐದನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.



ಕರ್ನಾಟಕದ ರಣಜಿ ಟ್ರೋಫಿ ಗೆಲ್ಲುವ ಆಸೆ ಭಗ್ನ

ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಅಂತರದಲ್ಲಿ ಹಿನ್ನಡೆ ಅನುಭವಿಸಿರುವ ಕರ್ನಾಟಕ ತಂಡಕ್ಕೆ ಹಲವು ವರ್ಷಗಳ ಬಳಿಕ ರಣಜಿ ಟ್ರೋಫಿ ಗೆಲ್ಲುವ ಕನಸು ಭಗ್ನವಾಗಿದೆ. ಇದೀಗ ಜಮ್ಮು ಮತ್ತು ಕಾಶ್ಮೀರ ತಂಡ 477 ರನ್‌ಗಳನ್ನು ಮುನ್ನಡೆ ಪಡೆದಿದ್ದು, ಐದನೇ ದಿನವೂ ಬ್ಯಾಟಿಂಗ್‌ ಮುಂದುವರಿಸಿದರೆ ಅಥವಾ ಡಿಕ್ಲೆರ್‌ ಮಾಡಿಕೊಂಡು ಕರ್ನಾಟಕಕ್ಕೆ ಅಂತಿಮ ಇನಿಂಗ್ಸ್‌ನಲ್ಲಿ ಬ್ಯಾಟ್‌ ಮಾಡಲು ಬಿಟ್ಟುಕೊಟ್ಟರೂ ಬೃಹತ್‌ ಮೊತ್ತವನ್ನು ಚೇಸ್‌ ಮಾಡಲು ಕರ್ನಾಟಕ ತಂಡದಿಂದ ಸಾಧ್ಯವಾಗುವುದಿಲ್ಲ, ಹಾಗಾಗಿ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡರೆ, ಪ್ರಥಮ ಇನಿಂಗ್ಸ್‌ನಲ್ಲಿನ ಮುನ್ನಡೆಯ ಫಲವಾಗಿ ಜಮ್ಮು ಮತ್ತು ಕಾಶ್ಮೀರ ತಂಡ ಚೊಚ್ಚಲ ರಣಜಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದೆ.