ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಸತ್ವಗಳ ಕೊರತೆಯಾದರೆ ದೇಹ ನೀಡುವ ಸೂಚನೆಗಳು ಗೊತ್ತೇ?

Health Tips: ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳು ದೇಹ ಸೇರಿದರೆ, ಬಹಳಷ್ಟು ರೋಗಗಳು ಹತ್ತಿರವೇ ಬಾರದಂತೆ ಸ್ವಸ್ಥವಾಗಿ ಇರಬಹುದು. ಅದಲ್ಲದಿದ್ದರೆ, ಸತ್ವಗಳ ಕೊರತೆಯನ್ನು ಆರಂಭದಲ್ಲೇ ಅರಿತು ಕೊಂಡರೆ ಮುಂದೆ ದೊಡ್ಡ ಸಮಸ್ಯೆಯಾಗುವುದನ್ನು ತಪ್ಪಿಸಬಹುದು.ಯಾವ ಪೋಷಕಾಂಶಗಳ ಕೊರತೆ ಯಿದ್ದರೆ ದೇಹವು ಎಂತಹ ಸೂಚನೆಗಳನ್ನು ನೀಡುತ್ತದೆ ಎಂಬುದು ಗೊತ್ತೇ?

ಸತ್ವಗಳ‌ ಪ್ರಮಾಣ ಕಡಿಮೆ ಆದಾಗ ಈ ಆರೋಗ್ಯ ಸಮಸ್ಯೆಗಳು ಕಾಡಲಿದೆ!

Profile Pushpa Kumari Mar 22, 2025 6:00 AM

ನವದೆಹಲಿ: ಆರೋಗ್ಯಕರವಾಗಿ ಇರುವುದೆಂದರೆ ನೋಡುವುದಕ್ಕೆ ನಳನಳಿಸುತ್ತಿರುವುದು ಮಾತ್ರವೇ ಅಲ್ಲ, ದೇಹಕ್ಕೆ ಯಾವುದೇ ಸತ್ವಗಳ ಕೊರತೆ ಆಗದಂತೆ ಇರುವುದೂ ಸೇರಿದೆ. ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳು ದೇಹ ಸೇರಿದರೆ, ಬಹಳಷ್ಟು ರೋಗಗಳು(Health Tips) ಹತ್ತಿರವೇ ಬಾರದಂತೆ ಸ್ವಸ್ಥವಾಗಿ ಇರಬಹುದು. ಅದಲ್ಲದಿದ್ದರೆ, ಸತ್ವಗಳ ಕೊರತೆ ಯನ್ನು ಆರಂಭದಲ್ಲೇ ಅರಿತು ಕೊಂಡರೆ ಮುಂದೆ ದೊಡ್ಡ ಸಮಸ್ಯೆ ಯಾಗುವುದನ್ನು ತಪ್ಪಿಸ ಬಹುದು. ಯಾವ ಪೋಷಕಾಂಶಗಳ ಕೊರತೆ ಯಿದ್ದರೆ ದೇಹವು ಎಂತಹ ಸೂಚನೆಗಳನ್ನು ನೀಡುತ್ತದೆ ಎಂಬುದು ಗೊತ್ತೇ?

ಕೀಲುಗಳು: ದೇಹದ ಯಾವುದೇ ಕೀಲುಗಳಲ್ಲಿ- ಮಂಡಿ, ಸೊಂಟ, ಭುಜ, ಮಣಿಕಟ್ಟು- ಎಲ್ಲಾದರೂ ಸರಿ, ತಿರುಗಿಸಿದಾಗ ಕಟಕಟ ಸದ್ದುಗಳು ಬರುತ್ತಿ ವೆಯೇ? ಅಪರೂಪಕ್ಕೆ ಈ ಶಬ್ದಗಳು ಬಂದರೆ ಸಮಸ್ಯೆಯೇನಿಲ್ಲ. ಆದರೆ ಪದೇಪದೆ ಬರುತ್ತಿದ್ದರೆ, ಸದಾ ಬರುತ್ತಿದ್ದರೆ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಇರಬಹುದು. ಮೂಳೆ ಮತ್ತು ಕೀಲುಗಳು ಸದೃಢವಾಗಿ ಇರಬೇಕೆಂದರೆ ದೇಹಕ್ಕೆ ಸಾಕಷ್ಟು ಕ್ಯಾಲ್ಸಿಯಂ ದೊರೆಯಬೇಕು. ಅದಕ್ಕಾಗಿ ಡೈರಿ ಉತ್ಪನ್ನ ಗಳು, ಹಸಿರು ಸೊಪ್ಪು-ತರಕಾರಿಗಳು, ಎಳ್ಳು ಇತ್ಯಾದಿಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.

ಬಾಯಿಹುಣ್ಣು: ಆಗಾಗ ಬಾಯಿಹುಣ್ಣು ಕಾಡಿಸುತ್ತಿದೆಯೇ? ಬಾಯಿಯ ಆರೋಗ್ಯದ ಕಾಳಜಿ ಮಾಡುತ್ತಿದ್ದರೂ ಒಸಡಿನಲ್ಲಿ ರಕ್ತಸ್ರಾವ ಆಗುತ್ತಿ ದೆಯೇ? ಹಾಗಾದರೆ ಇನ್ನಷ್ಟು ವಿಟಮಿನ್‌ ಸಿ ಬೇಕು ದೇಹಕ್ಕೆ. ಗಾಯ ಗಳನ್ನು ಮಾಯಿಸುವುದಕ್ಕೆ ಮತ್ತು ಒಸಡುಗಳ ಸ್ವಾಸ್ಥ್ಯ ಕಾಪಾಡುವುದಕ್ಕೆ ಕೊಲಾಜಿನ್‌ ಅಗತ್ಯ. ಈ ಕೊಲಾಜಿನ್‌ ಉತ್ಪಾದನೆಗೆ ನಮ್ಮ ಶರೀರಕ್ಕೆ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್‌ ಸಿ ಬೇಕು. ಹಾಗಾಗಿ ಬೆರ್ರಿಗಳು, ಸಿಟ್ರಸ್‌ ಹಣ್ಣುಗಳು, ನೆಲ್ಲಿಕಾಯಿ, ಕ್ಯಾಪ್ಸಿಕಂ ಮುಂತಾದವು ಆಹಾರದಲ್ಲಿ ಇರಲಿ

ಉಗುರು, ಕೂದಲು: ಉಗುರುಗಳು ಸುಲಭವಾಗಿ ತುಂಡಾಗುತ್ತಿವೆಯೇ? ಕೂದಲು ಸಹ ಒಣಗಿ ತುಂಡಾ ಗುತ್ತಿವೆಯೇ? ಹಾಗಾದರೆ ದೇಹಕ್ಕೆ ಬಯೋ ಟಿನ್‌ (ವಿಟಮಿನ್‌ ಬಿ೭) ಕಡಿಮೆಯಾಗಿರಬಹುದು. ಕೂದಲು ಮತ್ತು ಉಗುರುಗಳ ಆರೋಗ್ಯ ರಕ್ಷಣೆಯಲ್ಲಿ ಬಯೋಟಿನ್‌ ಅಗತ್ಯವಾಗಿ ಬೇಕು. ಅದಕ್ಕಾಗಿ ಮೊಟ್ಟೆ, ಬೀಜಗಳು, ಗೆಣಸು ಇತ್ಯಾದಿಗಳು ನಿತ್ಯವೂ ಹೊಟ್ಟೆ ಸೇರಲಿ.

ಸುಸ್ತು, ಸ್ನಾಯು ದೌರ್ಬಲ್ಯ: ಇವೆರಡು ಲಕ್ಷಣಗಳು ಮಾತ್ರವನ್ನು, ಉಗುರನ್ನು ಬೆಳಕಿಗೆ ಹಿಡಿದಾಗ ಬಿಳುಚಿದಂತೆ ಅಥವಾ ಅದರ ಮೇಲೆ ಬಿಳಿಯ ಚುಕ್ಕಿಗಳಿರುವಂತೆ ಕಾಣುತ್ತಿದೆಯೇ? ಸದಾ ಸುಸ್ತಾಗುವುದು ಇಲ್ಲವೇ ಮಾಂಸಖಂಡಗಳು ದುರ್ಬಲವಾದಂತೆ ಭಾಸವಾಗುತ್ತದೆಯೇ? ಹಾಗಾದರೆ ಜಿಂಕ್‌ ಅಥವಾ ಸತುವಿನ ಪ್ರಮಾಣ ಕಡಿಮೆ ಆಗಿರಬಹುದು. ದೇಹದ ಪ್ರತಿರೋಧಕತೆ ಚೆನ್ನಾಗಿರುವುದಕ್ಕೂ ಇದು ಬೇಕು. ಹಾಗಾಗಿ ಕುಂಬಳಕಾಯಿ ಬೀಜಗಳು, ಇಡೀ ಧಾನ್ಯಗಳು, ಬೇಳೆ-ಕಾಳುಗಳನ್ನು ಹೆಚ್ಚಾಗಿ ತಿನ್ನಿ.

ಹಿಮ್ಮಡಿ, ತುಟಿ: ಕಾಲಿನ ಹಿಮ್ಮಡಿಗಳು ಬಿರಿದು ನೋವಾಗುತ್ತಿದೆಯೇ? ತುಟಿಯಂಚಿನಲ್ಲಿ ಹುಣ್ಣುಗಳು ಗೋಳಾಡಿಸುತ್ತಿವೆಯೇ? ಹಾಗಾದರೆ ವಿಟ ಮಿನ್‌ ಬಿ೨ (ರೈಬೊಫ್ಲೇವಿನ್)‌ ಅಂಶ ದೇಹಕ್ಕೆ ಇನ್ನಷ್ಟು ಬೇಕಾಗಿದ್ದೀತು. ಚರ್ಮದ ಸ್ವಾಸ್ಥ್ಯ ಕಾಪಾಡುವಲ್ಲಿ ಈ ಸತ್ವ ಅಗತ್ಯ. ಅದಕ್ಕಾಗಿ ಡೈರಿ ಉತ್ಪನ್ನಗಳು, ಹಸಿರು ಸೊಪ್ಪು-ತರಕಾರಿಗಳು, ಬಾಳೆಹಣ್ಣು, ಪೌಲ್ಟ್ರಿ ಉತ್ಪನ್ನಗಳು ಆಹಾರದಲ್ಲಿ ಸೇರಿರಲಿ.

ಇದನ್ನು ಓದಿ: Health Tips: ಮಕ್ಕಳಲ್ಲಿನ ದೃಷ್ಟಿದೋಷ ತಿಳಿಯುವುದು ಹೇಗೆ?

ಬಣ್ಣಗೆಡುವ ಉಗುರು: ತಿಳಿ ಗುಲಾಬಿ ಬಣ್ಣದಲ್ಲಿ ಇರಬೇಕಾದ ಉಗುರುಗಳು ಬಣ್ಣಗೆಟ್ಟು ಕಂದು ಬಣ್ಣಕ್ಕೆ ತಿರುಗುತ್ತಿವೆಯೇ? ಹಾಗಾದರೆ ವಿಟಮಿನ್‌ ಬಿ12 ಮಟ್ಟ ದೇಹದಲ್ಲಿ ಕಡಿಮೆಯಾಗಿರಬಹುದು. ಕೆಂಪು ರಕ್ತಕಣಗಳ ಉತ್ಪಾ ದನೆಗೆ ಈ ಜೀವಸತ್ವ ಬೇಕು. ಜೊತೆಗೆ ನರಗಳ ಕೆಲಸ ಸರಿಯಾಗಿರಲೂ ಇದು ಅಗತ್ಯ. ಇದಕ್ಕಾಗಿ ಡೈರಿ ಉತ್ಪನ್ನಗಳು, ಮೀನು, ಮೊಟ್ಟೆಗಳೆಲ್ಲ ಸಾಕಷ್ಟು ಪ್ರಮಾಣದಲ್ಲಿ ಇರಲಿ ಆಹಾರದಲ್ಲಿ.

ತುಟಿಗಳು, ಚರ್ಮ: ಯಾವುದೇ ಪ್ರಸಾದನಗಳಿಲ್ಲದೆಯೇ ಚರ್ಮ ಬಿಳಿ ಯಾಗಿ ಬಿಳುಚಿಕೊಂಡಂತೆ ಕಾಣುತ್ತಿದೆಯೇ? ತುಟಿಗಳು ಗುಲಾಬಿ ಬಣ್ಣವನ್ನು ಕಳೆದುಕೊಳ್ಳುತ್ತಿವೆಯೇ? ಹಾಗಾದರೆ ಕಬ್ಬಿಣದಂಶ ಕಡಿಮೆ ಯಾಗಿದ್ದೀತು. ಸೊಪ್ಪುಗಳು, ಬೀಟ್‌ರೂಟ್‌, ಕಾಳುಗಳನ್ನೆಲ್ಲ ಧಾರಾಳವಾಗಿ ತಿನ್ನಿ. ಇದರಿಂದ ಅನೀಮಿಯ ಅಥವಾ ರಕ್ತಹೀನತೆ ಕಾಡುವುದು ತಪ್ಪುತ್ತದೆ.

ಕಣ್ಣು, ಹುಬ್ಬು: ಕಣ್ಣಿನ ಕೆಳಭಾಗ ಉಬ್ಬಿದಂತಾಗಿದೆಯೇ? ಹುಬ್ಬಿನ ಕೂದಲುಗಳು ಉದುರಿ ತೆಳ್ಳಗಾಗುತ್ತಿದೆಯೇ? ಹಾಗಾದರೆ ಅಯೋಡಿನ್‌ ಸಾಕಷ್ಟು ತಿನ್ನುತ್ತಿಲ್ಲವೇ? ಥೈರಾಯ್ಡ್‌ ಗ್ರಂಥಿ ಸರಿಯಾಗಿ ಕೆಲಸ ಮಾಡಲು ಅಯೋಡಿನ್‌ ಅಂಶ ಬೇಕಾಗುತ್ತದೆ. ಅಯೋಡಿನ್‌ ಇರುವಂಥ ಉಪ್ಪನ್ನು ತಿಂದರೆ ಈ ಕೊರತೆಯನ್ನು ನೀಗಿಸಬಹುದು.