Control Belly Fat: ಊಟದ ನಂತರ ನಡಿಗೆ ಅಗತ್ಯವೇ? ತಜ್ಞರು ಹೇಳೋದೇನು?
Fitness Tips: ಬದಲಾದ ಜೀವನ ಶೈಲಿ ಮತ್ತು ಕಳಪೆ ಆಹಾರವು ಇಂದು ತೂಕ ಏರಿಕೆಗೆ ಕಾರಣವಾಗುತ್ತಿದೆ. ಅದರಲ್ಲೂ ಹೊಟ್ಟೆಯಲ್ಲಿ ತುಂಬಿರುವ ಬೊಜ್ಜು ಕಡಿಮೆ ಮಾಡುವುದು ಕಠಿಣ ಕೆಲಸ. ಇದನ್ನು ಕರಗಿಸಲು ಅನೇಕರು ಜಿಮ್, ಡಯಟ್ ಎಂದು ಪರದಾಡುತ್ತಲೇ ಇರುತ್ತಾರೆ. ಯಾಕೆಂದರೆ ಹೊಟ್ಟೆಯ ಬೊಜ್ಜು, ಮಧುಮೇಹ ಮತ್ತು ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯ ಹೆಚ್ಚಿಸುತ್ತದೆ. ಹೀಗಾಗಿ ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಊಟದ ನಂತರ ಹತ್ತು ನಿಮಿಷದವರೆಗೆ ನಡೆಯುವ ಮೂಲಕ ಬೊಜ್ಜನ್ನು ಕರಗಿಸಬಹುದು ಎಂದು ಸಲಹೆ ನೀಡಿದ್ದಾರೆ.
ಚಾಟ್‌ಜಿಪಿಟಿ ರಚಿತ ಚಿತ್ರ ಮತ್ತು ಸಾಂದರ್ಭಿಕ ಚಿತ್ರ -
ಬೆಂಗಳೂರು, ಜೂ. 4: ಇಂದು ಅನೇಕರು ಅತಿಯಾದ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬದಲಾದ ಜೀವನ ಶೈಲಿ ಮತ್ತು ಕಳಪೆ ಆಹಾರ ತೂಕ ಏರಿಕೆಗೆ ಪ್ರಮುಖ ಕಾರಣ. ಅದರಲ್ಲೂ ಹೊಟ್ಟೆಯಲ್ಲಿ ತುಂಬಿರುವ ಬೊಜ್ಜು ಕಡಿಮೆ ಮಾಡುವುದೇ ದೊಡ್ಡ ಸವಾಲು (Control Belly Fat). ಇದನ್ನು ಕರಗಿಸಲು ಅನೇಕರು ಜಿಮ್, ಡಯಟ್ ಎಂದು ಪರದಾಡುತ್ತಲೇ ಇರುತ್ತಾರೆ. ಯಾಕೆಂದರೆ ಹೊಟ್ಟೆಯ ಬೊಜ್ಜು, ಮಧುಮೇಹ ಮತ್ತು ಹೃದ್ರೋಗದಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡುತ್ತಲೇ ಬಂದಿದ್ದು ಊಟದ ನಂತರ ಹತ್ತು ನಿಮಿಷದವರೆಗೆ ನಡೆಯುವ ಮೂಲಕ ಬೊಜ್ಜನ್ನು ಕರಗಿಸಬಹುದು ಎಂದು ಸಲಹೆ ನೀಡಿದ್ದಾರೆ.
ಊಟದ ನಂತರ ನಡೆಯುವ ಸರಳ ಅಭ್ಯಾಸವು ರಕ್ತದಲ್ಲಿನ ಗ್ಲೂಕೋಸ್ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಹೊಟ್ಟೆಯ ಪ್ರದೇಶದ ಸುತ್ತಲೂ ಕೊಬ್ಬಿನ ಶೇಖರಣೆಯನ್ನು ಕಡಿತಗೊಳಿಸುತ್ತದೆ. ಹಾಗಾಗಿ ಪ್ರತಿ ಬಾರಿ ಊಟ ಮಾಡಿದ ನಂತರ ಕೇವಲ 10 ನಿಮಿಷಗಳವರೆಗೆ ವೇಗದಲ್ಲಿ ನಡೆಯುವ ಮೂಲಕ ಹೊಟ್ಟೆಯ ಸುತ್ತ ಶೇಖರಣೆಯಾಗಿರುವ ಕೊಬ್ಬನ್ನು ಸುಲಭವಾಗಿ ನಿಯಂತ್ರಿಸಬಹುದು.
ಊಟದ ನಂತರ ನಡೆದರೆ ಈ ಆರೋಗ್ಯ ಪ್ರಯೋಜನ ಸಿಗಲಿದೆ
ಜೀರ್ಣಕ್ರಿಯೆಗೆ ರಾಮಬಾಣ: ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಇದು ಸಹಕಾರಿ. ಆಹಾರ ಸೇವನೆಯ ನಂತರ, ಹೊಟ್ಟೆಯ ಸುತ್ತಲೂ ಕೊಬ್ಬು ಶೇಖರಣೆ ಇಲ್ಲದೆ ನಿಮ್ಮ ದೇಹಕ್ಕೆ ಆಹಾರವನ್ನು ಜೀರ್ಣಿಸಿಕೊಳ್ಳಲು ಈ ಅಭ್ಯಾಸ ಹೆಚ್ಚು ಸಹಾಯ ಮಾಡುತ್ತದೆ. ದೈಹಿಕ ಚಲನೆಯು ಹೊಟ್ಟೆ ಉಬ್ಬುವಿಕೆಯನ್ನು ತಡೆಯಲು ಗ್ಯಾಸ್ ಸಮಸ್ಯೆಯನ್ನು ಹೋಗಲಾಡಿಸಲು ಇದು ತಕ್ಷಣ ನೆರವಾಗುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ: ಊಟದ ನಂತರ ತಕ್ಷಣದ ನಡಿಗೆಯೂ ತೂಕ ನಷ್ಟಕ್ಕೆ ಪರಿಣಾಮಕಾರಿ. ಊಟ ಮಾಡಿದ ತಕ್ಷಣ ರಕ್ತದಲ್ಲಿ ಗ್ಲುಕೋಸ್ ಮಟ್ಟ ಏರಿಕೆಯಾಗುತ್ತದೆ. ಊಟ ಮಾಡಿದ ನಂತರ 10 ನಿಮಿಷ ನಡೆದರೆ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರುತ್ತದೆ.
ಹೊಟ್ಟೆಯ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ: ನೀವು ಊಟ ಮಾಡುವಾಗ, ದೇಹವು ಪೋಷಕಾಂಶಗಳನ್ನು ಹಿರಿಕೊಂಡು ಕೊಬ್ಬಿನ ಬಿಡುಗಡೆಗೆ ಕಾರಣವಾಗುತ್ತದೆ. ಹಾಗಾಗಿ ಊಟದ ನಂತರ ನಡೆಯುವುದು ಚಯಾಪಚಯ ಕ್ರಿಯೆಯನ್ನು ಸಕ್ರಿಯವಾಗಿಸಿ ದೇಹವು ಸೇವಿಸಿದ ಆಹಾರವನ್ನು ಒಡೆಯಲು ಸಹಾಯ ಮಾಡುತ್ತದೆ.
ಹಿಪ್ಪಲಿಯ ಔಷಧೀಯ ಗುಣಗಳ ಬಗ್ಗೆ ಗೊತ್ತೆ?
ಹೃದಯದ ಆರೋಗ್ಯ ಬೆಂಬಲಿಸುತ್ತದೆ: ಊಟದ ನಂತರದ ನಡಿಗೆಯು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಕಡಿಮೆ ಮಾಡಿ ಆರೋಗ್ಯವಾಗಿ ಇರಿಸಲು ಸಹಾಯ ಮಾಡುತ್ತದೆ.
ಚಯಾಪಚಯ ಸುಧಾರಣೆ: ಊಟದ ನಂತರ ನಡೆಯುವುದು ರಕ್ತದಲ್ಲಿನ ಸಕ್ಕರೆಯ ಏರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ.
ಇದನ್ನೂ ಗಮನಿಸಿ
- ಊಟ ಮುಗಿದ ತಕ್ಷಣ ನಡೆಯಲು ಹೋಗಬೇಡಿ. ಆಹಾರವು ಜೀರ್ಣಾಂಗ ವ್ಯವಸ್ಥೆಯನ್ನು ತಲುಪಲು 10ರಿಂದ 15 ನಿಮಿಷ ಕಾಯಿರಿ.
- ಯಾವುದೇ ಕಾರಣಕ್ಕೂ ವೇಗವಾಗಿ ನಡೆಯುವುದನ್ನು ಮಾಡಬೇಡಿ. ಅತ್ಯಂತ ನಿಧಾನವಾಗಿ ಮಧ್ಯಮ ಅವಧಿಯಲ್ಲೇ ನಡೆಯಿರಿ.
- ಊಟದ ನಂತರ ನೀವು ತೀವ್ರವಾದ ವ್ಯಾಯಾಮವನ್ನು ತಪ್ಪಿಸಬೇಕು. ಏಕೆಂದರೆ ಅದು ನಿಮ್ಮನ್ನು ವಾಂತಿಗೂ ಕಾರಣವಾಗಿಸಬಹುದು.