ನವದೆಹಲಿ,ಮೇ 13: ಹಾಲಿನ ಉತ್ಪನ್ನಗಳು ದೇಹಕ್ಕೆ ಹಿತ ಅನಿಸಿದರೂ ಕೆಲವೊಮ್ಮೆ ಅಸಿಡಿಟಿ ಯಂತ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಡೈರಿ ಉತ್ಪನ್ನಗಳನ್ನು ಕೆಲವು ಆಹಾರಗಳೊಂದಿಗೆ ಸೇವಿಸಿದಾಗ ಹೊಟ್ಟೆ ಉಬ್ಬುವುದು, ಆಮ್ಲೀಯತೆ, ಅಜೀರ್ಣದಂತ ಸಮಸ್ಯೆ (Health Tips) ಕಾಡುತ್ತದೆ. ನಾವು ಸೇವಿಸುವ ಇತರ ಆಹಾರಗಳ ಜೊತೆ ಇದರ ಸಂಯೋಜನೆಯೂ ದೇಹಕ್ಕೆ ಹೊಂದಿಕೊಳ್ಳದೆ ಇರಬಹುದು. ಹಾಗಾಗಿ ಇಂತಹ ಆಹಾರಗಳ ಜೊತೆ ಹಾಲಿನ ಮಿಶ್ರಣ ಮಾಡಬಾರದು.
ಹಾಲಿನ ಡೈರಿಯಲ್ಲಿರುವ ಮುಖ್ಯ ಸಂಯುಕ್ತವೆಂದರೆ ಲ್ಯಾಕ್ಟೋಸ್, ಇದು ದೇಹದಿಂದ ಪರಿಣಾಮ ಕಾರಿಯಾಗಿ ಚಯಾಪಚಯಗೊಳ್ಳಲು ಸಾಕಷ್ಟು ಲ್ಯಾಕ್ಟೇಸ್ ಕಿಣ್ವದ ಅಗತ್ಯವಿದೆ. ವಯಸ್ಕರಲ್ಲಿ ಇದು ಕಡಿಮೆಯಾದಾಗ, ಇದು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ವಿಟಮಿನ್ ಸಿ ಇರುವ ಆಹಾರ:
ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಹೊಂದಿರುವ ಕಿತ್ತಳೆ, ನಿಂಬೆಹಣ್ಣು ಅಥವಾ ಸ್ಟ್ರಾಬೆರಿ ಯಿಂದೊಗೆ ಹಾಲು ಅಥವಾ ಮೊಸರನ್ನು ಬೆರೆಸಿದರೆ ಹೊಟ್ಟೆ ನೋವಿನಂತ ಸಮಸ್ಯೆ ಕಾಡಬಹುದು.
Health Tips: ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡ್ತಿದ್ದೀರಾ? ಈ ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರ!
ಉಪ್ಪು ಅಥವಾ ಕರಿದ ಪದಾರ್ಥಗಳು:
ಡೈರಿ ಉತ್ಪನ್ನಗಳನ್ನು ಉಪ್ಪು ಅಥವಾ ಹುರಿದ ಆಹಾರಗಳೊಂದಿಗೆ ಸಂಯೋಜಿಸಿದಾಗ, ಅದು ಆಮ್ಲೀಯತೆಯ ಹೆಚ್ಚಳಕ್ಕೆ ಕಾರಣವಾಗಬಹುದು. ಉಪ್ಪು ಮತ್ತು ಕೊಬ್ಬಿನಂಶ ಹಾಲಿನೊಂದಿಗೆ ಸೇರಿದಾಗ ಜೀರ್ಣಕ್ರಿಯೆಯ ವೇಗವನ್ನು ಕಡಿಮೆ ಮಾಡುತ್ತದೆ.
ಡೈರಿ ಮತ್ತು ಮಾಂಸ:
ಹಾಲಿನ ಉತ್ಪನ್ನಗಳು ಮತ್ತು ಪ್ರಾಣಿ ಮಾಂಸಗಳು ಜೀರ್ಣವಾಗಲು ತೆಗೆದುಕೊಳ್ಳುವ ಸಮಯ ಬೇರೆ ಬೇರೆ ಯಾಗಿರುತ್ತದೆ. ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ,
ಹುದುಗಿಸಿದ ಆಹಾರಗಳು:
ಹಾಲು ಮತ್ತು ಉಪ್ಪಿನಕಾಯಿ ಅಥವಾ ಚೀಸ್ ಮತ್ತು ಹುದುಗಿಸಿದ ಚಟ್ನಿಗಳ ಸಂಯೋಜನೆಯು ಹೊಟ್ಟೆಯ ಆರೋಗ್ಯಕ್ಕೆ ಒಳಿತಲ್ಲ.
ಸಿಹಿ ಪದಾರ್ಥಗಳು ಮತ್ತು ಹಾಲು:
ಐಸ್ ಕ್ರೀಮ್ ಅಥವಾ ಅತಿಯಾದ ಸಕ್ಕರೆ ಇರುವ ಮಿಲ್ಕ್‌ಶೇಕ್‌ಗಳು ಹೊಟ್ಟೆಯ ಮೇಲೆ ಹೆಚ್ಚಿನ ಒತ್ತಡ ಹೇರುತ್ತವೆ. ಇದರಿಂದ ತೀವ್ರ ಅಸ್ವಸ್ಥತೆ ಮತ್ತು ಹೊಟ್ಟೆ ಉಬ್ಬರ ಉಂಟಾಗುತ್ತದೆ. ಊಟದ ನಂತರ ಸಂಸ್ಕರಿಸಿದ ಸಕ್ಕರೆ ಅಥವಾ ಐಸ್ ಕ್ರೀಮ್‌ನೊಂದಿಗೆ ಮಿಲ್ಕ್‌ಶೇಕ್‌ಗಳನ್ನು ಸೇವಿಸಿದರೆ, ಅತಿಯಾದ ಸೇವನೆಯು ಹೊಟ್ಟೆ ಉಬ್ಬುವುದು ಅಥವಾ ಅಸ್ವಸ್ಥತೆಗೆ ಕಾರಣವಾಗಬಹುದು.