ಬೆಂಗಳೂರು: ಟೈಪ್ 2 ಮಧುಮೇಹ ಹಾಗೂ ಬೊಜ್ಜು ಸಮಸ್ಯೆಯಿಂದ ಬಳಲುತ್ತಿರು ವವರಿಗಾಗಿ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಮತ್ತು ನೆಸ್ಲೆ ಇಂಡಿಯಾ ಲಿ.ನ ಜಂಟಿ ಉದ್ಯಮವಾದ 'ನೆಸ್ಲೆ ಹೆಲ್ತ್ ಸೈನ್ಸ್ ಲಿ.' ಹೊಸ ಪೌಷ್ಟಿಕಾಂಶದ ಉತ್ಪನ್ನವಾದ 'ಸೆಲೆವಿಡಾ ಜಿಎಲ್‌ಪಿ+' ಅನ್ನು ಬಿಡುಗಡೆ ಮಾಡಿದೆ.
ಮಧುಮೇಹ ಮತ್ತು ತೂಕ ಇಳಿಕೆಗಾಗಿ ನೀಡಲಾಗುವ ಜಿಎಲ್‌ಪಿ-1/ಜಿಐಪಿ ಚಿಕಿತ್ಸೆಯನ್ನು ಪಡೆಯುವ ರೋಗಿಗಳಿಗೆಂದೇ ಈ ಉತ್ಪನ್ನವನ್ನು ತಯಾರಿಸಲಾಗಿದೆ. ಸ್ನಾಯುಗಳ ಆರೋಗ್ಯ ಕಾಪಾಡಲು ಮತ್ತು ಉತ್ತಮ ಪೋಷಕಾಂಶ ಒದಗಿಸಲು ಈ ಉತ್ಪನ್ನವನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಲಾಗಿದೆ. ಕೇವಲ ಔಷಧಿಗಳನ್ನು ನೀಡುವುದಷ್ಟೇ ಅಲ್ಲದೆ, ರೋಗಿಗಳಿಗೆ ಸರಿಯಾದ ಪೌಷ್ಟಿಕಾಂಶ ಒದಗಿಸಿ ಅವರ ಸಂಪೂರ್ಣ ಆರೋಗ್ಯ ಸುಧಾ ರಿಸುವುದು ಈ ಉತ್ಪನ್ನದ ಉದ್ದೇಶವಾಗಿದೆ.
ಸಮಸ್ಯೆ ಏನು? ಭಾರತೀಯರಿಗೇ ಏಕೆ ಅಪಾಯ?
ವೈದ್ಯಕೀಯ ಅಧ್ಯಯನಗಳ ಪ್ರಕಾರ, ಮಧುಮೇಹ ಮತ್ತು ಬೊಜ್ಜು ಕಡಿಮೆ ಮಾಡುವ ಜಿಎಲ್‌ಪಿ-1/ಜಿಐಪಿ ಚಿಕಿತ್ಸೆ ಪಡೆಯುವಾಗ ರೋಗಿಗಳ ದೇಹದ ತೂಕ ಕಡಿಮೆಯಾಗುತ್ತದೆ. ಆದರೆ, ಈ ತೂಕ ನಷ್ಟದಲ್ಲಿ ಶೇ. 25 ರಿಂದ 40ರಷ್ಟು ಭಾಗ ಸ್ನಾಯುಗಳ ನಷ್ಟವಾಗಿರುತ್ತದೆ.
ಇದನ್ನೂ ಓದಿ: Health Tips: ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡ್ತಿದ್ದೀರಾ? ಈ ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರ!
ಹಿರಿಯ ವೈದ್ಯರ ಪ್ರಕಾರ, ಭಾರತೀಯರಲ್ಲಿ ಮೂಲತಃ ಸ್ನಾಯುಗಳ ಪ್ರಮಾಣ ಕಡಿಮೆ ಇದ್ದು, ದೇಹದಲ್ಲಿ ಕೊಬ್ಬಿನ ಪ್ರಮಾಣ ಹೆಚ್ಚಿರುತ್ತದೆ. ಜೊತೆಗೆ ಭಾರತೀಯರ ದೈನಂದಿನ ಆಹಾರದಲ್ಲಿ ಪ್ರೋಟೀನ್ ಅಂಶ ತೀರಾ ಕಡಿಮೆ ಇರುತ್ತದೆ (ದಿನಕ್ಕೆ ಕೇವಲ 0.6 ಗ್ರಾಂ/ಕೆಜಿ). ಇದರಿಂದಾಗಿ ಈ ಚಿಕಿತ್ಸೆ ಪಡೆಯುವ ಭಾರತೀಯರಿಗೆ ಸ್ನಾಯು ನಷ್ಟದ ಅಪಾಯ ಹೆಚ್ಚು. ಸ್ನಾಯುಗಳು ನಷ್ಟವಾದರೆ ಚಯಾಪಚಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರು ತ್ತದೆ. ಇದನ್ನು ತಡೆಯಲು ದಿನಕ್ಕೆ ಪ್ರತಿ ಕೆಜಿ ದೇಹದ ತೂಕಕ್ಕೆ 1.2 ರಿಂದ 1.5 ಗ್ರಾಂನಷ್ಟು ಪ್ರೋಟೀನ್ ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ.
ಈ ಪ್ರೋಟೀನ್ ಕೊರತೆಯನ್ನು ನೀಗಿಸಲು ಹಾಗೂ ಸ್ನಾಯುಗಳನ್ನು ಕಾಪಾಡಲು ಪ್ರಸಿದ್ಧ ಮಧುಮೇಹ ತಜ್ಞರು ಮತ್ತು ಎಂಡೋಕ್ರಿನೋಲಾಜಿಸ್ಟ್ ಮಾರ್ಗದರ್ಶನದಲ್ಲಿ 'ಸೆಲೆವಿಡಾ ಜಿಎಲ್‌ಪಿ+' ಅನ್ನು ತಯಾರಿಸಲಾಗಿದೆ.
*ಉತ್ತಮ ಪ್ರೋಟೀನ್: ಇದರಲ್ಲಿ ತ್ವರಿತವಾಗಿ ಜೀರ್ಣವಾಗುವ 'ವೇ ಪ್ರೋಟೀನ್ ಐಸೋ ಲೇಟ್' ಬಳಸಲಾಗಿದೆ. ಚಿಕಿತ್ಸೆಯ ಸಮಯದಲ್ಲಿ ರೋಗಿಗಳಿಗೆ ಹೊಟ್ಟೆಯ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಈ ಪ್ರೋಟೀನ್ ಸೇವನೆಯಲ್ಲಿ ಅಂತಹ ಸಮಸ್ಯೆ ಗಳು ಕಾಣಿಸಿಕೊಳ್ಳುವುದಿಲ್ಲ. ಇದು ಸುಲಭವಾಗಿ ಜೀರ್ಣವಾಗುತ್ತದೆ.
* ಹೆಚ್ಚಿನ ಶಕ್ತಿ: ಪ್ರತಿ 100 ಗ್ರಾಂ ಪುಡಿಯಲ್ಲಿ 48 ಗ್ರಾಂ ಪ್ರೋಟೀನ್ ಇರುತ್ತದೆ. ಜೊತೆಗೆ ಶೇ.100 ರಷ್ಟು ಬ್ರಾಂಚ್ಡ್-ಚೈನ್ ಅಮೈನೋ ಆಸಿಡ್ (ಬಿಸಿಎಎ) ಒದಗಿಸುತ್ತದೆ.
* 27 ಪೋಷಕಾಂಶಗಳು: ವಿಟಮಿನ್ ಎ, ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಸೇರಿದಂತೆ ದೇಹಕ್ಕೆ ಅಗತ್ಯವಿರುವ 27 ಬಗೆಯ ಪೋಷಕಾಂಶಗಳು ಇದರಲ್ಲಿವೆ.
ಡಾ. ರೆಡ್ಡೀಸ್ ಮತ್ತು ನೆಸ್ಲೆ ಸಂಸ್ಥೆಯ 'ಸೆಲೆವಿಡಾ' ಉತ್ಪನ್ನಗಳು 24 ಗಂಟೆಗಳ ಕಾಲ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಎಚ್‌ಬಿಎ1ಸಿ ಮಟ್ಟ ಕಡಿಮೆ ಮಾಡಲು ಸಹಕಾರಿ ಎಂದು ಈಗಾಗಲೇ ಕ್ಲಿನಿಕಲ್ ಆಗಿ ಸಾಬೀತಾಗಿದೆ.
"ಮಧುಮೇಹ ಮತ್ತು ಬೊಜ್ಜು ನಿರ್ವಹಣೆಯಲ್ಲಿ ಜಿಎಲ್‌ಪಿ-1 ಚಿಕಿತ್ಸೆಗಳು ದೊಡ್ಡ ಪ್ರಗತಿ ತಂದಿವೆ. ಆದರೆ, ಔಷಧಿಯ ಜೊತೆಗೆ ರೋಗಿಗಳ ಪೌಷ್ಟಿಕಾಂಶದ ಕೊರತೆ ನೀಗಿಸುವುದು ಹಾಗೂ ಸ್ನಾಯುಗಳನ್ನು ಕಾಪಾಡುವುದು ಬಹಳ ಮುಖ್ಯ. ತೂಕ ಕಡಿಮೆಯಾದಂತೆ ಸ್ನಾಯುಗಳನ್ನು ಕಾಪಾಡಿಕೊಳ್ಳುವುದು ದೀರ್ಘಕಾಲೀನ ಆರೋಗ್ಯಕ್ಕೆ ಅವಶ್ಯಕ,” ಎಂದು ಡಾ. ರೆಡ್ಡೀಸ್ ಲ್ಯಾಬೊರೇಟರೀಸ್‌ನ ಗ್ಲೋಬಲ್ ಜೆನೆರಿಕ್ಸ್ ಸಿಇಒ ಹಾಗೂ ಜಂಟಿ ಉದ್ಯಮದ ನಿರ್ದೇಶಕರಾದ ಎಂ.ವಿ. ರಮಣ ತಿಳಿಸಿದರು.
ಎಲ್ಲೆಲ್ಲಿ ಇದು ಲಭ್ಯ?
ಸೆಲೆವಿಡಾ ಜಿಎಲ್‌ಪಿ+ ಉತ್ಪನ್ನವು 350 ಗ್ರಾಂ ಪ್ಯಾಕ್‌ನಲ್ಲಿ ಲಭ್ಯವಿದ್ದು, ದೇಶಾದ್ಯಂತ ಇರುವ ಎಲ್ಲಾ ಪ್ರಮುಖ ಮೆಡಿಕಲ್ ಸ್ಟೋರ್‌ಗಳು, ಚಿಲ್ಲರೆ ಅಂಗಡಿಗಳು ಹಾಗೂ ಪ್ರಮುಖ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ಇದನ್ನು ಖರೀದಿಸಬಹುದಾಗಿದೆ.
ಭಾರತದಾದ್ಯಂತ ಗ್ರಾಹಕರಿಗೆ ಉತ್ತಮ ಆರೋಗ್ಯಯುತ ಉತ್ಪನ್ನಗಳನ್ನು ತಲುಪಿಸುವ ಉದ್ದೇಶದಿಂದ ನೆಸ್ಲೆ ಇಂಡಿಯಾ ಮತ್ತು ಡಾ. ರೆಡ್ಡೀಸ್ ಸಂಸ್ಥೆಗಳು ಆಗಸ್ಟ್ 2024 ರಲ್ಲಿ ಹೈದರಾಬಾದ್‌ನಲ್ಲಿ ಈ ಜಂಟಿ ಉದ್ಯಮವನ್ನು ಆರಂಭಿಸಿದ್ದವು. ಹಲವು ವಿಭಾಗಗಳಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವುದು ಈ ಸಂಸ್ಥೆಯ ಗುರಿಯಾಗಿದೆ.