ನವದೆಹಲಿ,ಜ. 26: ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸರಿಯಾದ ಆಹಾರ ಸೇವನೆ (Health Tips) ಕೂಡ ಪ್ರಮುಖವಾಗುತ್ತದೆ. ಅದರಲ್ಲೂ ಇತ್ತೀಚೆಗೆ ಹೆಚ್ಚಿನವರು ದೇಹದ ತೂಕ ಇಳಿಸಿಕೊಳ್ಳಲು ವರ್ಕೌಟ್, ಡಯೆಟ್ ಅಂತ ನಾನಾ ಸಾಹಸ ಮಾಡುತ್ತಲೆ ಇರುತ್ತಾರೆ. ದೈಹಿಕ ಚಟುವಟಿಕೆ, ವ್ಯಾಯಾಮ ದೇಹಕ್ಕೆ ಅಗತ್ಯವಾಗಿದ್ದರೂ ಕೇವಲ ಸ್ನಾಯುಗಳ ಚೇತರಿಕೆ ಮಾತ್ರವಲ್ಲದೆ, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿ ಕೊಳ್ಳಬೇಕಾಗುತ್ತದೆ. ಹೀಗಾಗಿ ಖ್ಯಾತ ಪೌಷ್ಟಿಕ ತಜ್ಞರೊಬ್ಬರು ಪೋಷಕಾಂಶ ಭರಿತ ಆಹಾರ ವಿಧಾನವೊಂದನ್ನು ಹಂಚಿಕೊಂಡಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ.
ಈ ಮೂರು ಆಹಾರಗಳು ವ್ಯಾಯಾಮದ ನಂತರ ಸೇವಿಸಿದರೆ ಸುಸ್ತನ್ನು ಕಡಿಮೆ ಮಾಡುವುದಲ್ಲದೆ, ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತವೆ. ಖ್ಯಾತ ಪೌಷ್ಟಿಕತಜ್ಞ ರೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಮೂರು ಅದ್ಭುತ ಸ್ನ್ಯಾಕ್ಸ್ ರೆಸಿಪಿಗಳನ್ನು ಹಂಚಿಕೊಂಡಿದ್ದಾರೆ.
ಬೀಟ್‌ರೂಟ್ ಮತ್ತು ಬೆರ್ರಿ ಸ್ಮೂಥಿ
ಪೌಷ್ಟಿಕತಜ್ಞರ ಪ್ರಕಾರ, ಇದರಲ್ಲಿರುವ ಪ್ರಮುಖ ಪೋಷಕಾಂಶಗಳು ಉತ್ಕರ್ಷಣ ನಿರೋಧಕ ಮತ್ತು ಒಮೆಗಾ-3 ಯನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಬೀಟ್ರೂಟ್ ರಕ್ತದ ಹರಿವನ್ನು ಸುಧಾರಿ ಸುತ್ತದೆ ಮತ್ತು ಫೋಲೇಟ್ ನಲ್ಲಿ ಸಮೃದ್ಧವಾಗಿರುವುದರಿಂದ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಇವು ವ್ಯಾಯಾಮದ ನಂತರ ದೇಹಕ್ಕೆ ಸಂಭಾವ್ಯ ಪ್ರಯೋಜನಗಳನ್ನು ನೀಡುತ್ತವೆ.
Health Tips: ಹಲ್ಲಿನ ಸೆಟ್ ಬದಲು ಡೆಂಟಲ್ ಇಂಪ್ಲ್ಯಾಂಟ್ ಮಾಡಿದರೆ ಈ ಲಾಭ ಸಿಗಲಿದೆ
ತಯಾರಿಸುವ ವಿಧಾನ: ಅರ್ಧ ಕಪ್ ಬೇಯಿಸಿದ ಬೀಟ್‌ರೂಟ್, ಅರ್ಧ ಕಪ್ ಬೆರ್ರಿ 1 ಚಮಚ ಅಗಸೆ ಬೀಜದ ಪುಡಿ ಮತ್ತು 1 ಕಪ್ ಬಾದಾಮಿ ಹಾಲಿಗೆ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ.
ಸಿಹಿ ಗೆಣಸು ಮತ್ತು ಮೊಸರಿನ ಮಿಶ್ರಣ
ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್ ಎ ಯಲ್ಲಿ ಸಮೃದ್ಧವಾಗಿರುವ ಸಿಹಿ ಗೆಣಸು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಯಿಂದ ತುಂಬಿರುವ ಈ ಹಣ್ಣು ಚರ್ಮದ ಹಾನಿಯ ವಿರುದ್ಧ ಹೋರಾಡುತ್ತವೆ. ಅದೇ ರೀತಿ ಮೊಸರಿ ನಲ್ಲಿರುವ ಪ್ರೊಬಯಾಟಿಕ್‌ಗಳು ಹೊಟ್ಟೆ ಮತ್ತು ಚರ್ಮದ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ.
ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ಹುರಿದ ಸಿಹಿ ಗೆಣಸಿನ ತುಂಡುಗಳು ಮತ್ತು ಅದರ ಜೊತೆ ಮೊಸರನ್ನು ಸೇರಿಸಿ ಮಿಕ್ಸ್ ಮಾಡಿ.. ಅದರ ಮೇಲೆ ದಾಳಿಂಬೆ ಮತ್ತು ಕುಂಬಳಕಾಯಿ ಬೀಜಗಳನ್ನು ಉದುರಿಸಿ.
ಮಸಾಲೆಯುಕ್ತ ಮಖಾನಾ ಮತ್ತು ನಟ್ಸ್
ಮಖಾನಾದಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಹಾಗಾಗಿ ಚರ್ಮದ ಆರೈಕೆ ಮತ್ತು ಕೂದಲಿನ ಆರೋಗ್ಯಕ್ಕೆ ಇದು ಪ್ರೋಟೀನ್ ಯುಕ್ತ ಆಯ್ಕೆಯಾಗಿದೆ.
ತಯಾರಿಸುವ ವಿಧಾನ: ಹುರಿದ ಮಖಾನಾ (ತಾವರೆ ಬೀಜ), ಬಾದಾಮಿ ಮತ್ತು ಕುಂಬಳಕಾಯಿ ಬೀಜಗಳಿಗೆ ಸ್ವಲ್ಪ ದಾಲ್ಚಿನಿ, ಪುಡಿ, ಅರಿಶಿನ ಮತ್ತು ಕಾಳುಮೆಣಸಿನ ಪುಡಿ ಸೇರಿಸಿ ಹುರಿದು ಸೇವಿಸಿ.