Health Tips: ಹಲ್ಲಿನ ಸೆಟ್ ಬದಲು ಡೆಂಟಲ್ ಇಂಪ್ಲ್ಯಾಂಟ್ ಮಾಡಿದರೆ ಈ ಲಾಭ ಸಿಗಲಿದೆ
ಎಷ್ಟೋ ಸಂದರ್ಭದಲ್ಲಿ ಹುಳುಕು ಹಲ್ಲುಗಳನ್ನು ನಾವು ತೆಗೆದುಬಿಡುತ್ತೇವೆ ಇನ್ನು ಕೆಲವು ಸಂದರ್ಭ ಗಳಲ್ಲಿ ಅಪಘಾತ ಇತರ ಸಂದರ್ಭದಲ್ಲಿ ಹಲ್ಲು ಬಿದ್ದು ಹೋಗುವುದು ಇದೆ ಇಂತಹ ಸಂದರ್ಭದಲ್ಲಿ ಡೆಂಟಲ್ ಇಂಪ್ಲ್ಯಾಂಟ್ ಪ್ರಧಾನ ಪಾತ್ರ ನಿರ್ವಹಿಸಲಿದೆ. ಇದರ ಕಾರ್ಯ ವಿಧಾನ ಏನು ಎಂಬಿತ್ಯಾದಿ ವಿಚಾರದ ಬಗ್ಗೆ ಇತ್ತೀಚೆಗಷ್ಟೇ ವಿಶ್ವವಾಣಿ ಹೆಲ್ತ್ ಚಾನೆಲ್ ನಲ್ಲಿ ಖ್ಯಾತ ದಂತ ವೈದ್ಯರಾದ ಡಾ. ಇಬ್ಬನಿ ಪಿ.ಪಿ. ಅವರು ತಿಳಿಸಿಕೊಟ್ಟಿದ್ದಾರೆ. ಹಲ್ಲು ಸೆಟ್ ಹಾಕುವ ಬದಲು ಅಡ್ವಾನ್ಸ್ ಟೆಕ್ನಾಲಜಿ ಆಧರಿತ ಡೆಂಟಲ್ ಇಂಪ್ಲ್ಯಾಂಟ್ ಮಾಡಿಸುವುದರಿಂದ ಯಾವೆಲ್ಲ ಉಪಯೋಗ ಇದೆ ಎಂಬ ಅನೇಕ ವಿಚಾರದ ಬಗ್ಗೆ ಅವರು ಸಲಹೆ ನೀಡಿದ್ದಾರೆ.
ಸಂಗ್ರಹ ಚಿತ್ರ -
ಬೆಂಗಳೂರು, ಡಿ. 18: ಪ್ರತಿಯೊಬ್ಬರಿಗೂ ತಾವು ಹೊರ ಜಗತ್ತಿಗೆ ಸುಂದರವಾಗಿ ಕಾಣಬೇಕು ಎಂಬ ಹಂಬಲ, ಮನಸ್ಸು ಇದ್ದೇ ಇರಲಿದೆ. ಹೀಗಾಗಿ ಮುಖದ ಹಾಗೂ ದೇಹದ ಸೌಂದರ್ಯಕ್ಕೆ ಅಧಿಕ ಆಧ್ಯತೆ ನೀಡುತ್ತಾರೆ. ಮುಖವು ಅಂದವಾಗಿ ಕಾಣಲು ಸ್ವಚ್ಛವಾದ ಹಲ್ಲುಗಳು ಕೂಡ ಪ್ರಧಾನ ಪಾತ್ರ ನಿರ್ವಹಿಸಲಿದೆ. ಆದರೆ ಎಷ್ಟೋ ಸಂದರ್ಭದಲ್ಲಿ ಹುಳುಕು ಹಲ್ಲುಗಳನ್ನು ನಾವು ತೆಗೆದುಬಿಡುತ್ತೇವೆ ಇನ್ನು ಕೆಲವು ಸಂದರ್ಭಗಳಲ್ಲಿ ಅಪಘಾತ ಇತರ ಸಂದರ್ಭದಲ್ಲಿ ಹಲ್ಲು ಬಿದ್ದು ಹೋಗುವುದು ಇದೆ ಇಂತಹ ಸಂದರ್ಭದಲ್ಲಿ ಡೆಂಟಲ್ ಇಂಪ್ಲ್ಯಾಂಟ್ ಪ್ರಧಾನ ಪಾತ್ರ ನಿರ್ವಹಿಸಲಿದೆ. ಇದರ ಕಾರ್ಯ ವಿಧಾನ ಏನು ಎಂಬಿತ್ಯಾದಿ ವಿಚಾರದ ಬಗ್ಗೆ ಇತ್ತೀಚೆಗಷ್ಟೇ ವಿಶ್ವವಾಣಿ ಹೆಲ್ತ್ ಚಾನೆಲ್ ನಲ್ಲಿ ಖ್ಯಾತ ದಂತ ವೈದ್ಯರಾದ ಡಾ. ಇಬ್ಬನಿ ಪಿ.ಪಿ. (Dr. Ibbani P.P.) ಅವರು ತಿಳಿಸಿಕೊಟ್ಟಿದ್ದಾರೆ. ಹಲ್ಲು ಸೆಟ್ ಹಾಕುವ ಬದಲು ಅಡ್ವಾನ್ಸ್ ಟೆಕ್ನಾಲಜಿ ಆಧರಿತ ಡೆಂಟಲ್ ಇಂಪ್ಲ್ಯಾಂಟ್ ಮಾಡಿಸುವುದರಿಂದ ಯಾವೆಲ್ಲ ಉಪಯೋಗ ಇದೆ ಎಂಬ ಅನೇಕ ವಿಚಾರದ ಬಗ್ಗೆ ಅವರು ಸಲಹೆ ನೀಡಿದ್ದಾರೆ.
ಡೆಂಟಲ್ ಇಂಪ್ಲ್ಯಾಟ್ ಎಂದರೇನು?
ಡೆಂಟಲ್ ಇಂಪ್ಯಾಕ್ಟ್ ಎಂದರೆ ಹಲ್ಲುಗಳು ಉದುರಿ ಹೋದ ಸಂದರ್ಭದಲ್ಲಿ ಹಲ್ಲಿನ ಬೇರನ್ನು ಪುನರ್ ಸೃಷ್ಟಿ ಮಾಡುವುದಾಗಿದೆ.ಮೆಡಿಕಲ್ ಗ್ರೇಡ್ ಟೈಟೆನಿಯಂ ನಿಂದ ಮಾಡಿದ್ದ ಉಪಕರಣ ಗಳನ್ನು ಬಳಸಿ ಅದನ್ನು ಹಲ್ಲಿನ ದವಡೆ ಎಲುಬಿಗೆ ಹಾಕಿ ಬಳಿಕ ಅದರ ಮೇಲೆ ಕ್ಯಾಪ್ ಕೂರಿಸುವ ಒಂದು ಪ್ರಕ್ರಿಯೆಯಾಗಿದೆ. ಹುಳುಕು ಹಲ್ಲು, ವಸಡಿನ ಸಮಸ್ಯೆ ಅಥವಾ ಇತರ ಕಾರಣದಿಂದ ಹಲ್ಲನ್ನು ಕಳೆದುಕೊಂಡವರೆಲ್ಲರು ಈ ಇಂಪ್ಲ್ಯಾಂಟ್ ಹಲ್ಲನ್ನು ಧರಿಸಬಹುದು ಎಂದು ಅವರು ತಿಳಿಸಿದ್ದಾರೆ.
ಹಲ್ಲುಗಳು ತೆಗೆಸಿಕೊಂಡ ಸಂದರ್ಭದಲ್ಲಿ ಬಾಯಿ ಒಳಗೆ ಆಹಾರ ಅಗೆಯುವುದು ಕಷ್ಟವಾಗಲಿದೆ. ಬಳಿಕ ಹಲ್ಲಿನ ನಡುವೆ ಗ್ಯಾಪ್ ಇರುವ ಕಾರಣ ಉಳಿದ ಹಲ್ಲುಗಳು ಕೂಡ ಸವೆಯಲಿದೆ. ಹೀಗಾಗಿ ಅಂತಹ ಜಾಗಕ್ಕೆ ಹಲ್ಲನ್ನು ಮತ್ತೆ ಹಾಕಲು ಈ ಡೆಂಟಲ್ ಇಂಪ್ಲ್ಯಾಂಟ್ ವಿಧಾನ ಬಹಳ ಉಪ ಯುಕ್ತ ಆಗಲಿದೆ. ಇದು ನೋಡಲು ಕೂಡ ನ್ಯಾಚುರಲ್ ಆಗಿದ್ದು ಆಹಾರ ಅಗೆ ಯುವಾಗಲು ಕೂಡ ತುಂಬಾ ಕಂಫರ್ಟೆಬಲ್ ಆಗಿ ಇರುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.
Health Tips: ವಸಡಿನ ಸೋಂಕಿನಿಂದ ಪಾರಾಗಲು ಈ ಸರಳ ವಿಧಾನ ಫಾಲೋ ಮಾಡಿ
ಯಾವೆಲ್ಲ ವಿಧ ಇದೆ?
ಈ ಡೆಂಟಲ್ ಇಂಪ್ಲ್ಯಾಂಟ್ ನಲ್ಲಿ ಕೂಡ ಅನೇಕ ಪ್ರಕಾರ ಇದೆ. ಸಿಂಗಲ್ ಇಂಪ್ಲ್ಯಾಂಟ್ ಎಂದರೆ ಒಂದು ಹಲ್ಲು ಮಾತ್ರ ಮಿಸ್ ಆಗಿದ್ದಾಗ ಆ ಒಂದು ಹಲ್ಲನ್ನು ಮತ್ತೆ ಇಂಪ್ಲ್ಯಾಂಟ್ ಮಾಡ ಬಹುದಾಗಿದೆ. ಎರಡು ಮೂರು ಹಲ್ಲು ಇಂಪ್ಲ್ಯಾಂಟ್ ಮಾಡುವಾಗ ಇಂಪ್ಲ್ಯಾಂಟ್ ಸಪೋರ್ಟಿವ್ ಬ್ರಡ್ಜ್ ಎಂದು ಮಾಡಬಹುದು. ಅದರ ಹೊರತಾಗಿ ಪೂರ್ತಿ ಬಾಯಲ್ಲಿ ಹಲ್ಲೇ ಇಲ್ಲದಾಗ ಇಡೀ ಬಾಯಿಗೆ ಫುಲ್ ಮೌತ್ ಇಂಪ್ಲ್ಯಾಂಟ್ ಎಂದು ಮಾಡಲಾಗುತ್ತದೆ. ಹೀಗೆ ಇಂಪ್ಲ್ಯಾಂಟ್ ನಲ್ಲಿಯೂ ಅನೇಕ ಪ್ರಕಾರ ಇದ್ದು ಜನರ ಅಗತ್ಯಗಳಿಗೆ ಅನುಗುಣವಾಗಿ ಟ್ರಿಟ್ಮೆಂಟ್ ವಿಧಾನ ಇರುವುದಾಗಿ ಡಾ. ಇಬ್ಬನಿ ಅವರು ಸಲಹೆ ನೀಡಿದ್ದಾರೆ.
ಉಪಯೋಗ ಏನು?
*ಇದು ನೋಡಲು ನೈಜ ಹಲ್ಲಿನಂತೆ ಇದ್ದು ಬಹಳ ಕಂಫರ್ಟೆಬಲ್ ಆಗಿ ಇರಲಿದೆ.
*ಒಮ್ಮೆ ಇಂಪ್ಲ್ಯಾಂಟ್ ಮಾಡಿದ್ದ ಬಳಿಕ ದಿನಕ್ಕೆ ಎರಡು ಸಲ ಬ್ರಶ್ ಮಾಡುವುದು ಇತರೆಗಳನ್ನು ಮಾಡಿದರೆ ಅದು ದೀರ್ಘಕಾಲದ ತನಕವು ಬಾಳ್ವಿಕೆ ಬರಲಿದೆ.
*18ವರ್ಷ ಮೇಲ್ಪಟ್ಟ ಎಲ್ಲರೂ ಕೂಡ ಈ ಡೆಂಟಲ್ ಇಂಪ್ಲ್ಯಾಂಟ್ ಮಾಡಿಸಬಹುದಾಗಿದೆ.
*ಹಲ್ಲಿನ ಸೆಟ್ ಹಾಕಿದ್ದ ಅನೇಕರಿಗೆ ಮಾತನಾಡುವಾಗ , ನಗುವಾಗ ಆ ಸೆಟ್ ಜಾರಿ ಬಿದ್ದು ಮುಜುಗರಕೊಳಪಟ್ಟದ್ದು ಇದೆ ಆದರೆ ಇಂಪ್ಲ್ಯಾಂಟ್ ಮಾಡಿಸಿದರೆ ಇಂತಹ ಸಮಸ್ಯೆ ಬರಲಾರದು.
*ಡೆಂಟಲ್ ಇಂಪ್ಲ್ಯಾಂಟ್ ಮಾಡಿಸಿದ್ದ ಬಳಿಕ ಕೆಲವು ದಿನ ಕಿರಿ ಕಿರಿ ಎನಿಸಲಿದೆ ಆದರೆ ಅದರಲ್ಲಿ ತುಂಬಾ ನೋವಾಗುವಂತಹದ್ದು ಇಲ್ಲ ಎಂದು ಡಾ. ಇಬ್ಬನಿ ಅವರು ಸಂದರ್ಶನದಲ್ಲಿ ತಿಳಿಸಿದ್ದಾರೆ.