ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತಾಯಿಯ ವಯಸ್ಸೇ ಡೌನ್ ಸಿಂಡ್ರೋಮ್ ಕಾಯಿಲೆಗೆ ಕಾರಣವಾ? ಈ ಬಗ್ಗೆ ತಜ್ಞರು ಹೇಳೋದೇನು?

Health Risks Of Pregnancy After 30: ಮಹಿಳೆಯ ವಯಸ್ಸು ಹೆಚ್ಚಾಗುತ್ತಿದ್ದಂತೆ ಬುದ್ಧಿಮಾಂದ್ಯ ಮಕ್ಕಳು ಹುಟ್ಟುವ ಸಂಭವ ಹಾಗೂ ಡೌನ್ ಸಿಂಡ್ರೋಮ್ ಕಾಯಿಲೆಗೆ ಕಾರಣವಾಗಬಹುದು. ಸಾಮಾನ್ಯವಾಗಿ ಡೌನ್ ಸಿಂಡ್ರೊಮ್ ಎಂಬುದು 21ನೇ ವರ್ಣತಂತುವಿನ ಮೂಲಕ ಉಂಟಾಗುವ ಆನುವಂಶಿಕ ಕಾಯಿಲೆಯಾಗಿದೆ. ಈ ಸಮಸ್ಯೆ ಇರುವವರಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ದೋಷಗಳು ಕಂಡು ಬರುವ ಸಾಧ್ಯತೆ ಇದೆ. ಹಾಗದರೆ ಇದರಿಂದ ಆಗುವ ಸಮಸ್ಯೆ ಏನು? ಪರಿಹಾರ ಏನು ಎನ್ನುವುದನ್ನು ಪ್ರೊ.‌ ಸುತ್ತೂರು ಮಾಲಿನಿ ತಿಳಿಸಿದ್ದಾರೆ.

ಡೌನ್ ಸಿಂಡ್ರೋಮ್ ಕಾಯಿಲೆಗೆ ಪರಿಹಾರವೇನು?

ಪ್ರೊ.‌ ಸುತ್ತೂರು ಮಾಲಿನಿ -

Profile
Pushpa Kumari Mar 2, 2026 9:13 AM

ಬೆಂಗಳೂರು, ಮಾ. 2: ಮಗುವಿನ ಆರೋಗ್ಯ ವೃದ್ಧಿಸಲು ತಾಯಿಯ ಅರೋಗ್ಯ ಕೂಡ ಪ್ರಮುಖವಾಗುತ್ತದೆ. ಅದರಲ್ಲೂ ತಾಯಿಯ ವಯಸ್ಸು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಒಂದು ವೇಳೆ ತಾಯಿಯ ವಯಸ್ಸು ಹೆಚ್ಚಾದಂತೆ ಬುದ್ಧಿಮಾಂದ್ಯ ಮಕ್ಕಳು ಹುಟ್ಟುವ ಸಾಧ್ಯತೆ ಇದೆ. ಜತೆಗೆ ಡೌನ್ ಸಿಂಡ್ರೊಮ್ ಕಾಯಿಲೆಗೆ ಕಾರಣವಾಗಬಹುದು. ಸಾಮಾನ್ಯವಾಗಿ ಡೌನ್ ಸಿಂಡ್ರೊಮ್ (Down syndrome) ಎಂಬುದು 21ನೇ ವರ್ಣತಂತುವಿನ (chromosome 21) ಮೂಲಕ ಉಂಟಾಗುವ ಆನುವಂಶಿಕ ಕಾಯಿಲೆ. ಈ ಸಮಸ್ಯೆ ಇರುವವರಲ್ಲಿ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ದೋಷಗಳು ಕಂಡು ಬರುವ ಸಾಧ್ಯತೆ ಇದೆ. ಹಾಗಾದರೆ ಇದರಿಂದ ಆಗುವ ಸಮಸ್ಯೆ ಏನು? ಪರಿಹಾರ ಏನು ಎನ್ನುವುದನ್ನು ʼವಿಶ್ವವಾಣಿ ಹೆಲ್ತ್‌ʼ ಯೂಟ್ಯೂಬ್‌ ಚಾನಲ್‌ನಲ್ಲಿ ಪ್ರೊ.‌ ಸುತ್ತೂರು ಮಾಲಿನಿ ತಿಳಿಸಿದ್ದಾರೆ.

ಡೌನ್ ಸಿಂಡ್ರೋಮ್ ಮಕ್ಕಳಲ್ಲಿ ಕಂಡು ಬರುವಂತಹ ಆನುವಂಶಿಕ ಕಾಯಿಲೆಗಳಲ್ಲಿ ಒಂದು. ತಾಯಿಯ ವಯಸ್ಸು ಈ ಕಾಯಿಲೆಗೆ ಮುಖ್ಯ ಕಾರಣವಾಗಿದ್ದು 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಇಂತಹ ಮಕ್ಕಳಿಗೆ ಜನ್ಮ ನೀಡುವ ಸಾಧ್ಯತೆ ಹೆಚ್ಚು ಇರುತ್ತದೆ. ಕಿರಿಯ ವಯಸ್ಸಿನ ತಾಯಂದಿರಲ್ಲಿಯೂ ಇದು ಸಂಭವಿಸುವ ಸಾಧ್ಯತೆ ಇದೆ.‌ ಇದನ್ನು ‘ಟ್ರೈಸೊಮಿ’ 21 ಎಂದು ಕೂಡ ಕರೆಯಲಾಗುತ್ತದೆ.

ವಿಡಿಯೊ ನೋಡಿ:



ಡೌನ್ ಸಿಂಡ್ರೋಮ್ ಲಕ್ಷಣ

  • ಮಗುವಿನ ಜನನ ಸಂದರ್ಭ ಚಪ್ಪಟೆಯಾದ ಮುಖ ಹೊಂದಿರುವುದು.
  • ಓರೆಯಾದ ಕಣ್ಣುಗಳು , ಚಿಕ್ಕ ಕಿವಿಗಳು, ಮುಖಕ್ಕೆ ಆಕಾರ ಇಲ್ಲದಂತೆ ಕಾಣಿಸಿಕೊಳ್ಳಬಹುದು.
  • ಸ್ನಾಯುಗಳ ದುರ್ಬಲತೆ ಹಾಗೂ ದೈಹಿಕ ಬೆಳವಣಿಗೆ ಇಲ್ಲದಿರುವುದು.
  • ನಡೆಯುವುದು ಮಾತನಾಡುವುದು ಮತ್ತು ಕಲಿಯುವಲ್ಲಿ ವಿಳಂಬ.
  • ಹುಟ್ಟಿನಿಂದಲೇ ಹೃದಯದ ದೋಷಗಳು, ದೃಷ್ಟಿ ಸಮಸ್ಯೆ, ಥೈರಾಯ್ಡ್ ಸಮಸ್ಯೆಗಳು ಬರಬಹುದು.

ನಾವು ತಿನ್ನುವ ಹಣ್ಣುಗಳಿಂದ ಕ್ಯಾನ್ಸರ್ ಅಪಾಯ ತಡೆಯಬಹುದೇ? ವೈದ್ಯರು ಹೇಳಿದ್ದೇನು?

ಪರಿಹಾರವೇನು?

ಡೌನ್ ಸಿಂಡ್ರೋಮ್‌ ಅನ್ನು ಸಂಪೂರ್ಣವಾಗಿ ಗುಣಪಡಿಸುವ ಚಿಕಿತ್ಸೆ ಇಲ್ಲವಾದರೂ, ಸರಿಯಾದ ಆರೈಕೆ ಹಾಗೂ ಮಗುವಿಗೆ ಶಿಕ್ಷಣದ ಮೂಲಕ‌ ಬೆಂಬಲ ನೀಡಿ‌ ಪರಿಹರಿಸಿಕೊಳ್ಳಬಹುದು.