ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Winter Healthy Food: ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡಲು ಈ ಆಹಾರ ಕ್ರಮವನ್ನು ಪಾಲಿಸಿ!

ಚಳಿಗಾಲದಲ್ಲಿ ನಮ್ಮ ದೇಹವು ಬೆಚ್ಚಗಿನ ಮತ್ತು ಪೌಷ್ಟಿಕ ಆಹಾರವನ್ನು ಹೆಚ್ಚಾಗಿ ಬಯಸುತ್ತದೆ. ಆದ್ದರಿಂದ ಈ ಶೀತ ವಾತಾವರಣದಲ್ಲಿ ರಾತ್ರಿಯ ಊಟಕ್ಕೆ ಸರಿಯಾದ ಆಹಾರವನ್ನು ಆಯ್ಕೆಮಾಡುವ ಮೂಲಕ ನಿಮ್ಮ ದೇಹವನ್ನು ಆರೋಗ್ಯಯುತವಾಗಿ ಇಡಬಹುದು. ರಾತ್ರಿಯ ಊಟಕ್ಕೆ ಇಂತಹ ಆಹಾರ ಗಳನ್ನು ಆಯ್ಕೆ ಮಾಡುವುದರಿಂದ ‌ಜೀರ್ಣಕ್ರಿಯೆಯನ್ನು ಸುಧಾರಣೆ ಮಾಡಿ ದೇಹದ ಉಷ್ಣತೆಯನ್ನು ಕಾಪಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ..

ಚಳಿಗಾಲದ ಆರೋಗ್ಯಕರ ಆಹಾರ

ನವದೆಹಲಿ: ಚಳಿಗಾಲದ ತೀವ್ರತೆ ಎಲ್ಲಾ ಕಡೆ ಹೆಚ್ಚಾಗಿದೆ. ಹೀಗಾಗಿ ಮಳೆಗಾಲದಂತೆ ಚಳಿಗಾಲ ದಲ್ಲೂ ಸೋಂಕು ಹರಡುವ ಸಾಧ್ಯತೆ ಇದೆ. ಹಾಗಾಗಿ ಈ ಸಂದರ್ಭದಲ್ಲಿ ನಮ್ಮ ದೇಹವು ಬೆಚ್ಚಗಿನ ಮತ್ತು ಪೌಷ್ಟಿಕ ಆಹಾರವನ್ನು ಹೆಚ್ಚಾಗಿ ಬಯಸುತ್ತದೆ. ಆದ್ದರಿಂದ ಈ ಶೀತ ವಾತಾವರಣದಲ್ಲಿ ರಾತ್ರಿಯ ಊಟಕ್ಕೆ ಸರಿಯಾದ ಆಹಾರವನ್ನು (Healthy Dinner For Winter) ಆಯ್ಕೆಮಾಡುವ ಮೂಲಕ ನಿಮ್ಮ ದೇಹವನ್ನು ಆರೋಗ್ಯಯುತವಾಗಿ ಇಡಬಹುದು. ರಾತ್ರಿಯ ಊಟಕ್ಕೆ ಇಂತಹ ಆಹಾರಗಳನ್ನು ಆಯ್ಕೆಗಳನ್ನು ಮಾಡುವುದರಿಂದ ‌ಜೀರ್ಣಕ್ರಿಯೆಯನ್ನು ಸುಧಾರಣೆ ಮಾಡಿ ದೇಹದ ಉಷ್ಣತೆಯನ್ನು ಕಾಪಾಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ನಿಮ್ಮ ಚಳಿಗಾಲದ ಆಹಾರದಲ್ಲಿ ಕೆಲವು ಪೌಷ್ಟಿಕಾಂಶ ಭರಿತ ಈ ಆಹಾರವನ್ನು ಸೇವಿಸಿ.

ಜೋಳ ಅಥವಾ ಬಾಜ್ರಾ ರೊಟ್ಟಿ:

ಗೋಧಿ ಅಥವಾ ಅಕ್ಕಿಯ ಬದಲಿಗೆ ಜೋಳ ಅಥವಾ ಬಾಜ್ರಾ ರೊಟ್ಟಿಯನ್ನು ರಾತ್ರಿಯ ಸಮಯ ದಲ್ಲಿ ಸೇವಿಸಿ. ಇವುಗಳು ಫೈಬರ್ ಮತ್ತು ಖನಿಜಗಳನ್ನು ಹೊಂದಿದ್ದು ಕಾರ್ಬೋ ಹೈಡ್ರೇಟ್‌ಗಳನ್ನು ನೀಡುತ್ತವೆ. ಹಾಗಾಗಿ ವಾರದಲ್ಲಿ ಒಂದು ಅಥವಾ ಎರಡು ಭಾರಿ ಬಜ್ರಾ ಅಥವಾ ಜೋಳ ರೊಟ್ಟಿ ಗಳೊಂದಿಗೆ ದಾಲ್ ಅಥವಾ ತರಕಾರಿ ಸಬ್ಜಿಯೊಂದಿಗೆ ಬಿಸಿಯಾಗಿ ಸೇವಿಸಿ.

ಸೊಪ್ಪು ಪದಾರ್ಥಗಳು:

ಪಾಲಕ್, ಸರ್ಸನ್, ಮೇಥಿ ಮುಂತಾದ ಸೊಪ್ಪುಗಳು ವಿಟಮಿನ್ ಸಿ, ಕಬ್ಬಿಣ ಮತ್ತು ಫೋಲೇಟ್‌ ನಿಂದ ತುಂಬಿರುತ್ತವೆ. ಇವುಗಳ ಸೇವೆನೆಯೂ ಚಳಿಗಾಲದ ಸಂದರ್ಭ ಉತ್ತಮ ಪೋಷಕಾಂಶ ಸಾಂದ್ರತೆಯನ್ನು ನೀಡುತ್ತವೆ. ಮತ್ತು ರೋಗನಿರೋಧಕ ಶಕ್ತಿಯನ್ನು ಬೆಂಬಲಿಸುತ್ತವೆ. ಹಾಗಾಗಿ ಹಸಿಯಾದ ಸೊಪ್ಪನ್ನು ದಾಲ್‌ನೊಂದಿಗೆ ಸೇರಿಸಿ ಇದರಿಂದ ವಿಟಮಿನ್ ಸಿ ಹೆಚ್ಚು ಮಾಡುತ್ತದೆ.

ಶುಂಠಿ ಮತ್ತು ಉಷ್ಣ ನೀಡುವ ಮಸಾಲೆಗಳು:

ಶುಂಠಿ, ಮೆಣಸು ಮತ್ತು ದಾಲ್ಚಿನ್ನಿಯಂತಹ ಮಸಾಲೆಗಳು ಉಷ್ಣ ಉತ್ಪಾದಕವಾಗಿದ್ದು ಚಳಿಗಾಲ ದಲ್ಲಿ ಇವುಗಳ ಸೇವನೆ ಬಹಳಷ್ಟು ಉತ್ತಮ. ಇವುಗಳು ಜೀರ್ಣಕ್ರಿಯೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸಿ ದೇಹಕ್ಕೆ ಬಿಸಿಯಾದ ಅನುಭವ ನೀಡುತ್ತದೆ.

Health Tips: ಚಳಿಗಾಲದ ಆರೋಗ್ಯಕ್ಕೆ ಗಿಡಮೂಲಿಕೆ ಚಹಾಗಳನ್ನು ಕುಡಿದ್ರೆ ಈ ಪ್ರಯೋಜನಗಳು ನಿಮ್ಮದಾಗಲಿದೆ!

ತುಪ್ಪ:

ತುಪ್ಪ ಸೇವನೆಯೂ ದೇಹಕ್ಕೆ ಬೆಚ್ಚಗಿನ ಕ್ಯಾಲೊರಿಯನ್ನು ನೀಡುತ್ತದೆ ಮತ್ತು ಕೊಬ್ಬಿನಲ್ಲಿ ವಿಟಮಿನ್‌ಗಳ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ. ಇದರ ಜೊತೆ ಜೀರ್ಣಕ್ರಿಯೆಗೂ ಉಪ ಯೋಗಕಾರಿಯಾಗಿದ್ದು ನಿಮ್ಮ ರಾತ್ರಿಯ ಊಟದ ಜೊತೆ ತುಪ್ಪವನ್ನು ಆರಿಸಿಕೊಳ್ಳಿ. ದಾಲ್ ಅಥವಾ ಬಿಸಿ ರೊಟ್ಟಿಗೆ 1-2 ಟೀ ಸ್ಪೂನ್ ಮಿತವಾದ ಪ್ರಮಾಣದಲ್ಲಿ ತುಪ್ಪ ಬಳಸಿ.

ಗೆಡ್ಡೆ ತರಕಾರಿಗಳು:

ಕ್ಯಾರೆಟ್ ಮತ್ತು ಸಿಹಿ ಆಲೂಗಡ್ಡೆಯಂತಹ ತರಕಾರಿಗಳು ಕಾರ್ಬೋಹೈಡ್ರೇಟ್‌ಗಳು ಮತ್ತು ಪೋಷಕಾಂಶಗಳನ್ನು ಹೊಂದಿರುತ್ತವೆ. ಇವುಗಳು ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತವೆ.

ಶುಂಠಿ ಮತ್ತು ಬಿಸಿ ಮಸಾಲೆಗಳು:

ಮೆಣಸು, ದಾಲ್ಚಿನ್ನಿ ಮತ್ತು ಲವಂಗ, ಶುಂಠಿ ಮತ್ತು ಬಿಸಿ ಮಸಾಲೆಗಳು ರಕ್ತ ಪರಿಚಲನೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ದಾಲ್‌ ಮತ್ತು ಸೂಪ್‌ಗಳಿಗೆ ತಾಜಾ ಶುಂಠಿಯನ್ನು ಸೇರಿಸಿ ಅಥವಾ ಗ್ರೇವಿಗಳಲ್ಲಿ ಮೆಣಸು ಮತ್ತು ದಾಲ್ಚಿನ್ನಿಯನ್ನು ಮಿತವಾಗಿ ಬಳಸಿ ಸೇವಿಸಿದರೆ ಉತ್ತಮ

ಹುದುಗಿಸಿದ ಆಹಾರಗಳು:

ಹುದುಗಿಸಿದ ಆಹಾರಗಳು ಕರುಳಿನ ಸೂಕ್ಷ್ಮಜೀವಿಯನ್ನು ಬೆಂಬಲಿಸುತ್ತವೆ, ಇದು ರೋಗನಿರೋಧಕ ಶಕ್ತಿ ಮತ್ತು ಜೀರ್ಣಕ್ರಿಯೆಯನ್ನು ಸರಿಪಡಿಸುತ್ತದೆ. ಹಾಗಾಗಿ ಮಿತವಾದ ಪ್ರಮಾಣದಲ್ಲಿ ಮಜ್ಜಿಗೆ,ಮೊಸರು ಸೇವಿಸದರೆ ಉತ್ತಮ.