ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೆಚ್ಚುತ್ತಿದೆ ಯುವಜನರಲ್ಲಿ ಮರೆವಿನ ಖಾಯಿಲೆ; ಏನು ಪರಿಹಾರ?

Health Tips: ಇಂದಿನ ಯುವಕರಲ್ಲಿ ಸದಾ ಕಾಲ ಅಬ್ಸೆಂಟ್‌ ಮೈಂಡ್‌, ಸಣ್ಣ ಪುಟ್ಟ ವಿಷಯಗಳನ್ನು ಸಹ ಬಹುಬೇಗ ಮರೆತು ಬಿಡುತ್ತಾರೆ. ಇದಕ್ಕೆ ಕಾರಣ ಏನು? ಚಿಕ್ಕ ವಯಸ್ಸಿನ ಯಾವ ಸಂಗತಿಗಳು ಸಣ್ಣ ವಯಸ್ಸಿನಲ್ಲೇ ಮರೆವಿನ ಸಮಸ್ಯೆಗೆ ಕಾರಣವಾಗುತ್ತದೆ? ಎನ್ನುವ ವಿಚಾರಗಳನ್ನು ಪ್ರೊ. ಸುತ್ತೂರು ಮಾಲಿನಿ ಅವರು ಮಾಹಿತಿ ನೀಡಿದ್ದಾರೆ..

ಪ್ರೊ. ಸುತ್ತೂರು ಮಾಲಿನಿ

ಬೆಂಗಳೂರು, ಮಾ.11: ಇಂದಿನ ಯುವಕರಲ್ಲಿ ಮಾನಸಿಕ ಆರೋಗ್ಯದ ಸಮಸ್ಯೆ ಹೆಚ್ಚುತ್ತಿದೆ. (Teenagers Facing Memory Loss) ಇದರೊಟ್ಟಿಗೆ ಸದಾ ಕಾಲ ಅಬ್ಸೆಂಟ್‌ ಮೈಂಡ್‌, ಸಣ್ಣ ಪುಟ್ಟ ವಿಷಯಗಳನ್ನು ಸಹ ಬಹುಬೇಗ ಮರೆತು ಬಿಡುತ್ತಾರೆ. ಇದಕ್ಕೆ ಕಾರಣ ಏನು? ಚಿಕ್ಕ ವಯಸ್ಸಿನ ಯಾವ ಸಂಗತಿಗಳು ಸಣ್ಣ ವಯಸ್ಸಿನಲ್ಲೇ ಮರೆವಿನ ಸಮಸ್ಯೆಗೆ ಕಾರಣವಾಗುತ್ತದೆ? ಎನ್ನುವ ವಿಚಾರಗಳನ್ನು ಪ್ರೊ. ಸುತ್ತೂರು ಮಾಲಿನಿ ಅವರು ಮಾಹಿತಿ ನೀಡಿದ್ದಾರೆ

ಇತ್ತೀಚಿಗೆ ನಮ್ಮ ಜೀವನಶೈಲಿ, ಆಹಾರ, ಹವ್ಯಾಸ ಇತ್ಯಾದಿಗಳು ಸಂಪೂರ್ಣವಾಗಿ ಬದಲಾಗಿದೆ. ಅದರಲ್ಲೂ ಯುವಕರು ಸರಿಯಾಗಿ ನಿದ್ದೆ ಮಾಡದೇ ಕೆಲಸದಲ್ಲಿ ಒತ್ತಡದಲ್ಲಿ ದಿನ ಕಳೆಯುವವರು ಇದ್ದಾರೆ. ಇದರಿಂದ ಮೆಲಟೋನಿನ್ ಹಾರ್ಮೊನ್ ಉತ್ಪತ್ತಿಯಾಗುವುದಿಲ್ಲ. ಹಾಗಾಗಿ ಇದರಿಂದ ಮರೆವಿನ ಖಾಯಿಲೆಗಳು ಜಾಸ್ತಿಯಾಗುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ.

ವೀಡಿಯೊ ನೋಡಿ:



ನಾವೇ ನಮ್ಮ ಜೀವನ ಶೈಲಿಯಲ್ಲಿ ಮಾಡುವ ಕೆಲವೊಂದು ಬದಲಾವಣೆಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ ಸರಿಯಾಗಿ ನಿದ್ದೆ ಮಾಡದೇ ಇದ್ದಾಗ ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮೆದುಳಿನ ಕ್ರಿಯೆಗಳಿಗೆ ಅಡಚಣೆ ಉಂಟಾಗುತ್ತದೆ. ಇದರಿಂದ ಕೂಡ ಮರೆವಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

Health Tips: ಅರಿಶಿನದ ಹಾಲಿನ ಸೇವನೆ: ಅತಿಯಾದರೆ ಅಮೃತವೂ ವಿಷ; ಈ ಆರೋಗ್ಯ ಸಮಸ್ಯೆ ಇರುವವರು ಎಚ್ಚರ!

ನಾವು ಸೇವಿಸುವ ಆಹಾರ ಕೂಡ ಮರೆವಿನ ಖಾಯಿಲೆಗೆ ಸಾಕ್ಷಿಯಾಗುತ್ತದೆ. ಅತೀಯಾದ ಸಕ್ಕರೆ ಪದಾರ್ಥಗಳು, ಅತಿಯಾದ ಎಣ್ಣೆ, ಮೈದಾ ಆಹಾರಗಳು ಇತ್ಯಾದಿಯಿಂದ ಕೂಡ ಮರೆವಿನ ಖಾಯಿಲೆಗೆ ಕಾರಣವಾಗಬಹುದು. ಅತೀಯಾದ ಮಾನಸಿಕ ಒತ್ತಡ ಮತ್ತು ಆತಂಕವು ನೆನಪಿನ ಶಕ್ತಿಯನ್ನು ಮಾಡಲು ಕಾರಣವಾಗಬಹುದು. ಇನ್ನು ಅತೀಯಾದ ಫೋನ್ ಬಳಕೆ ಮತ್ತು ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯು ಏಕಾಗ್ರತೆಯನ್ನು ಕಡಿಮೆ ಮಾಡಬಹುದು.

ಪರಿಹಾರವೇನು?

*ಉತ್ತಮ ಪ್ರೋಟೀನ್ ಇರುವ ಆಹಾರ ಸೇವಿಸಿ

*ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿದರೆ ಒಳಿತು

*ದಿನಕ್ಕೆ 7-8 ಗಂಟೆಯವರೆಗೆ ಕಡ್ಡಾಯವಾಗಿ ನಿದ್ದೆ ಮಾಡಿ

*ಆತಂಕ, ಒತ್ತಡ ದೂರ ಮಾಡಿ ಸರಳವಾಗಿ ಬದುಕಿ

*ಯೋಗ ಮತ್ತು ಧ್ಯಾನ ಮಾಡುವ ಅಭ್ಯಾಸ ಬೆಳಿಸಿಕೊಳ್ಳಿ