Identify Fake Garlic: ಮಾರುಕಟ್ಟೆಗೆ ಬಂದಿದೆ ನಕಲಿ ಬೆಳ್ಳುಳ್ಳಿ; ಖರೀದಿಸುವ ಮುನ್ನ ಹೀಗೆ ಪರಿಶೀಲಿಸಿ
Identify Fake Garlic: ಕೆಲವು ವ್ಯಾಪಾರಸ್ಥರು ಬೆಳ್ಳುಳ್ಳಿಯಲ್ಲಿಯೂ ಕಲಬೆರೆಕೆ ಮಾಡಿ ಗ್ರಾಹಕರನ್ನು ಯಾಮಾರಿಸಲು ಮುಂದಾಗುತ್ತಿದ್ದಾರೆ. ಮಹಾರಾಷ್ಟ್ರದ ಅಂಕೋಲ ಜಿಲ್ಲೆಯಲ್ಲಿ ಸಿಮೆಂಟ್‌ನಿಂದ ಮಾಡಿದ್ದ ಬೆಳ್ಳುಳ್ಳಿಯನ್ನು ಮಾರಾಟ ಮಾಡಿದ್ದ ವಿಚಾರ ಬಹಳಷ್ಟು ವೈರಲ್ ಆಗಿತ್ತು. ಹಾಗಾಗಿ ನೈಸರ್ಗಿಕ ಬೆಳ್ಳುಳ್ಳಿ ಖರೀದಿಗೆ ಸಿಂಪಲ್ ಟ್ರಿಕ್ಸ್ ಬಳಸಿ.

ಬೆಳ್ಳುಳ್ಳಿ.

ನವದೆಹಲಿ: ನಾವು ಮಾಡುವ ಅಡುಗೆಯು ರುಚಿಕಟ್ಟಾಗಬೇಕಾದರೆ ಎಲ್ಲ ಸಾಮಗ್ರಿಯನ್ನು ಹದವಾಗಿ ಹಾಕಬೇಕು. ಅಂತಹ ಸಾಮಾಗ್ರಿಗಳಲ್ಲಿ ಬೆಳ್ಳುಳ್ಳಿ ಕೂಡ ಒಂದಾಗಿದ್ದು ದಾಲ್, ತಡ್ಕ, ಫ್ರೈ, ಚಿಕನ್ ಸುಕ್ಕ ಸೇರಿದಂತೆ ಇನ್ನಿತರ ಖಾದ್ಯಗಳಿಗೆ ಬೆಳ್ಳುಳ್ಳಿ ಅಗತ್ಯವಾಗಿಬೇಕು. ಇದರಿಂದ ಆಹಾರದ ರುಚಿ ಹೆಚ್ಚಾಗುವ ಜತೆಗೆ ಅನೇಕ ಆರೋಗ್ಯ ಪ್ರಯೋಜನ ಸಹ ದೇಹಕ್ಕೆ ಸಿಗುತ್ತದೆ. ಹೀಗಾಗಿ ಇದರ ಬೆಲೆ ಕೂಡ ಹೆಚ್ಚಿದ್ದು ಇದರ ಪೂರೈಕೆ ಬೇಡಿಕೆ ಕಡಿಮೆ ಇರುವ ಕಾರಣ ಬೆಲೆ ಅಧಿಕವಾಗಿಯೇ ಇದೆ. ಹೀಗಾಗಿ ಕೆಲವು ವ್ಯಾಪಾರಸ್ಥರು ಬೆಳ್ಳುಳ್ಳಿಯಲ್ಲಿಯೂ ಕಲಬೆರೆಕೆ ಮಾಡಿ ಗ್ರಾಹಕರನ್ನು ಯಾಮಾರಿಸಲು ಮುಂದಾಗುತ್ತಿದ್ದಾರೆ. ಮಹಾರಾಷ್ಟ್ರದ ಅಂಕೋಲ ಜಿಲ್ಲೆಯಲ್ಲಿ ಸಿಮೆಂಟ್‌ನಿಂದ ಮಾಡಿದ್ದ ಬೆಳ್ಳುಳ್ಳಿಯನ್ನು ಮಾರಾಟ ಮಾಡಿದ್ದ ವಿಚಾರ ಬಹಳಷ್ಟು ವೈರಲ್ ಆಗಿತ್ತು. ಹಾಗಾಗಿ ಇದೀಗ ಈ ಕಲಬೆರೆಕೆ ಬೆಳ್ಳುಳ್ಳಿ ಪತ್ತೆ ಮಾಡುವುದು ಹೇಗೆ ಎಂಬ ಸಮಸ್ಯೆ ಉದ್ಭವವಾಗಿದೆ (Identify fake garlic). ಬೆಳ್ಳುಳ್ಳಿ ಖರೀದಿಗೆ ಸಿಂಪಲ್ ಟ್ರಿಕ್ಸ್ ಇಲ್ಲಿದೆ.
ಬೆಳ್ಳುಳ್ಳಿ ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನೆ ಸಿಗುತ್ತದೆ. ಹೃದ್ರೋಗ ಸಮಸ್ಯೆ ನಿವಾರಣೆ ಜತೆಗೆ ರಕ್ತದೊತ್ತಡ, ಮಧುಮೇಹ ಸಮಸ್ಯೆಗಳು ಸಹ ನಿವಾರಣೆಯಾಗುತ್ತವೆ. ಉರಿಯೂತ ನಿವಾರಣೆ ಮಾಡುವ ಜತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಬೆಳ್ಳುಳ್ಳಿ ಸೇವನೆ ಉತ್ತಮ. ಆದರೆ ಕಲಬೆರಕೆಯುಕ್ತ ಸಿಮೆಂಟ್ ಬೆಳ್ಳುಳ್ಳಿ ಸೇವನೆ ಮಾಡಿದರೆ ವಾಂತಿ, ಭೇದಿ, ಕೆಮ್ಮು, ಶ್ವಾಸಕೋಶ ಸಮಸ್ಯೆ, ಇತರ ಆರೋಗ್ಯ ಹಾನಿ ಆಗಲಿದೆ. ಹಾಗಾಗಿ ಕಲಬೆರಕೆ ಬೆಳ್ಳುಳ್ಳಿಯನ್ನು ಈ ಮೊದಲೇ ಪತ್ತೆ ಹಚ್ಚಬೇಕು.
ಬಣ್ಣ ಪರಿಶೀಲಿಸಿ
ಯಾವುದೇ ಆಹಾರ ಪದಾರ್ಥವಾಗಿದ್ದರೆ ಅದು ನೈಸರ್ಗಿಕ ಗುಣದಿಂದ ಇದ್ದರೆ ಅದರದ್ದೇ ಆದ ಬಣ್ಣ ಇರಲಿದೆ. ಬೆಳ್ಳುಳ್ಳಿ ಶುದ್ಧ ಬಿಳಿ ಬಣ್ಣದ್ದಾಗಿದ್ದು ಯಾವುದೇ ಕಲೆ ಚುಕ್ಕಿ ಇಲ್ಲದೆ ಹೊಳೆಯುತ್ತಿದ್ದರೆ ಅಂತಹ ಬೆಳ್ಳುಳ್ಳು ನಕಲಿ ಆಗಿರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಬೆಳ್ಳುಳ್ಳಿ ಹೆಚ್ಚು ಘಾಟು ಪರಿ ಮಳದಿಂದ ಕೂಡಿದ್ದು ಅದರ ಎಸಳುಗಳು ಸ್ವಲ್ಪ ಹಳದಿ ಬಣ್ಣದಲ್ಲಿ ಕಾಣಲಿದೆ. ಈ ಪರೀಕ್ಷೆ ಮಾಡಿಯೇ ಬೆಳ್ಳುಳ್ಳಿ ಖರೀದಿಸಿ.
ಬೆಳ್ಳುಳ್ಳಿ ಆಕಾರ ನೋಡಿ
ಬೆಳ್ಳುಳ್ಳಿ ಎಂದಾಗ ಹಲವು ಎಸಳುಗಳು ಒಂದನೊಂದು ಸೆರ್ಪಡೆಗೊಂಡು ಇರಬಹುದು. ನೈಸರ್ಗಿಕ ಬೆಳ್ಳುಳ್ಳಿ ನಿರ್ದಿಷ್ಟ ಆಕೃತಿಯಲ್ಲಿ ಇರದೆ ಅನಿಯಮಿತ ಆಕಾರ ಇರಲಿದೆ. ಆದರೆ ನಕಲಿ ಬೆಳ್ಳುಳ್ಳಿಯಲ್ಲಿ ತುಂಬಾ ಮೃದು ಸ್ವಭಾವದ್ದಾಗಿದ್ದು, ಇದು ಆಕೃತಿ ಒಂದೇ ರೀತಿ ಇರುತ್ತದೆ.
ರುಚಿ ನೋಡಿ
ಸಾಮಾನ್ಯ ಬೆಳ್ಳುಳ್ಳಿ ಹಾಗೆ ಅಗೆಯುವುದು ಸ್ವಲ್ಪ ಕಷ್ಟ. ಅದರಲ್ಲಿ ಉರಿಯ ಗುಣ ಇರುತ್ತದೆ. ಆದರೆ ನಕಲಿ ಬೆಳ್ಳುಳ್ಳಿ ರಾಸಾಯನಿಕವಾಗಿ ಇರುತ್ತದೆ. ಅದೇ ರುಚಿ ಸಹ ಇರುತ್ತದೆ. ಹಾಗಾಗಿ ರುಚಿ ನೋಡಿ ಸಹ ನಕಲಿ ಬೆಳ್ಳುಳ್ಳಿ ಪತ್ತೆ ಮಾಡಬಹುದು.
ಸಿಪ್ಪೆ ಪರಿಶೀಲಿಸಿ
ನೈಸರ್ಗಿಕ ಬೆಳ್ಳುಳ್ಳಿ ಪ್ರತಿ ಎಸಳಿನ ಮೇಲೆ ತೆಳುವಾದ ಸಿಪ್ಪೆ ಇರುತ್ತದೆ. ಅದನ್ನು ಕೈಯಿಂದ ಒಂದೊಂದಾಗಿ ತೆಗೆಯಬೇಕು. ಆದರೆ ನಕಲಿ ಬೆಳ್ಳುಳ್ಳಿಯ ಎಸಳಿನ ಮೇಲಿನ ಸಿಪ್ಪೆಸಹ ಗಟ್ಟಿಯಾಗಿ ಇರುತ್ತದೆ. ಅಲ್ಲದೆ ಬಹಳ ದಪ್ಪವಾಗಿರುತ್ತದೆ. ಹೀಗಾಗಿ ಇದನ್ನು ಪರಿಶೀಲಿಸಿ ಬೆಳ್ಳುಳ್ಳಿ ಖರೀದಿಸಿ.
ಇದನ್ನು ಓದಿ: Health Tips: ಊಟದ ಬಳಿಕ ವಾಕಿಂಗ್ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳಿವು
ಪರಿಮಳ ಗಮನಿಸಿ
ನೈಸರ್ಗಿಕ ಬೆಳ್ಳುಳ್ಳಿಗೆ ಗಾಢವಾದ ಗಿಡಮೂಲಿಕೆ ಪರಿಮಳ ಇರುತ್ತದೆ. ಆದರೆ ಸಿಮೆಂಟ್‌ನಿಂದ ಮಾಡಿದ್ದ ಬೆಳ್ಳುಳ್ಳಿಯಲ್ಲಿ ನೈಸರ್ಗಿಕ ವಾಸನೆ ಇರಲಾರದು. ಬದಲಿಗೆ ಕೆಲವು ಬೆಳ್ಳುಳ್ಳಿಯಂತಹ ರಾಸಾಯನಿಕ ಪರಿಮಳ ಸಿಗುತ್ತದೆ. ಹೀಗಾಗಿ ಬೆಳ್ಳುಳ್ಳಿ ಪರಿಮಳ ಗಮನಿಸಿ.
ನೀರಿಗೆ ಹಾಕಿ
ಬೆಳ್ಳುಳ್ಳಿ ಶುದ್ಧತೆಯನ್ನು ನೀರಿನಲ್ಲಿ ಹಾಕಿ ನೋಡಿದರೆ ತಿಳಿಯುತ್ತದೆ. ಪರಿಶುದ್ಧ ನೈಸರ್ಗಿಕ ಬೆಳ್ಳುಳ್ಳಿ ನೀರಿನಲ್ಲಿ ಇಟ್ಟ ಕೂಡಲೆ ಕೆಳಮುಖವಾಗಿ ಸಾಗುತ್ತದೆ. ಆದರೆ ನಕಲಿ ಬೆಳ್ಳುಳ್ಳಿ ನೀರಿನಲ್ಲಿ ತೇಲುತ್ತದೆ. ಈ ರೀತಿ ನೀವು ಪರೀಕ್ಷೆ ಮಾಡಬಹುದು.